ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

₹ 3,999  ಬೆಲೆಯ ದೇಶದ ಮೊದಲ ಹೈಬ್ರಿಡ್ ಫೋನ್ ಎಚ್‌ಎಂಡಿ ಟಚ್ 4ಜಿ ಪರಿಚಯಿಸಿದ ಎಚ್‌ಎಂಡಿ

ಎಚ್‌ಎಂಡಿ ಟಚ್ 4ಜಿ ಮೊದಲ ಬಾರಿಗೆ ಡಿಜಿಟಲ್ ಬಳಕೆದಾರರಿಗೆ ಟಚ್‌ಸ್ಕ್ರೀನ್, ಚಾಟ್, ವಿಡಿಯೊ ಕರೆಗಳು, ಕ್ಲೌಡ್ ಅಪ್ಲಿಕೇಷನ್‌ಗಳಂತಹ ಸ್ಮಾರ್ಟ್‌ಫೋನ್ ಬಳಸುವ ಅನುಭವ ನೀಡಲಿದೆ. ಮೊದಲ ಹೈಬ್ರಿಡ್ ಫೋನ್ ಆಂಡ್ರಾಯ್ಡ್ ಮತ್ತು ಐಒಎಸ್‌ ಎರಡರಲ್ಲೂ ಲಭ್ಯವಿರುವ ಎಲ್ಲಾ ಹೊಸ ಎಕ್ಸ್‌ಪ್ರೆಸ್ ಚಾಟ್‌ನೊಂದಿಗೆ ಒಂದು ವರ್ಷದ ಖಾತರಿದಾಯಕ ಬದಲಿಸುವ ಸೌಲಭ್ಯವನ್ನೂ ಒಳಗೊಂಡಿದೆ.

ಮೊದಲ ಹೈಬ್ರಿಡ್ ಫೋನ್ ಎಚ್‌ಎಂಡಿ ಟಚ್ 4ಜಿ  ಪರಿಚಯಿಸಿದ ಎಚ್‌ಎಂಡಿ

-

Ashok Nayak Ashok Nayak Oct 10, 2025 11:50 PM

ಮೊಬೈಲ್‌ ತಯಾರಿಕಾ ಕಂಪನಿ ಹ್ಯೂಮನ್ ಮೊಬೈಲ್ ಡಿವೈಸಸ್ (ಎಚ್‌ಎಂಡಿ) ಇಂದು ತನ್ನ ಹೊಸ ಹೈಬ್ರಿಡ್ ಮೊಬೈಲ್‌ ಎಚ್‌ಎಂಡಿ ಟಚ್ 4ಜಿ (HMD Touch 4G)‌ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸುತ್ತಿರುವುದಾಗಿ ಪ್ರಕಟಿಸಿದೆ.

ಅಕ್ಟೋಬರ್ 9 ರಿಂದಲೇ ಮಾರುಕಟ್ಟೆಯಲ್ಲಿ ಲಭ್ಯವಾಗಿರುವ ಈ ಎಚ್‌ಎಂಡಿ ಟಚ್ 4ಜಿ ಮೊಬೈಲ್‌- 'ಹೈಬ್ರಿಡ್ ಫೋನ್' ಆಗಿದ್ದು, ಸಾಂಪ್ರದಾಯಿಕವಾಗಿ ಸ್ಮಾರ್ಟ್‌ಫೋನ್‌ಗಳಲ್ಲಿನ ವೈಶಿಷ್ಟ್ಯಗಳನ್ನು ಒದಗಿಸುವ ಮೂಲಕ ಲಕ್ಷಾಂತರ ಭಾರತೀಯರಿಗೆ ಡಿಜಿಟಲ್ ಅಂತರ ಕಡಿಮೆ ಮಾಡುವ ಉದ್ದೇಶದಿಂದಲೇ ಇದನ್ನು ವಿನ್ಯಾಸಗೊಳಿಸಲಾಗಿದೆ.

