ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Queen Victoria: ವಿಶ್ವದಲ್ಲೇ ಅತೀ ದೊಡ್ಡ ಮಾದಕ ದ್ರವ್ಯ ದಂಧೆ ನಡೆಸುತ್ತಿದ್ದ ರಾಣಿ ವಿಕ್ಟೋರಿಯಾ; ಇಲ್ಲಿದೆ ಇತಿಹಾಸ ಪುಟವೊಂದರ ರೋಚಕ ಅಧ್ಯಾಯ

ಮಾದಕ ದ್ರವ್ಯ ಸೇವಿಸುತ್ತಿದ್ದ ರಾಣಿ ವಿಕ್ಟೋರಿಯಾ ಒಂದು ಕಾಲದಲ್ಲಿ ವಿಶ್ವದ ಅತೀ ದೊಡ್ಡ ಮಾದಕ ದ್ರವ್ಯ ದಂಧೆಯನ್ನು ನಡೆಸುತ್ತಿದ್ದಳು. ನಿಯಮಿತವಾಗಿ ವಿವಿಧ ರೀತಿಯ ಔಷಧಗಳನ್ನು ಬಳಸುತ್ತಿದ್ದ ರಾಣಿ ವಿಕ್ಟೋರಿಯಾಳ ನೆಚ್ಚಿನ ಅಫೀಮು ಸೇರಿದಂತೆ ವಿವಿಧ ರೀತಿಯ ಮಾದಕ ದ್ರವ್ಯಗಳನ್ನು ಆಲ್ಕೋಹಾಲ್ ರೂಪದಲ್ಲಿ ಸೇವಿಸುತ್ತಿದ್ದಳು.

ಮಾದಕ ದ್ರವ್ಯ ದಂಧೆ ನಡೆಸುತ್ತಿದ್ದ ರಾಣಿ ವಿಕ್ಟೋರಿಯಾ

-

ಲಂಡನ್‌: ಒಂದು ಕಾಲದಲ್ಲಿ ವಿಶ್ವದಲ್ಲೇ ಅತಿದೊಡ್ಡ ಮಾದಕ ದ್ರವ್ಯ ಸಾಮ್ರಾಜ್ಯವನ್ನು (World's biggest drug empires) ರಾಣಿ ವಿಕ್ಟೋರಿಯಾ (Queen Victoria) ನಡೆಸುತ್ತಿದ್ದಳು. ಸುಮಾರು 150 ವರ್ಷಗಳ ಹಿಂದೆ ದಕ್ಷಿಣ ಅಮೆರಿಕಾದಲ್ಲಿ (South America) ಕಾರ್ಟೆಲ್ ಅಥವಾ ಬೀದಿ ಗೂಂಡಾಗಳೆಲ್ಲರೂ ರಾಣಿ ವಿಕ್ಟೋರಿಯಾಳ ಗುಲಾಮರಾಗಿದ್ದರು ಎಂದು ಲೇಖಕ ಸ್ಯಾಮ್ ಕೆಲ್ಲಿ ಹೇಳಿದ್ದಾರೆ. ಅವರು ತಮ್ಮ 'Human History On Drugs: An Utterly Scandalous but Entirely Truthful Look at History Under the Influence' ಎಂಬ ಪುಸ್ತಕದಲ್ಲಿ 19ನೇ ಶತಮಾನದ ಮಾದಕ ದ್ರವ್ಯ ಜಾಲದ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡಿದ್ದಾರೆ.

