Viral Video: ಕೋಳ ಹಾಕಿ ನೆಲಕ್ಕೆ ಬೀಳಿಸಿ ಚಿತ್ರಹಿಂಸೆ; ಅಮೆರಿಕ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಯ ಗೋಳು
ಅಮೆರಿಕದ (America) ವಿಮಾನ ನಿಲ್ದಾಣದಲ್ಲಿ ಭಾರತೀಯ (Viral Video) ವಿದ್ಯಾರ್ಥಿಯೊಬ್ಬನನ್ನು ಕೈಗೆ ಕೋಳ ಹಾಕಿ ಬಂಧಿಸಿ ನೆಲಕ್ಕೆ ಬೀಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆತನನ್ನು ಗಡಪಾರು ಮಾಡಲಾಗಿದೆ ಎಂದು ತಿಳಿದು ಬಂದಿದೆ.


ವಾಷಿಂಗ್ಟನ್: ಅಮೆರಿಕದ ವಿಮಾನ ನಿಲ್ದಾಣದಲ್ಲಿ ಭಾರತೀಯ (Viral Video) ವಿದ್ಯಾರ್ಥಿಯೊಬ್ಬನನ್ನು ಕೈಗೆ ಕೋಳ ಹಾಕಿ ಬಂಧಿಸಿ ನೆಲಕ್ಕೆ ಬೀಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆತನನ್ನು ಗಡಪಾರು ಮಾಡಲಾಗಿದೆ ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ ನ್ಯೂವಾರ್ಕ್ ವಿಮಾನ ನಿಲ್ದಾಣದಿಂದ ಒಬ್ಬ ಯುವ ಭಾರತೀಯ ವಿದ್ಯಾರ್ಥಿಯನ್ನು ಗಡೀಪಾರು ಮಾಡುವುದನ್ನು ನಾನು ನೋಡಿದೆ - ಕೈಕೋಳ ಹಾಕಿ, ಅಪರಾಧಿಯಂತೆ ನಡೆಸಿಕೊಳ್ಳುತ್ತಿದ್ದರು ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.
ಆ ವಿದ್ಯಾರ್ಥಿ ತನ್ನ ಕನಸಿಗಳ ಬೆನ್ನಟ್ಟಿ ಈ ದೇಶಕ್ಕೆ ಬಂದಿದ್ದ. ನಾನೊಬ್ಬ ಅನಿವಾಸಿ ಭಾರತೀಯನಾಗಿ ಆತನಿಗೆ ಸಹಾಯ ಮಾಡಲಾಗಲಿಲ್ಲ ಎಂದು ಅನ್ನಿಸುತ್ತಿದೆ. ಈ ರೀತಿಯ ಘಟನೆ ದುರಂತ ಎಂದು ಅವರು ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರ, ಸಾಮಾಜಿಕ ಉದ್ಯಮಿ ಕುನಾಲ್ ಜೈನ್ ಅವರ ಪ್ರಕಾರ, ಆ ವಿದ್ಯಾರ್ಥಿ ಹರಿಯಾಣದಲ್ಲಿ ಮಾತನಾಡುತ್ತಿದ್ದ. ತಾನು ಹುಚ್ಚನಲ್ಲ ಎಂದು ಹೇಳಿಕೊಳ್ಳುತ್ತಿದ್ದ.
