ಕೊಲಂಬಿಯಾದಲ್ಲಿ ಮಿಲಿಟರಿ ವಿಮಾನ ಪತನ, 66 ಮಂದಿ ಸಾವು: ಭಯಾನಕ ವಿಡಿಯೊ ವೈರಲ್
Military Plane Crash: 125 ಸೈನಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಕೊಲಂಬಿಯಾದ ಮಿಲಿಟರಿ ವಿಮಾನ ಸೋಮವಾರ (ಮಾ. 23) ಟೇಕ್‌ಆಫ್ ಆಗುತ್ತಿದ್ದಂತೆ ಪತನಗೊಂಡು ಕನಿಷ್ಠ 66 ಜನರು ಮೃತಪಟ್ಟು, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ ವಾಯುಪಡೆಯ ಆರು ಸಿಬ್ಬಂದಿ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ 58 ಸೈನಿಕರು ಸೇರಿದ್ದಾರೆ.
ಕೊಲಂಬಿಯಾದಲ್ಲಿ ಮಿಲಿಟರಿ ವಿಮಾನ ಪತನ -
ಬೊಗಾಟ, ಮಾ. 24: 125 ಸೈನಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಕೊಲಂಬಿಯಾದ (Colombia) ಮಿಲಿಟರಿ ವಿಮಾನ ಸೋಮವಾರ (ಮಾ. 23) ಟೇಕ್ ಆಫ್ ಆಗುತ್ತಿದ್ದಂತೆ ಪತನಗೊಂಡು ಕನಿಷ್ಠ 66 ಮಂದಿ ಮೃತಪಟ್ಟು, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಿ-130 ಹರ್ಕ್ಯುಲಸ್ ವಿಮಾನವು ಈಕ್ವೆಡಾರ್ ಮತ್ತು ಪೆರುವಿನ ದಕ್ಷಿಣ ಗಡಿಯ ಸಮೀಪವಿರುವ ಪೋರ್ಟೊ ಲೆಗುಯಿಜಾಮೊದಿಂದ ಹೊರಟ ಸ್ವಲ್ಪ ಸಮಯದ ನಂತರ ಪತನಗೊಂಡಿತು. ಕಾಡಿನಲ್ಲಿ ವಿಮಾನದ ಅವಶೇಷ ಪತ್ತೆಯಾಗಿದೆ.
ವಾಯುಪಡೆಯ ಆರು ಸಿಬ್ಬಂದಿ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ 58 ಸೈನಿಕರು ಸಾವಿಗೀಡಾಗಿದ್ದಾರೆ ಎಂದು ಮಿಲಿಟರಿ ಮೂಲವೊಂದು ತಿಳಿಸಿದೆ. ಅಪಘಾತಕ್ಕೆ ಏನು ಕಾರಣ ಎಂಬ ಬಗ್ಗೆ ತಿಳಿಯಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಸರ್ಕಾರದ ಕಾರ್ಯದರ್ಶಿ ಕಾರ್ಲೋಸ್ ಕ್ಲಾರೋಸ್ ಹೇಳಿದರು.
ವಿಡಿಯೊ ವೀಕ್ಷಿಸಿ:
¿Que está pasando con un congreso y una corte que no fueron capaces de financiar al estado? por no cobrarle impuestos a los ricos y por dañar el gobierno progresista con el que no convenían y que explícitamente les pidió los recursos para mantener la defensa del país? Ningún país… https://t.co/UwHh1qDUY8
— Gustavo Petro (@petrogustavo) March 24, 2026
Hasta el momento hubo 77 heridos en el hospital, un muerto, 43 personas por establecer su estado.
— Gustavo Petro (@petrogustavo) March 23, 2026
Aún no se conoce las causas del accidente del avión Hércules.
