ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನೇಪಾಳದಿಂದ ಸ್ವದೇಶಕ್ಕೆ ಹಿಂದುರುಗಿದ 38 ಭಾರತೀಯರು

ನೇಪಾಳದಿಂದ 38 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ. ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಹಾಯದಿಂದ 38 ಭಾರತೀಯರನ್ನು ರಕ್ಸೌಲ್ ಗಡಿಯ ಮೂಲಕ ಬಿಹಾರಕ್ಕೆ ಕರೆತರಲಾಗಿದೆ. ಇದರಲ್ಲಿ ಆಂಧ್ರ ಪ್ರದೇಶದ 22 ಮತ್ತು ಕರ್ನಾಟಕದ 16 ಜನರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೇಪಾಳದಿಂದ 38 ಭಾರತೀಯರ ರಕ್ಷಣೆ

-

ಪಾಟ್ನಾ: ಅಶಾಂತಿಯ ನಡುವೆಯೇ (Political unrest) ನೇಪಾಳದಿಂದ (Nepal) 38 ಭಾರತೀಯರನ್ನು (Indians) ರಾಯಭಾರ ಕಚೇರಿಯ (Embassy) ಸಹಾಯದಿಂದ ಬಿಹಾರಕ್ಕೆ (Bihar) ತಲುಪಿಸಲಾಗಿದೆ. ನೇಪಾಳದಲ್ಲಿ (Nepal) ನಡೆಯುತ್ತಿರುವ ಹಿಂಸಾಚಾರದ ನಡುವೆ ಕಠ್ಮಂಡುವಿನಲ್ಲಿರುವ (Kathmandu) ಭಾರತೀಯ ರಾಯಭಾರ ಕಚೇರಿಯ ಸಹಾಯದಿಂದ 38 ಭಾರತೀಯರನ್ನು ರಕ್ಸೌಲ್ ಗಡಿಯ (Raxaul border) ಮೂಲಕ ಬಿಹಾರಕ್ಕೆ(Bihar) ಕರೆತರಲಾಗಿದೆ. ಇದರಲ್ಲಿ ಆಂಧ್ರ ಪ್ರದೇಶದ (Andra Pradesh) 22 ಮತ್ತು ಕರ್ನಾಟಕದ (Karnataka) 16 ಜನರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೇಪಾಳದ ಹಿಂಸಾಚಾರದ ನಡುವೆ ಆಂಧ್ರ ಪ್ರದೇಶದ 22 ಮತ್ತು ಕರ್ನಾಟಕದ 16 ಮಂದಿ ಸೇರಿ ಒಟ್ಟು 38 ಭಾರತೀಯರನ್ನು ಬಿರ್ಗುಂಜ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಬಿರ್ಗುಂಜ್- ರಕ್ಸೌಲ್ ಗಡಿಯುದ್ದಕ್ಕೂ ಮಾರ್ಗದರ್ಶನ ಮಾಡಿ ಬಿಹಾರದ ಸ್ಥಳೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು.



ಭಾರತೀಯರು ಸುರಕ್ಷಿತವಾಗಿ ಭಾರತ ತಲುಪಲು ಮಾರ್ಗದರ್ಶನ ಮಾಡಿರುವುದಕ್ಕೆ ಭಾರತೀಯ ರಾಯಭಾರ ಕಚೇರಿ ಮತ್ತು ಭದ್ರತಾ ಸಂಸ್ಥೆಗಳಿಗೆ ಅಧಿಕಾರಿಗಳು ಧನ್ಯವಾದ ಸಲ್ಲಿಸಿದ್ದಾರೆ. ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮಂಗಳವಾರ ಭಾರತೀಯ ಪ್ರಜೆಗಳಿಗೆ ತುರ್ತು ಸಂಪರ್ಕ ಸಂಖ್ಯೆಗಳನ್ನು ನೀಡಿದ್ದು, ಸಹಾಯ ಅಥವಾ ಸ್ಥಳಾಂತರಿಸಲು ಸಹಾಯದ ಅಗತ್ಯವಿದ್ದರೆ ಸಂಪರ್ಕಿಸುವಂತೆ ತಿಳಿಸಿದೆ.

ನೇಪಾಳದ ಭದ್ರತಾ ಪಡೆಗಳು ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸಿದ್ದುಗುರುವಾರ ಬೆಳಗ್ಗೆ 6 ಗಂಟೆಯವರೆಗೆ ರಾಷ್ಟ್ರವ್ಯಾಪಿ ನಿರ್ಬಂಧಿತ ಆದೇಶಗಳನ್ನು ಮತ್ತು ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ: IndiGo Flight: ಸಹಜ ಸ್ಥಿತಿಯತ್ತ ನೇಪಾಳ; ವಿಮಾನ ಹಾರಾಟ ಪ್ರಾರಂಭಿಸಿದ ಇಂಡಿಗೋ

ನೇಪಾಳದಲ್ಲಿ ಸಿಲುಕಿರುವ ವಿದೇಶಿ ಪ್ರಜೆಗಳು ಸಹಾಯಕ್ಕಾಗಿ ಹತ್ತಿರದ ಭದ್ರತಾ ಠಾಣೆ ಅಥವಾ ಸಿಬ್ಬಂದಿಯನ್ನು ಸಂಪರ್ಕಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.