PM Modi: ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗೆ ಪ್ರಧಾನಿ ಮೋದಿ ಸ್ವಾಗತ, ಟ್ರಂಪ್ ಶಾಂತಿ ಪ್ರಯತ್ನಕ್ಕೆ ಶ್ಲಾಘನೆ
Israeli Hostages: ಹಮಾಸ್ (Hamas) ಮತ್ತು ಇಸ್ರೆಲ್(Israel) ನಡುವಿನ ಯುದ್ಧ ಅಂತ್ಯವಾಗುವ ಮುನ್ಸೂಚನೆ ಇದ್ದು, ಕಳೆದ ಎರಡು ವರ್ಷಗಳಿಂದ ಗಾಜಾದಲ್ಲಿ ಹಿಡಿದಿಟ್ಟುಕೊಂಡಿದ್ದ ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ನಡೆದ ಮಹತ್ವದ ಕದನ ವಿರಾಮ ಒಪ್ಪಂದದ ನಂತರ ಹಮಾಸ್ ಸೆರೆಯಲ್ಲಿದ್ದ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಈ ಬೆಳವಣಿಗೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದು, ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ "ಶಾಂತಿ ಪ್ರಯತ್ನ" ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ "ದೃಢ ಸಂಕಲ್ಪ" ಎಂದು ಶ್ಲಾಘಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ -

ನವದೆಹಲಿ: ಎರಡು ದಶಕಗಳ ನಂತರ ಇಸ್ರೇಲಿ (Israeli) ಒತ್ತೆಯಾಳುಗಳನ್ನು ಹಮಾಸ್ (Hamas) ಬಿಡುಗಡೆ ಮಾಡಿದ್ದು, ಈ ಐತಿಹಾಸಿಕ ಸಂದರ್ಭವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸ್ವಾಗತಿಸಿದ್ದಾರೆ. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರ "ಶಾಂತಿ ಪ್ರಯತ್ನ" ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israeli PM Benjamin Netanyahu) ಅವರ "ದೃಢ ಸಂಕಲ್ಪ" ಎಂದು ಶ್ಲಾಘಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "20 ವರ್ಷಗಳಿಂದ ಸೆರೆಯಲ್ಲಿದ್ದ ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ ಅವರ ಕುಟುಂಬಸ್ಥರ ಧೈರ್ಯ ಹಾಗೂ ಟ್ರಂಪ್‌ರ ಶಾಂತಿ ಪ್ರಯತ್ನ ಮತ್ತು ನೆತನ್ಯಾಹು ಅವರ ದೃಢ ಸಂಕಲ್ಪಕ್ಕೆ ಸಿಕ್ಕ ಗೌರವ. ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗಾಗಿ ಟ್ರಂಪ್ ಕೈಗೊಂಡ ಪ್ರಾಮಾಣಿಕ ಪ್ರಯತ್ನಗಳಿಗೆ ಭಾರತ ಬೆಂಬಲಿಸುತ್ತದೆ" ಎಂದು ಹೇಳಿದ್ದಾರೆ.
We welcome the release of all hostages after over two years of captivity. Their freedom stands as a tribute to the courage of their families, the unwavering peace efforts of President Trump and the strong resolve of Prime Minister Netanyahu. We support President Trump’s sincere…
— Narendra Modi (@narendramodi) October 13, 2025
ಇದಕ್ಕೂ ಮೊದಲು, ಹಮಾಸ್ ಬಂಧನದಲ್ಲಿದ್ದ ಉಳಿದ 20 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (IDF) ದೃಢಪಡಿಸಿತ್ತು. ಈ ಕುರಿತು ಐಡಿಎಫ್ ವಕ್ತಾರ ಎಫಿ ಡೆಫ್ರಿನ್ (Effie Defrin) ಸಹ ಪ್ರತಿಕ್ರಿಯಿಸಿದ್ದು, "738 ದಿನಗಳ ಬಳಿಕ, ಸೆರೆಯಲಿದ್ದ ಇಸ್ರೇಲಿ ಒತ್ತೆಯಾಳುಗಳು ಇಂದು ಮನೆಗೆ ಮರಳಿದ್ದಾರೆ. ಇದು ಇಸ್ರೇಲ್ ಜನತೆಗೂ, ಮಾನವೀಯತೆಯ ಮೇಲೆ ನಂಬಿಕೆ ಇರುವ ಎಲ್ಲರಿಗೂ ಸ್ಮರಣೀಯ ಕ್ಷಣವಾಗಿದ್ದು, ಇದನ್ನು ಹಬ್ಬದಂತೆ ಸಂಭ್ರಮಿಸಲಾಗುತ್ತಿದೆ," ಎಂದು ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ: Supreme Court: ಮತಗಳವು ಪ್ರಕರಣ; ರಾಹುಲ್ ಗಾಂಧಿ ಆರೋಪಗಳ ಕುರಿತು SIT ತನಿಖೆಗೆ ಸುಪ್ರೀಂ ನಕಾರ
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ್ದ ಭಯೋತ್ಪಾದಕ ದಾಳಿ ಹಾಗೂ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಸಂಭವಿಸಿದ ಜೀವಹಾನಿಯನ್ನು ಭಾರತ ತೀವ್ರವಾಗಿ ಖಂಡಿಸಿತ್ತು. "ಒತ್ತೆಯಾಳುಗಳ ಬಿಡುಗಡೆ, ಯುದ್ಧ ವಿರಾಮ ಹಾಗೂ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಶಾಂತಿಯುತ ಪರಿಹಾರಕ್ಕೆ ಭಾರತ ನಿರಂತರವಾಗಿ ಒತ್ತಾಯಿಸಿತ್ತು," ಎಂದು ಭಾರತದ ವಿದೇಶಾಂಗ ಇಲಾಖೆ (MEA) ಹೇಳಿದೆ. ಭಾರತವು ಇದೇ ನಿಲುವನ್ನು ವಿಶ್ವಸಂಸ್ಥೆ(UN) , ಬ್ರಿಕ್ಸ್ (BRICS), ಎನ್ಎಎಂ (NAM), ವಾಯ್ಸ್ ಆಫ್ ಗ್ಲೋಬಲ್ ಸೌಥ್ (Voice of Global South) ಸೇರಿದಂತೆ ಅನೇಕ ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ವೇದಿಕೆಗಳಲ್ಲಿ ಪುನರಾವರ್ತಿಸಿತ್ತು.
ಇನ್ನೂ.. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಿಂದ ಇಸ್ರೇಲ್-ಹಮಾಸ್ ನಡುವೆ ಕದನ ವಿರಾಮ ಏರ್ಪಟ್ಟಿದ್ದು, ಒತ್ತೆಯಾಳುಗಳ ಬಿಡುಗಡೆಯ ನಂತರ, ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಬೀದಿಗಳಲ್ಲಿ ಜನರ ಸಂಭ್ರಮಾಚರಣೆ ಕಂಡುಬಂದಿದೆ.