ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Eid-Milad: ಚಿಕ್ಕಬಳ್ಳಾಪುರದಲ್ಲಿ ಶ್ರದ್ಧಾ ಭಕ್ತಿಯಿಂದ ಈದ್ ಮಿಲಾದ್ ಆಚರಣೆ ;ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ

ನಗರದ ಟೌನ್ ಹಾಲ್ ಸರ್ಕಲ್ ವತಿಯಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಎಂ ಜಿ ರಸ್ತೆ ಮೂಲಕ ಪ್ರಶಾಂತ ನಗರದಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿತು.ಅಲ್ಲಿ ಮುಸ್ಲಿಂ ಬಾಂಧವರು ಸಾಮೂ ಹಿಕ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಧರ್ಮ ಗುರುಗಳಿಂದ ಈದ್ ಮಿಲಾದ್ ವಿಶೇಷ ಪ್ರವಚನ ನೀಡಲಾಯಿತು.

ಚಿಕ್ಕಬಳ್ಳಾಪುರದಲ್ಲಿ ಶ್ರದ್ಧಾ ಭಕ್ತಿಯಿಂದ ಈದ್ ಮಿಲಾದ್ ಆಚರಣೆ

ಈದ್ ಮಿಲಾದ್ ಹಬ್ಬದ ಅಂಗವಾಗಿ ಇಂದು ನಗರದಲ್ಲಿ ಮಿಲಾದ್ ಕಮಿಟಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜುಲುಸ್ ಎ ಮಹಮ್ಮದಿ(ಮೆರವಣಿಗೆ )ಹಮ್ಮಿಕೊಳ್ಳಲಾಗಿತ್ತು. -

Ashok Nayak Ashok Nayak Sep 6, 2025 1:05 AM

ಚಿಕ್ಕಬಳ್ಳಾಪುರ : ಈದ್ ಮಿಲಾದ್ ಹಬ್ಬದ ಅಂಗವಾಗಿ ಇಂದು ನಗರದಲ್ಲಿ ಮಿಲಾದ್ ಕಮಿಟಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜುಲುಸ್ ಎ ಮಹಮ್ಮದಿ (ಮೆರವಣಿಗೆ) ಹಮ್ಮಿಕೊಳ್ಳಲಾಗಿತ್ತು.

ಜುಲುಸ್ ಎ ಮಹಮ್ಮದಿ ಮುಖಾಂತರ ಇಸ್ಲಾಂ ಧರ್ಮದ ಆಶಯಗಳಾದ ಸೌಹಾರ್ದತೆ, ದಯೆ, ಒಗ್ಗಟ್ಟು, ಪ್ರೀತಿ, ಬದ್ಧತೆ ಬಗ್ಗೆ ಜನರಲ್ಲಿ ಸಂದೇಶ ರವಾನಿಸಲಾಯಿತು,

ನಗರದ ಟೌನ್ ಹಾಲ್ ಸರ್ಕಲ್ ವತಿಯಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಎಂ ಜಿ ರಸ್ತೆ ಮೂಲಕ ಪ್ರಶಾಂತ ನಗರದಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿತು. ಅಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಧರ್ಮ ಗುರುಗಳಿಂದ ಈದ್ ಮಿಲಾದ್ ವಿಶೇಷ ಪ್ರವಚನ ನೀಡಲಾಯಿತು.

ಇದನ್ನೂ ಓದಿ: Chikkaballapur News: ಮುಚ್ಚಿ ಹೋಗಿರುವ ಪುರಾತನ ಕಲ್ಯಾಣಿ ಮರುಜೀವಕ್ಕೆ ಯತ್ನ : ಸಾರ್ವಜನಿಕರಲ್ಲಿ ಗರಿಗೆದರಿದ ಕುತೂಹಲ

ಮಿಲಾದ್ ಕಮಿಟಿ ಅಧ್ಯಕ್ಷ ಸಿರಾಜುಲ್ಲ, ಶರೀಫ್, ಪರ್ವೇಜ್, ಆಸಿಫ್ ಸೇರಿ ಇತರರು ಮಾತನಾಡಿ ಪ್ರವಾದಿ ಮುಹಮ್ಮದ್ ಜಗತ್ತಿಗೆ ಶಾಂತಿ, ಸೌಹಾರ್ದತೆ,ಮಾನವೀಯತೆಯ ಸಂದೇಶವನ್ನು ಸಾರಿದ ಮಹಾನ ವ್ಯಕ್ತಿ. ಸಾಮಾಜಿಕ ಪರಿವರ್ತನೆಗಾಗಿ ಸೌಮ್ಯದಾರಿಯನ್ನು ಸ್ವೀಕರಿಸಿದರು. ಎಲ್ಲೆಡೆ ಶಾಂತಿ ನೆಲೆಸಬೇಕು ಎಂಬುದು ಪ್ರವಾದಿ ಮುಹಮ್ಮದ್ ಅವರ ಆಶಯವಾಗಿತ್ತು ಎಂದು ತಿಳಿಸಿದರು.

ಅನ್ಯ ಧರ್ಮೀಯರ ಜತೆ ಸೌಹಾರ್ದತೆ ಮೆರೆಯಬೇಕು ಎಂಬುದು ಪ್ರವಾದಿ ಮಹಮದ್ ಅವರ ಸಂದೇಶವಾಗಿದೆ. ನಾವೆಲ್ಲರೂ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಬದುಕಬೇಕಿದೆ.ಸಮ ಸಮಾಜ ನಿರ್ಮಿಸಲು ನಾವೆಲ್ಲರೂ ಜಾತಿ ಭೇದ ಭಾವ ಮರೆತು ಒಂದಾಗಿ ಸಾಗೋಣ ಎಂದರು.

ಜುಲುಸ್‌ನಲ್ಲಿ ನಗರದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು. ರಿಯಾಜ್ ಅಹ್ಮದ್ ಖಾದ್ರಿ,ಮುಬಾರಕ್, ಅಜೀಮುದ್ದೀನ್,ಅಯುಬ್,ಮುಜಾಹಿದ್ ಇತರರು ಹಾಜರಿದ್ದರು.

ಇದೆ ವೇಳೆ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅಧಿಕಾರಿಗಳು ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು ಕೋರಿದರು.