ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Menstrual Cup: ಮುಟ್ಟಿನ ಕಪ್ ಬಳಸೋದು ಎಷ್ಟು ಸೇಫ್‌? ಇದರಿಂದ ಏನಾದ್ರೂ ಸೈಡ್‌ ಎಫೆಕ್ಟ್‌ ಇದ್ಯಾ?

ಹಿಂದೆಲ್ಲ ಪ್ಯಾಡ್ ಇತರ ಆವಿಷ್ಕಾರಗಳು ಆಗದಿದ್ದ ಕಾರಣ ಮಹಿಳೆಯರು ಬಟ್ಟೆಯಲ್ಲೆ ತಮ್ಮ ಮುಟ್ಟಿನ ಅವಧಿಯನ್ನು ನಿರ್ವಹಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಸ್ಯಾನಿಟರಿ ಪ್ಯಾಡ್ಸ್, ಕಪ್, ಅನೇಕ ಉತ್ಪನ್ನಗಳು ಆವಿಷ್ಕಾರವಾಗಿದೆ. ಆದರೆ ಇವುಗಳಲ್ಲಿ ಯಾವ ಕ್ರಮ ಉತ್ತಮ, ಯಾವುದು ಪರಿಸರಕ್ಕೆ ಪೂರಕ ಎಂಬ ಅರಿವು ಮಹಿಳೆಯರಿಗೂ ಇರಬೇಕು. ಹೀಗಾಗಿ ಪರಿಸರಕ್ಕೆ ಪೂರಕವಾಗುವ ಕಡಿಮೆ ವೆಚ್ಚದ ಪಿರಿಯಡ್ ಉತ್ಪನ್ನಗಳಲ್ಲಿ ಕಪ್ ಪ್ರಮುಖ ಪಾತ್ರವಹಿಸಲಿದೆ.

ಮುಟ್ಟಿನ ಕಪ್ ಬಳಸೋದು ಎಷ್ಟು ಸೇಫ್‌? ಇಲ್ಲಿದೆ ಡಿಟೇಲ್ಸ್‌

Profile Pushpa Kumari Aug 15, 2025 8:00 AM

ನವದೆಹಲಿ: ಪ್ರತೀ ತಿಂಗಳು ಸ್ತ್ರೀಯರಿಗೆ ಋತು ಚಕ್ರದ (ಪಿರಿಯಡ್) ಸಂದರ್ಭದಲ್ಲಿ ನೈರ್ಮಲ್ಯಕ್ಕೆ ಅಧಿಕ ಆದ್ಯತೆ ನೀಡಬೇಕಾಗುತ್ತದೆ. ಪಿರಿಯಡ್ ಸಂದರ್ಭದಲ್ಲಿ ಸ್ವಚ್ಛತೆ ಯಿಂದಿರುವುದು ಆರೋಗ್ಯ ಯುತ ಜೀವನ ಶೈಲಿಯ ಕ್ರಮದಲ್ಲಿ ಒಂದು ಎನ್ನಬಹುದು. ಹಿಂದೆಲ್ಲ ಪ್ಯಾಡ್ ಇತರ ಆವಿಷ್ಕಾರ ಗಳು ಆಗದಿದ್ದ ಕಾರಣ ಮಹಿಳೆಯರು ಬಟ್ಟೆಯಲ್ಲೆ ತಮ್ಮ ಮುಟ್ಟಿನ ಅವಧಿಯನ್ನು ನಿರ್ವಹಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಸ್ಯಾನಿಟರಿ ಪ್ಯಾಡ್ಸ್, ಕಪ್, ಅನೇಕ ಉತ್ಪನ್ನಗಳು (Menstrual Products) ಆವಿಷ್ಕಾರವಾಗಿದೆ. ಆದರೆ ಇವುಗಳಲ್ಲಿ ಯಾವ ಕ್ರಮ ಉತ್ತಮ, ಯಾವುದು ಪರಿಸರಕ್ಕೆ ಪೂರಕ ಎಂಬ ಅರಿವು ಮಹಿಳೆಯರಿಗೂ ಇರಬೇಕು. ಹೀಗಾಗಿ ಪರಿಸರಕ್ಕೆ ಪೂರಕವಾಗುವ ಕಡಿಮೆ ವೆಚ್ಚದ ಪಿರಿಯಡ್ ಉತ್ಪನ್ನಗಳಲ್ಲಿ ಕಪ್ ಪ್ರಮುಖ ಪಾತ್ರವಹಿಸಲಿದೆ.

