ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇವಾಲಯದ ಸರದಿಯಿಂದ ಡಿಜಿಟಲ್ ದರ್ಶನದವರೆಗೆ: ಶ್ರಾವಣ ಸಂಪ್ರದಾಯದಲ್ಲಿ ತಂತ್ರಜ್ಞಾನದ ಹೊಸ ಅಧ್ಯಾಯ

ಸುಮಾರು 1,73,222 ಭಕ್ತರು 52 ದೇವಾಲಯಗಳಲ್ಲಿ 385 ಪೂಜೆಗಳಲ್ಲಿ ಪಾಲ್ಗೊಂಡಿದ್ದಾರೆ. 64,388 ಭಕ್ತರು 12 ದೇವಾಲಯಗಳಲ್ಲಿ 1.21 ಲಕ್ಷಕ್ಕೂ ಹೆಚ್ಚು ಚಡಾವಾ ಅರ್ಪಿಸಿದ್ದಾರೆ. ಸನಾತನ ಧರ್ಮ ದಲ್ಲಿ ಶ್ರೇಷ್ಠವೆಂದು ಪರಿಗಣಿತವಾದ ಅನ್ನದಾನದ ಅಂಗವಾಗಿ 700 ಸೇವೆಗಳ ಮೂಲಕ 3,000 ಕೆ.ಜಿ ಖಿಚಡಿ ಪ್ರಸಾದ ವಿತರಿಸಲಾಗಿದೆ. ಓಂಕಾರೇಶ್ವರದಲ್ಲಿ ನಾಲ್ಕು ಸೋಮವಾರಗಳಲ್ಲಿ 40 ಲಕ್ಷ ಮಹಾ ಮೃತ್ಯುಂಜಯ ಮಂತ್ರ ಜಪ ಮತ್ತು ನರ್ಮದಾ ಜಲದ ರುದ್ರಾಭಿಷೇಕ ನೆರವೇರಿದೆ

ಶ್ರಾವಣ ಸಂಪ್ರದಾಯದಲ್ಲಿ ತಂತ್ರಜ್ಞಾನದ ಹೊಸ ಅಧ್ಯಾಯ

-

Profile
Ashok Nayak Aug 29, 2026 8:52 PM

ಬೆಂಗಳೂರು: ಓಂಕಾರೇಶ್ವರ ಜ್ಯೋತಿರ್ಲಿಂಗದಲ್ಲಿ ಅರ್ಚಕರು ಎಂದಿನಂತೆ ಪೂಜೆ ಸಲ್ಲಿಸುತ್ತಿದ್ದಾರೆ, ಆದರೆ ಈ ಶ್ರಾವಣದಲ್ಲಿ ಭಕ್ತರು ಪುಣೆ, ದೆಹಲಿ ಅಥವಾ ವಿದೇಶದಿಂದಲೂ ಆ ರುದ್ರಾಭಿಷೇಕದಲ್ಲಿ ಪಾಲ್ಗೊಂಡಿದ್ದಾರೆ. ಭಾರತದ ಅತಿದೊಡ್ಡ ಭಕ್ತಿ ವೇದಿಕೆ ಶ್ರೀ ಮಂದಿರ್ ಆ್ಯಪ್ ಮೂಲಕ ಇದು ಸಾಧ್ಯವಾಗಿದೆ.

ಸುಮಾರು 1,73,222 ಭಕ್ತರು 52 ದೇವಾಲಯಗಳಲ್ಲಿ 385 ಪೂಜೆಗಳಲ್ಲಿ ಪಾಲ್ಗೊಂಡಿದ್ದಾರೆ. 64,388 ಭಕ್ತರು 12 ದೇವಾಲಯಗಳಲ್ಲಿ 1.21 ಲಕ್ಷಕ್ಕೂ ಹೆಚ್ಚು ಚಡಾವಾ ಅರ್ಪಿಸಿದ್ದಾರೆ. ಸನಾತನ ಧರ್ಮ ದಲ್ಲಿ ಶ್ರೇಷ್ಠವೆಂದು ಪರಿಗಣಿತವಾದ ಅನ್ನದಾನದ ಅಂಗವಾಗಿ 700 ಸೇವೆಗಳ ಮೂಲಕ 3,000 ಕೆ.ಜಿ ಖಿಚಡಿ ಪ್ರಸಾದ ವಿತರಿಸಲಾಗಿದೆ. ಓಂಕಾರೇಶ್ವರದಲ್ಲಿ ನಾಲ್ಕು ಸೋಮವಾರಗಳಲ್ಲಿ 40 ಲಕ್ಷ ಮಹಾಮೃತ್ಯುಂಜಯ ಮಂತ್ರ ಜಪ ಮತ್ತು ನರ್ಮದಾ ಜಲದ ರುದ್ರಾಭಿಷೇಕ ನೆರವೇರಿದೆ.

ಇದನ್ನೂ ಓದಿ: Mohan Vishwa Column: ‘ಗಣೇಶೋತ್ಸವ’ ಭಾರತದ ಆರ್ಥಿಕತೆಯ ಶಕ್ತಿ

ವಿಶೇಷವಾಗಿ 25,000ಕ್ಕೂ ಹೆಚ್ಚು ಹಿರಿಯ ನಾಗರಿಕರು ಮನೆಯಲ್ಲೇ ಕುಳಿತು ಪೂಜೆf ಸಲ್ಲಿಸಿದ್ದಾರೆ. ಭಕ್ತರು ಜಲ, ಬಿಲ್ವಪತ್ರೆ, ದತ್ತೂರವನ್ನು ಅರ್ಪಿಸಿ ರುದ್ರಾಭಿಷೇಕ, ಮಂತ್ರ ಜಪಗಳಲ್ಲಿ ಭಾಗಿಯಾಗಿ ದ್ದಾರೆ.

ಇದರ ಕುರಿತು ಮಾತನಾಡಿದ ಶ್ರೀ ಮಂದಿರ್ ಸಂಸ್ಥಾಪಕ ಮತ್ತು ಸಿಇಒ ಪ್ರಶಾಂತ್ ಸಚನ್, "ಬದಲಾಗುತ್ತಿರುವುದು ಸಂಪ್ರದಾಯವಲ್ಲ, ಅದನ್ನು ತಲುಪುವ ಸೌಲಭ್ಯ. ತಂತ್ರಜ್ಞಾನವು ಕೇವಲ ದೂರವನ್ನು ಕಡಿಮೆ ಮಾಡುತ್ತದೆ. ಪೂಜೆ, ಅರ್ಚಕರು, ವಿಧಿವಿಧಾನಗಳು ದೇವಾಲಯದಲ್ಲೇ ಯಥಾವತ್ತಾಗಿ ನಡೆಯುತ್ತವೆ" ಎಂದರು.