ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರೇಸ್ ಟ್ರ್ಯಾಕ್ ಮೇಲೆ 'ಸುಜುಕಿ ಜಿಕ್ಸರ್' ಪವರ್ ಪ್ರದರ್ಶನ, ಬೆಂಗಳೂರಿನ ಬೈಕ್ ಪ್ರಿಯರಿಗೆ ಸಿಕ್ತು ಭರ್ಜರಿ ರೈಡಿಂಗ್ ಅನುಭವ!

ಗ್ರಾಹಕರಿಗೆ ನೈಜ ಚಾಲನಾ ಅನುಭವವನ್ನು ನೀಡುವುದು ಮತ್ತು ಅವರೊಂದಿಗೆ ನೇರವಾಗಿ ಬೆರೆಯು ವುದು ನಮ್ಮ ಉದ್ದೇಶ. ಜಿಕ್ಸರ್ ಪಿಟ್-ಸ್ಟಾಪ್ ಮೂಲಕ ಬೈಕ್ ಉತ್ಸಾಹಿಗಳಿಗೆ ಜಿಕ್ಸರ್ ಬೈಕ್‌ಗಳ ಅಸಲಿ ತಾಕತ್ತನ್ನು ಪರಿಚಯಿಸಿದ್ದೇವೆ. ಬೆಂಗಳೂರಿನಲ್ಲಿ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದು, ಮುಂಬರುವ ದಿನಗಳಲ್ಲಿ ದೇಶದ ಇತರೆ ನಗರಗಳಿಗೂ ಈ ಕಾರ್ಯಕ್ರಮವನ್ನು ವಿಸ್ತರಿಸಲಿದ್ದೇವೆ

ರೇಸ್ ಟ್ರ್ಯಾಕ್ ಮೇಲೆ 'ಸುಜುಕಿ ಜಿಕ್ಸರ್' ಪವರ್ ಪ್ರದರ್ಶನ

-

Profile
Ashok Nayak Jun 22, 2026 6:50 PM

ಬೆಂಗಳೂರು: ಯುವಕರ ನೆಚ್ಚಿನ ಬೈಕ್ ಬ್ರ್ಯಾಂಡ್‌ಗಳಲ್ಲಿ ಒಂದಾದ 'ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈ. ಲಿ. ತನ್ನ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ 'ಜಿಕ್ಸರ್ ಪಿಟ್-ಸ್ಟಾಪ್' ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿತು. ಬೈಕ್ ರೈಡಿಂಗ್ ಬಗ್ಗೆ ಅಪಾರ ಪ್ರೀತಿ ಹೊಂದಿರುವ 80ಕ್ಕೂ ಹೆಚ್ಚು ಉತ್ಸಾಹಿಗಳು ಒಂದೇ ಕಡೆ ಸೇರಿ, ಮೋಟಾರ್‌ಸೈಕ್ಲಿಂಗ್ ಸ್ಪಿರಿಟ್ ಅನ್ನು ಸಂಭ್ರಮಿಸಿದರು.

ಟ್ರ್ಯಾಕ್ ಮೇಲೆ ಜಿಕ್ಸರ್ ಪವರ್ ಪ್ರದರ್ಶನ!

ಬೆಂಗಳೂರಿನ ಜಿಪಿ1 ರೇಸ್‌ಟ್ರ್ಯಾಕ್ ಹಾಗೂ ಅರೆನಾ 53 ಟ್ರ್ಯಾಕ್‌ನಲ್ಲಿ ಈ ಕಾರ್ಯಕ್ರಮ ನಡೆಯಿತು. ಈವೆಂಟ್‌ನಲ್ಲಿ ಪಾಲ್ಗೊಂಡಿದ್ದ ಬೈಕ್ ಪ್ರಿಯರಿಗೆ 'ಸುಜುಕಿ ಜಿಕ್ಸರ್' ಸರಣಿಯ ಬೈಕ್‌ಗಳನ್ನು ಟ್ರ್ಯಾಕ್ ಮೇಲೆ ಓಡಿಸುವ ಅವಕಾಶ ನೀಡಲಾಗಿತ್ತು. ಬೈಕ್‌ನ ಆರಾಮದಾಯಕ ರೈಡಿಂಗ್, ಅತ್ಯುತ್ತಮ ಪಿಕಪ್, ಬ್ರೇಕಿಂಗ್ ಮೇಲಿನ ವಿಶ್ವಾಸ ಮತ್ತು ಕಂಟ್ರೋಲ್ ಹೇಗಿದೆ ಎಂಬುದನ್ನು ಗ್ರಾಹಕರು ನೈಜವಾಗಿ (ಟೆಸ್ಟ್ ರೈಡ್ ಮೂಲಕ) ಪರೀಕ್ಷಿಸಿ ರೋಮಾಂಚನಗೊಂಡರು.

ಇದನ್ನೂ ಓದಿ: Open safari vehicles: ವನ್ಯಜೀವಿ ಸಫಾರಿಗಳಲ್ಲಿ ಇನ್ನುಮುಂದೆ ತೆರೆದ ವಾಹನ ಬಳಸುವಂತಿಲ್ಲ: ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚನೆ

ಈ ವಿನೂತನ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಸುಜುಕಿ ಮೋಟಾರ್‌ ಸೈಕಲ್ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ದೀಪಕ್ ಮುತ್ರೇಜಾ, "ಗ್ರಾಹಕರಿಗೆ ನೈಜ ಚಾಲನಾ ಅನುಭವವನ್ನು ನೀಡುವುದು ಮತ್ತು ಅವರೊಂದಿಗೆ ನೇರವಾಗಿ ಬೆರೆಯುವುದು ನಮ್ಮ ಉದ್ದೇಶ. ಜಿಕ್ಸರ್ ಪಿಟ್-ಸ್ಟಾಪ್ ಮೂಲಕ ಬೈಕ್ ಉತ್ಸಾಹಿಗಳಿಗೆ ಜಿಕ್ಸರ್ ಬೈಕ್‌ಗಳ ಅಸಲಿ ತಾಕತ್ತನ್ನು ಪರಿಚಯಿಸಿದ್ದೇವೆ. ಬೆಂಗಳೂರಿನಲ್ಲಿ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದು, ಮುಂಬರುವ ದಿನಗಳಲ್ಲಿ ದೇಶದ ಇತರೆ ನಗರಗಳಿಗೂ ಈ ಕಾರ್ಯಕ್ರಮವನ್ನು ವಿಸ್ತರಿಸಲಿದ್ದೇವೆ,” ಎಂದರು.

