ಇಸ್ರೇಲ್‌ಗೆ ಬಂದಿಳಿದ ನರೇಂದ್ರ ಮೋದಿಯನ್ನು ಬಿಗಿದಪ್ಪಿ ಸ್ವಾಗತಿಸಿದ ಪ್ರಧಾನಿ ಬೆಂಜಮಿನ್ ನೆತನ್ಯಾಹು
ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧ ಬಲವರ್ಧನೆಗಾಗಿ ಇಸ್ರೇಲ್ ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೆಲ್ ಅವೀವ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಬಿಗಿದಪ್ಪಿ ಸ್ವಾಗತಿಸಿದರು. ಈ ಕುರಿತು ನೆತನ್ಯಾಹು ಅವರು ಸಾಮಾಜಿಕ ಮಾಧ್ಯಮದ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.
ಸಂಗ್ರಹ ಚಿತ್ರ -
ಟೆಲ್ ಅವೀವ್: ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧ ಬಲವರ್ಧನೆಗಾಗಿ ಎರಡು ದಿನಗಳ ಇಸ್ರೇಲ್ (Israel) ಪ್ರವಾಸ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israeli Prime Minister Benjamin Netanyahu) ಅವರು ಬುಧವಾರ ಟೆಲ್ ಅವೀವ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ (Ben Gurion Airport) ಬಿಗಿದಪ್ಪಿ ಸ್ವಾಗತಿಸಿದರು. ಬಳಿಕ ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡ ಅವರು ನನ್ನ ಆತ್ಮೀಯ ಗೆಳೆಯ ನರೇಂದ್ರ ಮೋದಿ ಅವರಿಗೆ ಇಸ್ರೇಲ್‌ಗೆ ಸ್ವಾಗತ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಸ್ವಾಗತಿಸುವ ವಿಡಿಯೊದೊಂದಿಗೆ ನಮಸ್ತೆ ಎಮೋಜಿಯನ್ನು ಕೂಡ ಅವರು ಹಂಚಿಕೊಂಡಿದ್ದಾರೆ. ಅಲ್ಲದೇ ಭಾರತ ಮತ್ತು ಇಸ್ರೇಲ್ ಧ್ವಜಗಳನ್ನು ಕೂಡ ಈ ಪೋಸ್ಟ್ ಹೊಂದಿದ್ದು, ಇದು ಎರಡೂ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದನ್ನು ಹೇಳುವಂತಿದೆ.
ಹಣ ಉಳಿಸಲು ವಿಮಾನ ನಿಲ್ದಾಣಕ್ಕೆ ಪಿಜ್ಜಾ ಆರ್ಡರ್ ಮಾಡಿದ ಕುಟುಂಬ: ಸ್ಮಾರ್ಟ್ ಪ್ಲ್ಯಾನಿಂಗ್ ಎಂದ ನೆಟ್ಟಿಗರು
ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಗಾರ್ಡ್ ಆಫ್ ಹಾನರ್ ಗೌರವವನ್ನು ನೀಡಲಾಯಿತು. ನೆತನ್ಯಾಹು ಅವರೊಂದಿಗೆ ಅವರ ಪತ್ನಿ ಸಾರಾ ನೆತನ್ಯಾಹು ಕೂಡ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಉನ್ನತ ಮಟ್ಟದ ಅಧಿಕಾರಿಗಳು, ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಕೂಡ ಇದ್ದರು.
Welcome to Israel my dear friend @narendramodi 🇮🇱🙏🇮🇳 pic.twitter.com/AnRtceD9Ci
— Benjamin Netanyahu - בנימין נתניהו (@netanyahu) February 25, 2026
ಇಸ್ರೇಲ್ ಗೆ ತೆರಳುವ ಮುನ್ನ ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡ ಪ್ರಧಾನಿ ಮೋದಿ, ಈ ಭೇಟಿಯು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಒಂದು ಅವಕಾಶ. ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಇಸ್ರೇಲ್ ಹಲವು ಬಹುಮುಖಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಹಂಚಿಕೊಂಡಿವೆ. ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಗುರಿಯನ್ನು ಹೊಂದಿರುವ ಇಸ್ರೇಲ್ ಭೇಟಿಯಲ್ಲಿ ವಿವಿಧ ವಿಚಾರಗಳ ಕುರಿತಾದ ಚರ್ಚೆಗಳನ್ನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಜೆರುಸಲೆಮ್‌ನ ಬೀದಿಗಳು ಅಂಗಡಿ ಮುಂಗಟ್ಟುಗಳಲ್ಲಿ ತ್ರಿವರ್ಣ ಧ್ವಜಗಳನ್ನು ಹಾರಿಸಲಾಗಿತ್ತು. ಸಮುದಾಯದ ನಾಯಕರು ಸ್ವಾಗತ ಸಭೆಗಳನ್ನು ಆಯೋಜಿಸಿ ಭಾರತೀಯ ಸಮುದಾಯದೊಂದಿಗೆ ಸೇರಿ ನಗರವನ್ನು ಅಲಂಕರಿಸಿದ್ದರು.
VIDEO | Israel: Indian National Anthem is played to welcome PM Narendra Modi (@narendramodi) upon his arrival in Tel Aviv.#Israel #PMModi
— Press Trust of India (@PTI_News) February 25, 2026
(Source: Third Party)
(Full video available on PTI Videos - https://t.co/n147TvrpG7) pic.twitter.com/wKvIRIBM6p
ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಇಸ್ರೇಲ್ ಪ್ರವಾಸದಲ್ಲಿ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರನ್ನು ಭೇಟಿ ಮಾಡಲಿದ್ದಾರೆ. ಇಸ್ರೇಲ್ ಸಂಸತ್ತು ನೆಸ್ಸೆಟ್ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕೂ ಮೊದಲು ಅವರು ನೆತನ್ಯಾಹು ಅವರೊಂದಿಗೆ ಸಂಕ್ಷಿಪ್ತ ಸಭೆ ನಡೆಸಲಿದ್ದಾರೆ.