ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತಕ್ಕೆ ಸಂಬಂಧಿಸಿದ ಇಸ್ರೇಲ್‌ನ ಹೈಫಾ ತೈಲ ಘಟಕದ ಮೇಲೆ ಇರಾನ್ ದಾಳಿ; ವಿಡಿಯೋ ವೈರಲ್‌

ಭಾರತ ಮತ್ತು ಇಸ್ರೇಲ್‌ಗೆ ಸಂಪರ್ಕ ಹೊಂದಿರುವ ಹೈಫಾದಲ್ಲಿರುವ ಇಸ್ರೇಲ್‌ನ ಅತಿದೊಡ್ಡ ತೈಲ ಸಂಸ್ಕರಣಾ ಘಟಕದ ಮೇಲೆ ತನ್ನ ಕ್ಷಿಪಣಿಗಳು ದಾಳಿ ನಡೆಸಿವೆ ಎಂದು ಇರಾನ್ ಹೇಳಿದೆ. ಈ ದಾಳಿಯು ಇಸ್ರೇಲ್‌ಗೆ ದೊಡ್ಡ ಆರ್ಥಿಕ ಮತ್ತು ರಕ್ಷಣಾ ನಷ್ಟವನ್ನು ಉಂಟುಮಾಡಬಹುದು.

ಭಾರತಕ್ಕೆ ಸಂಬಂಧಿಸಿದ ಇಸ್ರೇಲ್‌ನ ಹೈಫಾ ತೈಲ ಘಟಕದ ಮೇಲೆ ಇರಾನ್ ದಾಳಿ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Mar 8, 2026 1:37 PM

ಟೆಲ್‌ ಅವೀವ್‌: ಭಾರತ ಮತ್ತು ಇಸ್ರೇಲ್‌ಗೆ ಸಂಪರ್ಕ ಹೊಂದಿರುವ ಹೈಫಾದಲ್ಲಿರುವ ಇಸ್ರೇಲ್‌ನ ಅತಿದೊಡ್ಡ ತೈಲ ಸಂಸ್ಕರಣಾ ಘಟಕದ ಮೇಲೆ ತನ್ನ (‌Iran-Israel War) ಕ್ಷಿಪಣಿಗಳು ದಾಳಿ ನಡೆಸಿವೆ ಎಂದು ಇರಾನ್ ಹೇಳಿದೆ. ಈ ದಾಳಿಯು ಇಸ್ರೇಲ್‌ಗೆ ದೊಡ್ಡ ಆರ್ಥಿಕ ಮತ್ತು ರಕ್ಷಣಾ ನಷ್ಟವನ್ನು ಉಂಟುಮಾಡಬಹುದು. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಶನಿವಾರ ಹೈಫಾ ಕೊಲ್ಲಿಯಲ್ಲಿರುವ ಬಜಾನ್ ಗ್ರೂಪ್ ತೈಲ ಸಂಸ್ಕರಣಾಗಾರವನ್ನು ಗುರಿಯಾಗಿಸಿಕೊಂಡು ಖೇಬರ್ ಶೇಕನ್ ಘನ-ಇಂಧನ ಬ್ಯಾಲಿಸ್ಟಿಕ್ ಕ್ಷಿಪಣಿ ಮೂಲಕ ದಾಳಿ ನಡೆಸಿದೆ. ಇರಾನ್‌ನ ಇಂಧನ ಕ್ಷೇತ್ರದ ಮೇಲೆ ಇತ್ತೀಚೆಗೆ ಅಮೆರಿಕ-ಇಸ್ರೇಲಿ ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಐಆರ್‌ಜಿಸಿ ತಿಳಿಸಿದೆ.

ಇರಾನಿನ ತೈಲ ಸಂಗ್ರಹಾಗಾರ ಮೂಲಸೌಕರ್ಯದ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಸಂಸ್ಕರಣಾಗಾರದ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಇರಾನಿನ ಅಧಿಕಾರಿಗಳು ತಿಳಿಸಿದ್ದಾರೆ. ಹೈಫಾ ಕೊಲ್ಲಿಯಲ್ಲಿರುವ ಬಜಾನ್ ಗ್ರೂಪ್ ನಿರ್ವಹಿಸುವ ಈ ಸಂಸ್ಕರಣಾಗಾರವು ಇಸ್ರೇಲ್‌ನ ಅತಿದೊಡ್ಡ ತೈಲ ಸಂಸ್ಕರಣಾ ಘಟಕವಾಗಿದೆ. ಇದು ಇಸ್ರೇಲ್‌ನ ದೇಶೀಯ ಇಂಧನದ ಸುಮಾರು 50 ರಿಂದ 60 ಪ್ರತಿಶತವನ್ನು ಪೂರೈಸುತ್ತದೆ ಎಂದು ವರದಿಗಳು ಹೇಳುತ್ತವೆ.

