ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಹೆಚ್ಚು ಉಪ್ಪಿನ ಸೇವನೆಯಿಂದ ಲೈಂಗಿಕ ಜೀವನಕ್ಕೆ ತೊಂದರೆ

ಉಪ್ಪು ಇಲ್ಲದೆ ಯಾವುದೇ ಆಹಾರ ರುಚಿಸುವುದಿಲ್ಲ. ಹಾಗಂತ ಉಪ್ಪು ಅತಿಯಾದರೂ ಅದು ಪ್ರಯೋಜನಕ್ಕಿಲ್ಲ. ಉಪ್ಪನ್ನು ಹಿತಮಿತವಾಗಿ ಸೇವನೆ ಮಾಡುವುದು ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು. ಹೆಚ್ಚಿನ ಪ್ರಮಾಣ ಉಪ್ಪು ಸೇವನೆಯಿಂದ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಉಪ್ಪಿನ ಖಾದ್ಯಗಳನ್ನು ಸೇವಿಸುವಾಗ ಎಚ್ಚರ.

ಹೆಚ್ಚು ಉಪ್ಪಿನ ಸೇವನೆಯಿಂದ ಲೈಂಗಿಕ ಜೀವನಕ್ಕೆ ತೊಂದರೆ

ನವದೆಹಲಿ: ಉಪ್ಪು (Salt) ಇಲ್ಲದೇ ಇದ್ದರೆ ಯಾವ ಆಹಾರವೂ ರುಚಿಸುವುದಿಲ್ಲ. ಅಂತೆಯೇ ಉಪ್ಪು ಹೆಚ್ಚಾದರೆ ಅದು ತಿನ್ನುವಂತೆಯೂ ಇರುವುದಿಲ್ಲ. ಆದರೆ ದಿನದ ಅಗತ್ಯಕ್ಕಿಂತ ಹೆಚ್ಚಿನ ಉಪ್ಪು ಸೇವನೆಯು (Consuming too much salt) ನಮ್ಮ ಆರೋಗ್ಯವನ್ನು (Health Tips) ಹಾಳು ಮಾಡುತ್ತದೆ. ಇದು ಲೈಂಗಿಕ ಜೀವನಕ್ಕೂ(Physical Relationship) ತೊಂದರೆ ಉಂಟು ಮಾಡುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಹೀಗಾಗಿ ನಿತ್ಯವೂ ಆಹಾರ ಸೇವಿಸುವಾಗ ಎಷ್ಟು ಪ್ರಮಾಣದ ಉಪ್ಪು ಸೇವನೆ ಮಾಡುತ್ತೀರಿ ಎಂಬುದರ ಮೇಲೂ ನಿಗಾ ಇಡುವುದು ಒಳ್ಳೆಯದು.

ಆರೋಗ್ಯಕರ ಜೀವನ ಪದ್ದತಿಯಲ್ಲಿ ಲೈಂಗಿಕ ಕ್ರಿಯೆಯೂ ಸೇರಿದೆ. ಇದಕ್ಕಾಗಿ ನಮ್ಮ ದಿನಚರಿ, ಆಹಾರದ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕು. ಇಲ್ಲವಾದರೆ ನಾನಾ ರೀತಿಯ ತೊಂದರೆಗಳಿಗೆ ಅಹ್ವಾನ ಕೊಟ್ಟಂತಾಗುತ್ತದೆ. ನಿತ್ಯವು ಆಹಾರ ಸೇವಿಸುವಾಗ ಎಷ್ಟು ಪ್ರಮಾಣದ ಉಪ್ಪನ್ನು ಸೇವಿಸುತ್ತಿದ್ದೇವೆ ಎನ್ನುವುದರ ಮೇಲೆ ಲೈಂಗಿಕ ಜೀವನದ ಆರೋಗ್ಯ ನಿರ್ಧಾರವಾಗುತ್ತದೆ ಎನ್ನುತ್ತದೆ ಹೊಸ ಅಧ್ಯಯನ.

ಅತಿಯಾದ ಉಪ್ಪಿನ ಆಹಾರ ಸೇವನೆಯಿಂದ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಆಹಾರದಲ್ಲಿ ಉಪ್ಪು ಕಡಿಮೆ ಇದ್ದರೆ ಲೈಂಗಿಕ ಜೀವನದಲ್ಲಿ ಹೆಚ್ಚು ಸುಖವನ್ನು ಅನುಭವಿಸುತ್ತೀರಿ ಎನ್ನುತ್ತಾರೆ ತಜ್ಞರು.

