ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Donald Trump: ಭಾರತ ಇನ್ನು ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ಮೋದಿಯೇ ನನಗೆ ಹೇಳಿದ್ದಾರೆ; ಟ್ರಂಪ್‌

ಭಾರತದ ಮೇಲೆ ಶೇ.25 ರಷ್ಟು ದಂಡನಾತ್ಮಕ ಸುಂಕ ವಿಧಿಸಿದ ತಿಂಗಳುಗಳ ನಂತರ, ರಷ್ಯಾದಿಂದ ಸಮುದ್ರದ ಮೂಲಕ ಕಚ್ಚಾ ತೈಲ ರಫ್ತನ್ನು ತಡೆಯುವುದಾಗಿ ಭಾರತ ತನಗೆ ಭರವಸೆ ನೀಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.

ಭಾರತ- ರಷ್ಯಾ ತೈಲ ಒಪ್ಪಂದ ಮುಗಿಯಿತಾ? ಟ್ರಂಪ್‌ ಹೇಳಿದ್ದೇನು?

-

Vishakha Bhat Vishakha Bhat Oct 16, 2025 8:38 AM

ನವದೆಹಲಿ: ಭಾರತದ ಮೇಲೆ ಶೇ.25 ರಷ್ಟು ದಂಡನಾತ್ಮಕ ಸುಂಕ ವಿಧಿಸಿದ ತಿಂಗಳುಗಳ ನಂತರ, ರಷ್ಯಾದಿಂದ ಸಮುದ್ರದ ಮೂಲಕ ಕಚ್ಚಾ ತೈಲ ರಫ್ತನ್ನು ತಡೆಯುವುದಾಗಿ ಭಾರತ ತನಗೆ ಭರವಸೆ ನೀಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿಕೊಂಡಿದ್ದಾರೆ. ರಷ್ಯಾ-ಉಕ್ರೇನ್‌ ಯುದ್ಧ ತಡೆಯುವ ನಮ್ಮ *(Narendra Modi) ಪ್ರಯತ್ನಗಳ ಭಾಗವೂ ಆಗಿದೆ ಎಂದು ಅವರು ಹೇಳಿದರು. ರಷ್ಯಾದ ಇಂಧನ ಆದಾಯವನ್ನು ಕಡಿತಗೊಳಿಸುವ ಪ್ರಯತ್ನಗಳನ್ನು ಅಮೆರಿಕ ಮಾಡುತ್ತಿದೆ ಎಂದು ಟ್ರಂಪ್‌ ಹೇಳಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಭಾರತ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಹಣಕಾಸಿನ ನೆರವು ನೀಡುತ್ತಿದೆ ಎಂಬ ಅಮೆರಿಕದ ಅಭಿಪ್ರಾಯಕ್ಕೆ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತ ತೈಲ ಖರೀದಿಸುವುದು ನಮಗೂ ತೃಪ್ತಿದಾಯಕವಾಗಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ಚೀನಾ ಮೇಲೆಯೂ ಇದೇ ರೀತಿ ನಿರ್ಬಂಧ ಹೇರಬೇಕು ಎಂದು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದ ಟ್ರಂಪ್‌, ಭಾರತ ನಮ್ಮ ಮನವಿಗೆ ಒಪ್ಪಿದೆ, ಮೋದಿ ನನ್ನ ಆಪ್ತ ಎಂದು ಹೇಳಿದರು. ಟ್ರಂಪ್ ಅವರ ಹೇಳಿಕೆಗಳನ್ನು ಭಾರತ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಂಧನ ಬೆಲೆಗಳನ್ನು ಕಡಿಮೆ ಇರಿಸಲು ಮತ್ತು ತನ್ನ ದೇಶೀಯ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ರಷ್ಯಾದ ತೈಲ ಆಮದು ಅಗತ್ಯ ಎಂದು ಭಾರತ ಹೇಳಿದೆ.

ಟ್ರಂಪ್ ಆಡಳಿತವು ಭಾರತದ ಮೇಲೆ ರಷ್ಯಾದ ತೈಲ ಖರೀದಿಗೆ ದಂಡವಾಗಿ ಶೇ.25 ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸಿದೆ, ಇದರಿಂದಾಗಿ ಅಮೆರಿಕ ಭಾರತದ ಮೇಲೆ ವಿಧಿಸಿರುವ ಒಟ್ಟು ಸುಂಕವು ಶೇ.50 ಕ್ಕೆ ತಲುಪಿದೆ. ಚೀನಾ ಕೂಡ ರಷ್ಯಾದ ಕಚ್ಚಾ ತೈಲದ ಪ್ರಮುಖ ಖರೀದಿದಾರನಾಗಿದ್ದರೂ, ಟ್ರಂಪ್ "ದ್ವಿತೀಯ ಸುಂಕ" ಎಂದು ವಿವರಿಸಿರುವುದರಿಂದ ಭಾರತಕ್ಕೆ ಪರಿಣಾಮ ಹೆಚ್ಚಿದೆ.

ಈ ಸುದ್ದಿಯನ್ನೂ ಓದಿ: PM Modi: ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗೆ ಪ್ರಧಾನಿ ಮೋದಿ ಸ್ವಾಗತ, ಟ್ರಂಪ್‌ ಶಾಂತಿ ಪ್ರಯತ್ನಕ್ಕೆ ಶ್ಲಾಘನೆ

ಭಾರತವು ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಹಣಕಾಸಿನ ನೆರವು ನೀಡುತ್ತಿದೆ ಎಂದು ಡೊನಾಲ್ಡ್‌ ಟ್ರಂಪ್‌ ಹೇಳುತ್ತಿದ್ದಾರೆ. ಅಮೆರಿಕದ ಕೆಲ ಅಧಿಕಾರಿಗಳೂ ಟ್ರಂಪ್‌ ಹೇಳಿಕೆಯನ್ನ ಉಲ್ಲೇಖಿಸಿ ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಭಾರತಕ್ಕೆ ಮನವಿ ಮಾಡಿಕೊಂಡಿದ್ದರು. ಆದರೆ ಭಾರತ ಈ ಹಿಂದೆ ಮನವಿಯನ್ನು ತಿರಸ್ಕರಿಸಿತ್ತು.