ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

250 Years for USA: ಶಕ್ತಿವಂತನ ಸ್ವಾತಂತ್ರ್ಯ ದಿನ ಇಂದು

ಪ್ರತಿ ವರ್ಷ ಜುಲೈ 4ರಂದು ಅಮೆರಿಕಾದಾದ್ಯಂತ ಸಂಭ್ರಮದ ವಾತಾವರಣ ಮನೆ ಮಾಡುತ್ತದೆ. ಆಕಾಶ ವನ್ನು ಬಣ್ಣಬಣ್ಣದ ಪಟಾಕಿಗಳು ರಂಗೇರಿಸುತ್ತವೆ. ಮೆರವಣಿಗೆಗಳು ನಡೆಯುತ್ತವೆ. ಕುಟುಂಬ ಸ್ಥರು ಮತ್ತು ಸ್ನೇಹಿತರು ಒಟ್ಟಾಗಿ ಬಾರ್ಬೆಕ್ಯೂ ಹಾಗೂ ಪಿಕ್ನಿಕ್‌ಗಳನ್ನು ಆಯೋಜಿಸು ತ್ತಾರೆ. ಈ ದಿನವನ್ನು ‘ಅಮೆರಿಕದ ಸ್ವಾತಂತ್ರ್ಯ ದಿನ’ ಅಥವಾ ‘ಫೋರ್ಥ್ ಆಫ್ ಜುಲೈ’ ಎಂದು ಕರೆಯಲಾಗು ತ್ತದೆ.

250 Years for USA: ಶಕ್ತಿವಂತನ ಸ್ವಾತಂತ್ರ್ಯ ದಿನ ಇಂದು

-

Profile
Ashok Nayak Jul 4, 2026 7:47 AM

ಪ್ರತಿ ವರ್ಷ ಜುಲೈ 4ರಂದು ಅಮೆರಿಕಾದಾದ್ಯಂತ ಸಂಭ್ರಮದ ವಾತಾವರಣ ಮನೆ ಮಾಡುತ್ತದೆ. ಆಕಾಶವನ್ನು ಬಣ್ಣಬಣ್ಣದ ಪಟಾಕಿಗಳು ರಂಗೇರಿಸುತ್ತವೆ. ಮೆರವಣಿಗೆಗಳು ನಡೆಯುತ್ತವೆ. ಕುಟುಂಬ ಸ್ಥರು ಮತ್ತು ಸ್ನೇಹಿತರು ಒಟ್ಟಾಗಿ ಬಾರ್ಬೆಕ್ಯೂ ಹಾಗೂ ಪಿಕ್ನಿಕ್‌ಗಳನ್ನು ಆಯೋಜಿಸು ತ್ತಾರೆ. ಈ ದಿನವನ್ನು ‘ಅಮೆರಿಕದ ಸ್ವಾತಂತ್ರ್ಯ ದಿನ’ ಅಥವಾ ‘ಫೋರ್ಥ್ ಆಫ್ ಜುಲೈ’ ಎಂದು ಕರೆಯಲಾಗು ತ್ತದೆ. ಇದು ಅಮೆರಿಕದ ಜನರಿಗೆ ದೇಶದ ಜನ್ಮದಿನದಂತೆಯೇ ಮಹತ್ವದ್ದು. ಬ್ರಿಟಿಷರ ಆಡಳಿತದಿಂದ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿದ ಐತಿಹಾಸಿಕ ಕ್ಷಣವಿದು.

