ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ ನಿಂದ ಮಿಡ್- ಸೈಜ್ ಸೆಡಾನ್ ವಿಭಾಗಕ್ಕೆ ಮರುಚಾಲನೆ: ಹೊಸ ಹ್ಯುಂಡೈ ವರ್ನಾ ಬಿಡುಗಡೆ; ಆರಂಭಿಕ ಬೆಲೆ ₹10,98,400

ಹೊಸ ಹ್ಯುಂಡೈ ವರ್ನಾ ಬಿಡುಗಡೆಯ ಕುರಿತು ಮಾತನಾಡಿರುವ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಆದ ತರುಣ್ ಗಾರ್ಗ್ ಅವರು, "ಹೊಸ ಹ್ಯುಂಡೈ ವರ್ನಾ ಕೇವಲ ಒಂದು ಉತ್ಪನ್ನದ ನವೀಕರಣ ರೂಪ ಮಾತ್ರವೇ ಅಲ್ಲ, ಬದಲಿಗೆ ಇದೊಂದು ನಮ್ಮ ಹೆಮ್ಮೆಯ ಪ್ರತಿರೂಪವಾಗಿದೆ.

ಹೊಸ ಹ್ಯುಂಡೈ ವರ್ನಾ ಬಿಡುಗಡೆ; ಆರಂಭಿಕ ಬೆಲೆ ₹10,98,400

-

Ashok Nayak
Ashok Nayak Mar 13, 2026 10:19 AM

ಬೆಂಗಳೂರು: ಪ್ರಮುಖ ಕಾರು ತಯಾರಿಕಾ ಸಂಸ್ಥೆಯಾದ ಹ್ಯುಂಡೈ ಮೋಟಾರ್ ಇಂಡಿ ಯಾ ಲಿಮಿಟೆಡ್ (ಎಚ್ಎಂಐಎಲ್), ತನ್ನ ಹೊಚ್ಚ ಹೊಸ 'ಹೊಸ ಹ್ಯುಂಡೈ ವರ್ನಾ' ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಆಕರ್ಷಕ ವಿನ್ಯಾಸದೊಂದಿಗೆ ಬಂದಿರುವ ಈ ಹೊಸ ಹ್ಯುಂಡೈ ವರ್ನಾ ಮೂಲಕ ಹ್ಯುಂಡೈ ಕಂಪನಿಯು ಪ್ರೀಮಿಯಂ ಸೆಡಾನ್ ವಿಭಾಗದಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಗಟ್ಟಿ ಗೊಳಿಸುವ ಗುರಿ ಹೊಂದಿದೆ.

ಹೊಸ ಹ್ಯುಂಡೈ ವರ್ನಾ ಬಿಡುಗಡೆಯ ಕುರಿತು ಮಾತನಾಡಿರುವ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಆದ ತರುಣ್ ಗಾರ್ಗ್ ಅವರು, "ಹೊಸ ಹ್ಯುಂಡೈ ವರ್ನಾ ಕೇವಲ ಒಂದು ಉತ್ಪನ್ನದ ನವೀಕರಣ ರೂಪ ಮಾತ್ರ ವೇ ಅಲ್ಲ, ಬದಲಿಗೆ ಇದೊಂದು ನಮ್ಮ ಹೆಮ್ಮೆಯ ಪ್ರತಿರೂಪವಾಗಿದೆ. ಟ್ರೆಂಡ್ ಗಳು ಬದಲಾಗುತ್ತಿರುವ ಮಾರುಕಟ್ಟೆಯಲ್ಲಿ, ನಾವು ಇಂಜಿನಿಯರಿಂಗ್ ಶ್ರೇಷ್ಠತೆ ಮತ್ತು ಚಾಲನಾ ಶ್ರೇಷ್ಠತೆ ಒದಗಿಸಲು ಬದ್ಧರಾಗಿದ್ದೇವೆ. ಅದಕ್ಕೆ ಪೂರಕವಾಗಿ ಹೊಸ ಹ್ಯುಂಡೈ ವರ್ನಾ ಒಂದು ನೈಜ ಕಾರು ಹೇಗಿರಬೇಕು ಎನ್ನುವುದಕ್ಕೆ ಸಾಕ್ಷಿಯಾಗಿದ್ದು, ಅತ್ಯುನ್ನತ ಸ್ಥಿರತೆ, ಸುರಕ್ಷತೆ, ಕಾರ್ಯಕ್ಷಮತೆ ಮತ್ತು ಪ್ರೀಮಿಯಂ ಗುಣ ಹೊಂದಿದೆ.

