ಪ್ರಧಾನಿ ಮೋದಿಗೆ ಉಜ್ಬೇಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಒಲಿ ದರಾಜಲಿ ಡಸ್ಟ್ಲಿಕ್' ಪ್ರದಾನ
ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ದಿನಗಳ ಮಧ್ಯ ಏಷ್ಯಾ ಪ್ರವಾಸದಲ್ಲಿದ್ದು, ಇಂದು ಉಜ್ಬೇಕಿಸ್ತಾನ್‌ಕ್ಕೆ ತೆರಳಿದ್ದಾರೆ. ಉಜ್ಬೇಕಿಸ್ತಾನ್‌ದ ರಾಜಧಾನಿ ತಾಷ್ಕೆಂಟ್‌ನಲ್ಲಿ ಮೋದಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಅಧ್ಯಕ್ಷ ಶವ್ಕತ್ ಮಿರ್ಜಿಯೊಯೆವ್ ಅವರೊಂದಿಗೆ, ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ.
ಪ್ರಧಾನಿ ಮೋದಿ ಹಾಗೂ ಉಜ್ಬೇಕಿಸ್ತಾನದ ಅಧ್ಯಕ್ಷ -
ತಾಷ್ಕೆಂಟ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಾಲ್ಕು ದಿನಗಳ ಮಧ್ಯ ಏಷ್ಯಾ ಪ್ರವಾಸದಲ್ಲಿದ್ದು, ಇಂದು ಉಜ್ಬೇಕಿಸ್ತಾನ್‌ಕ್ಕೆ ತೆರಳಿದ್ದಾರೆ. ಉಜ್ಬೇಕಿಸ್ತಾನ್‌ದ (Uzbekistan) ರಾಜಧಾನಿ ತಾಷ್ಕೆಂಟ್‌ನಲ್ಲಿ ಮೋದಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಅಧ್ಯಕ್ಷ ಶವ್ಕತ್ ಮಿರ್ಜಿಯೊಯೆವ್ ಅವರೊಂದಿಗೆ, ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. ಸಂದರ್ಭದಲ್ಲಿ ಉಜ್ಬೇಕಿಸ್ತಾನ್‌ನ ಅತ್ಯುನ್ನತ ಗೌರವವಾದ 'ಒಲಿ ದರಾಜಲಿ ದೋಸ್ಟ್ಲಿಕ್' ನಾಗರಿಕ ಪ್ರಶಸ್ತಿಯನ್ನು ನೀಡಲಾಗಿದೆ.
ರಾಜಕೀಯ, ವ್ಯಾಪಾರ, ಆರ್ಥಿಕ ಮತ್ತು ಹೂಡಿಕೆ ಸಂಬಂಧಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮುಖ ಪಾತ್ರ ಮತ್ತು ಎರಡೂ ದೇಶಗಳ ನಡುವೆ ಸಾಂಸ್ಕೃತಿಕ ಮತ್ತು ಮಾನವೀಯ ಸಹಕಾರವನ್ನು ಬಲಪಡಿಸುವಲ್ಲಿ ಅವರ ವಿಶೇಷ ಕೊಡುಗೆಯನ್ನು ಗುರುತಿಸಿ ಪ್ರಧಾನಿ ಮೋದಿ ಅವರಿಗೆ ಉಜ್ಬೇಕಿಸ್ತಾನ್‌ನ ಅತ್ಯುನ್ನತ ರಾಜ್ಯ ಗೌರವವನ್ನು ನೀಡಲಾಗಿದೆ ಎಂದು ಅಧ್ಯಕ್ಷ ಶವ್ಕತ್ ಮಿರ್ಜಿಯೊಯೆವ್ ಹೇಳಿದ್ದಾರೆ.