ಸ್ವಾತಂತ್ರ್ಯ ದಿನದ ಹಿನ್ನೆಲೆ

18ನೇ ಶತಮಾನದಲ್ಲಿ ಉತ್ತರ ಅಮೆರಿಕದ 13 ಬ್ರಿಟಿಷ್ ವಸಾಹತುಗಳು ಬ್ರಿಟನ್‌ನ ಆಡಳಿತದಲ್ಲಿ ದ್ದವು. ಬ್ರಿಟಿಷ್ ಸರಕಾರ ವಿಧಿಸುತ್ತಿದ್ದ ಹೆಚ್ಚುವರಿ ತೆರಿಗೆಗಳು, ವ್ಯಾಪಾರದ ಮೇಲಿನ ಕಟ್ಟುನಿಟ್ಟಿನ ನಿಯಮಗಳು ಹಾಗೂ ಸ್ಥಳೀಯ ಜನರ ಅಭಿಪ್ರಾಯಕ್ಕೆ ಬೆಲೆ ಕೊಡದ ಆಡಳಿತದಿಂದ ಜನರಲ್ಲಿ ಅಸಮಾಧಾನ ಹೆಚ್ಚಾಗತೊಡಗಿತು. ಪ್ರತಿನಿಧಿತ್ವವಿಲ್ಲದೆ ತೆರಿಗೆ ಬೇಡ ಎಂಬ ಘೋಷಣೆ ಜನರಲ್ಲಿ ವ್ಯಾಪಕವಾಗಿ ಮೊಳಗಿತು. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ ತೀವ್ರಗೊಂಡಂತೆ, ವಸಾಹತುಗಳ ನಾಯಕರು ಬ್ರಿಟನ್‌ನಿಂದ ಸಂಪೂರ್ಣವಾಗಿ ಬೇರ್ಪಡುವ ನಿರ್ಧಾರಕ್ಕೆ ಬಂದರು. 1776ರ ಜುಲೈ 2ರಂದು ‘ಸೆಕೆಂಡ್ ಕಾಂಟಿನೆಂಟಲ್ ಕಾಂಗ್ರೆಸ್’ ಬ್ರಿಟನ್‌ನಿಂದ ಬೇರ್ಪಡುವ ನಿರ್ಣಯಕ್ಕೆ ಮತ ಚಲಾಯಿಸಿತು.

ಎರಡು ದಿನಗಳ ನಂತರ, ಅಂದರೆ 1776ರ ಜುಲೈ 4ರಂದು ಅಮೆರಿಕದ ಸ್ವಾತಂತ್ರ್ಯ ಘೋಷಣಾ ಪತ್ರವನ್ನು ಅಧಿಕೃತವಾಗಿ ಅಂಗೀಕರಿಸಲಾಯಿತು. ಈ ಕಾರಣದಿಂದ ಜುಲೈ 4ನೇ ದಿನವೇ ಅಮೆರಿಕದ ಸ್ವಾತಂತ್ರ್ಯ ದಿನವಾಗಿ ಇತಿಹಾಸದಲ್ಲಿ ಸ್ಥಾನ ಪಡೆದಿದೆ.

ಇದನ್ನೂ ಓದಿ: 250 Years for USA: ಒಂದು ಕಾಲವಿತ್ತು, ಅಮೆರಿಕ ಅಧ್ಯಕ್ಷ ಸೀನಿದರೆ ವಿಶ್ವಕ್ಕೆ ಶೀತವಾಗುತ್ತಿತ್ತು !

