ಹೃದಯದ ಆರೋಗ್ಯಕ್ಕೆ ನಿಮ್ಮ ದಿನನಿತ್ಯದ ಜೀವನ ಶೈಲಿಯಲ್ಲಿ ಈ ಬದಲಾವಣೆ ಮಾಡಿ!
Health Tips:ಸಾಮಾನ್ಯವಾಗಿ ಹೃದಯದ ಆರೋಗ್ಯ ಕಾಪಾಡಲು ಪೌಷ್ಟಿಕ ಆಹಾರ ಮತ್ತು ವ್ಯಾಯಾಮಕ್ಕೆ ಆದ್ಯತೆ ನೀಡುತ್ತೇವೆ. ಆದರೆ ಹೃದಯಕ್ಕೆ ಈ ಅಭ್ಯಾಸಗಳೇ ಸಾಲದು..ಜೀವನ ಶೈಲಿಯಲ್ಲಿ ಈ ಬದಲಾವಣೆ ಮಾಡಿ ಕೊಳ್ಳುವ ಮೂಲಕ ಹೃದಯದ ಆರೋಗ್ಯ ರಕ್ಷಣೆ ಮಾಡಬಹುದು.
ಸಂಗ್ರಹ ಚಿತ್ರ -
ಬೆಂಗಳೂರು,ಎ.11: ಇತ್ತೀಚೆಗೆ ಸಣ್ಣ ವಯಸ್ಸಿನಲ್ಲಿಯೇ ಹೃದಯ ಸಂಬಂಧಿ ಖಾಯಿಲೆಗಳು ಜಾಸ್ತಿಯಾಗಿವೆ. ಹೀಗಾಗಿ ಹೃದಯದ (Heart Health) ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳಷ್ಟು ಮುಖ್ಯ. ಸಾಮಾನ್ಯವಾಗಿ ಹೃದಯದ ಆರೋಗ್ಯ ಕಾಪಾಡಲು ಪೌಷ್ಟಿಕ ಆಹಾರ ಮತ್ತು ವ್ಯಾಯಾಮಕ್ಕೆ ಆದ್ಯತೆ ನೀಡುತ್ತೇವೆ. ಆದರೆ ಹೃದಯಕ್ಕೆ ಈ ಅಭ್ಯಾಸಗಳೇ ಸಾಲದು. ಜೀವನ ಶೈಲಿಯಲ್ಲಿ ಈ ಬದಲಾವಣೆ ಮಾಡಿ ಕೊಳ್ಳುವ ಮೂಲಕ ಹೃದಯದ ಆರೋಗ್ಯ ರಕ್ಷಣೆ ಮಾಡಬಹುದು.
ಒತ್ತಡ ನಿರ್ವಹಣೆ:
ಅತೀಯಾದ ಒತ್ತಡವು ಅಪಧಮನಿಯ ಉರಿಯೂತ ಮತ್ತು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವ ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್‌ನಂತಹ ಹಾರ್ಮೋನುಗಳನ್ನು ಪ್ರಚೋದನೆ ಮಾಡುತ್ತದೆ. ಇವದು ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಕಡಿಮೆ ಮಾಡಲು ಕಾರಣವಾಗಬಹುದು. ಹಾಗಾಗಿ ಒತ್ತಡ ಕಡಿಮೆ ಗೊಳಿಸಿ ಆರಾಮವಾಗಿ ಬದುಕುವ ಜೀವನ ಶೈಲಿಯನ್ನು ರೂಢಿಸಿಕೊಳ್ಳಿ.
ಸರಿಯಾಗಿ ನಿದ್ರೆ ಮಾಡಿ:
ಹೃದಯದ ಆರೋಗ್ಯಕ್ಕೆ ಸರಿಯಾದ ನಿದ್ದೆಯೂ ಅಗತ್ಯವಾಗಿದೆ. ನಿದ್ರೆಯ ಕೊರತೆಯು ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಸಮಸ್ಯೆಗೆ ಕಾರಣವಾಗಬಹುದು. ನಿಮ್ಮ ನಿದ್ರೆಯ ಚಕ್ರವನ್ನು ಸರಿಪಡಿಸಲು ಪ್ರತಿದಿನ ಸರಿಯಾದ ಸಮಯಕ್ಕೆ ಮಲಗಿ.
Health Tips: ದೇಹದಲ್ಲಿ ಉತ್ತಮ ಕೊಬ್ಬು ಹೆಚ್ಚಿಸಬೇಕೆ? ಈ ಟಿಪ್ಸ್ ಫಾಲೋ ಮಾಡಿ
ತಂಬಾಕು ತ್ಯಜಿಸಿ:
ಧೂಮಪಾನವು ಹೃದಯ ಕಾಯಿಲೆಗೆ ಅಪಾಯಕಾರಿಯಾಗಿದೆ. ಧೂಮಪಾನವನ್ನು ತ್ಯಜಿಸುವುದು ನೀವು ಮಾಡಬಹುದಾದ ಪ್ರಮುಖ ಕೆಲಸದಲ್ಲಿ ಒಂದಾಗಿದೆ. ಹಾಗಾಗಿ ಇಂತಹ ಅಭ್ಯಾಸ ಇದ್ದರೆ ತಕ್ಷಣವೇ ತಪ್ಪಿಸಿ.
ಮದ್ಯ ಸೇವನೆಯನ್ನು ಮಿತಿಗೊಳಿಸಿ:
ಅತಿಯಾದ ಮದ್ಯಪಾನವು ಅಧಿಕ ರಕ್ತದೊತ್ತಡ, ಹೃದಯ ವೈಫಲ್ಯ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಆರೋಗ್ಯಕರ ಹೃದಯಕ್ಕಾಗಿ ಮದ್ಯ ಸೇವನೆಯನ್ನು ತಪ್ಪಿಸಿ.
ಆರೋಗ್ಯಕರ ತೂಕ ನಿರ್ವಹಣೆ
ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ತೂಕವನ್ನು ನಿರ್ವಹಿಸುವುದು ಅತ್ಯಗತ್ಯ. ಸಮತೋಲಿತ ಆಹಾರವನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ಇದನ್ನು ಸಾಧಿಸಬಹುದು.
ನಿಯಮಿತ ಆರೋಗ್ಯ ತಪಾಸಣೆ:
ನಿಮ್ಮ ರಕ್ತದೊತ್ತ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಆಗಾಗ್ಗೆ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಿ. ಯಾವುದೇ ರೋಗದ ಭೀತಿ ಕಾಣಿಸಿಕೊಳ್ಳುವ ಮುನ್ನವೇ ತಪಾಸಣೆ ಮಾಡಿಸಿ.