ಗಲ್ಫ್‌ ರಾಷ್ಟ್ರಗಳ ಮೇಲೆ ಮತ್ತೆ ದಾಳಿ

ನೆರೆಯ ದೇಶಗಳ ಮೇಲೆ ದಾಳಿ ನಡೆಸುವುದಿಲ್ಲ ಎಂದು ಇರಾನ್‌ ಅಧ್ಯಕ್ಷ ನಿನ್ನೆಯಷ್ಟೇ ಹೇಳಿಕೆ ನೀಡಿದ್ದರು. ಇರಾನ್ ಈ ಪ್ರದೇಶದ ನೆರೆಯ ದೇಶಗಳನ್ನು ಗುರಿಯಾಗಿಸಿಕೊಳ್ಳುವ ಉದ್ದೇಶವನ್ನು ಹೊಂದಿಲ್ಲ. ಆದರೆ ದಾಳಿ ಮಾಡಿದರೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ’ ಎಂದು ಹೇಳಿದ್ದರು. ಆದರೆ ಇಂದು ಅಮೆರಿಕದ ನೆಲೆಗಳನ್ನು ಹೊಂದಿರುವ ವಿವಿಧ ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ವೈಮಾನಿಕ ದಾಳಿಗಳನ್ನು ಮುಂದುವರಿಸಿದೆ. ಕುವೇತ್, ಬಹರೇನ್, ಕತಾರ್, ಸೌದಿ ಅರೇಬಿಯಾ, ಯುಎಇ, ಲೆಬನಾನ್ ದೇಶಗಳ ಮೇಲೆ ಇರಾನ್​ನಿಂದ ಡ್ರೋನ್, ಮಿಸೈಲ್​ಗಳಿಂದ ದಾಳಿಗಳಾಗಿವೆ.



ಕುವೇತ್ ಏರ್​ಪೋರ್ಟ್​ನಲ್ಲಿರುವ ಇಂಧನ ಟ್ಯಾಂಕ್​ಗಳನ್ನು ಗುರಿಯಾಗಿಸಿ ಇರಾನ್​ನಿಂದ ಡ್ರೋನ್ ದಾಳಿಯಾಗಿದೆ. ಇದರಿಂದ ಫುಯೆಲ್ ಟ್ಯಾಂಕ್ ಹೊತ್ತಿ ಉರಿಯುತ್ತಿದೆ. ಕುವೇತ್​ನ ಅಗ್ನಿಶಾಮಕ ದಳ ಬೆಂಕಿ ನಂದಿಸಲು ಯತ್ನಿಸುತ್ತಿದೆ. ಅಧಿಕೃತ ಮಾಹಿತಿಯ ಪ್ರಕಾರ, ಇರಾನ್‌ನಲ್ಲಿ ಕನಿಷ್ಠ 1,230 ಮಂದಿ, ಲೆಬನಾನ್‌ನಲ್ಲಿ 200 ಕ್ಕೂ ಹೆಚ್ಚು ಮಂದಿ ಮತ್ತು ಇಸ್ರೇಲ್‌ನಲ್ಲಿ ಸುಮಾರು ಡಜನ್ ಮಂದಿ ಮೃತಪಟ್ಟಿದ್ದಾರೆ. ಜೊತೆಗೆ ಆರು ಅಮೆರಿಕದ ಸೈನಿಕರೂ ಅಸುನೀಗಿದ್ದಾರೆ.

ಯಾವುದೇ ಸಮಸ್ಯೆಗೆ ಮಿಲಿಟರಿ ಸಂಘರ್ಷ ಪರಿಹಾರವಲ್ಲ: ಇರಾನ್‌-ಇಸ್ರೇಲ್‌ ಯುದ್ಧದ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

ಇನ್ನು ಯುದ್ಧದ ಭೀತಿಯಿಂದಾಗಿ ಜನರು ಲೆಬನಾನ್‌ ತೊರೆಯುತ್ತಿದ್ದಾರೆ. 150 ಕ್ಕೂ ಹೆಚ್ಚು ಇರಾನ್ ನಾಗರಿಕರು—ಅದರಲ್ಲೂ ರಾಜತಾಂತ್ರಿಕರು ಮತ್ತು ಅವರ ಕುಟುಂಬ ಸದಸ್ಯರು ಸೇರಿ—ಲೆಬನಾನ್ ತೊರೆದಿದ್ದಾರೆ ಎಂದು ತಿಳಿದು ಬಂದಿದೆ. ಭದ್ರತಾ ಮೂಲದ ಪ್ರಕಾರ, ಅವರು ರಷ್ಯಾದ ವಿಮಾನದ ಮೂಲಕ ರಷ್ಯಾಗೆ ಕಳುಹಿಸಲಾಗುತ್ತಿದೆ. ಇದೇ ವೇಳೆ ಲೆಬನಾನ್‌ನ ಶಸ್ತ್ರಸಜ್ಜಿತ ಗುಂಪು ಹೆಜ್ಬುಲ್ಲಾ ಮತ್ತು ಇಸ್ರೇಲ್ ನಡುವಿನ ಹೊಸ ಯುದ್ಧ ಆರಂಭವಾದ ನಂತರ ಇನ್ನೂ 20 ಇರಾನಿಯರು ದೇಶ ತೊರೆದಿದ್ದಾರೆ.