ಬಿಂದಿ ಇಟ್ಟಿದ್ದಕ್ಕೆ ಟ್ರೋಲ್; ಅಮರಿಕದಲ್ಲಿ ಜನಾಂಗೀಯ ನಿಂದನೆಗೆ ಗುರಿಯಾದ ಭಾರತೀಯ ಮೂಲದ ಸಾಲಿಸಿಟರ್ ಜನರಲ್ ಮಥುರಾ ಶ್ರೀಧರನ್
Mathura Sridharan: ಅಮೆರಿಕದ ಒಹಿಯೊ ರಾಜ್ಯದ ಸಾಲಿಸಿಟರ್ ಜನರಲ್ ಆಗಿ ಆಯ್ಕೆಯಾದ ಭಾರತೀಯ ಮೂಲದ ವಕೀಲೆ ಮಥುರಾ ಶ್ರೀಧರನ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಜತೆಗೆ ಭಾರತೀಯರು ಎನ್ನುವ ಕಾರಣಕ್ಕೆ ಜನಾಂಗೀಯ ನಿಂದನೆ ಮಾಡುತ್ತಿದ್ದಾರೆ. ಸದ್ಯ ಈ ವಿಚಾರ ವ್ಯಾಪಕ ಚರ್ಚೆಗೆ ಕಾರಣವಾಗಿದೆ.


ವಾಷಿಂಗ್ಟನ್: ವಿದೇಶದಲ್ಲಿ ಭಾರತೀಯರು ಜನಾಂಗೀಯ ನಿಂದನೆಗೆ ಗುರಿಯಾಗುತ್ತಿರುವ ಘಟನೆ ಪದೇ ಪದೆ ನಡೆಯುತ್ತದೆ ಇರುತ್ತದೆ. ಇದೀಗ ಅಂತಹದ್ದೇ ಪ್ರಸಂಗವೊಂದು ಅಮೆರಿಕದಲ್ಲಿ ನಡೆದಿದೆ. ಸಾಲಿಸಿಟರ್ ಜನರಲ್ ಆಗಿ ಆಯ್ಕೆಯಾದ ಭಾರತೀಯ ಮೂಲದ ವಕೀಲೆ ಮಥುರಾ ಶ್ರೀಧರನ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಮಥುರಾ ಶ್ರೀಧರನ್ (Mathura Sridharan) ಅವರನ್ನು ಅಮೆರಿಕದ ಒಹಿಯೊ ರಾಜ್ಯದ ಸಾಲಿಸಿಟರ್ ಜನರಲ್ (Solicitor General) ಆಗಿ ಇತ್ತೀಚೆಗೆ ನೇಮಕ ಮಾಡಲಾಗಿದೆ. ಈ ಬಗ್ಗೆ ಜು. 31ರಂದು ಅಟಾರ್ನಿ ಜನರಲ್ ಡೇವ್ ಯೋಸ್ಟ್ (Attorney General Dave Yost) ಪ್ರಕಟಣೆ ಹೊರಡಿಸಿದ್ದಾರೆ. ಇದರ ಬೆನ್ನಲ್ಲೇ ಮಥುರಾ ಶ್ರೀಧರನ್ ವಿರುದ್ಧ ಜನಾಂಗೀಯ ನಿಂದನೆ ಕೇಳಿ ಬಂದಿದೆ. ಸಾಲಿಸಿಟರ್ ಜನರಲ್ ಆಗಿ ಅಮೆರಿಕದವರನ್ನೇ ಏಕೆ ಆಯ್ಕೆ ಮಾಡಲಿಲ್ಲ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಮಥುರಾ ಮುಖಕ್ಕೆ ಬಿಂದಿ (ಸ್ಟಿಕ್ಕರ್) ಇಡುತ್ತಾರೆ ಎನ್ನುವ ಕಾರಣಕ್ಕೆ ಟ್ರೋಲ್ ಮಾಡಲಾಗುತ್ತಿದೆ.
ಮಥುರಾ ಶ್ರೀಧರನ್ ಆಯ್ಕೆಯನ್ನು ಡೇವ್ ಯೋಸ್ಟ್ ಪ್ರಕಟಿಸಿದ ಬಳಿಕ ನಾನಾ ರೀತಿಯ ಕೆಟ್ಟ ಕಮೆಂಟ್‌ಗಳು ಬರುತ್ತಿವೆ. ಅಲ್ಲದೆ ಮಥುರಾ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ಮಥುರಾ ಪ್ರತಿಭಾವಂತೆಯಾದ ಕಾರಣ ಅವರನ್ನು 12ನೇ ಸಾಲಿಸಿಟರ್ ಜನರಲ್ ಆಗಿ ನೇಮಕ ಮಾಡಲಾಗಿದೆ. ಅವರು ಒಹಿಯೊದಲ್ಲಿ ಉತ್ತಮ ಸೇವೆ ಸಲ್ಲಿಸಲಿದ್ದಾರೆ ಎಂದು ಡೇವ್ ವಿವರಿಸಿದ್ದರೂ ಆಯ್ಕೆಯನ್ನು ಹಲವರು ಪ್ರಶ್ನಿಸುತ್ತಿದ್ದಾರೆ.