ರಾಣಿ ವಿಕ್ಟೋರಿಯಾ ಮಾದಕ ದ್ರವ್ಯ ಸಾಮ್ರಾಜ್ಯವನ್ನಾಳುತ್ತಿದ್ದಳು. ಅದು ಎಷ್ಟು ವಿಶಾಲವಾಗಿತ್ತೆಂದರೆ ಕೊಲಂಬಿಯಾದ ಮಾದಕವಸ್ತು ದೊರೆ ಪ್ಯಾಬ್ಲೊ ಎಸ್ಕೋಬಾರ್ ಮತ್ತು ಮೆಕ್ಸಿಕನ್ ಕಾರ್ಟೆಲ್ ನಾಯಕ ಜೋಕ್ವಿನ್ ಎಲ್ ಚಾಪೊ ಅವರನ್ನು ಕೆಳಮಟ್ಟದ ಬೀದಿ ವ್ಯಾಪಾರಿಗಳಾಗಿ ಮಾಡಿತ್ತು.

ಬ್ರಿಟಿಷ್ ಸಾಮ್ರಾಜ್ಯದ ಸಂಪೂರ್ಣ ಶಕ್ತಿಯ ಬೆಂಬಲದೊಂದಿಗೆ ಇತಿಹಾಸದಲ್ಲೇ ಅತೀ ದೊಡ್ಡ ಮಾದಕ ದ್ರವ್ಯ ಕಾರ್ಯಾಚರಣೆಗಳಲ್ಲಿ ಒಂದನ್ನು ರಾಣಿ ವಿಕ್ಟೋರಿಯಾ ನಡೆಸುತ್ತಿದ್ದಳು. ಇದರಿಂದ ಆಕೆ ಇಡೀ ದೇಶಕ್ಕೆ ಹಣಕಾಸು ಒದಗಿಸುತ್ತಿದ್ದಳು ಎಂದು ಕೆಲ್ಲಿ ಹೇಳುತ್ತಾರೆ.

ರಾಣಿ ವಿಕ್ಟೋರಿಯಾ ಸ್ವತಃ ಮಾದಕ ದ್ರವ್ಯಗಳನ್ನು ಸೇವಿಸುತ್ತಿದ್ದಳು. ನಿಯಮಿತವಾಗಿ ಹಲವಾರು ರೀತಿಯ ಔಷಧಗಳ ರೂಪದಲ್ಲಿ ಅದನ್ನು ಬಳಸುತ್ತಿದ್ದ ರಾಣಿಯ ಅವಳ ನೆಚ್ಚಿನ ಮಾದಕ ದ್ರವ್ಯಗಳಲ್ಲಿ ಅಫೀಮು ಕೂಡ ಸೇರಿತ್ತು. ಅದನ್ನು ಆಕೆ ಆಲ್ಕೋಹಾಲ್ ಮೂಲಕ ಸೇವಿಸುತ್ತಿದ್ದಳು. ಪ್ರತಿದಿನ ಬೆಳಗ್ಗೆ ರಾಣಿ ವಿಕ್ಟೋರಿಯಾ ದೊಡ್ಡ ಪ್ರಮಾಣದಲ್ಲೇ ಮಾದಕ ದ್ರವ್ಯ ಮಿಶ್ರಿತ ಆಲ್ಕೋಹಾಲ್ ಅನ್ನು ಸೇವಿಸುತ್ತಿದ್ದಳು ಎಂದು ಕೆಲ್ಲಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ರಾಣಿ ವಿಕ್ಟೋರಿಯಾ ಕೊಕೇನ್ ಅನ್ನು ಸಹ ಸೇವಿಸುತ್ತಿದ್ದಳು. ಆ ಕಾಲದಲ್ಲಿ ಅದು ಕಾನೂನುಬದ್ಧವಾಗಿತ್ತು. ಮುಟ್ಟಿನ ವೇಳೆ ಉಂಟಾಗುವ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಆಕೆಯ ವೈದ್ಯರು ಗಾಂಜಾವನ್ನು ಬಳಸುವಂತೆ ಹೇಳಿದ್ದರು. ಹೆರಿಗೆಯ ಸಮಯದಲ್ಲಿ ಕ್ಲೋರೋಫಾರ್ಮ್ ಅನ್ನು ಬಳಸಲಾಗಿತ್ತು.

