ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬ್ಯಾರಲ್‌ಗೆ 100 ಡಾಲರ್‌ ಗಡಿ ದಾಟಿದ ಕಚ್ಚಾ ತೈಲ ದರ; ಭಾರತದಲ್ಲಿಯೂ ಹೆಚ್ಚಾಗುತ್ತಾ ಇಂಧನ ಬೆಲೆ?

ಇರಾನ್‌ ಯುದ್ಧದ ಪರಿಣಾಮ ಅಂತಾರಾಷ್ಟ್ರೀಯ ಕಚ್ಚಾ ತೈಲದ ದರದಲ್ಲಿ 4 ವರ್ಷಗಳ ಬಳಿಕಕ ಮೊದಲ ಬಾರಿಗೆ ಪ್ರತಿ ಬ್ಯಾರಲ್‌ ತೈಲ ದರ 100 ಡಾಲರ್‌ಗೆ ಏರಿಕೆಯಾಗಿದೆ. ಯುದ್ಧದ ಪರಿಣಾಮ ಕಚ್ಚಾ ತೈಲದ ಸರಬರಾಜಿನ ಮೇಲೆ ಭಾರಿ ಸವಾಲು ಉಂಟಾಗಿದೆ. ಇದರಿಂದ ದರ ಜಿಗಿದಿದೆ. ಏಷ್ಯಾದಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ 109 ಡಾಲರ್‌ಗೆ ಏರಿಕೆಯಾಗಿದೆ.

ಬ್ಯಾರಲ್‌ಗೆ 100 ಡಾಲರ್‌ ಗಡಿ ದಾಟಿದ ಕಚ್ಚಾ ತೈಲ ದರ!

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Mar 9, 2026 9:52 AM

ಟೆಹ್ರಾನ್‌: ಇರಾನ್‌ ಯುದ್ಧದ ಪರಿಣಾಮ ಅಂತಾರಾಷ್ಟ್ರೀಯ ಕಚ್ಚಾ ತೈಲದ ದರದಲ್ಲಿ 4 ವರ್ಷಗಳ ಬಳಿಕಕ ಮೊದಲ ಬಾರಿಗೆ ಪ್ರತಿ ಬ್ಯಾರಲ್‌ (Crude Oil) ತೈಲ ದರ 100 ಡಾಲರ್‌ಗೆ ಏರಿಕೆಯಾಗಿದೆ. ಯುದ್ಧದ ಪರಿಣಾಮ ಕಚ್ಚಾ ತೈಲದ ಸರಬರಾಜಿನ ಮೇಲೆ ಭಾರಿ ಸವಾಲು ಉಂಟಾಗಿದೆ. ಇದರಿಂದ ದರ ಜಿಗಿದಿದೆ. ಏಷ್ಯಾದಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ 109 ಡಾಲರ್‌ಗೆ ಏರಿಕೆಯಾಗಿದೆ. 2022ರಲ್ಲಿ ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ ಆರಂಭಿಕ ತಿಂಗಳುಗಳಲ್ಲಿ ಇದೇ ರೀತಿ ತೈಲ ದರ ಏರಿತ್ತು. ಆದರೆ ಇರಾನಿನ ಪರಮಾಣು ಬೆದರಿಕೆಯನ್ನು ನಿರ್ಮೂಲನೆ ಮಾಡಲು ಸ್ವಲ್ಪ ಬೆಲೆ ಕೊಡಬೇಕಾದೀತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಇರಾನಿನ ಪರಮಾಣು ಬೆದರಿಕೆ ನಿಂತ ಮೇಲೆ ಕಚ್ಚಾ ತೈಲ ದರ ಮತ್ತೆ ಇಳಿಕೆಯಾಗಲಿದೆ. ಈ ಏರಿಕೆ ತಾತ್ಕಾಲಿಕ ಎಂದು ಟ್ರಂಪ್‌ ಹೇಳಿದ್ದಾರೆ. ಶಾಂತಿ ಮತ್ತು ನೆಮ್ಮದಿಗೆ ಅಮೆರಿಕ ಮತ್ತು ಜಗತ್ತು ಈ ಬೆಲೆ ತೆರಬೇಕಾಗಿದೆ ಎಂದಿದ್ದಾರೆ.

ರಷ್ಯಾ ವಿರುದ್ಧದ ನಿರ್ಬಂಧ ಮತ್ತಷ್ಟು ಸಡಿಲ?

ಈ ನಡುವೆ ಅಮೆರಿಕವು ರಷ್ಯಾ ತೈಲದ ಮೇಲಿನ ನಿರ್ಬಂಧಗಳನ್ನು ಮತ್ತಷ್ಟು ತೆರವುಗೊಳಿಸುವ ಸಾಧ್ಯತೆ ಇದೆ. ಅಮೆರಿಕದ ಹಣಕಾಸು ಸಚಿವ ಸ್ಕಾಟ್‌ ಬೆಸೆಂಟ್‌ ಈ ವಿಷಯ ತಿಳಿಸಿದ್ದಾರೆ. ಅಮೆರಿಕದ ಯುಎಸ್‌ ಇಂಟರ್‌ ನ್ಯಾಶನಲ್‌ ಡೆವಲಪ್‌ಮೆಂಟ್‌ ಫೈನಾನ್ಸ್‌ ಕಾರ್ಪೊರೇಷನ್‌ ಕೂಡ ಹರ್ಮುಜ್‌ ಜಲಸಂಧಿಯ ಮೂಲಕ ಸಾಗುವ ಹಡಗುಗಳಿಗೆ 20 ಬಿಲಿಯನ್‌ ಡಾಲರ್‌ ರಿಇನ್ಷೂರೆನ್ಸ್‌ ನೀಡಲು ಉದ್ದೇಶಿಸಿದೆ.

ಭಾರತದಲ್ಲಿ ಹೆಚ್ಚಾಗುತ್ತಾ ಇಂಧನ ಬೆಲೆ?

ಪೆಟ್ರೋಲ್ ಡಿಸೇಲ್ ಅಭಾವ, ದರ ಏರಿಕೆ ಬಗ್ಗೆ ವದಂತಿ ಬೇಡ. ಇಂಧನ ಅಭದ್ರತೆ ವದಂತಿಗಳನ್ನು ನಂಬಬೇಡಿ. ಭಾರತದಲ್ಲಿ 250+ ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಸಂಗ್ರಹವಿದೆ. ಸುಮಾರು 50 ದಿನಗಳ ಪೂರೈಕೆಗೆ ಸನ್ನದ್ಧವಾಗಿದೆ. ಇಂಧನ ಅಭಾವ, ಬಿಕ್ಕಟ್ಟು ಎದುರಾಗುವುದಿಲ್ಲ ಈ ಬಗ್ಗೆ ಆತಂಕ ಬೇಡ ಎಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದೆ. ಪ್ರಸ್ತುತ ಭಾರತದ ತೈಲ ಆಮದಿನ ಕೇವಲ 40% ರಷ್ಟು ಮಾತ್ರ ಹಾರ್ಮುಜ್ ಜಲಸಂಧಿಯ ಮೂಲಕ ತರಲಾಗುತ್ತದೆ. ಉಳಿದ 60% ರಷ್ಟು ಇತರ ಅಂತಾರಾಷ್ಟ್ರೀಯ ಮಾರ್ಗಗಳ ಮೂಲಕ ಬರುತ್ತದೆ. ಭಾರತವು ರಷ್ಯಾದಿಂದಲೂ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಕಚ್ಚಾ ತೈಲದ ಕೊರತೆ ಉಂಟಾಗುವುದಿಲ್ಲ.