Mathura is brilliant… she won her argument at SCOTUS last year. Both the SGs she worked under (Flowers & Gaiser) recommended her.
— Dave Yost (@DaveYostOH) July 31, 2025
I told her when I originally hired her I needed her to argue with me. She does… All the time!
Excited to promote her. She will serve Ohio well. https://t.co/VKB8LkFQlJ
ಈ ಸುದ್ದಿಯನ್ನೂ ಓದಿ: Racist Attack: ಜನಾಂಗೀಯ ನಿಂದನೆ- ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಡೆಡ್ಲಿ ಅಟ್ಯಾಕ್!
ʼʼಮಥುರಾ ಪ್ರತಿಭಾವಂತರು. ಕಳೆದ ವರ್ಷ SCOTUSನಲ್ಲಿ ನಡೆದ ವಾದದಲ್ಲಿ ಅವರು ಗೆದ್ದಿದ್ದರು. ಅವರ ಕಾರ್ಯ ನಿರ್ವಹಿಸಿದ್ದ ಇಬ್ಬರು ಎಸ್‌ಜಿಗಳು ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. ಅವರು ಒಹಿಯೊದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಲಿದ್ದಾರೆʼʼ ಎಂದು ಡೇವ್ ಹೇಳಿದ್ದಾರೆ.
ಬಿಂದಿ ಧರಿಸಿದ್ದಕ್ಕೆ ಟ್ರೋಲ್
ಡೇವ್ ತಮ್ಮ ಎಕ್ಸ್ ಖಾತೆಯಲ್ಲಿ ಮಥುರಾ ಅವರ ಫೋಟೊ ಪೋಸ್ಟ್ ಮಾಡಿ ನೇಮಕವನ್ನು ಪ್ರಕಟಿಸಿದ್ದಾರೆ. ಈ ಫೋಟೊದಲ್ಲಿ ಅವರು ಬಿಂದಿ ಧರಿಸಿರುವುದು ಕಂಡುಬಂದಿದೆ. ಮಥುರಾ ಭಾರತೀಯ ಮೂಲದವರಾಗಿರುವುದು ಮತ್ತು ಬಿಂದಿ ಧರಿಸಿದ್ದಕ್ಕಾಗಿ ಜನಾಂಗೀಯ ನಿಂದನೆ ಎದುರಿಸುವಂತಾಗಿದೆ ಎಂದು ಮೂಲಗಳು ತಿಳಿಸಿವೆ. ʼʼಅಮೆರಿಕದಲ್ಲದವರನ್ನು ಇಂತಹ ಪ್ರಮುಖ ಹುದ್ದೆಗೆ ನೇಮಿಸಿದ್ದೇಕೆ?ʼʼ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಕೆಲವರು ಆಕೆಯ ಬಿಂದಿಯನ್ನು ಡಾಟ್ ಎಂದು ಕರೆದು ವಗ್ಯವಾಡಿದ್ದಾರೆ.
This one has a perma-dot, huh pic.twitter.com/jW8BLqBHFj
— Mr. Chairman (Still TheStaties) (@TheStatiesV2) July 31, 2025
ಟ್ರೋಲ್‌ಗೆ ತಿರುಗೇಟು
ಡೇವ್ ಟ್ರೋಲಿಗರಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ʼʼಹಲವರು ಮಥುರಾ ಅಮೆರಿಕದವರಲ್ಲ ಎಂದು ಹೇಳುತ್ತಿದ್ದಾರೆ. ಅವರು ಈಗ ಅಮೆರಿಕದ ಪ್ರಜೆ. ಅಲ್ಲದೆ ಅವರು ಮದುವೆಯಾಗಿದ್ದು ಅಮೆರಿಕದ ಪ್ರಜೆಯನ್ನು. ಅವರ ಹೆಸರು ನಿಮಗೆ ತೊಂದರೆ ಉಂಟು ಮಾಡುತ್ತಿದ್ದರೆ ಅದು ನಿಮ್ಮ ಸಮಸ್ಯೆಯೇ ಹೊರತು ಅವದ್ದಾಗಲೀ, ಅವರ ಹುದ್ದೆಯದ್ದಾಲೀ ಅಲ್ಲʼʼ ಎಂದು ಬರೆದುಕೊಂಡಿದ್ದಾರೆ.
Why would you select someone who isn't an American for such an important role?
— ThatGuyFromHS (@ThatGuyFromHS) July 31, 2025
ಯಾರು ಈ ಮಥುರಾ?
ಮಥುರಾ ಶ್ರೀಧರನ್ ಭಾರತೀಯ ಮೂಲದ ಅಮೆರಿಕನ್ ವಕೀಲೆಯಾಗಿದ್ದು, ಸದ್ಯ ಒಹಿಯೊ ಅಟಾರ್ನಿ ಜನರಲ್ ಕಚೇರಿಯಲ್ಲಿ ಡೆಪ್ಯುಟಿ ಸಾಲಿಸಿಟರ್ ಜನರಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2008ರಲ್ಲಿ ಅಮೆರಿಕಕ್ಕೆ ತೆರಳಿದ ಅವರು 2015ರಲ್ಲಿ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿ 2018ರಲ್ಲಿ ಪದವಿ ಪಡೆದುಕೊಂಡರು.