ಮಾದಕ ದ್ರವ್ಯವು ಕೇವಲ ವಿಕ್ಟೋರಿಯಾ ತನ್ನ ಬಳಕೆಗೆ ಮಾತ್ರ ಸೀಮಿತವಾಗಿರಿಸಿಕೊಂಡಿರಲಿಲ್ಲ. ಅವಳು ಅದನ್ನು ಹೊರ ದೇಶಗಳಿಗೂ ಕಳುಹಿಸುತ್ತಿದ್ದಳು. 1837ರಲ್ಲಿ ಅನುವಂಶಿಕವಾಗಿ ಸಿಂಹಾಸನ ಏರಿದ ರಾಣಿ ವಿಕ್ಟೋರಿಯಾ ಆಡಳಿತದಲ್ಲಿ ಚೀನಾದ ಚಹಾವನ್ನು ಬ್ರಿಟನ್‌ ಅವಲಂಬಿಸಿತ್ತು. ಚಹಾದ ಆಮದು ಬ್ರಿಟಿಷ್ ಬೆಳ್ಳಿ ನಿಕ್ಷೇಪಗಳನ್ನು ಬರಿದಾಗಿಸುವಂತಿತ್ತು. ಚಹಾ ಆಮದು ಕಡಿಮೆ ಮಾಡಲು ಅಫೀಮನ್ನು ಬ್ರಿಟನ್ ಸರಕನ್ನಾಗಿ ಮಾಡಿತು. ಇದಕ್ಕಾಗಿ ಬ್ರಿಟಿಷ್ ನಿಯಂತ್ರಿತ ಭಾರತದಲ್ಲಿ ಇದನ್ನು ಬೆಳೆಸಲಾಯಿತು ಮತ್ತು ಚೀನಾಕ್ಕೆ ಬೃಹತ್ ಪ್ರಮಾಣದಲ್ಲಿ ರಫ್ತು ಮಾಡಲಾಯಿತು.

ಇದರಿಂದ ರಾತ್ರೋರಾತ್ರಿ ಅಫೀಮು ಬೇಡಿಕೆ ಹೆಚ್ಚಾಯಿತು. ಬ್ರಿಟಿಷರು ಚಹಾ ಆಮದಿಗಾಗಿ ಖರ್ಚು ಮಾಡಿದ್ದ ಎಲ್ಲ ಬೆಳ್ಳಿ ಮತ್ತು ಅದಕ್ಕಿಂತಲೂ ಹೆಚ್ಚು ಮೌಲ್ಯದ ಬೆಳ್ಳಿಯನ್ನು ಬ್ರಿಟನ್‌ಗೆ ಚೀನಾ ಹಿಂದಿರುಗಿಸಬೇಕಾಯಿತು. ಇದರಿಂದ ಚೀನಾವು ಭಾರಿ ಆರ್ಥಿಕ ನಷ್ಟವನ್ನು ಎದುರಿಸಬೇಕಾಯಿತು. ಅಫೀಮು ಮಾರಾಟದಿಂದ ಬ್ರಿಟಿಷ್ ಸಾಮ್ರಾಜ್ಯದ ವಾರ್ಷಿಕ ಆದಾಯ ಶೇ. 15ರಿಂದ 20ರಷ್ಟು ಏರಿಕೆಯಾಯಿತು ಎಂದು ಕೆಲ್ಲಿ ಹೇಳಿದ್ದಾರೆ.

ಅಫೀಮು ವ್ಯಾಪಾರವನ್ನು ನಿಲ್ಲಿಸಲು ಚೀನಾದ ಉನ್ನತ ಅಧಿಕಾರಿ ಲಿನ್ ಜೆಕ್ಸು ಪ್ರಯತ್ನ ನಡೆಸಿದರು. ಚಹಾ ಮತ್ತು ರೇಷ್ಮೆಗೆ ಪ್ರತಿಯಾಗಿ ಬ್ರಿಟನ್ ವಿಷಕಾರಿ ಔಷಧಗಳ ರಫ್ತನ್ನು ಕೊನೆಗೊಳಿಸುವಂತೆ ರಾಣಿ ವಿಕ್ಟೋರಿಯಾ ಅವರನ್ನು ಒತ್ತಾಯಿಸಿದರು. ಆದರೆ ರಾಣಿ ಇದನ್ನು ನಿರ್ಲಕ್ಷಿಸಿದರು.