ಥಾಮಸ್ ಜೆಫರ್ಸನ್‌ನ ದಾಖಲೆ

ಸ್ವಾತಂತ್ರ್ಯ ಘೋಷಣಾಪತ್ರದ ಮುಖ್ಯ ಕರಡು ರಚಿಸಿದವರು ಥಾಮಸ್ ಜೆಫರ್ಸನ್. ಈ ದಾಖಲೆ ಬ್ರಿಟನ್‌ನಿಂದ ಪ್ರತ್ಯೇಕವಾಗುವುದನ್ನು ಘೋಷಿಸಿತು. ಜತೆಗೆ ಪ್ರತಿಯೊಬ್ಬ ಮನುಷ್ಯನಿಗೂ ಸಮಾನ ಹಕ್ಕುಗಳಿವೆ, ಸ್ವಾತಂತ್ರ್ಯ ಮತ್ತು ಸಂತೋಷವನ್ನು ಹುಡುಕುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂಬ ಪ್ರಜಾಪ್ರಭುತ್ವದ ಮೂಲ ತತ್ವಗಳನ್ನೂ ಜಗತ್ತಿಗೆ ಪರಿಚಯಿಸಿತು. ಈ ಘೋಷಣೆಯೊಂದಿಗೆ ಅಮೆರಿಕ ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರವಾಗಿ ತನ್ನ ಹೊಸ ಪಯಣ ಆರಂಭಿಸಿತು. ಜುಲೈ 4 ಅಮೆರಿಕದ ಅತ್ಯಂತ ದೊಡ್ಡ ರಾಷ್ಟ್ರೀಯ ಹಬ್ಬಗಳಲ್ಲಿ ಒಂದು. ದೇಶದಾದ್ಯಂತ ಹಲವು ರೀತಿಯ ಕಾರ್ಯಕ್ರಮಗಳು ನಡೆಯುತ್ತವೆ. ರಾತ್ರಿ ವೇಳೆ ಅದ್ಧೂರಿ ಪಟಾಕಿ ಪ್ರದರ್ಶನಗಳು, ನಗರಗಳಲ್ಲಿ ದೇಶಭಕ್ತಿ ಮೆರವಣಿಗೆಗಳು, ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಔತಣಕೂಟಗಳು, ಸಂಗೀತ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳು, ಅಮೆರಿಕ ಧ್ವಜದ ಕೆಂಪು, ಬಿಳಿ ಮತ್ತು ನೀಲಿ ಬಣ್ಣಗಳು ಎಡೆ ಕಂಗೊಳಿಸುತ್ತವೆ.

US ok

ವಿದೇಶಗಳಲ್ಲಿ ನೆಲೆಸಿರುವ ಅಮೆರಿಕನ್ನರೂ ಜುಲೈ 4ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋ ಜಿಸಿ ತಮ್ಮ ದೇಶದ ಮೇಲಿನ ಅಭಿಮಾನ ವ್ಯಕ್ತಪಡಿಸುತ್ತಾರೆ. 1777ರ ಜುಲೈ 4ರಂದು ನಡೆದ ಮೊದಲ ಅಧಿಕೃತ ವಾರ್ಷಿಕೋತ್ಸವ ದಲ್ಲಿಯೇ ಪಟಾಕಿ ಪ್ರದರ್ಶನ ನಡೆಸಲಾಗಿತ್ತು. ಆ ಸಮಯ ದಿಂದಲೇ ಪಟಾಕಿಗಳು ಅಮೆರಿಕದ ಸ್ವಾತಂತ್ರ್ಯದ ಸಂಕೇತವಾಗಿ ಬೆಳೆದವು. ಆಕಾಶದಲ್ಲಿ ಅರಳುವ ವರ್ಣರಂಜಿತ ಪಟಾಕಿಗಳು ದೇಶಭಕ್ತಿ, ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಹೆಮ್ಮೆಯ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಪ್ರಮುಖ ನಗರಗಳಲ್ಲಿ ಲಕ್ಷಾಂತರ ಜನರು ಈ ಪಟಾಕಿ ಪ್ರದರ್ಶನ ಕಣ್ತುಂಬಿಕೊಳ್ಳಲು ಸೇರುತ್ತಾರೆ.

ಪ್ರಜಾಪ್ರಭುತ್ವದ ಮೌಲ್ಯಗಳು

ಸ್ವಾತಂತ್ರ್ಯ ದಿನವು ಪ್ರಜಾಪ್ರಭುತ್ವ, ಸ್ವಯಂ ಆಡಳಿತ, ಸಮಾನತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೌಲ್ಯ ಗಳನ್ನು ನೆನಪಿಸುವ ಸಂದರ್ಭ. 1776ರಲ್ಲಿ ಪ್ರಕಟವಾದ ಸ್ವಾತಂತ್ರ್ಯ ಘೋಷಣಾಪತ್ರ ಅಮೆರಿಕದ ಸಂವಿಧಾನ ಮತ್ತು ಆಡಳಿತ ವ್ಯವಸ್ಥೆಗೆ ಬಲವಾದ ಅಡಿಪಾಯ ಹಾಕಿತು. ಜಗತ್ತಿನ ಅನೇಕ ದೇಶಗಳ ಸ್ವಾತಂತ್ರ್ಯ ಚಳವಳಿಗಳ ಮೇಲೂ ಈ ದಾಖಲೆ ಪ್ರಭಾವ ಬೀರಿದೆ.