ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಕ್ಷರ್‌ ಪಟೇಲ್‌ಗೆ ಕ್ಷಮೆಯಾಚಿಸಿದ ಸೂರ್ಯಕುಮಾರ್‌ ಯಾದವ್‌

Suryakumar Yadav apology: ಟೂರ್ನಿಯಲ್ಲಿ ಅಕ್ಷರ್ ಎಂಟು ಪಂದ್ಯಗಳಿಂದ 11 ವಿಕೆಟ್‌ಗಳನ್ನು ಪಡೆದು 8.20 ರ ಎಕಾನಮಿ ದರವನ್ನು ಕಾಯ್ದುಕೊಂಡರು. ನ್ಯೂಜಿಲೆಂಡ್ ತಂಡದ ವಿರುದ್ಧದ ಫೈನಲ್‌ನಲ್ಲಿ ಅವರು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದರು. 27 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ಗಳನ್ನು ಪಡೆದು ಭಾರತಕ್ಕೆ ಟ್ರೋಫಿ ಗೆಲ್ಲಲು ಸಹಾಯ ಮಾಡಿದರು.

ಅಕ್ಷರ್‌ ಪಟೇಲ್‌ಗೆ ಕ್ಷಮೆಯಾಚಿಸಿದ ಸೂರ್ಯಕುಮಾರ್‌ ಯಾದವ್‌

Suryakumar Yadav apology -

Abhilash BC
Abhilash BC Mar 12, 2026 12:10 PM

ಮುಂಬಯಿ, ಮಾ.12: 2026 ರ ಐಸಿಸಿ ಪುರುಷರ ಟಿ 20 ವಿಶ್ವಕಪ್(T20 World Cup) ಸಮಯದಲ್ಲಿ ಪ್ರಮುಖ ಪಂದ್ಯಕ್ಕೆ ಅಕ್ಷರ್ ಪಟೇಲ್ ಅವರನ್ನು ಕೈಬಿಟ್ಟಿದ್ದು ತಮ್ಮ ತಪ್ಪು ಎಂದು ಭಾರತದ ನಾಯಕ ಸೂರ್ಯಕುಮಾರ್ ಯಾದವ್(Suryakumar Yadav) ಒಪ್ಪಿಕೊಂಡರು. ಈ ನಿರ್ಧಾರದಿಂದ ಅಕ್ಷರ್ ಅಸಮಾಧಾನಗೊಂಡಿದ್ದಾರೆ ಎಂದು ನಾಯಕ ಬಹಿರಂಗಪಡಿಸಿದರು, ಪಂದ್ಯದ ನಂತರ ಅವರು ಆಲ್‌ರೌಂಡರ್‌ಗೆ ವೈಯಕ್ತಿಕವಾಗಿ ಕ್ಷಮೆಯಾಚಿಸಿದರು.

ವಿಶ್ವಕಪ್‌ ಗೆದ್ದು ಮೂರು ದಿನ ಕಳೆದ ನಂತರ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಸೂರ್ಯಕುಮಾರ್, ಅಹಮದಾಬಾದ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್ 8 ಹಂತದ ಪಂದ್ಯದ ಸಂದರ್ಭದಲ್ಲಿ ಭಾರತ ಈ ನಿರ್ಧಾರ ತೆಗೆದುಕೊಂಡಿತು. ಅಕ್ಷರ್ ಈ ಹಿಂದೆ ನೆದರ್ಲ್ಯಾಂಡ್ಸ್ ವಿರುದ್ಧದ ಗ್ರೂಪ್ ಹಂತದ ಪಂದ್ಯವನ್ನು ಸಣ್ಣಪುಟ್ಟ ಗಾಯದ ಕಾರಣದಿಂದಾಗಿ ತಪ್ಪಿಸಿಕೊಂಡಿದ್ದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸುವ ನಿರ್ಧಾರದಿಂದ ಅಕ್ಷರ್‌ ಅವರನ್ನು ಹೊರಗಿಡಲಾಯಿತು ಎಂದು ಹೇಳಿದರು.

"ಅವರು (ಅಕ್ಷರ್ ಪಟೇಲ್) ತುಂಬಾ ಕೋಪಗೊಂಡಿದ್ದರು. ಮತ್ತು ಅವರು ಹಾಗೆ ಮಾಡಬೇಕಿತ್ತು. ಏಕೆಂದರೆ ಅವರು ಅನುಭವಿ ಆಟಗಾರ. ಬಳಿಕ ನಾನು ಕ್ಷಮೆಯಾಚಿಸಿದೆ. ನಾನು ತಪ್ಪು ಮಾಡಿದೆ ಎಂದು ಅವರಿಗೆ ಹೇಳಿದೆ" ಎಂದು ಸೂರ್ಯಕುಮಾರ್‌ ಹೇಳಿದರು.

T20 World Cup: 2014ರ ಪೆಟ್ರೋಲ್‌ ಬಂಕ್‌ನಲ್ಲಿನ ಫೋಟೋಗೆ ಪ್ರತಿಕ್ರಿಯಿಸಿದ ಸೂರ್ಯಕುಮಾರ್‌ ಯಾದವ್‌!

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಆ ಸೂಪರ್ 8 ಪಂದ್ಯದಲ್ಲಿ ಭಾರತ 76 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತ್ತು. ಮತ್ತು ಅಕ್ಷರ್ ಅವರನ್ನು ಕೈಬಿಡುವ ನಿರ್ಧಾರವು ಪಂದ್ಯಾವಳಿಯ ಅತ್ಯಂತ ಚರ್ಚಾಸ್ಪದ ಆಯ್ಕೆ ನಿರ್ಧಾರಗಳಲ್ಲಿ ಒಂದಾಗಿತ್ತು.

ಅಕ್ಷರ್‌ ಪಟೇಲ್‌ ಪ್ರದರ್ಶನ ಹೇಗಿತ್ತು?

ಟೂರ್ನಿಯಲ್ಲಿ ಅಕ್ಷರ್ ಎಂಟು ಪಂದ್ಯಗಳಿಂದ 11 ವಿಕೆಟ್‌ಗಳನ್ನು ಪಡೆದು 8.20 ರ ಎಕಾನಮಿ ದರವನ್ನು ಕಾಯ್ದುಕೊಂಡರು. ನ್ಯೂಜಿಲೆಂಡ್ ತಂಡದ ವಿರುದ್ಧದ ಫೈನಲ್‌ನಲ್ಲಿ ಅವರು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದರು. 27 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ಗಳನ್ನು ಪಡೆದು ಭಾರತಕ್ಕೆ ಟ್ರೋಫಿ ಗೆಲ್ಲಲು ಸಹಾಯ ಮಾಡಿದರು.

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತದ ಗೆಲುವಲ್ಲಿ ಅಕ್ಷರ್‌ ಪ್ರಮುಖ ಪಾತ್ರವಹಿಸಿದ್ದರು. ಎರಡು ಅಸಾಮಾನ್ಯ ಕ್ಯಾಚ್‌ ಹಿಡಿಯದೇ ಹೋಗಿದ್ದರೆ ಭಾರತ ಸೆಮಿಯಲ್ಲೇ ತನ್ನ ಅಭಿಯಾನ ಮುಗಿಸಬೇಕಿತ್ತು.