ವಿಶ್ವಾಸಮತ ಯಾಚನೆಯಲ್ಲಿ ಗೆದ್ದ ಇಮ್ರಾನ್ ಖಾನ್
ವಿಶ್ವಾಸಮತ ಯಾಚನೆಯಲ್ಲಿ ಗೆದ್ದ ಇಮ್ರಾನ್ ಖಾನ್
-
Vishwavani News
Mar 6, 2021 2:49 PM
ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಶನಿವಾರ ಸಂಸತ್ತಿನಲ್ಲಿ ವಿಶ್ವಾಸಮತ ಯಾಚಿಸಿ, ಬಹುಮತ ಗಳಿಸಿದ್ದಾರೆ.
ಪಾಕಿಸ್ತಾನದ ಹಣಕಾಸು ಸಚಿವ ಅಬ್ದುಲ್ ಹಫೀಜ್ ಶೇಖ್ ಅವರು ಚುನಾವಣೆಯಲ್ಲಿ ಸೋಲು ಕಂಡ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಅವರು ಬಹುಮತ ಸಾಬೀತು ಪಡಿಸುವಂತೆ ವಿರೋಧ ಪಕ್ಷದವರು ಆಗ್ರಹಿಸಿದ್ದರು.
ಪಾಕಿಸ್ತಾನ್ ಡೆಮಾಕ್ರಾಟಿಕ್ ಮೂವ್ಮೆಂಟ್ ಅಭ್ಯರ್ಥಿ ಯೂಸೂಫ್ ರಾಜಾ ಗಿಲಾನಿ ವಿರುದ್ಧ ಶೇಖ್ ಸೋಲು ಕಂಡಿದ್ದರು. ಇದಾದ ಬಳಿಕ ಇಮ್ರಾನ್ ಅವರು ವಿಶ್ವಾಸಮತ ಯಾಚನೆ ಬಗ್ಗೆ ಆಡಳಿತ ಪಕ್ಷದ ಉಪಾಧ್ಯಕ್ಷ ಖುರೇಶಿ ಪ್ರಕಟಣೆ ಹೊರಡಿಸಿದ್ದರು.