ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ISI chief: ಪಾಕ್‌ನ ಐಎಸ್‌ಐ ಮುಖ್ಯಸ್ಥ ಅಸಿಮ್ ಮಲಿಕ್‌ನನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರನಾಗಿ ನೇಮಕ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಸಿಮ್ ಮಲಿಕ್‌ ಅವರನ್ನು ಪಾಕಿಸ್ತಾನದ ಹೊಸ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಆಗಿ ನೇಮಿಸಲಾಗಿದೆ ಎಂದು ತಿಳಿದು ಬಂದಿದೆ. ಐಎಸ್‌ಐ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುವ ಮೊದಲು ಮಲಿಕ್‌ ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿಯಲ್ಲಿ ಅಡ್ಜುಟಂಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು .

ಪಾಕ್‌ನ ಐಎಸ್‌ಐ ಮುಖ್ಯಸ್ಥನನ್ನು ಎನ್‌ಎಸ್‌ಎ ಆಗಿ ನೇಮಕ

Profile Vishakha Bhat May 1, 2025 8:44 AM

ಇಸ್ಲಾಮಾಬಾದ್: ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಸಿಮ್ ಮಲಿಕ್‌ ಅವರನ್ನು ಪಾಕಿಸ್ತಾನದ ಹೊಸ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಆಗಿ ನೇಮಿಸಲಾಗಿದೆ ಎಂದು ತಿಳಿದು ಬಂದಿದೆ. ಸೆಪ್ಟೆಂಬರ್ 2024 ರಿಂದ ಅವರು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI chief) ನ ಮಹಾನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಆ ಸ್ಥಾನದ ಜೊತೆಗೆ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಐಎಸ್‌ಐ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುವ ಮೊದಲು ಮಲಿಕ್‌ ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿಯಲ್ಲಿ ಅಡ್ಜುಟಂಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು .

59 ವರ್ಷದ ಈ ಮೊದಲು ಕಾನೂನು ಮತ್ತು ಶಿಸ್ತಿನ ವಿಷಯಗಳು ಸೇರಿದಂತೆ ಮಿಲಿಟರಿ ಆಡಳಿತ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಅವರು ಅಡ್ಜಟಂಟ್ ಜನರಲ್ ಆಗಿದ್ದಾಗ ನಡೆದ ಪ್ರಮುಖ ಘಟನೆಗಳಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನ ಮತ್ತು ಅವರ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರ ಪ್ರತಿಭಟನೆಗಳು ಸೇರಿವೆ. ಅವರ ವೃತ್ತಿಜೀವನದ ಅವಧಿಯಲ್ಲಿ, ಅವರು ಬಲೂಚಿಸ್ತಾನ್ ಮತ್ತು ದಕ್ಷಿಣ ವಜೀರಿಸ್ತಾನದಲ್ಲಿ ವಿಭಾಗಗಳನ್ನು ಸಹ ಕಮಾಂಡ್ ಮಾಡಿದ್ದಾರೆ.

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಈ ಹತ್ಯಾಕಾಂಡದ ನಂತರ ಪಾಕಿಸ್ತಾನವು ಭಾರತದ ಪ್ರತೀಕಾರದ ಭಯದಲ್ಲಿದೆ, ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಅವರು "ವಿಶ್ವಾಸಾರ್ಹ ಗುಪ್ತಚರ" ವನ್ನು ಉಲ್ಲೇಖಿಸಿ ಮುಂದಿನ 24 ರಿಂದ 36 ಗಂಟೆಗಳಲ್ಲಿ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತದೆ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು, ದೇಶದ ರಕ್ಷಣಾ ಸಚಿವ ಖವಾಜಾ ಆಸಿಫ್‌ ಭಾರತ ಯುದ್ಧವನ್ನು ಪ್ರಾರಂಭ ಮಾಡುತ್ತದೆ ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: ಪಹಲ್ಗಾಮ್‌ ದಾಳಿಗೆ 4 ಮೊದಲೇ ಸ್ಥಳ ಪರಿಶೀಲಿಸಿದ್ದ ಉಗ್ರರು; ರೀಲ್ಸ್‌ನಲ್ಲಿ ಚಲನವಲನ ಸೆರೆ

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಉಭಯ ದೇಶಗಳ ಸಂಬಂಧ ಹಳಸಿಹೋಗಿದೆ. ಈಗಾಗಲೇ ಭಾರತ ರಾಜತಾಂತ್ರಿಕ ಯುದ್ಧದ ಮೂಲಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಸೈನ್ಯಕ್ಕೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಎರಡು ಬಾರಿ ಸಂಪುಟ ಸಭೆಯನ್ನು ಕರೆದು ಮಾತುಕತೆ ನಡೆಸಿದ್ದಾರೆ. ಇತ್ತ ಪಾಕ್‌ ಕೂಡ್‌ ಯುದ್ಧೋನ್ಮಾದವಾಗಿದ್ದು, ತಮ್ಮ ಬಳಿ ಅಣ್ವಸ್ತ್ರವಿದೆ ಎಂದು ಭಾರತಕ್ಕೆ ಬೆದರಿಕೆ ಹಾಕಿದೆ. ಸದ್ಯ ಪರಿಸ್ಥಿತಿಯನ್ನು ನಿಭಾಯಿಸಲು ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಿದ್ದು, ಎರಡೂ ದೇಶಗಳ ನಾಯಕರಿಗೆ ಕರೆ ಮಾಡಿ ಮಾತನಾಡಿದ್ದಾರೆ ಯುಎನ್‌ಒ ಅಧ್ಯಕ್ಷ.