ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tsunami Alert: ಜಪಾನ್‌ನಲ್ಲಿ 6.8 ತೀವ್ರತೆಯ ಭೂಕಂಪ; ಭಾರೀ ಸುನಾಮಿಯ ಎಚ್ಚರಿಕೆ

ಹಲವು ವರ್ಷಗಳ ಬಳಿಕ ಜಪಾನ್‌ನಲ್ಲಿ ಮತ್ತೆ ಭಾರೀ ಸುನಮಿಯ ಎಚ್ಚರಿಕೆ ನೀಡಲಾಗಿದೆ. ಉತ್ತರ ಪೆಸಿಫಿಕ್ ಪ್ರದೇಶದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಜಪಾನ್ ಭಾನುವಾರ ಇವಾಟೆ ಪ್ರಾಂತ್ಯಕ್ಕೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿ ಮಾಡಿರುವ ಪ್ರಕಾರ, ಉತ್ತರ ಪೆಸಿಫಿಕ್ ಮಹಾಸಾಗರದಲ್ಲಿ 39.51° N ಅಕ್ಷಾಂಶ ಮತ್ತು 143.38° E ರೇಖಾಂಶದಲ್ಲಿ 30 ಕಿ.ಮೀ ಆಳದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ.

ಜಪಾನ್‌ನಲ್ಲಿ 6.8 ತೀವ್ರತೆಯ ಭೂಕಂಪ;  ಸುನಾಮಿಯ ಎಚ್ಚರಿಕೆ

ಜಪಾನ್‌ನಲ್ಲಿ ಭಾರೀ ಸುನಾಮಿ ಎಚ್ಚರಿಕೆ -

Vishakha Bhat
Vishakha Bhat Nov 9, 2025 5:02 PM

ನವದೆಹಲಿ: ಹಲವು ವರ್ಷಗಳ ಬಳಿಕ ಜಪಾನ್‌ನಲ್ಲಿ (Japan) ಮತ್ತೆ ಭಾರೀ ಸುನಮಿಯ ಎಚ್ಚರಿಕೆ ನೀಡಲಾಗಿದೆ. ಉತ್ತರ ಪೆಸಿಫಿಕ್ ಪ್ರದೇಶದಲ್ಲಿ 6.8 (Tsunami Alert) ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಜಪಾನ್ ಭಾನುವಾರ ಇವಾಟೆ ಪ್ರಾಂತ್ಯಕ್ಕೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಇವಾಟೆಯಲ್ಲಿ ಸಂಜೆ 5:03 ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಒಂದು ಮೀಟರ್ (ಮೂರು ಅಡಿ) ಎತ್ತರದವರೆಗೆ ಸುನಾಮಿಯ ಸಾಧ್ಯತೆ ಇದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.

ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿ ಮಾಡಿರುವ ಪ್ರಕಾರ, ಉತ್ತರ ಪೆಸಿಫಿಕ್ ಮಹಾಸಾಗರದಲ್ಲಿ 39.51° N ಅಕ್ಷಾಂಶ ಮತ್ತು 143.38° E ರೇಖಾಂಶದಲ್ಲಿ 30 ಕಿ.ಮೀ ಆಳದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ. ಏತನ್ಮಧ್ಯೆ, ರಾಷ್ಟ್ರೀಯ ಪ್ರಸಾರಕರಾದ NHK,ಕಡಲಾಚೆಯ ಸುನಾಮಿ ಅಲೆಗಳು ಕಂಡುಬರುತ್ತಿವೆ ಮತ್ತು ಕರಾವಳಿ ಪ್ರದೇಶಗಳ ಬಳಿ ಹೋಗದಂತೆ ನಿವಾಸಿಗಳನ್ನು ಒತ್ತಾಯಿಸಿದೆ.

