ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಕತಾರ್‌ನಲ್ಲಿ ಮಿಲಿಟರಿ ಹೆಲಿಕಾಪ್ಟರ್ ಪತನ: 6 ಮಂದಿ ಸಾವು
Military Helicopter Crashes: ಕತಾರ್‌ನಲ್ಲಿ ಹೆಲಿಕಾಪ್ಟರ್ ದುರಂತ ಸಂಭವಿಸಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ಸಾಮಾನ್ಯ ಕರ್ತವ್ಯದ ಸಮಯದಲ್ಲಿ ತಾಂತ್ರಿಕ ದೋಷ ಉಂಟಾಗಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಅದಾಗ್ಯೂ ಅಪಘಾತಕ್ಕೆ ನಿಖರ ಕಾರಣವೇನು, ವಿಮಾನದಲ್ಲಿದ್ದವರು ಯಾರು ಎನ್ನುವ ಗುರುತು ಪತ್ತೆಯಾಗಿಲ್ಲ.
ಸಾಂದರ್ಭಿಕ ಚಿತ್ರ -
ದೋಹಾ, ಮಾ. 22: ಕತಾರ್‌ನಲ್ಲಿ ಮಿಲಿಟರಿ ಹೆಲಿಕಾಪ್ಟರ್ ದುರಂತ (Helicopter crash) ಸಂಭವಿಸಿದ್ದು, 6 ಮಂದಿ ಮೃತಪಟ್ಟಿದ್ದಾರೆ. ನಾಪತ್ತೆಯಾಗಿರುವ ಮತ್ತೊಬ್ಬ ವ್ಯಕ್ತಿಗಾಗಿ ಹುಡುಕಾಟ ಮುಂದುವರಿಯುತ್ತಿದೆ ಎಂದು ದೇಶದ ಆಂತರಿಕ ಸಚಿವಾಲಯ ತಿಳಿಸಿದೆ. ಇದಕ್ಕೂ ಮೊದಲು ರಕ್ಷಣಾ ಸಚಿವಾಲಯವು ಸಾಮಾನ್ಯ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ತಾಂತ್ರಿಕ ದೋಷ ಉಂಟಾಗಿ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ತಿಳಿಸಿತ್ತು. ಇದಕ್ಕೂ ಪಶ್ಚಿಮ ಏಷ್ಯಾದ ಸಂಘರ್ಷಕ್ಕೂ ಯಾವುದೇ ಸಂಬಂಧವಿಲ್ಲ ಎನ್ನಲಾಗಿದೆ.
ಸಾಮಾನ್ಯ ಕರ್ತವ್ಯದ ಸಮಯದಲ್ಲಿ ತಾಂತ್ರಿಕ ದೋಷ ಉಂಟಾಗಿ ಮಿಲಿಟರಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಅಪಘಾತಕ್ಕೆ ಕಾರಣವೇನು ಅಥವಾ ವಿಮಾನದಲ್ಲಿದ್ದವರ ಗುರುತುಗಳ ಕುರಿತು ಕತಾರ್ ಸರ್ಕಾರ ಹೆಚ್ಚಿನ ವಿವರ ನೀಡಿಲ್ಲ.
ಕತಾರ್‌ನಲ್ಲಿ ಹೆಲಿಕಾಪ್ಟರ್ ಪತನ:
A Qatar Army helicopter crashed due to a technical fault.
— ✮⃝Radha श्री 🔱 (@RadhaSriwastawa) March 22, 2026
We searched a lot but no photos or videos of the crashed helicopter were shown.
If this incident had happened in India, the media would have made a mockery of it. https://t.co/2rYCHVXlgr
ಪ್ರಾಥಮಿಕ ಮಾಹಿತಿಯ ಪ್ರಕಾರ, ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿರಬಹುದು ಎಂದು ಸೂಚಿಸಲಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ ಪ್ರತಿಕೂಲ ಕ್ರಮದ ಪರಿಣಾಮವಾಗಿ ಅಪಘಾತ ಸಂಭವಿಸಿದೆ ಎಂಬುದಕ್ಕೆ ಯಾವುದೇ ಸೂಚನೆ ಇಲ್ಲ ಎಂದು ಮೂಲಗಳು ತಿಳಿಸಿವೆ.
ನ್ಯೂಜೆರ್ಸಿಯಲ್ಲಿ ಎರಡು ಹೆಲಿಕಾಪ್ಟರ್ ಪತನ; ಇಲ್ಲಿದೆ ಭಯಾನಕ ವಿಡಿಯೊ
ಫೆಬ್ರವರಿ 28ರಂದು ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯ ನಂತರ ಇರಾನ್ ಹಲವು ಬಾರಿ ಅಮೆರಿಕದ ನೆಲೆಗಳು ಮತ್ತು ಇತರ ಪ್ರಮುಖ ಸ್ಥಾಪನೆಗಳ ಮೇಲೆ ದಾಳಿ ಮಾಡಿದ್ದರಿಂದ, ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾದ ಮಧ್ಯೆ ಈ ಅಪಘಾತ ಸಂಭವಿಸಿದೆ.
ಇಸ್ರೇಲ್-ಅಮೆರಿಕ ವೈಮಾನಿಕ ದಾಳಿ ನಡೆದ ಒಂದು ದಿನದೊಳಗೆ, ಇರಾನ್ ಕತಾರ್ ಕಡೆಗೆ 44 ಕ್ಷಿಪಣಿಗಳು ಮತ್ತು ಎಂಟು ಡ್ರೋನ್‌ಗಳಿಂದ ದಾಳಿ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಮಾರ್ಚ್ 1ರಂದು ಇರಾನಿನ ದಾಳಿಯಲ್ಲಿ ಕತಾರ್‌ನ ಉತ್ತರದಲ್ಲಿರುವ ಮುಂಚಿನ ಎಚ್ಚರಿಕೆ ನೀಡುವ ರಾಡಾರ್ ಹಾನಿಗೊಳಗಾಗಿದೆ.
ಇಸ್ರೇಲ್‌ನ ಲಿಟಲ್ ಇಂಡಿಯಾ ಮೇಲೆ ದಾಳಿ
ಭಾರತೀಯ ವಲಸಿಗರೇ ಹೆಚ್ಚಾಗಿರುವ ಇಸ್ರೇಲ್‌ನ ಡಿಮೋನಾ ನಗರದ ಮೇಲೆ ಇರಾನ್ ದಾಳಿ ನಡೆಸಿರುವುದು ಇದೀಗ ಭಾರತ ಸೇರಿದಂತೆ ವಿಶ್ವವನ್ನೇ ಆಘಾತಕ್ಕೀಡು ಮಾಡಿದೆ. ಇರಾನ್‌ನ ನಟಾಂಜ್ ಪರಮಾಣು ಪುಷ್ಟೀಕರಣ ತಾಣದ ಮೇಲಿನ ದಾಳಿಗೆ ಪ್ರತಿಯಾಗಿ ಇಸ್ರೇಲ್‌ನ ಡಿಮೋನಾ ನಗರದ ಮೇಲೆ ಶನಿವಾರ ಸಂಜೆ ಇರಾನ್ ಕ್ಷಿಪಣಿ ದಾಳಿಯನ್ನು ನಡೆಸಿತ್ತು. ಇದರಿಂದ ನಗರದ ವಿಶಾಲ ಪ್ರದೇಶದಲ್ಲಿ ಶಿಲಾಖಂಡರಾಶಿಗಳು ತುಂಬಿಕೊಂಡಿತ್ತು. ಸುಮಾರು 47 ಮಂದಿ ಗಾಯಗೊಂಡರು.