ಸ್ಯಾನಿಟರಿ ಪ್ಯಾಡ್ ಬಳಕೆ ಸುಲಭವಾದರೂ ಅವುಗಳಲ್ಲಿ ಬಳಸಬಹುದಾದ ಕೆಲವು ಅಂಶಗಳು ಪ್ಲಾಸ್ಟಿಕ್ ನಿಂದ ಕೂಡಿರಲಿದೆ. ಹೀಗಾಗಿ ಇವುಗಳು ಮಣ್ಣಿನಲ್ಲಿ ಸುಲಭವಾಗಿ ಕರಗಲಾರದು. ಮಣ್ಣಿನ ಮಾಲಿನ್ಯವು ಕೂಡ ಉಂಟಾಗಲಿದೆ. ಹೀಗಾಗಿ ಸ್ಯಾನಿಟರಿ ಪ್ಯಾಡ್ ಗೆ ಸಮಾನವಾದ ಕಪ್ ಬಳಕೆ ಮಾಡಿದರೆ ದೀರ್ಘಾವಧಿಯ ತನಕ ಇದನ್ನು ಮರುಬಳಕೆ ಮಾಡುತ್ತಿರಬಹುದು. ನಗರ ಪ್ರದೇಶ ಗಳಲ್ಲಿ ಪ್ರತೀ ಹತ್ತು ಮಹಿಳೆಯರಲ್ಲಿ ಮೂರರಿಂದ ನಾಲ್ಕು ಮಹಿಳೆಯರು ಮರುಬಳಕೆ ಮಾಡ ಬಹುದಾದ ಕಪ್ ಉತ್ಪನ್ನಗಳನ್ನು ಬಳಸುತ್ತಿದ್ದಾರೆ ಎಂದು ಅಧ್ಯಯನಗಳು ತಿಳಿಸಿವೆ.

ಹೆಚ್ಚಿನ ಪ್ಯಾಡ್‌ಗಳನ್ನು ಪ್ಲಾಸ್ಟಿಕ್ ವಸ್ತುಗಳಿಂದ ತಯಾರಿಸುವ ಕಾರಣ, ಅಮೆರಿಕದಲ್ಲಿ ಪ್ರತಿ ವರ್ಷ ಸುಮಾರು 12 ಬಿಲಿಯನ್ ಪ್ಯಾಡ್‌ಗಳು ಮತ್ತು 7 ಬಿಲಿಯನ್ ಟ್ಯಾಂಪೂನ್‌ಗಳು ಉತ್ಪತ್ತಿಯಾಗುತ್ತಿದ್ದು ಅಲ್ಲಿಯೂ ಮರುಬಳಕೆಯಾಗುವ ಪಿರಿಯಡ್ ನೈರ್ಮಲ್ಯದ ವಸ್ತುಗಳಿಗೆ ಅಧಿಕ ಆದ್ಯತೆ ನೀಡಲಾಗುತ್ತಿದೆ ಎಂದು ಇತ್ತೀಚಿನ ಅಧ್ಯಯನ ಒಂದು ತಿಳಿಸಿದೆ. ಮುಟ್ಟಿನ ಕಪ್ ಅಥವಾ ಡಿಸ್ಕ್‌ಗಳನ್ನು ಬಳಸುವುದು ಆರಂಭದಲ್ಲಿ ಅದು ಕಿರಿ-ಕಿರಿ ಎನಿಸಿದರೂ ಬಳಕೆಯಿಂದ ಹೆಚ್ಚಿನ ಆರೋಗ್ಯ ಪ್ರಯೋಜನ ಸಿಗಲಿದೆ.

