ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

S Jaishankar: ಖಲಿಸ್ತಾನಿ ಉಗ್ರರಿಂದ ವಿದೇಶಾಂಗ ಸಚಿವ ಜೈಶಂಕರ್ ಮೇಲೆ ದಾಳಿ ಯತ್ನ; ಭಾರತದ ಧ್ವಜ ಹರಿದು ಪ್ರತಿಭಟನೆ

ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಾರ್ಚ್ 4 ರಿಂದ 9 ರವರೆಗೆ ಬ್ರಿಟನ್‌ ಪ್ರವಾಸದಲ್ಲಿದ್ದಾರೆ. ಈ ವೇಳೆ ಸಚಿವರ ಮೇಲೆ ಖಲಿಸ್ತಾನಿ ಉಗ್ರಗಾಮಿಗಳ ಗುಂಪೊಂದು ದಾಳಿಗೆ ಯತ್ನಿಸಿದೆ ಎಂದು ತಿಳಿದು ಬಂದಿದೆ. ಜೈಶಂಕರ್ ಅವರು ಚೆವೆನಿಂಗ್ ಹೌಸ್‌ನಲ್ಲಿ ಯುಕೆ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಅವರೊಂದಿಗೆ ಸಭೆ ನಡೆಸಿ ಹೊರ ಬರುವಾಗ ಈ ಘಟನೆ ನಡೆದಿದೆ.

ವಿದೇಶಾಂಗ ಸಚಿವ  ಜೈಶಂಕರ್ ಮೇಲೆ  ಖಲಿಸ್ತಾನಿ ಉಗ್ರರಿಂದ ದಾಳಿಗೆ ಯತ್ನ

ಎಸ್‌ ಜೈಶಂಕರ್‌

Profile Vishakha Bhat Mar 6, 2025 8:48 AM

ಲಂಡನ್‌: ವಿದೇಶಾಂಗ ಸಚಿವ ಎಸ್ ಜೈಶಂಕರ್ ( S Jaishankar) ಮಾರ್ಚ್ 4 ರಿಂದ 9 ರವರೆಗೆ ಬ್ರಿಟನ್‌ ಪ್ರವಾಸದಲ್ಲಿದ್ದಾರೆ. ಈ ವೇಳೆ ಸಚಿವರ ಮೇಲೆ ಖಲಿಸ್ತಾನಿ ಉಗ್ರಗಾಮಿಗಳ ( Khalistani Extremists) ಗುಂಪೊಂದು ದಾಳಿಗೆ ಯತ್ನಿಸಿದೆ ಎಂದು ತಿಳಿದು ಬಂದಿದೆ. ಜೈಶಂಕರ್ ಅವರು ಚೆವೆನಿಂಗ್ ಹೌಸ್‌ನಲ್ಲಿ ಯುಕೆ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಅವರೊಂದಿಗೆ ಸಭೆ ನಡೆಸಿ ಹೊರ ಬರುವಾಗ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಅವರ ಕಾರ್‌ ಬಳಿಗೆ ಬಂದು ದಾಳಿಗೆ ಪ್ರಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ. ಖಾಲಿಸ್ತಾನ್ ಪರ ಬೆಂಬಲಿಗರು ಚೆವೆನಿಂಗ್ ಹೌಸ್‌ ಎದುರು ಪ್ರತಿಭಟನೆ ನಡೆಸಿದ್ದಾರೆ. ನಂತರ ಒಬ್ಬ ಉಗ್ರ ಭಾರತದ ಧ್ವಜವನ್ನು ಹರಿದು ಹಾಕಿದ್ದಾನೆ.



ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಲಂಡನ್ ಪೊಲೀಸ್ ಅಧಿಕಾರಿಗಳ ಮುಂದೆಯೇ ವ್ಯಕ್ತಿಯೊಬ್ಬ ಜೈಶಂಕರ್ ಅವರ ವಾಹನದ ಬಳಿಗೆ ಬಂದು ಭಾರತದ ರಾಷ್ಟ್ರಧ್ವಜವನ್ನು ಹರಿದು ಹಾಕುತ್ತಿರುವುದು ಕಂಡುಬಂದಿದೆ. ಆದರೆ ಈ ವಿಧ್ವಂಸಕ ಕೃತ್ಯಕ್ಕೆ ಲಂಡನ್‌ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.



ಈ ಸುದ್ದಿಯನ್ನೂ ಓದಿ: ಪಾಕಿಸ್ತಾನ ಮಿಲಿಟರಿ ಕ್ಯಾಂಪ್‌ ಮೇಲೆ ಆತ್ಮಾಹುತಿ ಬಾಂಬ್‌ ದಾಳಿ; ಕನಿಷ್ಠ 9 ಸಾವು

ಭಾರತದ ರಾಜತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಜೈಶಂಕರ್ ಅವರು ಪ್ರಸ್ತುತ ಮಾರ್ಚ್ 4 ರಿಂದ 9 ರವರೆಗೆ ಬ್ರಿಟನ್‌ ಮತ್ತು ಐರ್ಲೆಂಡ್‌ಗೆ ಅಧಿಕೃತ ಭೇಟಿಯಲ್ಲಿದ್ದಾರೆ. ವಿದೇಶಾಂಗ ಸಚಿವಾಲಯದ ಹೇಳಿಕೆಯ ಪ್ರಕಾರ, ಭಾರತ ಮತ್ತು ಬ್ರಿಟನ್ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿವೆ. ಜೈಶಂಕರ್ ಅವರು ಚೆವೆನಿಂಗ್ ಹೌಸ್‌ನಲ್ಲಿ ಯುಕೆ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಅವರೊಂದಿಗೆ ಕಾರ್ಯತಂತ್ರದ ಸಮನ್ವಯ, ರಾಜಕೀಯ ಸಹಕಾರ, ವ್ಯಾಪಾರ ಮಾತುಕತೆಗಳು, ಶಿಕ್ಷಣ, ತಂತ್ರಜ್ಞಾನ, ಚಲನಶೀಲತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.