ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

UPSC result: ಕೇಂದ್ರ ಲೋಕಸೇವಾ ಆಯೋಗ ಅಂತಿಮ ಫಲಿತಾಂಶ ಪ್ರಕಟ; ಶಕ್ತಿ ದುಬೆಗೆ ಫಸ್ಟ್‌ ರ‍್ಯಾಂಕ್‌

UPSC civil services final result: ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಯ ಅಂತಿಮ ಫಲಿತಾಂಶ ಹೊರಬಿದ್ದಿದ್ದು, ಶಕ್ತಿ ದುಬೆ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ಸಂದರ್ಶನಗಳಿಗೆ ಹಾಜರಾದ ಅಭ್ಯರ್ಥಿಗಳು ಈಗ ತಮ್ಮ ಫಲಿತಾಂಶವನ್ನು ಅಧಿಕೃತ UPSC ವೆಬ್‌ಸೈಟ್‌ upsc.gov.in ನಲ್ಲಿ ಪರಿಶೀಲಿಸಬಹುದು.

UPSC ಪರೀಕ್ಷಾ ಫಲಿತಾಂಶ ಪ್ರಕಟ- ಇಲ್ಲಿದೆ ಡಿಟೇಲ್ಸ್‌

Profile Rakshita Karkera Apr 22, 2025 3:15 PM

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆ ಅಂತಿಮ ಫಲಿತಾಂಶ(UPSC result) ಪ್ರಕಟಗೊಂಡಿದೆ. ಬರೋಬ್ಬರಿ 1009 ಅಭ್ಯರ್ಥಿಗಳು IAS, IPS, IFS ಮತ್ತು ಕೇಂದ್ರ ಸೇವೆಗಳ ಗುಂಪು A ಮತ್ತು B ನಂತಹ ಸೇವೆಗಳಲ್ಲಿ ನೇಮಕಾತಿಗಾಗಿ UPSC ಶಿಫಾರಸು ಮಾಡಿದೆ. ಸಂದರ್ಶನಗಳಿಗೆ ಹಾಜರಾದ ಅಭ್ಯರ್ಥಿಗಳು ಈಗ ತಮ್ಮ ಫಲಿತಾಂಶವನ್ನು UPSCನ ಅಧಿಕೃತ ವೆಬ್‌ಸೈಟ್‌ upsc.gov.in ನಲ್ಲಿ ಪರಿಶೀಲಿಸಬಹುದು. ಕಳೆದ ವರ್ಷ ಸೆಪ್ಟೆಂಬರ್ ಲಿಖಿತ ಪರೀಕ್ಷೆ, ಜನವರಿ ಮತ್ತು ಏಪ್ರಿಲ್ 2025 ರ ನಡುವೆ ಸಂದರ್ಶನಗಳು ನಡೆದಿದ್ದವು.

UPSC ಟಾಪರ್‌ಗಳು ಯಾರು?

ಶಕ್ತಿ ದುಬೆ UPSC CSE 2025 ರಲ್ಲಿ 1 ನೇ ಶ್ರೇಯಾಂಕವನ್ನು ಪಡೆದುಕೊಂಡಿದ್ದಾರೆ, ವರ್ಷದ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಹರ್ಷಿತಾ ಗೋಯಲ್ 2 ನೇ ಸ್ಥಾನ ಪಡೆದರೆ, ಡೋಂಗ್ರೆ ಅರ್ಚಿತ್ ಪರಾಗ್ 3 ನೇ ಸ್ಥಾನ ಪಡೆದರು.



ವರ್ಗವಾರು ಯುಪಿಎಸ್‌ಸಿ ಆಯ್ಕೆ

ಶಿಫಾರಸು ಮಾಡಲಾದ 1009 ಅಭ್ಯರ್ಥಿಗಳಲ್ಲಿ 335 ಸಾಮಾನ್ಯ ವರ್ಗ, 109 ಇಡಬ್ಲ್ಯೂಎಸ್, 318 ಓಬಿಸಿ, 160 ಎಸ್‌ಸಿ,87 ಎಸ್‌ಟಿ, 45 ವಿಕಲಚೇತನ, 230 ಇತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಯುಪಿಎಸ್‌ಸಿ ಸಿಎಸ್‌ಇ ಫಲಿತಾಂಶ 2025 ಅನ್ನು ಹೇಗೆ ಪರಿಶೀಲಿಸುವುದು?

  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: upsc.gov.in
  • 'ಅಂತಿಮ ಫಲಿತಾಂಶ - ನಾಗರಿಕ ಸೇವೆಗಳ ಪರೀಕ್ಷೆ, 2024' ಮೇಲೆ ಕ್ಲಿಕ್ ಮಾಡಿ
  • ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಹೊಂದಿರುವ ಪಿಡಿಎಫ್ ಅನ್ನು ಡೌನ್‌ಲೋಡ್ ಮಾಡಿ
  • ಪಟ್ಟಿಯಲ್ಲಿ ನಿಮ್ಮ ರಿಜಿಸ್ಟರ್‌ ಸಂಖ್ಯೆಯನ್ನು ಹುಡುಕಿ
  • ಫಲಿತಾಂಶವನ್ನು ಸೇವ್‌ ಮಾಡಿ ಮುದ್ರಿಸಿ