ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

RBI Recruitment: ಬೆಂಗಳೂರು ಸೇರಿ ದೇಶಾದ್ಯಂತ 650 ಅಸಿಸ್ಟಂಟ್‌ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದ ಆರ್‌ಬಿಐ

Job Guide: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಖಾಲಿ ಇರುವ ಬರೋಬ್ಬರಿ 650 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಉದ್ಯೋಗ ಸ್ಥಳ: ಬೆಂಗಳೂರು ಸೇರಿ ಭಾರತಾದ್ಯಂತ. ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಮಾರ್ಚ್‌ 8.

ಆರ್‌ಬಿಐಯಲ್ಲಿ ಖಾಲಿ ಇದೆ 650 ಅಸಿಸ್ಟಂಟ್‌ ಹುದ್ದೆ

ಸಾಂದರ್ಭಿಕ ಚಿತ್ರ. -

Ramesh Ballamoole
Ramesh Ballamoole Feb 21, 2026 3:43 PM

ಬೆಂಗಳೂರು, ಫೆ. 21: ಪದವಿ ಮುಗಿಸಿ ಒಂದೊಳ್ಳೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಸಿಹಿ ಸುದ್ದಿ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (Reserve Bank of India) ಖಾಲಿ ಇರುವ ಬರೋಬ್ಬರಿ 650 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (RBI Recruitment). ಉದ್ಯೋಗ ಸ್ಥಳ: ಭಾರತಾದ್ಯಂತ (Job Guide). ಬೆಂಗಳೂರಿನಲ್ಲಿ ಒಟ್ಟು 24 ಹುದ್ದೆಗಳಿವೆ. ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಮಾರ್ಚ್‌ 8.

ಉದ್ಯೋಗ ವಿವರ

ಅಸಿಸ್ಟಂಟ್‌ ಹುದ್ದೆ ಇದಾಗಿದೆ. ಬೆಂಗಳೂರು-24, ಅಹಮದಾಬಾದ್‌- 20, ಭೋಪಾಲ್‌- 30, ಭುವನೇಶ್ವರ-18, ಚಂಡೀಗಢ-20, ಚೆನ್ನೈ-53, ಗುವಾ,ಹಟಿ-36, ಹೈದರಾಬಾದ್‌-11, ಜೈಪುರ- 10, ಕಾನ್ಪುರ ಮತ್ತು ಲಖನೌ-50, ಕೋಲ್ಕತ್ತಾ-29, ಮುಂಬೈ, ನಾಗ್ಪುರ-232, ದೆಹಲಿ-49, ಪಾಟ್ನಾ-17, ತಿರುವನಂತಪುರಂ-6 ಹುದ್ದೆಗಳಿವೆ.

ವಿದ್ಯಾರ್ಹತೆ

ಆರ್‌ಬಿಐ ಅಸಿಸ್ಟಂಟ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದೇಶದ ಯಾವುದೇ ಮಾನ್ಯತೆ ವಿಶ್ವವಿದ್ಯಾನಿಲಯದಿಂದ ಶೇಕಡಾ 50ರಷ್ಟು ಅಂಕಗಳೊಂದಿಗೆ ಪದವಿ ತೇರ್ಗಡೆಯಾಗಿರಬೇಕು. ಜತೆಗೆ ಸ್ಥಳೀಯ ಭಾಷೆಯ ಮೇಲೆ ಹಿಡಿತವಿರಬೇಕು (ಓದಲು, ಬರೆಯಲು ಮತ್ತು ಮಾತನಾಡಲು ಬರಬೇಕು).

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಠ ವಯಸ್ಸು 28 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10ರಿಂದ 15 ವರ್ಷಗಳವರೆಗೆ ರಿಯಾಯಿತಿ ಇದೆ.

ಎಸ್‌ಎಎಸ್‌ಎಲ್‌ಸಿ ಪಾಸಾಗಿದ್ದರೆ ಸಾಕು ಆಧಾರ್‌ ಸೂಪರ್‌ವೈಸರ್‌ ಹುದ್ದೆಗಳಿಗೆ ಅಪ್ಲೈ ಮಾಡಿ

ಅರ್ಜಿ ಶುಲ್ಕ

ಅರ್ಜಿ ಶುಲ್ಕವಾಗಿ ಸಾಮಾನ್ಯ/ಒಬಿಸಿ/ಇಡಬ್ಲ್ಯುಎಸ್‌ ಅಭ್ಯರ್ಥಿಗಳು 450 ರುಪಾಯಿ ಪ್ಲಸ್‌ ಶೇಕಡಾ 18ರಷ್ಟು ಜಿಎಸ್‌ಟಿ ಮತ್ತು ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ/ಮಾಜಿ ಸೈನಿಕ ಅಭ್ಯರ್ಥಿಗಳು 50 ರುಪಾಯಿ ಪ್ಲಸ್‌ ಶೇಕಡಾ 18ರಷ್ಟು ಜಿಎಸ್‌ಟಿ ಪಾವತಿಸಬೇಕು. ಪಾವತಿ ವಿಧಾನ: ಆನ್‌ಲೈನ್‌.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಪ್ರಿ ರಿಟನ್‌ ಪರೀಕ್ಷೆ, ಮೈನ್ಸ್‌ ರಿಟನ್‌ ಪರೀಕ್ಷೆ, ಭಾಷಾ ಪ್ರಾವೀಣ್ಯ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ನೇಮಕಾತಿ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 29,000 ರುಪಾಯಿ – 78,640 ರುಪಾಯಿ ಮಾಸಿಕ ವೇತನ ದೊರೆಯಲಿದೆ. ಪ್ರಿ ರಿಟನ್‌ ಪರೀಕ್ಷೆ ಏಪ್ರಿಲ್‌ 11 ಮತ್ತು ಮೈನ್‌ ಪರೀಕ್ಷೆ ಜೂನ್‌ 7ರಂದು ನಡೆಯುವ ಸಾಧ್ಯತೆ ಇದೆ.

RBI Recruitment ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ
    (https://ibpsreg.ibps.in/rbipodec25/)
  • ಲಾಗಿನ್‌ ಆಗಿ.
  • ಈಗ ಕಂಡುಬರುವ ಅರ್ಜಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಅಗತ್ಯ ದಾಖಲೆ, ಪೋಟೊ, ಸಹಿ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ. ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

ಹೆಚ್ಚಿನ ವಿವರಗಳಿಗೆ ಆರ್‌ಬಿಐ ಅಧಿಕೃತ ವೆಬ್‌ಸೈಟ್‌ ವಿಳಾಸ: https://rbi.org.in/ಕ್ಕೆ ಭೇಟಿ ನೀಡಿ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.