ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇರಾನ್‌ನಲ್ಲಿ 3 ದಿನದಲ್ಲಿ 550ಕ್ಕೂ ಅಧಿಕ ಸಾವು; ಅಮೆರಿಕದಿಂದ ಮತ್ತೆ ಕ್ಷಿಪಣಿ ದಾಳಿ

Israel-Iran War : ಇರಾನ್‌ ಹಾಗೂ ಅಮೆರಿಕ, ಇಸ್ರೇಲ್‌ ನಡುವಿನ ಸಂಘರ್ಷ ಮುಂದುವರಿದಿದ್ದು, ದಾಳಿಗಳು ನಡೆಯುತ್ತಿವೆ. ಟೆಹ್ರಾನ್ ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ. ಯುನೈಟೆಡ್ ಅರಬ್ ಎಮಿರೇಟ್ಸ್,ದುಬೈ, ಬೈರುತ್ ಮತ್ತು ಓಮನ್ ಮೇಲೆ ಇರಾನ್‌ ದಾಳಿ ನಡೆಸಿದೆ.

ಇರಾನ್‌ನಲ್ಲಿ 3 ದಿನದಲ್ಲಿ 550ಕ್ಕೂ ಅಧಿಕ ಸಾವು

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Mar 2, 2026 3:38 PM

ಟೆಹ್ರಾನ್‌: ಇರಾನ್‌ ಹಾಗೂ ಅಮೆರಿಕ, ಇಸ್ರೇಲ್‌ ನಡುವಿನ ಸಂಘರ್ಷ ಮುಂದುವರಿದಿದ್ದು, ದಾಳಿಗಳು ನಡೆಯುತ್ತಿವೆ. ಟೆಹ್ರಾನ್ ಪಶ್ಚಿಮ (Israel-Iran War) ಏಷ್ಯಾದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ. ಯುನೈಟೆಡ್ ಅರಬ್ ಎಮಿರೇಟ್ಸ್,ದುಬೈ, ಬೈರುತ್ ಮತ್ತು ಓಮನ್ ಮೇಲೆ ಇರಾನ್‌ ದಾಳಿ ನಡೆಸಿದೆ. ಇರಾನ್ ಯುಎಇ ಮೇಲೆ ನಡೆಸಿದ ದಾಳಿಯಲ್ಲಿ ಅಮೆಜಾನ್‌ನ ಕ್ಲೌಡ್ ಘಟಕವಾದ ಅಮೆಜಾನ್ ವೆಬ್ ಸೇವೆಗಳು(AWS)ಇದ್ದ ಕಟ್ಟಡದ ಮೇಲೂ ದಾಳಿಯಾಗಿದೆ., ಹೀಗಾಗಿ ತನ್ನ ಡೇಟಾ ಕೇಂದ್ರಗಳಲ್ಲಿ ಒಂದಕ್ಕೆ ನೀಡುತ್ತಿದ್ದ ವಿದ್ಯುತ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ದಾಳಿ ವೇಳೆ ಬೆಂಕಿ ಏನೋ ವಸ್ತುಗಳು ತಾಗಿ ಬೆಂಕಿ ಕಾಣಿಸಿಕೊಂಡ ನಂತರ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸೇವೆ ಸ್ಥಗಿತಗೊಳಿಸಲಾಗಿದ್ದು, ಸಂಪರ್ಕ ಪುನಃ ಆರಂಭಿಸಲು ಹಲವು ಗಂಟೆಗಳು ಬೇಕಾಗುತ್ತವೆ ಎಂದು ವರದಿಯಾಗಿದೆ.

ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ವಸತಿ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದು, ಹಲವರು ಸಾವು ನೋವು ಹಾಗೂ ಗಾಯಗಳಿಗೆ ಕಾರಣವಾಗಿದೆ. ದುಬೈನಲ್ಲಿ ಪಂಚತಾರಾ ರೆಸಾರ್ಟ್‌ಗಳ ಮೇಲೂ ದಾಳಿ ನಡೆದಿದ್ದವು. ಕುವೈತ್ ಸೇನೆಯು ತನ್ನ ವಾಯು ರಕ್ಷಣಾ ಘಟಕಗಳಿಂದ ಸೋಮವಾರ ಮಧ್ಯ ಕುವೈತ್‌ನ ಮೇಲೆ ಹಲವು ವೈಮಾನಿಕ ದಾಳಿಯನ್ನು ತಡೆದಿರುವುದಾಗಿ ತಿಳಿಸಿದೆ. ತ್ವರಿತ ಕಾರ್ಯಾಚರಣೆಯಿಂದ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ವಿವರಿಸಿದೆ. ಈ ವರೆಗೆ ಟೆಹ್ರಾನ್‌ನಲ್ಲಿ 550 ಕ್ಕೂ ಹೆಚ್ಚಿನವರು ಸಾವನ್ನಪ್ಪಿದ್ದಾರೆ.

48 ಇರಾನ್ ನಾಯಕರು ಸಾವು!

ದಾಳಿಯಲ್ಲಿ 48 ಇರಾನಿನ ನಾಯಕರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಆದಾಗ್ಯೂ, ಈ ಹೇಳಿಕೆಯನ್ನು ಇರಾನ್ ಅಧಿಕೃತವಾಗಿ ದೃಢಪಡಿಸಿಲ್ಲ. ಅಮೆರಿಕದ ಕಾರ್ಯಾಚರಣೆಯಲ್ಲಿ ಒಂಬತ್ತು ಇರಾನಿನ ನೌಕಾ ಯುದ್ಧನೌಕೆಗಳು ಮುಳುಗಿವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ (US President Trump) ಹೇಳಿಕೊಂಡಿದ್ದಾರೆ. ಇರಾನ್‌ನ ಭೂಗತ ಕ್ಷಿಪಣಿ ನೆಲೆಗಳನ್ನು ಅಮೆರಿಕ ಗುರಿಯಾಗಿಸಿಕೊಂಡಿದೆ. ನಾಲ್ಕು ಯುಎಸ್ ಬಿ -2 ಬಾಂಬರ್‌ಗಳು ಇರಾನಿನ ಕ್ಷಿಪಣಿ ನೆಲೆಗಳ ಮೇಲೆ ಡಜನ್‌ಗಟ್ಟಲೆ 2,000 ಪೌಂಡ್ ಬಂಕರ್-ಬಸ್ಟರ್‌ಗಳನ್ನು ಬೀಳಿಸಿದವು. "ಆಪರೇಷನ್ ಎಪಿಕ್ ಫ್ಯೂರಿಯ ಭಾಗವಾಗಿ ನಡೆದ ಕಾರ್ಯಾಚರಣೆಯ ಸಮಯದಲ್ಲಿ ಮೂವರು ಯುಎಸ್ ಸೇವಾ ಸದಸ್ಯರು ಸಾವನ್ನಪ್ಪಿದರು ಮತ್ತು ಐದು ಮಂದಿ ಗಂಭೀರವಾಗಿ ಗಾಯಗೊಂಡರು.

ಕೆರಳಿದ ಇರಾನ್‌ನಿಂದ ಮುಂದುವರಿದ ದಾಳಿ; ದುಬೈ, ಅಬುಧಾಬಿ, ದೋಹಾದಲ್ಲಿ ಸರಣಿ ಸ್ಫೋಟ

ಆಪರೇಷನ್ ಎಪಿಕ್ ಫ್ಯೂರಿ ಅಡಿಯಲ್ಲಿ ಇರಾನ್‌ನಲ್ಲಿ ನೂರಾರು ಗುರಿಗಳ ಮೇಲೆ ದಾಳಿ ಮಾಡಿರುವುದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ. ಕ್ರಾಂತಿಕಾರಿ ಗಾರ್ಡ್ ಗುರಿಗಳು, ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ಒಂಬತ್ತು ಹಡಗುಗಳನ್ನು ನಾಶಪಡಿಸುವ ಬಗ್ಗೆಯೂ ಅವರು ಮಾತನಾಡಿದ್ದಾರೆ.