ಎಚ್‌ಎಂಡಿ ಟಚ್ 4ಜಿ ಮೊಬೈಲ್‌ ಅನ್ನು ಹೊಸ ಪೀಳಿಗೆಯ ಡಿಜಿಟಲ್ ಬಳಕೆದಾರರಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಯುವ ಜನರು, ವಿದ್ಯಾರ್ಥಿಗಳು ಮತ್ತು ನಿರ್ಮಾಣ, ತಯಾರಿಕೆ ಮತ್ತಿತರ ವಲಯಗಳಲ್ಲಿ ದುಡಿಯುವ ವರ್ಗ ಸೇರಿದಂತೆ - ಫೀಚರ್ ಫೋನ್ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಅನುಭವದ ಪ್ರಯೋಜನಗಳನ್ನು ಬಯಸುವವರ ಬಳಕೆಗೆಂದೇ ಇದನ್ನು ತಯಾರಿಸಲಾಗಿದೆ.

ಇದನ್ನೂ ಓದಿ: Mobile Phone: ನೀವು ಖರೀದಿಸಿದ ಮೊಬೈಲ್‌ ಫೋನ್‌ ಅಸಲಿಯೋ, ನಕಲಿಯೋ? ಡೋಂಟ್‌ ವರಿ ತಿಳಿದುಕೊಳ್ಳಲು ಇಲ್ಲಿದೆ ಟಿಪ್ಸ್‌

ಇದು 3.2-ಇಂಚಿನ ಟಚ್ ಡಿಸ್‌ಪ್ಲೇ, ಕ್ಲೌಡ್-ಆಧಾರಿತ ಅಪ್ಲಿಕೇಷನ್‌ಗಳು (ಆ್ಯಪ್), ತುರ್ತು ಸಂದರ್ಭ ಗಳಲ್ಲಿ ಕರೆ ಮಾಡಲು ಪ್ರತ್ಯೇಕ ಬಟನ್‌ ಮತ್ತು ನೈಜ-ಸಮಯದ ಚಾಟಿಂಗ್ ಮತ್ತು ವಿಡಿಯೊ ಕರೆ ಮಾಡುವಂತಹ ಈ ವಿಭಾಗದಲ್ಲಿ ಮೊದಲ ಬಾರಿಗೆ ಪರಿಚಯಿಸಿರುವ ಸೌಲಭ್ಯಗಳೊಂದಿಗೆ ನಯವಾದ ವಿನ್ಯಾಸವನ್ನೂ ಹೊಂದಿರುವುದು ಇದರ ವಿಶೇಷತೆಯಾಗಿದೆ.

  • ಸ್ಮಾರ್ಟ್‌ಫೋನ್ ಅನುಭವ, ಫೀಚರ್ ಫೋನ್ ಮೌಲ್ಯ: ಸದೃಢವಾದ ಎಸ್‌30+ ಟಚ್ ಪ್ಲಾಟ್‌ಫಾರ್ಮ್‌ನಿಂದ ನಿರ್ವಹಿಸಲ್ಪಡುವ ಮೃದುವಾದ, ಸುಲಭ ಬಳಕೆಯ ಟಚ್‌ಸ್ಕ್ರೀನ್ ಇಂಟರ್‌ಫೇಸ್, ಕೈಗೆಟುಕುವ ಬೆಲೆಯಲ್ಲಿ ಚಿರಪರಿಚಿತ ಸ್ಮಾರ್ಟ್‌ಫೋನ್ ಬಳಕೆಯ ಅನುಭವ ನೀಡಲಿದೆ.
  • ಕ್ಲೌಡ್ ಅಪ್ಲಿಕೇಷನ್‌ಗಳು: ಕ್ರಿಕೆಟ್ ಸ್ಕೋರ್‌, ತಾಜಾ ಸುದ್ದಿ, ಹವಾಮಾನ ವರದಿ ಮತ್ತು ಟೆಟ್ರಿಸ್ ಮತ್ತು ಸುಡೋಕು ನಂತಹ ಎಚ್‌ಟಿಎಂಎಲ್‌5 ಗೇಮ್‌ಗಳನ್ನು (ಈ ಮೊಬೈಲ್‌ಗೆ ನೇರವಾಗಿ ಸ್ಟ್ರೀಮ್‌ ಮಾಡಲಾಗುವುದು) ಒಳಗೊಂಡಂತೆ ವಿಡಿಯೊ, ಸಾಮಾಜಿಕ ತಾಣಗಳು ಮತ್ತು ಉಪಯುಕ್ತ ಅಪ್ಲಿಕೇಷನ್‌ಗಳ ಸುಲಭ ಬಳಕೆಯಿಂದ ನಿರಂತರವಾಗಿ ಸಂಪರ್ಕದಲ್ಲಿರಿ ಮತ್ತು ಭರಪೂರ ಮನರಂಜನೆ ಪಡೆಯಿರಿ
  • ವಿಡಿಯೊ ಕರೆ ಮತ್ತು ಸಂಪರ್ಕ: ಎಕ್ಸ್‌ಪ್ರೆಸ್ ಚಾಟ್ ಅಪ್ಲಿಕೇಷನ್ ಮೂಲಕ, ಬಳಕೆದಾರರು ಯಾವುದೇ ಆಂಡ್ರಾಯ್ಡ್ ಅಥವಾ ಐಒಎಸ್‌ ಸ್ಮಾರ್ಟ್‌ಫೋನ್‌ನಲ್ಲಿ 13 ಭಾಷೆಗಳಲ್ಲಿ ವಿಡಿಯೊ ಕರೆಗಳನ್ನು ಮಾಡಬಹುದು,. ಧ್ವನಿ ಸಂದೇಶಗಳನ್ನು ಕಳುಹಿಸಬಹುದು ಮತ್ತು ಗುಂಪು ಸಂವಾದಗಳಲ್ಲಿ ಭಾಗವಹಿಸಬಹುದು. ಡೇಟಾ ಹಂಚಿಕೆಗಾಗಿ ಸಾಧನವು ವೈ-ಫೈ ಮತ್ತು ವೈ-ಫೈ ಹಾಟ್‌ಸ್ಪಾಟ್ ಸೌಲಭ್ಯದಡಿ ಕಾರ್ಯನಿರ್ವಹಿಸಲಿದೆ.
Spec Card-5 ok

