ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Drowned: ತಂದೆಯ ಎದುರೇ ಕೊಳದಲ್ಲಿ ಮುಳುಗಿ ಇಬ್ಬರು ಮಕ್ಕಳು ಜಲಸಮಾಧಿ

ಮೃತ ಬಾಲಕರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಜಾಲಿಕಟ್ಟಿ ಗ್ರಾಮದ ನಿವಾಸಿಗಳಾಗಿದ್ದು, ಸಂಕ್ರಾಂತಿ ಹಿನ್ನೆಲೆ ಕ್ವಾರಿಗೆ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಇಬ್ಬರು ಬಾಲಕರು ತಂದೆ ಎದುರಲ್ಲೇ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಪ್ರಥಮ ಪಿಯುಸಿ ಓದುತ್ತಿದ್ದರು ಎಂದು ತಿಳಿದು ಬಂದಿದೆ. ನೀರಲ್ಲಿ ಮುಳುಗುತ್ತಿದ್ದ ಮತ್ತೊಬ್ಬ ಬಾಲಕನನ್ನು ಸ್ಥಳೀಯರು ರಕ್ಷಿಸಿದ್ದಾರೆ.

ತಂದೆಯ ಎದುರೇ ಕೊಳದಲ್ಲಿ ಮುಳುಗಿ ಇಬ್ಬರು ಮಕ್ಕಳು ಜಲಸಮಾಧಿ

ಮೃತ ಮನೋಜ್, ಪ್ರಮೋದ್ ಬಡಿಗೇರ -

ಹರೀಶ್‌ ಕೇರ
ಹರೀಶ್‌ ಕೇರ Jan 16, 2026 9:06 AM

ಬಾಗಲಕೋಟೆ, ಜ.16: ಮಕರ ಸಂಕ್ರಾಂತಿ (Makara sankranti) ಹಬ್ಬದ ಹಿನ್ನೆಲೆಯಲ್ಲಿ ಸ್ನಾನಕ್ಕೆ ಹೋಗಿದ್ದ ಇಬ್ಬರು ಬಾಲಕರು ಕೊಳದ ನೀರಿನಲ್ಲಿ ಮುಳುಗಿ (Drowned) ಸಾವನ್ನಪ್ಪಿದ ಘಟನೆ ಬಾಗಲಕೋಟೆ (Bagalakote) ಜಿಲ್ಲೆಯ ಮುಧೋಳ (Mudhol) ತಾಲೂಕಿನ ಜಾಲಿಕಟ್ಟಿ ಗ್ರಾಮದ ಕಲ್ಲಿನ ಕ್ವಾರಿಯಲ್ಲಿ ನಡೆದಿದೆ. ಮನೋಜ್ (17) ಪ್ರಮೋದ್ ಬಡಿಗೇರ (17) ಮೃತ ಬಾಲಕರು.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಜಾಲಿಕಟ್ಟಿ ಗ್ರಾಮದ ನಿವಾಸಿಗಳಾಗಿದ್ದು, ಸಂಕ್ರಾಂತಿ ಹಿನ್ನೆಲೆ ಕ್ವಾರಿಗೆ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಇಬ್ಬರು ಬಾಲಕರು ತಂದೆ ಎದುರಲ್ಲೇ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಪ್ರಥಮ ಪಿಯುಸಿ ಓದುತ್ತಿದ್ದರು ಎಂದು ತಿಳಿದು ಬಂದಿದೆ.

ನೀರಲ್ಲಿ ಮುಳುಗುತ್ತಿದ್ದ ಮತ್ತೊಬ್ಬ ಬಾಲಕನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಇಬ್ಬರು ಬಾಲಕರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Raichur News: ಕಾಲುವೆಯಲ್ಲಿ ಮುಳುಗಿ ಇಬ್ಬರು ರೈತ ಮಹಿಳೆಯರು ಸಾವು

ಬೀದಿನಾಯಿ ಕಚ್ಚಿ ಗಾಯಗೊಂಡಿದ್ದ ಬಾಲಕಿ ಸಾವು

ಬೀದಿನಾಯಿ (Stray Dog) ಕಚ್ಚಿ ಗಂಭೀರ ಗಾಯಗೊಂಡಿದ್ದ 10 ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಅಲೈನಾ ಲೋಕಾಪುರ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಹುಡುಗಿ. ಡಿಸೆಂಬರ್ 27 ರಂದು ಬಾಗಲಕೋಟೆಯ (Bagalkote) ನವನಗರದ ಸೆಕ್ಟರ್ ನಂ 15 ರಲ್ಲಿ ಬಾಲಕಿಯ ಮೇಲೆ ಬೀದಿ ನಾಯಿ ದಾಳಿ ಮಾಡಿತ್ತು. ಬಾಲಕಿಯ ಕಣ್ಣು, ಮೂಗು ಮುಖದ ಮೇಲೆ ಗಂಭೀರ ಗಾಯವಾಗಿದ್ದರಿಂದ ಅಂದೇ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

Iran Protests: ಇರಾನ್ ಪ್ರತಿಭಟನೆಗಳಲ್ಲಿ 3,428ಕ್ಕೂ ಹೆಚ್ಚು ಮಂದಿ ಸಾವು, ದೇಶ ತೊರೆಯಲು ಭಾರತೀಯರಿಗೆ ಎಚ್ಚರಿಕೆ

ಆರೋಗ್ಯ ಮತ್ತಷ್ಟು ಹದೆಗೆಟ್ಟಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಲೈನಾ ಮೃತಪಟ್ಟಿದ್ದಾಳೆ. ಬಾಗಲಕೋಟೆಯಲ್ಲಿ ಬೀದಿನಾಯಿ ಹಾವಳಿ ಹೆಚ್ಚಾಗಿದೆ. ಬೀದಿನಾಯಿ ಹಾವಳಿ ತಡೆಗಟ್ಟುವಲ್ಲಿ ಬಾಗಲಕೋಟೆ ನಗರಸಭೆ ಹಾಗೂ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ವಿಫಲವಾಗಿದೆ ಎಂದು ಜನತೆ ಸಿಟ್ಟು ಹೊರಹಾಕಿದ್ದಾರೆ.