ಯಾವುದೇ ರಾಜಿ ಇಲ್ಲದ ಉತ್ಕೃಷ್ಟ ಕಾರ್ಯಕ್ಷಮತೆಯನ್ನು ಬಯಸುವ ಗ್ರಾಹಕರಿಗಾಗಿ ಇದನ್ನು ವಿನ್ಯಾಸಗೊಳಿಸ ಲಾಗಿದೆ. ತನ್ನ ಬೋಲ್ಡ್ ವಿನ್ಯಾಸ ಮತ್ತು ಸುಧಾರಿತ ಸುರಕ್ಷತೆ ಯೊಂದಿಗೆ, ಹೊಸ ಹ್ಯುಂಡೈ ವರ್ನಾ ಭಾರತೀಯ ಗ್ರಾಹಕರಿಗೆ ವಿಶ್ವದರ್ಜೆಯ ತಂತ್ರಜ್ಞಾನ ಮತ್ತು ಸಾಟಿಯಿಲ್ಲದ ಮೌಲ್ಯವನ್ನು ನೀಡುವ ಹ್ಯುಂಡೈನ ಬದ್ಧತೆಯನ್ನು ಸಾರುತ್ತದೆ" ಎಂದು ತಿಳಿಸಿದರು.

ಇದನ್ನೂ ಓದಿ: TATA Mumbai Marathon 2026: ಅಂತಾರಾಷ್ಟ್ರೀಯ, ಭಾರತೀಯ ಎಲೀಟ್ ಓಟಗಾರರು ಸಜ್ಜು!

ಹೊಸ ಹ್ಯುಂಡೈ ವರ್ನಾ ಗಾಗಿ ಎಚ್ಎಂಐಎಲ್ ಸಂಸ್ಥೆಯು ‘ರೆಸ್ಪೆಕ್ಟ್ ದಿ ಯಂಗ್’ ಎಂಬ ಹೊಸ ಜಾಹೀರಾತು ಅಭಿಯಾನವನ್ನು ಬಿಡುಗಡೆ ಮಾಡಿದ್ದು, ಈ ಅಭಿಯಾನವು ಭಾರತದ ಯುವಜನತೆಗೆ ಗೌರವ ಸಲ್ಲಿಸುವ ರೀತಿಯಲ್ಲಿ ಮೂಡಿಬಂದಿದೆ. ಈ ಯುವ ಪೀಳಿಗೆಯು ಧೈರ್ಯವಾಗಿ, ನೈಜವಾಗಿ ಮತ್ತು ತಮ್ಮದೇ ಆದ ರೀತಿಯಲ್ಲಿ ಹೊಸ ಇತಿಹಾಸ ವನ್ನು ಬರೆಯುತ್ತಿದ್ದಾರೆ. ‘ರೆಸ್ಪೆಕ್ಟ್ ದಿ ಯಂಗ್’ ಎಂಬ ಶೀರ್ಷಿಕೆಯ ಈ ಅಭಿಯಾನವು ಇಂದಿನ ಯುವ ಭಾರತೀಯರು ತಮ್ಮ ಅವಕಾಶಕ್ಕಾಗಿ ಕಾಯುತ್ತಾ ಕುಳಿತಿಲ್ಲ ಎಂಬ ಒಂದು ಅದ್ಭುತ ಒಳನೋಟದ ಆಧಾರದ ಮೇಲೆ ನಿರ್ಮಿತಗೊಂಡಿದೆ. ಬೋರ್ಡ್‌ ರೂಮ್‌ ಗಳನ್ನು ಮುನ್ನಡೆಸುವುದರಿಂದ ಹಿಡಿದು ದೇಶ ಸೇವೆ ಮಾಡುವವರೆಗೆ ಮತ್ತು ಘನತೆಯಿಂದ ಜೀವಿಸುವವರೆಗೆ ಅವರು ಎಲ್ಲವನ್ನೂ ಅತ್ಯಂತ ಆತ್ಮವಿಶ್ವಾಸ, ಆತ್ಮೀಯತೆ ಮತ್ತು ಸೊಗಸಾಗಿ ನಿರ್ವಹಣೆ ಮಾಡುತ್ತಿದ್ದಾರೆ.