2011 ರಲ್ಲಿ 9.0 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಿಂದಾಗಿ ಇಡೀ ಜಪಾನ್‌ ತತ್ತರಿಸಿ ಹೋಗಿತ್ತು. 18,500 ಜನರು ಮೃತಪಟ್ಟಿದ್ದರು. ಇದೇ ದುರಂತವು ಫುಕುಶಿಮಾ ಪರಮಾಣು ಸ್ಥಾವರದಲ್ಲಿನ ಮೂರು ರಿಯಾಕ್ಟರ್‌ಗಳು ಕರಗಲು ಕಾರಣವಾಯಿತು. ಈ ದ್ವೀಪಸಮೂಹ ರಾಷ್ಟ್ರವು ವಾರ್ಷಿಕವಾಗಿ ಸುಮಾರು 1,500 ಭೂಕಂಪಗಳನ್ನು ಅನುಭವಿಸುತ್ತದೆ, ಅವುಗಳಲ್ಲಿ ಹೆಚ್ಚಿನವು ಸೌಮ್ಯವಾಗಿರುತ್ತವೆ. ಆದರೆ ಈ ಬಾರಿ ಭಾರೀ ಸುನಮಿಯ ಎಚ್ಚರಿಕೆಯನ್ನು ನೀಡಿಲಾಗಿದೆ.

ಈ ಸುದ್ದಿಯನ್ನೂ ಓದಿ: Earthquake: ವಿಶಾಖಪಟ್ಟಣದಲ್ಲಿ ಪ್ರಬಲ ಭೂಕಂಪ? ಆತಂಕದಲ್ಲಿ ಜನ! ಅತ್ತ ಅಫ್ಘಾನಿಸ್ತಾನದಲ್ಲೂ ಕಂಪಿಸಿದ ಭೂಮಿ

ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ

ಕಳೆದ ಸೋಮವಾರ ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಭೂಕಂಪದಿಂದ ಕನಿಷ್ಠ ಐವರು ಸಾವನ್ನಪ್ಪಿ, 143 ಜನರು ಗಾಯಗೊಂಡಿದ್ದರು. ಭೂಕಂಪವು ನಸುಕಿನ 1 ಗಂಟೆ ಸುಮಾರಿಗೆ ಸಂಭವಿಸಿತ್ತು. ದೇಶದ ವಾಯುವ್ಯ, ಮಧ್ಯ, ಪಶ್ಚಿಮ, ಉತ್ತರ, ಈಶಾನ್ಯ ಮತ್ತು ಪೂರ್ವ ವಲಯಗಳು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಭೂಕಂಪದ ಕೇಂದ್ರಬಿಂದು ಸಮಂಗನ್ ಪ್ರಾಂತ್ಯದಲ್ಲಿದೆ. ಈ ಪ್ರದೇಶದಲ್ಲಿ ಇಲ್ಲಿಯವರೆಗೆ ಐವರು ಮೃತಪಟ್ಟಿದ್ದಾರೆ ಮತ್ತು 143 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್‌ ಸರ್ಕಾರ ತಿಳಿಸಿದೆ.

ಭೂಕಂಪಕ್ಕೆ ತುತ್ತಾದ ಪ್ರದೇಶಗಳಲ್ಲಿ ಆಸ್ತಿ ಪಾಸ್ತಿ ನಷ್ಟ ಉಂಟಾಗಿದೆ. ಅದರ ಆ ಬಗ್ಗೆ ಸಂಪೂರ್ಣ ವಿವರಗಳನ್ನು ನಂತರ ಹಂಚಿಕೊಳ್ಳಲಾಗುವುದು. ಭೂಕಂಪದ ನಂತರ ತುರ್ತು ಪರಿಹಾರ ಮತ್ತು ಸಹಾಯವನ್ನು ಖಚಿತಪಡಿಸಿಕೊಳ್ಳಲು ಪ್ರಾಂತೀಯ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ತಕ್ಷಣವೇ ಸಮನ್ವಯ ಸಾಧಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಪ್ರಕಾರ, ಸೋಮವಾರ ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ ವರದಿಯಾಗಿದೆ. 23 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಮಾಹಿತಿ ನೀಡಿದೆ.