ಇದನ್ನು ಓದಿ:Health Tips: ಹೆಚ್ಚು ಉಪ್ಪಿನ ಸೇವನೆಯಿಂದ ಲೈಂಗಿಕ ಜೀವನಕ್ಕೆ ತೊಂದರೆ

ಕಡಿಮೆ ವೆಚ್ಚ ಅಧಿಕ ಲಾಭ:

ಮುಟ್ಟಿನ ಕಪ್ ಬಳಸುವುದರಿಂದ ಆರೋಗ್ಯಕ್ಕೆ ಒಳಿತಾಗುವ ಜೊತೆಗೆ ಖರ್ಚು ಕೂಡ ಕಡಿಮೆ ಯಾಗಲಿದೆ. ನಮ್ಮ ದೇಶದಲ್ಲಿ ಈ ಸಿಲಿಕಾನ್ ಕಪ್ ಗಳು 600, 800, 1100 ರೂಪಾಯಿ ನಂತೆ ಲಭ್ಯವಿದ್ದು ಒಮ್ಮೆಗೆ ಇದು ದೊಡ್ಡ ಮೊತ್ತ ಎಂದು ಎನಿಸಿದರೂ ದೀರ್ಘಕಾಲದ ತನಕ ಬಳಸ ಬಹುದು. ಬರೋಬ್ಬರಿ 6-8ವರ್ಷದ ವರೆಗೂ ಬಳಸುವ ಕಾರಣಕ್ಕೆ ಇದು ಸ್ಯಾನಿಟರಿ ಪ್ಯಾಡ್ ಬಳಕೆಯ ವೆಚ್ಚಕ್ಕಿಂತ ಕಡಿಮೆ ವೆಚ್ಚವಾಗಲಿದೆ.

ಅನಾನುಕೂಲತೆಯೂ ಇದೆ:

ಮುಟ್ಟಿನ ಕಪ್ ನೀವು ಸರಿಯಾಗಿ ಬಳಸದಿದ್ದರೆ (ಲೀಕೇಜ್) ಸೋರಿಕೆಯಾಗಬಹುದು. ಕಪ್ ಯಾವಾಗ ಋತುಸ್ರಾವದಿಂದ ತುಂಬಿದೆ ಎಂದು ತಿಳಿಯದ ಕಾರಣ ಅದು ಲೀಕೇಜ್ ಆಗುತ್ತದೆ ಎಂಬ ಭಯಕ್ಕೆ ಕೆಲವರು ಕಪ್ ಧರಿಸಿಯು ಪ್ಯಾಡ್ ಹಾಕುವುದು ಇದೆ. ಅಂತೆಯೇ ನೀವು ಪ್ರಯಾಣ ಮಾಡು ವಾಗ ಅಥವಾ ಸಾರ್ವಜನಿಕ ಶೌಚಾಲಯಗಳಲ್ಲಿ ಬಳಕೆ ಮಾಡುವಾಗ ಇದನ್ನು ಸ್ವಚ್ಛ ಗೊಳಿಸಲು ಬೇಕಾದ ಸೋಪು ಮತ್ತು ನೀರು ಇತ್ಯಾದಿ ಸಮಸ್ಯೆಯಾಗುವ ಸಾಧ್ಯತೆ ಕೂಡ ಇದೆ. ಹೀಗಾಗಿ ಅವುಗಳನ್ನು ಹೆಚ್ಚು ಸ್ವಚ್ಛಗೊಳಿಸುವುದು ಕೂಡ ನಿಮಗೆ ಕಷ್ಟವಾಗಬಹುದು. ಇಷ್ಟೆಲ್ಲ ಸಮಸ್ಯೆ ಇದ್ದರೂ ಕೂಡ ಮುಟ್ಟಿನ ಕಪ್ ಅನು ಕೂಲಕರವೇ ಆಗಿದ್ದು ಮರುಬಳಕೆ ಮಾಡ ಬಹುದಾದ ಇಂತಹ ಉತ್ಪನ್ನಗಳು ಇನ್ನಷ್ಟು ಮುಖ್ಯವಾಹಿನಿಗೆ ಬರುವುದು ಕೂಡ ಅತ್ಯ ವಶ್ಯಕವಾಗಿದೆ.