Health Tips: ಕೊತ್ತಂಬರಿ ನೀರಿನ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ?
ಕೊತ್ತಂಬರಿ ಬೀಜ ಕೇವಲ ಸಂಬಾರಿಗೆ ಮಾತ್ರವಲ್ಲ, ಇದರ ನೀರನ್ನು ಬಳಸುವ ಮೂಲಕ ಹತ್ತಾರು ಲಾಭಗಳನ್ನು ಪಡೆಯಬಹುದು. ಇದು ದೇಹದಿಂದ ವಿಷವನ್ನು ತೆಗೆದುಹಾಕಲು ಹೊಟ್ಟೆಯ ಗ್ಯಾಸ್, ಎದೆಯುರಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.. ಕೊತ್ತಂಬರಿ ನೀರನ್ನು ಯಾವಾಗ ಮತ್ತು ಹೇಗೆ ಕುಡಿಯಬೇಕು ಹಾಗೂ ಏನೆಲ್ಲಾ ಆರೋಗ್ಯ ಲಾಭವನ್ನು ಪಡೆಯಬಹುದು ಎಂದು ತಜ್ಞರ ಸಲಹೆ ಇಲ್ಲಿದೆ.
ಇಂಟರ್ ನೆಟ್ ಚಿತ್ರ -
ನವದೆಹಲಿ,ಜು.28: ದಿನನಿತ್ಯ ಅಡುಗೆ ಮನೆಯಲ್ಲಿ ಸಿಗುವ ಸಂಬಾರ ಪದಾರ್ಥಗಳು ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತವೆ. ಮುಖ್ಯವಾಗಿ ಕೊತ್ತಂಬರಿ ಬೀಜ (Coriander Water) ಕೇವಲ ಸಂಬಾರಿಗೆ ಮಾತ್ರವಲ್ಲ, ಇದರ ನೀರನ್ನು ಬಳಸುವ ಮೂಲಕ ಹತ್ತಾರು ಲಾಭಗಳನ್ನು ಪಡೆಯಬಹುದು. ಇದು ದೇಹದಿಂದ ವಿಷವನ್ನು ತೆಗೆದುಹಾಕಲು ಹೊಟ್ಟೆಯ ಗ್ಯಾಸ್, ಎದೆಯುರಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.. ಕೊತ್ತಂಬರಿ ನೀರನ್ನು ಯಾವಾಗ ಮತ್ತು ಹೇಗೆ ಕುಡಿಯಬೇಕು ಹಾಗೂ ಏನೆಲ್ಲಾ ಆರೋಗ್ಯ ಲಾಭವನ್ನು ಪಡೆಯಬಹುದು ಎಂದು ತಜ್ಞರ ಸಲಹೆ ಇಲ್ಲಿದೆ...
ಜೀರ್ಣಕಾರಿ ಕ್ರಿಯೆಯನ್ನು ಉತ್ತೇಜಿಸುತ್ತವೆ:
ಕೊತ್ತಂಬರಿ ಬೀಜವನ್ನು ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ಸೇವಿಸಿದಾಗ, ಹೊಟ್ಟೆಯಲ್ಲಿ ಅನಿಲ ಸಂಗ್ರಹವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ದಿನ ನಿತ್ಯದ ಚಯಾಪಚಯ ಕ್ರಿಯೆಯನ್ನು ಸುಧಾರಿಸಬೇಕಾದರೆ ನೀವು ಅದನ್ನು ಕೆಲವು ತಿಂಗಳು ಕಾಲ ನಿರಂತರವಾಗಿ ಬೆಳಗ್ಗಿನ ಸಮಯ ಕುಡಿಯಬಹುದು. ಅಥವಾ ಊಟದ ನಂತರ ಸೇವಿಸುವುದರಿಂದ ಹೊಟ್ಟೆ ಹಗುರಾಗಿ ಮಲಬದ್ಧತೆ ನಿವಾರಣೆಯಾಗುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ:
ಕೊತ್ತಂಬರಿ ಬೀಜದಲ್ಲಿರುವ ಪೋಷಕಾಂಶಗಳು ದೇಹದಲ್ಲಿ ಗ್ಲೂಕೋಸ್ ಚಯಾಪಚಯ ಕ್ರಿಯೆಯನ್ನು ಬೆಂಬಲಿಸಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಹಾರ್ಮೋನುಗಳ ಸಮತೋಲನ ಹಾಗೂ ಸಕ್ಕರೆ ಮಟ್ಟವನ್ನು ತಗ್ಗಿಸಬಹುದು.