ವಿಡಿಯೋ ನೋಡಿ
#WATCH | Tashkent, Uzbekistan: Prime Minister Narendra Modi and President Shavkat Mirziyoyev hold delegation-level talks in Tashkent
— ANI (@ANI) August 30, 2026
(Source: ANI/DD) pic.twitter.com/71VANpqjYg
ಮಾತನಾಡಿದ ಮೋದಿ, ಪ್ರಧಾನಿ ಮೋದಿ ಉಜ್ಬೇಕಿಸ್ತಾನ್ ಮತ್ತು ಭಾರತದ ನಡುವಿನ ಸಂಬಂಧದ ನಿಜವಾದ ಗುರುತು "ದೋಸ್ತಲಿಕ್" ಅಂದರೆ ಸ್ನೇಹ. ಈ ಪದವು ಭಾರತ ಮತ್ತು ಉಜ್ಬೇಕಿಸ್ತಾನ್ ನಡುವಿನ ಸಂಬಂಧದ ಹೃದಯಭಾಗದಲ್ಲಿರುವ ಚೈತನ್ಯವನ್ನು ಸಂಪೂರ್ಣವಾಗಿ ವ್ಯಕ್ತಪಡಿಸುತ್ತದೆ ಎಂದು ಹೇಳಿದ್ದಾರೆ. ಈ ಪ್ರಶಸ್ತಿ ಒಬ್ಬ ವ್ಯಕ್ತಿಗೆ ಅಲ್ಲ, 1.4 ಶತಕೋಟಿ ಭಾರತೀಯರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು ಮತ್ತು ಉಜ್ಬೇಕಿಸ್ತಾನ್ ಜನರು ಮತ್ತು ಸರ್ಕಾರ ಮತ್ತು ಅಧ್ಯಕ್ಷ ಮಿರ್ಜಿಯೋಯೆವ್ ಅವರಿಗೆ ಕೃತಜ್ಞತೆಗಳನ್ನು ಮೋದಿ ವ್ಯಕ್ತಪಡಿಸಿದರು. ಪ್ರಶಸ್ತಿ ಒಂದು ದೊಡ್ಡ ಜವಾಬ್ದಾರಿಯನ್ನು ಸಹ ತರುತ್ತದೆ. ಉಜ್ಬೇಕಿಸ್ತಾನ್ ಮಣ್ಣಿನಿಂದ, ಭಾರತವು ಎಂದಿಗೂ ತನ್ನ ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದಿಲ್ಲ ಮತ್ತು ಎರಡೂ ದೇಶಗಳ ನಡುವಿನ ಸ್ನೇಹವನ್ನು ಸಂಪೂರ್ಣವಾಗಿ ಎತ್ತಿಹಿಡಿಯುತ್ತದೆ ಎಂದು ಮೋದಿ ಹೇಳಿದ್ದಾರೆ.
ಭಾರತಕ್ಕೆ ಯುರೇನಿಯಂ ಪೂರೈಕೆಗಾಗಿ ದೀರ್ಘಾವಧಿಯ ವ್ಯವಸ್ಥೆಯನ್ನು ಸ್ಥಾಪಿಸಲು ಎರಡೂ ದೇಶಗಳು ಒಪ್ಪಿಕೊಂಡವು. ಯುರೇನಿಯಂ ಒಪ್ಪಂದವು ಈ ಭೇಟಿಗೆ ಪ್ರಮುಖ ಪರಮಾಣು-ಶಕ್ತಿ ಆಯಾಮವನ್ನು ನೀಡುತ್ತದೆ. ತಾಷ್ಕೆಂಟ್‌ನಲ್ಲಿ ಉಜ್ಬೆಕ್ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್ ಅವರೊಂದಿಗೆ ಮೋದಿ ನಿಯೋಗ ಮಟ್ಟದ ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ವ್ಯವಸ್ಥೆಯನ್ನು ಘೋಷಿಸಲಾಯಿತು. ವ್ಯಾಪಾರ ಮತ್ತು ಹೂಡಿಕೆ, ಡಿಜಿಟಲ್ ಸಂಪರ್ಕ, ರಕ್ಷಣೆ ಮತ್ತು ಇಂಧನ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಉಭಯ ದೇಶಗಳು ಒಪ್ಪಂದವನ್ನು ಮಾಡಿಕೊಂಡಿವೆ.