ಎರಡು ಕ್ಯಾಮೆರಾಗಳು ಮತ್ತು ಪ್ರತ್ಯೇಕ ಎಸ್‌ಒಎಸ್‌ ಕೀ: 2ಎಂಪಿ ಹಿಂಬದಿಯ ಕ್ಯಾಮೆರಾ ಮತ್ತು ವಿಜಿಎ ಮುಂಭಾಗದ ಕ್ಯಾಮೆರಾ-ಗಳು ಬಳಕೆದಾರರಿಗೆ ಸುಂದರ ಕ್ಷಣಗಳನ್ನು ಸೆರೆಹಿಡಿಯಲು ಮತ್ತು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಪ್ರತ್ಯೇಕ ಐಸಿಇ (ತುರ್ತು ಸಂದರ್ಭದಲ್ಲಿ) ಕೀ (ಆಕಸ್ಮಿಕವಾಗಿ ಒತ್ತುವುದನ್ನು ತಪ್ಪಿಸಲು ಮೂರು ಸಣ್ಣ ಕ್ಲಿಕ್‌ಗಳು ಅಥವಾ ದೀರ್ಘ ಒತ್ತುವ ಮೂಲಕ ಬಳಸಬಹುದು) - ತುರ್ತು ಕರೆಗಳು ಮತ್ತು ಎಕ್ಸ್‌ಪ್ರೆಸ್ ಚಾಟ್‌ಗೆ ತ್ವರಿತ ಪ್ರವೇಶ ಒದಗಿಸುತ್ತದೆ.

  • ವಿಶಿಷ್ಟ ಬಣ್ಣಗಳ ಆಯ್ಕೆಗಳು: ಸಯಾನ್ ಮತ್ತು ಡಾರ್ಕ್ ಬ್ಲೂ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.
  • ಹೆಚ್ಚುವರಿ ಸೌಲಭ್ಯಗಳು: ಒಂದು ವರ್ಷದಲ್ಲಿ ಬದಲಿಸುವ ಗ್ಯಾರಂಟಿ, ಬ್ಲೂಟೂತ್, ಇನ್-ಬಾಕ್ಸ್ ವೇಗದ ಚಾರ್ಜರ್‌ನೊಂದಿಗೆ 2000 ಎಂಎಎಚ್ ಬ್ಯಾಟರಿ, ರಕ್ಷಣಾತ್ಮಕ ಜೆಲ್ಲಿ ಕವರ್, ವೈರ್‌ಲೆಸ್ ಮತ್ತು ವಯರ್ಡ್‌ ಎಫ್‌ಎಂ, ಎಂಪಿ3 ಪ್ಲೇಯರ್, ಟೈಪ್-ಸಿ ಚಾರ್ಜಿಂಗ್, ಫೋಲ್ಡರ್ ನಿರ್ವಹಣೆಯೊಂದಿಗೆ ಸ್ವಯಂ ಕರೆ ರೆಕಾರ್ಡಿಂಗ್ ಮತ್ತು ಪರಿಪೂರ್ಣ ಟಚ್ ಯುಐ.

