Health Tips: ಕರುಳಿನ ಆರೋಗ್ಯ ಸುಧಾರಿಸುವ ನೀವು ಸೇವಿಸಬೇಕಾದ ಆಹಾರಗಳಿವು
Gut Health: ಆಗಾಗ ಹೊಟ್ಟೆಯ ಸಮಸ್ಯೆ, ಹೊಟ್ಟೆ ಉಬ್ಬರ, ಆಲಸ್ಯ, ನಿದ್ರಾ ಹೀನತೆಯಿಂದ ಬಳಲುತ್ತಿದ್ದರೆ ನೀವು ಕರುಳಿನ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ದಿನ ನಿತ್ಯದ ಆಹಾರದಲ್ಲಿ ಪಾಲಿಫೆನಾಲ್ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ನಿಮ್ಮ ಕರುಳಿನ ಬ್ಯಾಕ್ಟೀರಿಯಾವನ್ನು ಪೋಷಿಸುವ ಹಾಗೂ ಕರುಳಿನ ಆರೋಗ್ಯ ವನ್ನು ಸುಧಾರಿಸುವ ಪಾಲಿಫಿನಾಲ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.
ಸಂಗ್ರಹ ಚಿತ್ರ -
ನವದೆಹಲಿ, ಜೂ. 14: ದೇಹವನ್ನು ಆರೋಗ್ಯವಾಗಿರಿಸಲು ಸರಿಯಾದ ಆಹಾರ ಕ್ರಮವನ್ನು ಪಾಲಿಸಬೇಕಾಗುತ್ತದೆ. ಅದರಲ್ಲೂ ಆಗಾಗ ಹೊಟ್ಟೆಯ ಸಮಸ್ಯೆ, ಹೊಟ್ಟೆ ಉಬ್ಬರ, ಆಲಸ್ಯ, ನಿದ್ರಾ ಹೀನತೆಯಿಂದ ಬಳಲುತ್ತಿದ್ದರೆ ನೀವು ಕರುಳಿನ ಆರೋಗ್ಯದ (Gut Health) ಕಡೆ ಹೆಚ್ಚಿನ ಗಮನ ನೀಡಬೇಕು ಎಂದರ್ಥ. ಇದಕ್ಕಾಗಿ ನಿಮ್ಮ ದಿನ ನಿತ್ಯದ ಆಹಾರದಲ್ಲಿ ಪಾಲಿಫೆನಾಲ್ (Polyphenol) ಸಮೃದ್ಧವಾಗಿರುವ ಆಹಾರ ಸೇವಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಕರುಳಿನ ಬ್ಯಾಕ್ಟೀರಿಯಾವನ್ನು ಪೋಷಿಸುವ ಹಾಗೂ ಕರುಳಿನ ಆರೋಗ್ಯವನ್ನು ಸುಧಾರಿಸುವ ಪಾಲಿಫಿನಾಲ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.
ಪಾಲಿಫಿನಾಲ್-ಭರಿತ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಉತ್ಕರ್ಷಣ ನಿರೋಧಕ ಹೆಚ್ಚಾಗುತ್ತದೆ. ಜತೆಗೆ ಕರುಳಿನ ಒಳಪದರವನ್ನು ಸರಿಪಡಿಸುವ ಮೂಲಕ ಉತ್ತಮ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ.
ಕರಿ ಜೀರಿಗೆ
ಕರಿ ಜೀರಿಗೆಯಲ್ಲಿ ಥೈಮೋಕ್ವಿನೋನ್ ಸಮೃದ್ಧವಾಗಿವೆ, ಇದು ಒಂದು ರೀತಿಯ ಪಾಲಿಫಿನಾಲ್ ಆಗಿದ್ದು ಹೊಟ್ಟೆಯ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೀರಿಗೆಯ ಪುಡಿಯನ್ನು ತಯಾರಿಸಿ ಇತರ ಆಹಾರಗಳೊಂದಿಗೆ ಸೇವಿಸಬಹುದು. ಇದು ತುಂಬಾ ಕಹಿ ಎನಿಸಿದರೆ ಅದನ್ನು ನೆನೆಸಿ ಚಹಾದಂತೆ ಕುಡಿಯಬಹುದು.
