ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Health Tips: ವ್ಯಾಯಾಮಕ್ಕೂ ಮುನ್ನ ಈ ಹಣ್ಣುಗಳ ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮ!

ಜಿಮ್ ಅಥವಾ ವ್ಯಾಯಾಮ ಮಾಡುವ ಮುನ್ನ ಸರಿಯಾದ ಆಹಾರ ಸೇವನೆ ಕೂಡ ಅಗತ್ಯ ಎಂದು ವೈದ್ಯರು ಸಲಹೆ ನೀಡುತ್ತಾರೆ. ತಜ್ಞರ ಪ್ರಕಾರ ಗ್ಲೂಕೋಸ್ ಅಥವಾ ಫ್ರಕ್ಟೋಸ್ ನ ಅಂಶವಿರುವ ಹಣ್ಣಿನ ಸೇವನೆ ದೇಹಕ್ಕೆ ಉತ್ತಮ ಶಕ್ತಿಯನ್ನು ನೀಡುತ್ತವೆ. ಹಾಗಿದ್ರೆ ಗ್ಲೂಕೋಸ್ ಅಥವಾ ಫ್ರಕ್ಟೋಸ್ ನ ಪ್ರಮಾಣವಿರುವ ಹಣ್ಣುಗಳು ಯಾವುವು?

ವ್ಯಾಯಾಮದ ಮೊದಲು‌ ಈ ಹಣ್ಣುಗಳ ಆಯ್ಕೆ ಮಾಡಿ!

ಸಂಗ್ರಹ ಚಿತ್ರ -

Profile
Pushpa Kumari Apr 25, 2026 8:19 AM

ನವದೆಹಲಿ,ಏ.24: ತೂಕ ಇಳಿಸಬೇಕೆಂದು ಕೆಲವರು ನಾನಾ ರೀತಿಯ ಸರ್ಕಸ್ ಮಾಡುತ್ತಲೇ ಇರುತ್ತಾರೆ. ಜಿಮ್,ಫಿಟ್ ನೆಸ್ ವ್ಯಾಯಾಮ ಎಂದೂ ಇದಕ್ಕೆ ಅರ್ಧ ಸಮಯ ಮೀಸಲಿಡುತ್ತಾರೆ. ಆದರೆ ಜಿಮ್ ಅಥವಾ ವ್ಯಾಯಾಮ (Exercise) ಮಾಡುವ ಮುನ್ನ ಸರಿಯಾದ ಆಹಾರ ಸೇವನೆ ಕೂಡ ಅಗತ್ಯ ಎಂದು ವೈದ್ಯರು ಸಲಹೆ ನೀಡುತ್ತಾರೆ. ತಜ್ಞರ ಪ್ರಕಾರ ಗ್ಲೂಕೋಸ್ ಅಥವಾ ಫ್ರಕ್ಟೋಸ್ ನ ಅಂಶವಿರುವ ಹಣ್ಣಿನ ಸೇವನೆ ದೇಹಕ್ಕೆ ಉತ್ತಮ ಶಕ್ತಿಯನ್ನು ನೀಡುತ್ತವೆ. ಹಾಗಿದ್ರೆ ಗ್ಲೂಕೋಸ್ ಅಥವಾ ಫ್ರಕ್ಟೋಸ್ನ ಪ್ರಮಾಣವಿರುವ ಹಣ್ಣುಗಳು ಯಾವುವು?

ವ್ಯಾಯಾಮದ ಮೊದಲು, ನಿಮ್ಮ ದೇಹಕ್ಕೆ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸುಲಭವಾಗಿ ಜೀರ್ಣವಾಗುವ ಕಾರ್ಬೋಹೈಡ್ರೇಟ್‌ಗಳ ಸೇವನೆ ಬಹಳಷ್ಟು ಅಗತ್ಯವಾಗಿದೆ. ಹಣ್ಣುಗಳು ಗ್ಲೂಕೋಸ್ ಮತ್ತು ಫ್ರಕ್ಟೋಸ್‌ನಂತಹ ನೈಸರ್ಗಿಕ ಸಕ್ಕರೆಗಳಲ್ಲಿ ಸಮೃದ್ಧವಾಗಿವೆ. ಇವುಗಳು ವ್ಯಾಯಾಮದ ಸಮಯದಲ್ಲಿ ನಿಮ್ಮ ಸ್ನಾಯುಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ಶಕ್ತಿ ಒದಗಿಸಲು ಸಹಾಯ ಮಾಡುತ್ತದೆ. ಜೊತೆಗೆ,ನೀವು ವರ್ಕ್ ಔಟ್‌ ನ 30 ರಿಂದ 60 ನಿಮಿಷಗಳ ಮೊದಲು ತಿಂದರೆ ಸೂಕ್ತ ವಾಗಿರುತ್ತದೆ.