ತನ್ನ ಪ್ರೀಮಿಯಂ ವಿನ್ಯಾಸ, ಶಕ್ತಿಯುತ ಕಾರ್ಯಕ್ಷಮತೆ ಮತ್ತು ಅತ್ಯಾಧುನಿಕ ಒಳಾಂಗಣ ದೊಂದಿಗೆ, ಹೊಸ ಹ್ಯುಂಡೈ ವರ್ನಾ ಈ ಯುವ ಸಾಧಕರಿಗೆ ಸೊಗಸಾದ ಸಂಗಾತಿಯಾಗಿ ಮೂಡಿಬಂದಿದೆ. ಈ ಕಾರು ಅವರು ಎಲ್ಲಿಗೆ ಹೋಗುತ್ತಿದ್ದಾರೆ ಎಂಬುದನ್ನು ಮಾತ್ರವಲ್ಲ, ಅವರು ಯಾರು ಎಂಬುದನ್ನೂ ಸಾರುತ್ತದೆ.

ವಿನ್ಯಾಸ, ತಂತ್ರಜ್ಞಾನ, ಸುರಕ್ಷತೆ ಮತ್ತು ಸೌಲಭ್ಯಗಳಲ್ಲಿ 25ಕ್ಕೂ ಹೆಚ್ಚು ಸುಧಾರಣೆ ಗಳು

  • ಹೊಸ ಹೊರಾಂಗಣ ವಿನ್ಯಾಸ: ಬ್ಲ್ಯಾಕ್ ಕ್ರೋಮ್ ರೇಡಿಯೇಟರ್ ಗ್ರಿಲ್, ಡ್ಯುಯಲ್ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ ಲ್ಯಾಂಪ್‌ ಗಳು, ಬೋಲ್ಡ್ ಬಂಪರ್ ವಿನ್ಯಾಸ (ಮುಂಭಾಗ ಮತ್ತು ಹಿಂಭಾಗ) ಮತ್ತು ಹೊಸ ಆರ್16 (405.6 ಎಂಎಂ) ಡೈಮಂಡ್ ಕಟ್ ಅಲಾಯ್ ಚಕ್ರಗಳೊಂದಿಗೆ ಆಕರ್ಷಕ ಮತ್ತು ಆಧುನಿಕ ಲುಕ್.
  • ಅತಿ ಉದ್ದದ ವೀಲ್‌ ಬೇಸ್ ಹೊಂದಿರುವ ಸೆಗ್ಮೆಂಟ್‌ ನ ಅತಿ ವಿಶಾಲವಾದ ಸೆಡಾನ್: ಹೊಸ ಹ್ಯುಂಡೈ ವರ್ನಾ, 4565 ಎಂಎಂ ಉದ್ದ, 2670 ಎಂಎಂ ವೀಲ್‌ ಬೇಸ್ ಮತ್ತು 1765 ಎಂಎಂ ಅಗಲ ಇದ್ದು, ಅತ್ಯುತ್ತಮ ಕ್ಯಾಬಿನ್ ಸ್ಥಳಾವಕಾಶ ಮತ್ತು ಹೆಚ್ಚಿನ ಅನುಕೂಲತೆಯನ್ನು ನೀಡುತ್ತದೆ.
