ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಆಹಾರಗಳ ಸೇವನೆ ಮಾಡಿ!

Health Tips: ಮಳೆಗಾಲದಲ್ಲಿ ದೇಹವನ್ನು ಆರೋಗ್ಯವಾಗಿ ಇರಿಸುವುದು ಬಹಳಷ್ಟು ಮುಖ್ಯವಾಗುತ್ತದೆ. ಅದರಲ್ಲೂ ಶೀತ, ಕೆಮ್ಮಿನ ಸೋಂಕು, ಹೊಟ್ಟೆ ನೋವು, ಅಜೀರ್ಣ ಈ ಸಂದರ್ಭದಲ್ಲಿ ಸಾಮಾನ್ಯ ವಾಗಿದೆ. ಹೀಗಾಗಿ ಆರೋಗ್ಯಕರ ಆಹಾರ ಸೇವಿಸಿ‌ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸ ಬೇಕಾಗುತ್ತದೆ. ನಿಮ್ಮ ಶಕ್ತಿಯ ಮಟ್ಟವನ್ನು ಸ್ಥಿರವಾಗಿರಿಸಿಕೊಳ್ಳಲು ಮತ್ತು ಮಳೆಗಾಲದ ಕೆಲವು ಆರೋಗ್ಯ ತೊಂದರೆ ಗಳಿಂದ ದೂರವಿಡಲು ತಜ್ಞರು ನಿಮ್ಮ ದೈನಂದಿನ ಊಟಕ್ಕೆ ಕೆಲವು ಆಹಾರಗಳನ್ನು ಸೇರಿಸಲು ಸಲಹೆ ನೀಡಿದ್ದಾರೆ..

ರೋಗನಿರೋಧಕ ಶಕ್ತಿ ಹೆಚ್ಚಿಸಬೇಕೇ? ಇಲ್ಲಿದೆ ತಜ್ಞರ ಸಲಹೆ!

ಸಂಗ್ರಹ ಚಿತ್ರ -

Profile
Pushpa Kumari Aug 16, 2026 7:00 AM

ನವದೆಹಲಿ,ಆ.15: ಮಳೆಗಾಲದಲ್ಲಿ ದೇಹವನ್ನು ಆರೋಗ್ಯವಾಗಿ ಇರಿಸುವುದು ಬಹಳಷ್ಟು ಮುಖ್ಯವಾಗುತ್ತದೆ. ಅದರಲ್ಲೂ ಶೀತ, ಕೆಮ್ಮಿನ ಸೋಂಕು, ಹೊಟ್ಟೆ ನೋವು, ಅಜೀರ್ಣ ಈ ಸಂದರ್ಭದಲ್ಲಿ ಸಾಮಾನ್ಯವಾಗಿದೆ. ಹೀಗಾಗಿ ಆರೋಗ್ಯಕರ ಆಹಾರ ಸೇವಿಸಿ‌ ರೋಗನಿರೋಧಕ (Boost Impunity) ಶಕ್ತಿಯನ್ನು ಹೆಚ್ಚಿಸ ಬೇಕಾಗುತ್ತದೆ. ಇದರ ಪ್ರಮಾಣ ಕಡಿಮೆಯಾದಾಗ ಜೀರ್ಣಕ್ರಿಯೆ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ಆರೋಗ್ಯ ಸಮಸ್ಯೆ ಉಂಟು ಮಾಡಬಹುದು. ಹೀಗಾಗಿ ನಿಮ್ಮ ಶಕ್ತಿಯ ಮಟ್ಟವನ್ನು ಸ್ಥಿರವಾಗಿರಿಸಿಕೊಳ್ಳಲು ಮತ್ತು ಮಳೆಗಾಲದ ಕೆಲವು ಆರೋಗ್ಯ ತೊಂದರೆ ಗಳಿಂದ ದೂರವಿಡಲು ತಜ್ಞರು ನಿಮ್ಮ ದೈನಂದಿನ ಊಟಕ್ಕೆ ಕೆಲವು ಆಹಾರಗಳನ್ನು ಸೇರಿಸಲು ಸಲಹೆ ನೀಡಿದ್ದಾರೆ.