1839ರಲ್ಲಿ ಲಿನ್ ದಕ್ಷಿಣ ಚೀನಾ ಸಮುದ್ರದಲ್ಲಿ 2.5 ಮಿಲಿಯನ್ ಪೌಂಡ್‌ಗಳ ಬ್ರಿಟಿಷ್ ಅಫೀಮನ್ನು ವಶಪಡಿಸಿಕೊಂಡು ನಾಶಪಡಿಸಿತ್ತು. ಇದಕ್ಕೆ ಪ್ರತಿಯಾಗಿ ವಿಕ್ಟೋರಿಯಾ ಪ್ರತಿದಾಳಿ ನಡೆಸಲು ಮುಂದಾದಳು. ಹೀಗೆ ನಡೆದ ಮೊದಲ ಅಫೀಮು ಯುದ್ಧದಲ್ಲಿ ಚೀನಾ ಸೋತು ಹಾಂಗ್ ಕಾಂಗ್ ಅನ್ನು ಬಿಟಿಷರಿಗೆ ಒಪ್ಪಿಸಿತ್ತು. ಈ ಮೂಲಕ ಹೊಸ ಒಪ್ಪಂದವೊಂದನ್ನು ಮಾಡಲಾಗಿದ್ದು, ಇದರನ್ವಯ ಬಂದರುಗಳನ್ನು ತೆರೆದು ಬ್ರಿಟಿಷ್ ನಾಗರಿಕರಿಗೆ ಚೀನೀ ಕಾನೂನಿನಿಂದ ವಿನಾಯಿತಿ ನೀಡಲಾಯಿತು.

ಇದನ್ನೂ ಓದಿ: Osama bin Laden: ಮಿಲಿಟರಿ ಕಾರ್ಯಾಚರಣೆ ವೇಳೆ ಮಹಿಳೆಯರ ಉಡುಪು ಧರಿಸಿ ಪರಾರಿಯಾಗಿದ್ನಂತೆ ಒಸಾಮಾ ಬಿನ್ ಲಾಡೆನ್!

ಚೀನಾವನ್ನು ಸುಲಭವಾಗಿ ಸೋಲಿಸಬಹುದು ಎಂಬುದನ್ನು ರಾಣಿ ವಿಕ್ಟೋರಿಯಾ ಜಗತ್ತಿಗೆ ತೋರಿಸಿದಳು. ರಾಣಿ ವಿಕ್ಟೋರಿಯಾ ತನ್ನ ವ್ಯಾಪಾರಕ್ಕೆ ನಿರ್ಬಂಧವನ್ನೂ ವಿಧಿಸಿದ್ದಳು. ಆಕೆ ಕೊಕೇನ್ ಸುರಕ್ಷಿತ, ಆರೋಗ್ಯಕರ ಶಕ್ತಿ ವರ್ಧಕ ಎಂದು ನಂಬಿ ಅದನ್ನು ಚೀನಾಕ್ಕೆ ರಫ್ತು ಮಾಡಲು ನಿರಾಕರಿಸಿದಳು. ಪ್ರಪಂಚದಲ್ಲಿರುವ ಎಲ್ಲ ಅಫೀಮನ್ನು ಚೀನಾಕ್ಕೆ ಮಾರಾಟ ಮಾಡಿರುವ ರಾಣಿ ಕೊಕೇನ್ ಅನ್ನು ಅವರು ಮುಟ್ಟದೇ ಇರುವುದು ಉತ್ತಮ ಎಂದು ನಂಬಿದ್ದಳು ಎಂದು ಕೆಲ್ಲಿ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.