ಹೆಚ್ಚಿನ ಉಪ್ಪು ಇರುವ ಆಹಾರ ಸೇವನೆಯಿಂದ ಲೈಂಗಿಕ ಜೀವನ ತೃಪ್ತಿದಾಯಕವಾಗಿರಲು ಸಾಧ್ಯವೇ ಇಲ್ಲ. ಯಾರು ಹೆಚ್ಚು ಉಪ್ಪು ಸೇವನೆ ಮಾಡುತ್ತಾರೋ ಅವರಿಗೆ ನಿಮಿರುವಿಕೆ ಪ್ರಕ್ರಿಯೆ ದುರ್ಬಲವಾಗಿರುತ್ತದೆ ಎಂದು ಜರ್ನಲ್ ಆಫ್ ಸೆಕ್ಷುವಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ ತಿಳಿಸಿದೆ.

ಹೆಚ್ಚಿನ ಪ್ರಮಾಣದ ಉಪ್ಪಿನ ಸೇವನೆಯಿಂದ ಅಧಿಕ ರಕ್ತದೊತ್ತಡ ತೊಂದರೆ ಕಾಣಿಸಿಕೊಳ್ಳುತ್ತದೆ. ಇದು ಲೈಂಗಿಕ ಕ್ರಿಯೆಯ ವೇಳೆ ದೇಹದ ವಿವಿಧ ಅಂಗಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಪುರುಷರಿಗೆ ಶಿಶ್ನ ನಿಮಿರುವಿಕೆಯಲ್ಲಿ ಸಮಸ್ಯೆ ಎದುರಾಗುತ್ತದೆ. ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ.

ಇನ್ನು ಉಪ್ಪಿನ ಪ್ರಮಾಣದ ಅಧಿಕ ಸೇವನೆಯಿಂದ ಅಪಧಮನಿಗಳಲ್ಲಿ ಬಿಗಿತ ಉಂಟಾಗುತ್ತದೆ. ಲೈಂಗಿಕ ಕ್ರಿಯೆ ಸರಾಗವಾಗಿ ನಡೆಯಬೇಕು ಎಂದರೆ ರಕ್ತನಾಳಗಳು ಸೂಕ್ತವಾದ ರಕ್ತದ ಹರಿವನ್ನು ಹೊಂದಿರಬೇಕು. ಹೀಗಾಗಿ ಇದು ಕೂಡ ಲೈಂಗಿಕ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಅತಿಯಾದ ಉಪ್ಪಿನ ಆಹಾರದ ಸೇವನೆಯಿಂದ ಎಂಡೋಥೀಲಿಯಲ್ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಇದು ಕೂಡ ಲೈಂಗಿಕ ಜೀವನದ ಮೇಲೆ ಪರಿಣಾಮ ಉಂಟು ಮಾಡುತ್ತದೆ.

ಇದನ್ನೂ ಓದಿ: Richest Village: ಭಾರತದಲ್ಲಿದೆ ಜಗತ್ತಿನ ಅತ್ಯಂತ ಶ್ರೀಮಂತ ಗ್ರಾಮ; ಯಾವುದು ಆ ಹಳ್ಳಿ ಅಂತೀರಾ? ವಿವರ ಇಲ್ಲಿದೆ ನೋಡಿ

ಆರೋಗ್ಯಕರ ಲೈಂಗಿಕ ಜೀವನ ಹೇಗೆ?

ಲೈಂಗಿಕ ಜೀವನ ಚೆನ್ನಾಗಿ ಇರಬೇಕಾದರೆ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಬೇಕು. ಇದರಲ್ಲಿ ಆರೋಗ್ಯಕರ ಆಹಾರ ಹಾಗೂ ನಿಯಮಿತ ವ್ಯಾಯಾಮ ಕೂಡ ಸೇರಿದೆ. ಒಳ್ಳೆಯ ನಿದ್ರೆ, ಸಂಗಾತಿಯ ಬಗ್ಗೆ ಧನಾತ್ಮಕ ಭಾವನೆ ಕೂಡ ಆರೋಗ್ಯಕರ ಲೈಂಗಿಕ ಜೀವನದಲ್ಲಿ ಬಹುಮುಖ್ಯವಾಗಿದೆ. ಆರೋಗ್ಯ ಸಮಸ್ಯೆಗಳಿದ್ದರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದನ್ನು ನಿರ್ಲಕ್ಷ್ಯ ಮಾಡಬೇಡಿ.