ಎಲ್ಲಾ ವಯಸ್ಸಿನವರಲ್ಲೂ ಕಿಡ್ನಿ ಆರೋಗ್ಯ: ಜಾಗೃತಿ
ಡಾರ್ಕ್ ಚಾಕೊಲೇಟ್
ಡಾರ್ಕ್ ಚಾಕೊಲೇಟ್ ಫ್ಲೇವನಾಯ್ಡ್‌ಗಳನ್ನು ಹೊಂದಿದ್ದು, ಇದು ನಿಮ್ಮ ಕರುಳಿಗೆ ಪ್ರಿಬಯಾಟಿಕ್ ಫೈಬರ್ ಒದಗಿಸುತ್ತದೆ. ಇದು ನಿಮ್ಮ ಮೆದುಳಿನ ಆರೋಗ್ಯವನ್ನು ಸುಧಾರಿಸುವ ಒಂದು ರೀತಿಯ ಪಾಲಿಫಿನಾಲ್ ಹೊಂದಿದೆ. ಹಾಗಾಗಿ ಕಡಿಮೆ ಸಕ್ಕರೆ ಇರುವ ಡಾರ್ಕ್ ಚಾಕೊಲೆಟ್ ಅನ್ನು ನೀವು ಸೇವಿಸಬಹುದು.
ಬೆಳ್ಳುಳ್ಳಿ
ಬೆಳ್ಳುಳ್ಳಿ ಜೈವಿಕ ಸಕ್ರಿಯ ಸಂಯುಕ್ತಗಳ ಶಕ್ತಿಶಾಲಿ ಮಿಶ್ರಣವಾಗಿದ್ದು, ಹೆಚ್ಚಿನ ಸಾಂದ್ರತೆಯ ಪಾಲಿಫಿನಾಲ್‌ಗಳನ್ನು ಹೊಂದಿದೆ. ಇದು ಕ್ವೆರ್ಸೆಟಿನ್‌ನಲ್ಲಿ ಸಮೃದ್ಧವಾಗಿದ್ದು, ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಸಂಯುಕ್ತವಾಗಿದೆ. ಇದು ಯಾವುದೇ ಹೃದಯ ಸಮಸ್ಯೆ ಅಥವಾ ಅಧಿಕ ರಕ್ತದೊತ್ತಡವನ್ನು ತಡೆಯುತ್ತದೆ.
ತಾಜಾ ಅರಿಶಿನ
ತಾಜಾ ಅರಿಶಿನವು ಕರ್ಕ್ಯುಮಿನ್ ಹೊಂದಿರುತ್ತದೆ. ಇದು ಉರಿಯೂತ ನಿವಾರಕವಾಗಿರಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆ, ತುಪ್ಪ ಅಥವಾ ಆಲಿವ್ಎಣ್ಣೆಯಂತಹ ಆರೋಗ್ಯಕರ ಕೊಬ್ಬಿನ ಜತೆಗೆ ತಾಜಾ ಅರಿಶಿನವನ್ನು ಸೇವಿಸಬಹುದು.
ಬ್ಲೂ ಬೆರ್ರಿಗಳು
ಇದು ಆಹಾರದ ಪಾಲಿಫಿನಾಲ್‌ಗಳ ಅತ್ಯಂತ ಪ್ರಬಲವಾದ ನೈಸರ್ಗಿಕ ಮೂಲಗಳಲ್ಲಿ ಸೇರಿದೆ. ಅಲ್ಲದೆ ಆಂಥೋಸಯಾನಿನ್ ಅನ್ನು ಹೊಂದಿದ್ದು ಉರಿಯೂತವನ್ನು ತಡೆಯುತ್ತದೆ.