ಜೋಳ:

ಜೋಳವು ವಿಟಮಿನ್ ಸಿ, ಬಿ ಜೀವಸತ್ವ ಮತ್ತು ಜಿಯಾಕ್ಸಾಂಥಿನ್ ಮತ್ತು ಲುಟೀನ್‌ನಂತಹ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಇದು ಜೀವಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದರ ನಾರಿನ ಅಂಶವು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಹಾಗಾಗಿ ನಿಂಬೆ ರಸೆ ಮತ್ತು ಉಪ್ಪಿನೊಂದಿಗೆ ಹುರಿದು ಇದನ್ನು ಸೇವನೆ ಮಾಡಬಹುದು.

ಬೆಳ್ಳುಳ್ಳಿ:

ಸಾಂಬಾರು ಪದಾರ್ಥಗಳಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಉತ್ಕರ್ಷಣ ನಿರೋಧಕಗಳು ಹೆಚ್ಚಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ‌. ಹಾಗಾಗಿ ತಾಜಾ ಬೆಳ್ಳುಳ್ಳಿಯನ್ನು ಸೂಪ್‌ಗಳು, ಕರಿ ಮತ್ತು ಇತರ ಊಟಗಳಲ್ಲಿ ಸೇರಿಸುವುದರಿಂದ ನಿಮ್ಮ ಆಹಾರದಲ್ಲಿ ಹೆಚ್ಚಿನ ಪೋಷಕಾಂಶ ಪಡೆಯಬಹುದು.

Health Tips: ಜೀರ್ಣಕ್ರಿಯೆ ಹೆಚ್ಚಿಸಲು ಯಾವೆಲ್ಲ ಆಹಾರ ಸೇವಿಸಬೇಕು? ಕಾಂಬಿನೇಷನ್ ಹೇಗಿರಬೇಕು? ಇಲ್ಲಿದೆ ಸಂಪೂರ್ಣ ಗೈಡ್‌

ಆಮ್ಲಾ:

ವಿಟಮಿನ್ ಸಿ ಯ ಅತ್ಯಂತ ಶ್ರೀಮಂತ ನೈಸರ್ಗಿಕ ಮೂಲಗಳಲ್ಲಿ ಒಂದಾಗಿದೆ. ಕಿತ್ತಳೆ ಹಣ್ಣಿನಲ್ಲಿ ಕಂಡುಬರುವ ಪ್ರತಿ ಗ್ರಾಂನಲ್ಲಿ ಕಂಡುಬರುವ ಪೋಷಕಾಂಶಗಳಲ್ಲಿ ಇದು ಹೆಚ್ಚಿನದನ್ನು ಹೊಂದಿರುತ್ತದೆ. ಮಳೆಗಾಲದಲ್ಲಿ, ಸೋಂಕುಗಳ ಅಪಾಯ ಹೆಚ್ಚಾದಾಗ, ವಿಟಮಿನ್ ಸಿ ರೋಗ ನಿರೋಧಕ ಕಾರ್ಯವನ್ನು ಬೆಂಬಲಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಅದೇ ರೀತಿ ಬಿಳಿ ರಕ್ತ ಕಣಗಳನ್ನು ಹೆಚ್ಚು ಮಾಡುತ್ತದೆ...

ಅರಿಶಿನ:

ಅರಿಶಿನವು ಸಕ್ರಿಯ ಸಂಯುಕ್ತವಾದ ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ ಇದು ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ನಿಮ್ಮ ಆಹಾರದಲ್ಲಿ ಅರಿಶಿನವನ್ನು ಸೇರಿಸಿಕೊಳ್ಳುವುದ ಆರೋಗ್ಯ ಕಾಪಾಡಿಕೊಳ್ಳಬಹುದು.

ಶುಂಠಿ:

ಭಾರತೀಯ ಅಡುಗೆಮನೆಗಳಲ್ಲಿ ಹೆಚ್ಚಾಗಿ ಶುಂಠಿಯನ್ನು ಬಳಕೆ ಮಾಡಲಾಗುತ್ತದೆ. ಇದು ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿವಾರಕ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಜಶುಂಠಿ ನೀರನ್ನು ಕುಡಿಯುವುದು ಅಥವಾ ನಿಮ್ಮ ಊಟಕ್ಕೆ ಶುಂಠಿಯನ್ನು ಸೇರಿಸುವುದು ಹೊಟ್ಟೆಯ ಅಸ್ವಸ್ಥತೆಯನ್ನು ಶಮನಗೊಳಿಸಲು ಸಹಕಾರಿ.