Fuerza a las familias de los soldados jóvenes de la Patria. pic.twitter.com/Eanr2NrfkK
ಕೊಲಂಬಿಯಾ ಮತ್ತು ಈಕ್ವೆಡಾರ್ ಮಿಲಿಟರಿಗಳು ಮಾದಕವಸ್ತು ಕಳ್ಳಸಾಗಣೆ ದಂಧೆ ಮತ್ತು ಮಿಲಿಟಿಯಾಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದರಿಂದ, ವಿಮಾನ ಪತನಗೊಂಡ ಗಡಿ ಪ್ರದೇಶದಲ್ಲಿ ಇತ್ತೀಚೆಗೆ ಭಾರಿ ಮಿಲಿಟರಿ ಚಟುವಟಿಕೆ ನಡೆಯುತ್ತಿದೆ. ಕಾಡಿನ ಮಧ್ಯೆ ವಿಮಾನ ಪತನಗೊಂಡಿದ್ದು, ಹೊತ್ತಿ ಉರಿಯುತ್ತಿರುವ ಭಯಾನಕ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ಈ ದುರಂತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಇದು ದೇಶಕ್ಕೆ ತುಂಬಾ ನೋವಿನ ಘಟನೆ. ನಮ್ಮ ಪ್ರಾರ್ಥನೆಗಳು ಮೃತರ ಕುಟುಂಬಸ್ಥರಿಗೆ ಸ್ವಲ್ಪ ಮಟ್ಟಿಗೆ ಸಾಂತ್ವನವನ್ನು ತರಲಿ ಎಂದು ಸ್ಯಾಂಚೆಜ್ ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮತ್ತೊಂದು ಫೈಟರ್ ಜೆಟ್ ಎಫ್-15 ಪತನ: ವಿಡಿಯೊ ವೈರಲ್
ಜನರಲ್ ಕಾರ್ಲೋಸ್ ಫರ್ನಾಂಡೊ ಸಿಲ್ವಾ ರುಯೇಡಾ ಮಾತನಾಡಿ, ವಿಮಾನದಲ್ಲಿ 114 ಸೈನಿಕರು ಮತ್ತು 11 ಸಿಬ್ಬಂದಿ ಇದ್ದರು. ವಿಮಾನ ಪೋರ್ಟೊ ಲೆಗುಯಿಜಾಮೊದಿಂದ ಹತ್ತಿರದ ಅಮೆಜಾನ್ ಹೊರಠಾಣೆಗೆ ಪ್ರಯಾಣಿಸುತ್ತಿದ್ದರು. ವಿಮಾನ ನಿಲ್ದಾಣವು ಚಿಕ್ಕದಾಗಿದಾಗಿರುವುದರಿಂದ ಮೃತದೇಹಗಳನ್ನು ಹಾಗೂ ಗಾಯಾಳುಗಳನ್ನು ಸ್ಥಳಾಂತರಿಸುವಲ್ಲಿ ತೊಂದರೆಯಾಗುತ್ತಿದೆ ಎಂದು ಪುಟಮಯೊ ಪ್ರದೇಶದ ಗವರ್ನರ್ ಜಾನ್ ಗೇಬ್ರಿಯಲ್ ಮೋಲಿನಾ ತಿಳಿಸಿದ್ದಾರೆ.
ಇನ್ನು ವಿಮಾನ ಪತನವಾದ ಸಮಯದಲ್ಲಿ ದೊಡ್ಡ ಶಬ್ಧ ಕೇಳಿಬಂದಿದೆ ಎಂದು ಸ್ಥಳೀಯರು ಹೇಳಿದರು. ಗಾಳಿಯಲ್ಲಿ ಸ್ಫೋಟದ ಅನುಭವವಾಯಿತು. ನಾನು ಮೇಲಕ್ಕೆ ನೋಡಿದಾಗ ವಿಮಾನವು ನನ್ನ ಜಮೀನಿನಲ್ಲಿರುವ ಮನೆಯ ಹತ್ತಿರ ಹಾರುತ್ತಿತ್ತು ಎಂದು ರೈತ ನೋಯ್ ಮೋಟಾ ಹೇಳಿದರು.
ಕೊಲಂಬಿಯಾದ ಅಧ್ಯಕ್ಷ ಗುಸ್ತಾವೊ ಪೆಟ್ರೋ ವಿಮಾನವು ಎತ್ತರಕ್ಕೆ ಹಾರಲು ಪ್ರಯತ್ನಿಸುವ ಮೊದಲು ಕೆಳಗೆ ಬೀಳುವ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಅವರು ಎಕ್ಸ್‌ನಲ್ಲಿ ನಡೆದ ಅಪಘಾತವನ್ನು ಭಯಾನಕ ಎಂದು ಹೇಳಿದರು. ದಕ್ಷಿಣ ಅಮೆರಿಕದಲ್ಲಿ ಲಾಕ್‌ಹೀಡ್ ಮಾರ್ಟಿನ್ ನಿರ್ಮಿಸಿದ ನಾಲ್ಕು ಎಂಜಿನ್‌ಗಳ ಟರ್ಬೊಪ್ರೊಪ್ ಆಗಿರುವ ಸಿ-130 ಹರ್ಕ್ಯುಲಸ್ ಒಂದು ತಿಂಗಳೊಳಗೆ ಅಪಘಾತಕ್ಕೀಡಾದ ಎರಡನೇ ವಿಮಾನ ಇದಾಗಿದೆ.
ಫೆಬ್ರವರಿ 27ರಂದು ಲಾ ಪಾಜ್ ಬಳಿ ನೋಟುಗಳನ್ನು ಹೊತ್ತೊಯ್ಯುತ್ತಿದ್ದ ಬೊಲಿವಿಯಾದ ಮಿಲಿಟರಿ ಸರಕು ವಿಮಾನವು ಇಳಿಯುವಾಗ ಅಪಘಾತಕ್ಕೀಡಾಗಿ ಕನಿಷ್ಠ 24 ಜನರು ಮೃತಪಟ್ಟಿದ್ದರು. ತಾತ್ಕಾಲಿಕ ವಾಯುನೆಲೆಗಳಿಂದ ಕಾರ್ಯನಿರ್ವಹಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ಇದನ್ನು, ಪ್ರಪಂಚದಾದ್ಯಂತದ ಮಿಲಿಟರಿ ಪಡೆಗಳು ವ್ಯಾಪಕವಾಗಿ ಬಳಸುತ್ತದೆ.