IND vs WI: ʻಸಲಾಂ ಸಂಜು ಭಾಯ್..!-ಭಾರತವನ್ನು ಗೆಲ್ಲಿಸಿದ ಸ್ಯಾಮ್ಸನ್‌ಗೆ ಸೂರ್ಯಕುಮಾರ್ ಗೌರವ!
ವೆಸ್ಟ್ ಇಂಡೀಸ್ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8ರ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ತೋರಿದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ಗೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ವಿಶೇಷ ಗೌರವವನ್ನು ಸಲ್ಲಿಸಿದ್ದಾರೆ. ಭಾರತವನ್ನು ಗೆಲ್ಲಿಸಿ ಹಿಂತಿರುಗುತ್ತಿದ್ದ ಸಂಜುಗೆ ತಾವು ಧರಿಸಿದ್ದ ಕ್ಯಾಪ್ ತೆಗೆದು ಸೂರ್ಯಕುಮಾರ್ ಯಾದವ್ ಗೌರವ ಸಲ್ಲಿಸಿದರು.
ಸಂಜು ಸ್ಯಾಮ್ಸನ್‌ಗೆ ಸೂರ್ಯಕುಮಾರ್ ಯಾದವ್ ಮೆಚ್ಚುಗೆ. -
ಕೋಲ್ಕತಾ: ವೆಸ್ಟ್ ಇಂಡೀಸ್ ವಿರುದ್ಧದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ(IND vs WI) ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ಗೆ (Sanju Samson) ನಾಯಕ ಸೂರ್ಯಕುಮಾರ್ ಯಾದವ್ (Suryakumar yadav) ವಿಶೇಷ ಗೌರವವನ್ನು ಸಲ್ಲಿಸಿದ್ದಾರೆ. ವಿಂಡೀಸ್ ನೀಡಿದ್ದ 196 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ಬಹುತೇಕ ಸ್ಟಾರ್ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಆದರೆ, ಒಂದು ತುದಿಯಲ್ಲಿ ದೀರ್ಘಾವಧಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ ಅಜೇಯ 97 ರನ್‌ಗಳನ್ನು ಸಿಡಿಸಿ ಭಾರತ ತಂಡವನ್ನು ಇನ್ನೂ 4 ಎಸೆತಗಳು ಬಾಕಿ ಇರುವಾಗಲೇ ಗೆಲ್ಲಿಸಿದರು.
ಭಾರತ ತಂಡದ ಜೆರ್ಸಿಯಲ್ಲಿ ಸಂಜು ಸ್ಯಾಮ್ಸನ್ ತಮ್ಮ ಅತ್ಯುತ್ತಮ ಇನಿಂಗ್ಸ್‌ಗಳಲ್ಲಿ ಒಂದನ್ನು ಪ್ರದರ್ಶಿಸಿದರು. ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಭಾರತ ತಂಡದ ಚೇಸಿಂಗ್‌ನಲ್ಲಿ ಅವರು ತಮ್ಮ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ನಿಯಂತ್ರಣ ಕಾಪಾಡಿಕೊಂಡು ಸ್ಪೋಟಕ ಇನಿಂಗ್ಸ್ ಆಡಿದರು. ಒತ್ತಡದ ಪರಿಸ್ಥಿತಿಯಲ್ಲೂ ಸಮತೋಲನ ಮತ್ತು ಆತ್ಮವಿಶ್ವಾಸದ ಆಟವಾಡಿದ ಸ್ಯಾಮ್ಸನ್, ತಂಡವನ್ನು ಜಯದತ್ತ ಸುರಕ್ಷಿತವಾಗಿ ಮುನ್ನಡೆಸಿದರು. ಅವರ ಅಮೋಘ ಪ್ರದರ್ಶನದ ನೆರವಿನಿಂದ ಆತಿಥೇಯರು ಐದು ವಿಕೆಟ್‌ಗಳ ಜಯ ಸಾಧಿಸಿದರು. ಈ ಗೆಲುವಿನೊಂದಿಗೆ ಭಾರತ ತಂಡ 2026ರ ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು.
IND vs WI: ʻಫೋನ್ ಸ್ವಿಚ್ ಮಾಡಿ, ಸೋಶಿಯಲ್ ಮೀಡಿಯಾದಿಂದ ದೂರ ಇದ್ದೇನೆʼ,-ಸಂಜು ಸ್ಯಾಮ್ಸನ್!