ದೇಶಿ ಮಾರುಕಟ್ಟೆಗೆ ಹೊಸ ಹೈಬ್ರಿಡ್‌ ಮೊಬೈಲ್‌  ಪರಿಚಯಿಸಿರುವುದಕ್ಕೆ ಪ್ರತಿಕ್ರಿಯಿಸಿರುವ, ಎಚ್‌ಎಂಡಿ ಇಂಡಿಯಾ , ಎಪಿಎಸಿ ಮತ್ತು ಎಎನ್‌ಜೆಡ್‌ನ ಉಪಾಧ್ಯಕ್ಷ ಹಾಗೂ ಸಿಇಒ ರವಿ ಕನ್ವರ್‌ ಅವರು ಮಾತನಾಡಿ, "ಭಾರತದಲ್ಲಿ ಡಿಜಿಟಲ್ ಆಕಾಂಕ್ಷೆಯು ಎಲ್ಲೆಡೆ ಸಾರ್ವತ್ರಿಕವಾಗಿದೆ, ಆದರೆ, ಈ ಡಿಜಿಟಲ್‌ ಸೌಲಭ್ಯವು ಅನೇಕರಿಗೆ ತಡೆಗೋಡೆಯಾಗಿಯೇ ಉಳಿದಿದೆ. ಎಚ್‌ಎಂಡಿ ಟಚ್ 4ಜಿ ಯೊಂದಿಗೆ, ನಾವು ಕೇವಲ ಒಂದು ಉತ್ಪನ್ನವನ್ನು ಪ್ರಾರಂಭಿಸುತ್ತಿಲ್ಲ. ನಾವು ದೇಶಿ ಮೊಬೈಲ್‌ ಮಾರುಕಟ್ಟೆಯಲ್ಲಿ ಸಂಪೂರ್ಣ ,ಹೊಸ ವರ್ಗವಾಗಿರುವ  - ಹೈಬ್ರಿಡ್ ಫೋನ್ ಅನ್ನು ಪರಿಚಯಿಸು ತ್ತಿದ್ದೇವೆ. ಆನ್‌ಲೈನ್ ಜಗತ್ತಿಗೆ ತಮ್ಮ ಮೊದಲ ಹೆಜ್ಜೆ ಇಡುವ ಲಕ್ಷಾಂತರ ಡಿಜಿಟಲ್ ಹೊಸಬರಿಗಾಗಿ ಇದನ್ನು ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ. ಭಾರತದ ಡಿಜಿಟಲ್ ಕ್ರಾಂತಿಯಲ್ಲಿ ಯಾರೂ ಹಿಂದೆ ಬೀಳದಂತೆ ನೋಡಿಕೊಳ್ಳುವ ಮೂಲಕ ಎಲ್ಲರಿಗೂ ತಂತ್ರಜ್ಞಾನವು ಸುಲಭವಾಗಿ ದೊರೆಯು ವಂತೆ ಮಾಡುವ ನಮ್ಮ ಬದ್ಧತೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ" ಎಂದು ಹೇಳಿದ್ದಾರೆ.

ಲಭ್ಯತೆ: ಎಚ್‌ಎಂಡಿ ಟಚ್ 4ಜಿ ₹ 3,999 ಬೆಲೆಯಲ್ಲಿ ಲಭ್ಯ ಇದೆ. 2025ರ ಅಕ್ಟೋಬರ್ 7ರಿಂದಲೇ ಇದನ್ನು ಪ್ರಮುಖ ಚಿಲ್ಲರೆ ಅಂಗಡಿಗಳು, ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು HMD.com ಅಂತರ್ಜಾಲ ತಾಣದಲ್ಲಿಯೂ ಖರೀದಿಸಬಹುದು.

2025 ರಲ್ಲಿ ಎಚ್‌ಎಂಡಿ ಯೋಜಿಸಿರುವ ಆಕರ್ಷಕ ಹೊಸ ಮೈಲಿಗಲ್ಲುಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ನಮ್ಮೊಂದಿಗೆ ಇರಿ.