Health Tips: ಮಳೆಗಾಲದಲ್ಲಿ ಕೂದಲು ಉದುರುತ್ತಿದೆಯೇ? ಶ್ಯಾಂಪೂ ಮಾತ್ರವಲ್ಲ, ಆಹಾರವೂ ಮುಖ್ಯ
ದೇಹದ ಉಷ್ಣತೆಯನ್ನು ಕಾಪಾಡುತ್ತದೆ:
ಕೊತ್ತಂಬರಿ ನೀರು ಇದು ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿ ಇಡಲು ಸಹಾಯಕ ವಾಗುತ್ತದೆ. ನಿಮ್ಮ ದೇಹವು ಹೆಚ್ಚು ಹೀಟ್ ಆಗಿದ್ದು ಉರಿಯೂತ ಲಕ್ಷಣಗಳನ್ನು ಹೊಂದಿದ್ದರೆ ಕೊತ್ತಂಬರಿ ನೀರಿನ ಸೇವನೆ ಮಾಡಬಹುದು.
ಮೂತ್ರಪಿಂಡಗಳ ಕಾರ್ಯಕ್ಷಮತೆ ಹೆಚ್ಚುತ್ತದೆ:
ಕೊತ್ತಂಬರಿ ನೀರು ಕುಡಿಯುವುದರಿಂದ ಯಕೃತ್ತು ಮತ್ತು ಮೂತ್ರಪಿಂಡಗಳ ಕಾರ್ಯಕ್ಷಮತೆ ಯನ್ನು ಅಭಿವೃದ್ಧಿ ಪಡಿಸುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳು ಹೊರಹೋಗಿ ಆರೋಗ್ಯವನ್ನು ಸುಧಾರಿಸುತ್ತದೆ.
ತೂಕ ನಿಯಂತ್ರಣ:
ತೂಕ ಇಳಿಕೆ ಮಾಡಬೇಕೆಂದು ಇದ್ದವರು ದಿನ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದರ ಸೇವನೆ ಮಾಡಬಹುದು.ಬೆಳಿಗ್ಗಿನ ಸೇವನೆಯು ಕೊಬ್ಬನ್ನು ಕಡಿಮೆ ಮಾಡಲು ಹಾಗೂ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ,ಹಾಗೂ ಅತಿಯಾಗಿ ತಿನ್ನುವುದನ್ನು ಸಹ ತಡೆಯುತ್ತದೆ.
ಕೊತ್ತಂಬರಿ ನೀರನ್ನು ತಯಾರಿಸುವುದು ಹೇಗೆ?
ಕೊತ್ತಂಬರಿ ನೀರನ್ನು ತಯಾರಿಸಲು, ಒಂದು ಟೀ ಚಮಚ ಬೀಜಗಳನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ, ಮಿಶ್ರಣವನ್ನು ಸೋಸಿಕೊಂಡು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬಹುದು.. ಹಲವಾರು ದಿನಗಳವರೆಗೆ ಈ ದಿನಚರಿಯನ್ನು ನಿರಂತರವಾಗಿ ಅನುಸರಿಸುವ ಮೂಲಕ, ನೀವು ಅದರ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಯಾವುದೇ ಮನೆಮದ್ದನ್ನು ಅತಿಯಾಗಿ ಸೇವಿಸಬಾರದು. ಅತಿಯಾದರೆ ಅಲರ್ಜಿ ಅಥವಾ ಹೊಟ್ಟೆಯ ಅಸ್ವಸ್ಥತೆ ಉಂಟಾಗಬಹುದು.