ಬಾಳೆಹಣ್ಣು:

ಬಾಳೆಹಣ್ಣುಗಳು ಕಾರ್ಬೋಹೈಡ್ರೇಟ್‌ ಮತ್ತು ಪೊಟ್ಯಾಸಿಯಮ್‌ ನಲ್ಲಿ ಸಮೃದ್ಧವಾಗಿದೆ, ಇದು ಸ್ನಾಯುಗಳ ಕಾರ್ಯವನ್ನು ಕಾಪಾಡಿಕೊಳ್ಳಲು ಮತ್ತು ಸೆಳೆತವನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗಾಗಿ ಓಟ, ಸೈಕ್ಲಿಂಗ್ ಅಥವಾ ತೂಕ ತರಬೇತಿಯಂತಹ ವ್ಯಾಯಾಮಗಳ ಮೊದಲು ಇವುಗಳ ಸೇವನೆ ಉತ್ತಮವಾಗಿರುತ್ತದೆ.

Health Benefits of Mint: ಬೇಸಿಗೆಯಲ್ಲೂ ತಂಪಾಗಿಸುವ ಪುದೀನಾದ ಸತ್ವಗಳು ಗೊತ್ತೇ?

ಸೇಬು:

ಸೇಬು ಹಣ್ಣು ಹೆಚ್ಚಿನ ಫ್ರಕ್ಟೋಸ್-ಟು-ಗ್ಲೂಕೋಸ್‌ ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿ ರುತ್ತವೆ. ರಕ್ತ ಸಂಚಾರಕ್ಕೆ ಹೆಚ್ಚು ಪರಿಣಾಮಕಾರಿ‌ಯಾಗಿದ್ದು ಇದು ಹೆಚ್ಚಿನ ಸಕ್ಕರೆ ಅಂಶವಾದ "ಇನ್ಸುಲಿನ್ ಸ್ಪೈಕ್‌ ಅನ್ನು ತಡೆಯುತ್ತದೆ

ಖರ್ಜೂರಗಳು:

ನಿಮ್ಮ ವ್ಯಾಯಾಮ ಸಂದರ್ಭದಲ್ಲಿ ಹೆಚ್ಚಿನ ಬೂಸ್ಟ್ ಅಗತ್ಯವಿದ್ದರೆ, ಖರ್ಜೂರಗಳು ಉತ್ತಮ ಆಯ್ಕೆಯಾಗಿದೆ. ಅವುಗಳಲ್ಲಿ ನೈಸರ್ಗಿಕ ಸಕ್ಕರೆ ಅಧಿಕವಾಗಿದ್ದು ತ್ವರಿತ ಶಕ್ತಿಯನ್ನು ಒದಗಿಸುತ್ತವೆ. ದಿನಕ್ಕೆ ಕೇವಲ 2 ರಿಂದ 3 ಖರ್ಜೂರಗಳ ಸೇವನೆ ಉತ್ತಮ.

ಬೆರ್ರಿ ಹಣ್ಣು:

ವ್ಯಾಯಾಮ, ಜಿಮ್ ಮಾಡೋರಿಗೆ ಸ್ಟ್ರಾಬೆರಿಗಳು ಮತ್ತು ಬೆರಿಹಣ್ಣುಗಳು ಅತ್ಯುತ್ತಮವಾಗಿವೆ. ಅವು ನೈಸರ್ಗಿಕ ಸಕ್ಕರೆಗಳ ಜೊತೆಗೆ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತವೆ.

ಮಾವು:

ಮಾವು ನೈಸರ್ಗಿಕ ಸಕ್ಕರೆಗಳಿಂದ ಸಮೃದ್ಧವಾಗಿದೆ. ಇದು ನಿಮ್ಮ ವ್ಯಾಯಾಮಕ್ಕೆ ಉತ್ತೇಜನ ನೀಡಲು ರುಚಿಕರವಾದ ಆಯ್ಕೆಯಾಗಿದೆ. ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ, ಆದರೆ ಅದರ ಹೆಚ್ಚಿನ ಸಕ್ಕರೆ ಅಂಶದಿಂದಾಗಿ ಮಿತವಾಗಿ ತಿಂದರೆ ಉತ್ತಮ.