  • ಹೊಸ ಒಳಾಂಗಣ ವಿನ್ಯಾಸ: ಡಿ- ಕಟ್ ಸ್ಟೀರಿಂಗ್ ವೀಲ್, ಈ ವಿಭಾಗದಲ್ಲೇ ಮೊದಲ ಬಾರಿಗೆ ನೀಡಲಾಗಿರುವ ರಿಯರ್ ವಿಂಡೋ ಸನ್‌ಶೇಡ್, ಬೋಸ್ ಪ್ರೀಮಿಯಂ ಸೌಂಡ್ 8-ಸ್ಪೀಕರ್ ಸಿಸ್ಟಮ್, ಸ್ವಿಚ್ ಮಾಡಬಹುದಾದ ಇನ್ಫೋಟೈನ್‌ಮೆಂಟ್ ಮತ್ತು ಆಟೋ ಕ್ಲೈಮೇಟ್ ಕಂಟ್ರೋಲರ್, ಲೆದರೆಟ್ ಸೀಟ್ ಅಪ್ಹೋಲ್ಸ್ಟರಿ ಮತ್ತು ಇನ್ನಷ್ಟು ವಿಶೇಷತೆ ಗಳು.
  • ಸೆಗ್ಮೆಂಟ್‌ ನಲ್ಲೇ ಅತಿ ದೊಡ್ಡ ಇನ್ಫೋಟೈನ್‌ಮೆಂಟ್ ಮತ್ತು ಡಿಜಿಟಲ್ ಕ್ಲಸ್ಟರ್: ಡ್ಯುಯಲ್ 52.06 ಸೆಂಮೀ (10.25" + 10.25”) ನಷ್ಟು ವಿಶಾವಲಾದ ಇಂಟಿಗ್ರೇಟೆಡ್ ಡಿಸ್‌ ಪ್ಲೇ ಗಳು.
  • ಸುಧಾರಿತ ಸುರಕ್ಷತೆ: ಹ್ಯುಂಡೈ ಸ್ಮಾರ್ಟ್‌ಸೆನ್ಸ್ ಲೆವೆಲ್ 2 ಎಡಿಎಎಸ್, ಈ ವಿಭಾಗದಲ್ಲೇ ಮೊದಲ ಬಾರಿಗೆ 7 ಏರ್‌ ಬ್ಯಾಗ್‌ ಗಳು, ಡ್ಯಾಶ್‌ಕ್ಯಾಮ್, ಸರೌಂಡ್ ವ್ಯೂ ಮಾನಿಟರ್ ಮತ್ತು ಬ್ಲೈಂಡ್ ಸ್ಪಾಟ್ ವ್ಯೂ ಮಾನಿಟರ್, ರೇನ್ ಸೆನ್ಸಿಂಗ್ ವೈಪರ್‌ ಗಳಂತಹ ಹೊಸ ವೈಶಿಷ್ಟ್ಯಗಳು ಲಭ್ಯ.
  • ಹೆಚ್ಚುವರಿ ಸೌಕರ್ಯ: ಮೆಮೊರಿ ಫಂಕ್ಷನ್ ಮತ್ತು ವೆಲ್ಕಮ್ ರಿಟ್ರಾಕ್ಟ್ ಫಂಕ್ಷನ್ ಹೊಂದಿರುವ ಎಲೆಕ್ಟ್ರಿಕ್ 8-ವೇ ಅಡ್ಜಸ್ಟ್ ಡ್ರೈವರ್ ಸೀಟ್ (ಸೆಗ್ಮೆಂಟ್‌ ನಲ್ಲಿ ಮೊದಲನೆ ಯದು), ಪ್ಯಾಸೆಂಜರ್ ಸೀಟ್ ಎಲೆಕ್ಟ್ರಿಕ್ 4-ವೇ ಅಡ್ಜಸ್ಟ್ ಮತ್ತು ಸ್ಮಾರ್ಟ್ ಟ್ರಂಕ್ ಸೌಲಭ್ಯ.
  • ಎರಡು ಹೊಸ ಬಣ್ಣಗಳು: ಕ್ಲಾಸಿ ಬ್ಲೂ ಮತ್ತು ಟೈಟಾನ್ ಗ್ರೇ ಮ್ಯಾಟ್.
  • ಇಮೇಜ್ ಲಿಂಕ್