ಸುರಕ್ಷತೆಗೂ ಆದ್ಯತೆ, ಉಡುಗೊರೆಗಳ ಸುರಿಮಳೆ

ಕೇವಲ ಬೈಕ್ ರೈಡಿಂಗ್ ಮಾತ್ರವಲ್ಲದೆ, ಈ ಕಾರ್ಯಕ್ರಮದಲ್ಲಿ ಮಳೆಗಾಲದಲ್ಲಿ ಸುರಕ್ಷಿತವಾಗಿ ಬೈಕ್ ಓಡಿಸುವ ತಂತ್ರಗಳ ಬಗ್ಗೆಯೂ ಒಂದು ಉಪಯುಕ್ತ ಕಾರ್ಯಾಗಾರವನ್ನು ನಡೆಸಲಾಯಿತು. ಮಳೆಗಾಲದಲ್ಲಿ ಬೈಕ್ ಸ್ಕಿಡ್ ಆಗದಂತೆ ಹೇಗೆ ಎಚ್ಚರ ವಹಿಸಬೇಕು ಎಂಬುದರ ಬಗ್ಗೆ ಪ್ರಾಕ್ಟಿಕಲ್ ಟಿಪ್ಸ್ ನೀಡಲಾಯಿತು.

ಇದರ ಜೊತೆಗೆ, ಅನುಭವಿ ರೈಡರ್‌ಗಳು ಹಾಗೂ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ ಗಳೊಂದಿಗೆ ಗ್ರಾಹಕರು ಸಂವಾದ ನಡೆಸಿ, ಅವರ ರೈಡಿಂಗ್ ಅನುಭವಗಳನ್ನು ಕೇಳಿ ತಿಳಿದು ಕೊಂಡರು. ಭಾಗವಹಿಸಿದ ಪ್ರತಿಯೊಬ್ಬರಿಗೂ ಹೆಲ್ಮೆಟ್‌ಗೆ ಹಾಕುವ 'ರೇನ್ ಕವರ್' ಹಾಗೂ ಸುಜುಕಿ ಒರಿಜಿನಲ್ ಆಕ್ಸೆಸರೀಸ್‌ಗಳ ಮೇಲೆ ವಿಶೇಷ 'ಡಿಸ್ಕೌಂಟ್ ವೋಚರ್'ಗಳನ್ನು ಉಡುಗೊರೆಯಾಗಿ ನೀಡಲಾಯಿತು.

ಜಿಕ್ಸರ್ ಬೈಕ್‌ಗಳ ವಿಶೇಷತೆ ಏನು?

ಸುಜುಕಿ ಜಿಕ್ಸರ್ ಸರಣಿಯು ತನ್ನ ಅತ್ಯುತ್ತಮ ಎಂಜಿನ್ ಪರ್ಫಾರ್ಮೆನ್ಸ್ ಹಾಗೂ ಬಾಳಿಕೆಗೆ ಹೆಸರುವಾಸಿಯಾಗಿದೆ. 24 ಗಂಟೆಗಳಲ್ಲಿ 2,802.3 ಕಿ.ಮೀ (150ಸಿಸಿ ಬೈಕ್) ಮತ್ತು 3,259.0 ಕಿ.ಮೀ (250ಸಿಸಿ ಬೈಕ್) ಕ್ರಮಿಸಿದ ರಾಷ್ಟ್ರೀಯ ದಾಖಲೆ ಈ ಬೈಕ್‌ಗಳ ಹೆಸರಿನಲ್ಲಿದೆ. ಪ್ರೀಮಿಯಂ ಬಿಲ್ಡ್ ಕ್ವಾಲಿಟಿ ಹೊಂದಿರುವ ಈ ಬೈಕ್‌ಗಳು ಪರ್ಫಾರ್ಮೆನ್ಸ್ ಬಯಸುವ ಯುವಕರ ಮೊದಲ ಆಯ್ಕೆ ಯಾಗಿವೆ.

ಸದ್ಯ ಜಿಕ್ಸರ್ ಸರಣಿಯ ಬೈಕ್‌ಗಳು ದೇಶಾದ್ಯಂತ ಎಲ್ಲಾ ಸುಜುಕಿ ಡೀಲರ್‌ಗಳ ಬಳಿ ಲಭ್ಯವಿದ್ದು, ಆಕರ್ಷಕ ಫೈನಾನ್ಸ್ ಸ್ಕೀಮ್‌ಗಳು ಹಾಗೂ ಪ್ರತಿ ಖರೀದಿಯ ಮೇಲೂ ಖಚಿತ ಉಡುಗೊರೆಗಳನ್ನು ಘೋಷಿಸಲಾಗಿದೆ. ಇದಕ್ಕೆ ಷರತ್ತುಗಳು ಅನ್ವಯಿಸಲಿದ್ದು, ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಶೋರೂಮ್ ಸಂಪರ್ಕಿಸಬಹುದು ಎಂದು ಕಂಪನಿ ತಿಳಿಸಿದೆ.