I witnessed a young Indian student being deported from Newark Airport last night— handcuffed, crying, treated like a criminal. He came chasing dreams, not causing harm. As an NRI, I felt helpless and heartbroken. This is a human tragedy. @IndianEmbassyUS #immigrationraids pic.twitter.com/0cINhd0xU1
— Kunal Jain (@SONOFINDIA) June 8, 2025
ಮಕ್ಕಳು ವೀಸಾ ಪಡೆದು ಬೆಳಿಗ್ಗೆ ವಿಮಾನ ಹತ್ತುತ್ತಾರೆ. ಯಾವುದೋ ಕಾರಣಕ್ಕಾಗಿ, ವಲಸೆ ಅಧಿಕಾರಿಗಳಿಗೆ ತಮ್ಮ ಭೇಟಿಗೆ ಕಾರಣವನ್ನು ವಿವರಿಸಲು ಅವರಿಗೆ ಸಾಧ್ಯವಾಗುವುದಿಲ್ಲ ಮತ್ತು ಸಂಜೆ ವಿಮಾನದಲ್ಲಿ ಅಪರಾಧಿಗಳಂತೆ ಕಟ್ಟಿಹಾಕಿ ವಾಪಸ್ ಕಳುಹಿಸಲಾಗುತ್ತದೆ. ಪ್ರತಿದಿನ ಇಂತಹ 3-4 ಪ್ರಕರಣಗಳು ನಡೆಯುತ್ತಿವೆ. ಕಳೆದ ಕೆಲವು ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಿವೆ ಎಂದು ಉದ್ಯಮಿ ಹೇಳಿದ್ದಾರೆ. ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ವಿಷಯವನ್ನು ಕೈಗೆತ್ತಿಕೊಳ್ಳುವಂತೆ ಜೈನ್ ಒತ್ತಾಯಿಸಿದರು. "ನ್ಯೂಜೆರ್ಸಿ ಅಧಿಕಾರಿಗಳಲ್ಲಿ ಅವನಿಗೆ ಏನಾಗುತ್ತಿದೆ ಎಂದು ಯಾರಾದರೂ ಕಂಡುಹಿಡಿಯಬೇಕು. ಅವನು ದಿಗ್ಭ್ರಮೆಗೊಂಡಿದ್ದಾನೆಂದು ನಾನು ಕಂಡುಕೊಂಡೆ" ಎಂದು ಅವರು ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ: Nithyananda: ಭೂ ಕಬಳಿಕೆ ಪ್ರಕರಣ ; ನಿತ್ಯಾನಂದನ ಕೈಲಾಸದಿಂದ 20 ಜನರ ಗಡಿಪಾರು
ಅಮೆರಿಕದಿಂದ ಈ ವರೆಗೆ ಹಲವು ವಿದ್ಯಾರ್ಥಿಗಳನ್ನು ಸರ್ಕಾರ ಗಡಿಪಾರು ಮಾಡಿದೆ. ಗಡಿಪಾರಾಗಿರುವ ವಿದ್ಯಾರ್ಥಿಗಳನ್ನು ಸತತ 24 ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ್ದ ಅಮೆರಿಕ ಅಧಿಕಾರಿಗಳು ಆಹಾರ ನೀರು ಸೇವಿಸುವುದಕ್ಕೂ ವಿದ್ಯಾರ್ಥಿಗಳಿಗೆ ಅವಕಾಶ ನೀಡಿಲ್ಲ ಎಂಬ ಆರೋಪ ಕೇಳಿಬಂದಿತ್ತು. ವಿಚಾರಣೆ ಬಳಿಕ ವೀಸಾ ರದ್ದುಗೊಳಿಸಿದ ಅಧಿಕಾರಿಗಳು ತಕ್ಷಣವೆ ಹೈದರಾಬಾದ್ ಗೆ ವಾಪಸ್ ತೆರಳುವಂತೆ ಸೂಚಿಸಿದ್ದಾರೆ.
ಗಡಿಪಾರಾಗಿರುವ ವಿದ್ಯಾರ್ಥಿಗಳು ನಾರ್ತ್ ವೆಸ್ಟರ್ನ್ ಪಾಲಿಟೆಕ್ನಿಕ್ ವಿಶ್ವವಿದ್ಯಾಲಯ ಮತ್ತು ಸಿಲಿಕಾನ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಲು ಅಮೆರಿಕಾಗೆ ತೆರಳುತ್ತಿದ್ದರು ಎಂದು ಹೇಳಲಾಗಿದೆ.