ಸಂಜು ಸ್ಯಾಮ್ಸನ್‌ಗೆ ಸೂರ್ಯ ವಿಶೇಷ ಗೌರವ
ಭಾರತ ತಂಡವನ್ನು ಗೆಲ್ಲಿಸಿ ಪೆವಿಲಿಯನ್‌ಗೆ ಮರಳುತ್ತಿದ್ದ ವೇಳೆ ಸಂಜು ಸ್ಯಾಮ್ಸನ್ ಅವರ ಮುಂದೆ ಬಂದ ನಾಯಕ ಸೂರ್ಯಕುಮಾರ್ ಯಾದವ್ ನಗು ಮುಖದಲ್ಲಿ ತಮ್ಮ ಕ್ಯಾಪ್ ಅನ್ನು ತೆಗೆದು ನೆಲಕ್ಕೆ ಬಾಗಿ ವಿಕೆಟ್ ಕೀಪರ್‌ಗೆ ಸಲ್ಯೂಟ್ ಹೊಡಯುವ ಗೌರವಿಸಿದರು. ಇದಾದ ಬಳಿಕ ಸಹ ಆಟಗಾರರು ಕೂಡ ಸಂಜು ಅವರನು ಅಪ್ಪಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
📸📸
— BCCI (@BCCI) March 1, 2026
A memorable night at Eden Gardens 🥳#TeamIndia register their highest successful chase in ICC Men's T20 World Cups ✅
Scorecard ▶️ https://t.co/ur4pr8Bi3K#T20WorldCup | #MenInBlue | #INDvWI pic.twitter.com/lEpN4LIWXU
ಸಂಜು ವಿಶೇಷ ಸಂದೇಶ ರವಾನಿಸಿದ ಕ್ಯಾಪ್ಟನ್ ಸೂರ್ಯ
ಪಂದ್ಯದ ಬಳಿಕ ಸೂರ್ಯಕುಮಾರ್ ಯಾದವ್ ಮೈದಾನದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಹೊಗಳಿದ ಬಳಿಕ ತಮ್ಮ ಸೋಶಿಯಲ್ ಮೀಡಿಯಾದಲ್ಲಿಯೂ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಸಂಜು ಅವರನ್ನು ʻಚೆಟ್ಟಾʼ ಎಂದು ಕಡೆಯುವ ಮೂಲಕ ವಿಶೇಷ ಸಂದೇಶವನ್ನು ನೀಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಸ್ಟೋರಿಯಲ್ಲಿ ಸಂಜು ಸ್ಯಾಮ್ಸನ್ ಮಾತನಾಡುತ್ತಿರುವ ವಿಡಿಯೊವನ್ನು ಹಾಕಿಕೊಂಡಿದ್ದಾರೆ. ಈ ವಿಡಿಯೊಗೆ ಚೆಟ್ಟಾ, ಚೆಟ್ಟಾ ಎಂದು ಕರೆಯುವ ಮೂಲಕ, ʻಒಳ್ಳೆಯ ಜನರಿಗೆ ಒಳ್ಳೆಯದು ಆಗುತ್ತದೆ,ʼ ಎಂದು ಶ್ಲಾಘಿಸಿದ್ದಾರೆ.
ವಿಂಡೀಸ್ ಔಟ್, ಇಂಡಿಯಾ ಇನ್ ಟು ದಿ ಸೆಮಿಫೈನಲ್
ಸಂಜು ಸ್ಯಾಮ್ಸನ್‌ಗೆ ಸೂರ್ಯ ಗುಣಗಾನ
ಪಂದ್ಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಸೂರ್ಯಕುಮಾರ್, ಸಂಜು ಸ್ಯಾಮ್ಸನ್ ಅವರ ಯಶಸ್ಸು ಸಂಪೂರ್ಣವಾಗಿ ಅವರ ಕಠಿಣ ಪರಿಶ್ರಮದ ಫಲವೆಂದು ಹೇಳಿದರು. ಸರಿಯಾದ ಸಮಯದಲ್ಲಿ ಅವರು ತಮ್ಮ ಪರಿಶ್ರಮದ ಫಲವನ್ನು ಪಡೆಯುತ್ತಿದ್ದಾರೆ ಎಂದು ಶ್ಲಾಘಿಸಿದರು.
“ಒಳ್ಳೆಯವರು ಸಹನೆ ಇಟ್ಟು ಕಾಯುವಾಗ, ಒಳ್ಳೆಯ ಸಂಗತಿಗಳೇ ಸಂಭವಿಸುತ್ತವೆ ಎಂದು ನಾನು ಸದಾ ಹೇಳುತ್ತೇನೆ. ಈಗಷ್ಟೇ ಅದನ್ನೇ ನಾನು ಅವರಿಗೆ (ಸ್ಯಾಮ್ಸನ್) ಹೇಳಿದ್ದೆ. ಅವರು ಆಡದಿದ್ದ ಸಮಯದಲ್ಲೂ ತುಂಬಾ ಪರಿಶ್ರಮ ಪಟ್ಟಿದ್ದಾರೆ. ಈಗ ಅವರು ಅದರ ಫಲವನ್ನು ಸರಿಯಾದ ಸಮಯದಲ್ಲಿ ಪಡೆಯುತ್ತಿದ್ದಾರೆ,” ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ಭಾರತ ತಂಡ ಮಾರ್ಚ್ 5ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮುಖಾಮುಖಿಯಾಗಲಿದೆ.