ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನೈಜ ಸಂಕಷ್ಟಕ್ಕೆ ಪೂರಕವಾಗುವುದೇ ಬಜೆಟ್?

ನೇಕಾರಿಕೆ ಉದ್ದಿಮೆಯ ಅಭಿವೃದ್ಧಿಗೆ ದಶಕದ ಹಿಂದೆಯೇ ಮುಖ್ಯ ವಾದ ಕೋನ್ ಡೈಯಿಂಗ್ ಇನ್ನೂ ನಿರ್ಮಾಣವಾಗಿಲ್ಲ. ಇದರಿಂದ ಸೀರೆಗಳ ಉತ್ಪಾದನೆ ಯಲ್ಲಿ ವಿವಿಧ ಬಣ್ಣ-ಬಣ್ಣದ ರೀತಿಯಲ್ಲಿ ವೈಭವದ ಸೀರೆಗಳನ್ನು ತಯಾರಿಸುವ ಮೂಲಕ ಜವಳಿ ಕ್ಷೇತ್ರಕ್ಕೆ ಹೊಸ ಸ್ಪರ್ಶ ದೊರಕುವಲ್ಲಿ ಕಾರಣವಾಗಲಿದೆ.

ನೈಜ ಸಂಕಷ್ಟಕ್ಕೆ ಪೂರಕವಾಗುವುದೇ ಬಜೆಟ್?

-

Ashok Nayak
Ashok Nayak Mar 6, 2026 11:01 AM

ಚಂದ್ರಶೇಖರ ತುಂಗಳ

ಜವಳಿ ಪಾರ್ಕ್‌ ನಿಶ್ಚಿತ

ರಬಕವಿ- ಬನಹಟ್ಟಿ ನೇಕಾರರು ಎದುರಿಸುತ್ತಿರುವ ಸಂಕಷ್ಟ

ರಬಕವಿ-ಬನಹಟ್ಟಿ: ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜವಳಿ ಪಾರ್ಕ್ ಘೋಷಣೆ ಯು ರಬಕವಿ-ಬನಹಟ್ಟಿ ಜನತೆ ನೈಜ ಸಂಕಷ್ಟ ಎದುರಿಸುತ್ತಿರುವ ನೇಕಾರರಿಗೆ ಶುಕ್ರವಾರ ನಡೆಯುವ ಬಜೆಟ್ ಪೂರಕವಾಗುವುದೇ ಎಂಬ ನಿರೀಕ್ಷೆಯಲ್ಲಿ ಲಕ್ಷಾಂತರ ನೇಕಾರರು ಎದುರು ನೋಡುವಲ್ಲಿ ಕಾರಣವಾಗಿದೆ.

ಕೋನ್ ಡೈಯಿಂಗ್: ನೇಕಾರಿಕೆ ಉದ್ದಿಮೆಯ ಅಭಿವೃದ್ಧಿಗೆ ದಶಕದ ಹಿಂದೆಯೇ ಮುಖ್ಯ ವಾದ ಕೋನ್ ಡೈಯಿಂಗ್ ಇನ್ನೂ ನಿರ್ಮಾಣವಾಗಿಲ್ಲ. ಇದರಿಂದ ಸೀರೆಗಳ ಉತ್ಪಾದನೆ ಯಲ್ಲಿ ವಿವಿಧ ಬಣ್ಣ-ಬಣ್ಣದ ರೀತಿಯಲ್ಲಿ ವೈಭವದ ಸೀರೆಗಳನ್ನು ತಯಾರಿಸುವ ಮೂಲಕ ಜವಳಿ ಕ್ಷೇತ್ರಕ್ಕೆ ಹೊಸ ಸ್ಪರ್ಶ ದೊರಕುವಲ್ಲಿ ಕಾರಣವಾಗಲಿದೆ.

ಮಾರುಕಟ್ಟೆಯಿಲ್ಲ: ಇಲ್ಲಿನ ಸೀರೆಗಳು ದೇಶವಷ್ಟೇ ಅಲ್ಲ ಇದೀಗ ವಿದೇಶಕ್ಕೂ ತೆರಳುತ್ತಿವೆ. ಆದರೆ ಸೀರೆಗಳ ರಫ್ತಿಗೆ ಪ್ರಮುಖವಾದ ಮಾರುಕಟ್ಟೆ ಸಮಸ್ಯೆ ಕಾರಣ ಸರಕಾರದಿಂದ ಜವಳಿ ಮಾರುಕಟ್ಟೆ ಅನಿವಾರ್ಯವಾಗಿದೆ.

ಸಬ್ಸಿಡಿಯಾಗಲಿ: ಕೈಮಗ್ಗ ನೇಕಾರರಿಗೆ ಎನ್ಸಿಡಿಸಿಯಿಂದ ಕಚ್ಚಾ ನೂಲು ಖರೀದಿಗೆ ದೊರಕುವ ಶೇ.10ರಷ್ಟು ರಿಯಾಯಿತಿಯನ್ನು ಪಾವರ್ಲೂಮ್ ನೇಕಾರರಿಗೂ ಒದಗಿಸ ಬೇಕು. ಇದರಿಂದ ನೇಕಾರಿಕೆ ಕೊಂಚ ಸಬಲ ಹೊಂದಲು ಕಾರಣವಾಗಲಿದೆ.

ಇದನ್ನೂ ಓದಿ: Karnataka Budget 2026: ಸಿಹಿ ಸುದ್ದಿ, 56,432 ಸರಕಾರಿ ಹುದ್ದೆಗಳ ಭರ್ತಿಗೆ ಕ್ರಮ: ಸಿಎಂ ಸಿದ್ದರಾಮಯ್ಯ

ಸಾಲ ವಿಸ್ತರಣೆಯಿಲ್ಲ: ಬಿಡಿಸಿಸಿ ಬ್ಯಾಂಕ್‌ನಿಂದ ಸರಕಾರದ ಆದೇಶದಂತೆ 3 ಲಕ್ಷದವರೆಗೆ ಶೇ.1ರ ಬಡ್ಡಿ ದರದಲ್ಲಿ ಹಾಗು 5 ಲಕ್ಷದವರೆಗಿನ ಶೇ.3 ಬಡ್ಡಿ ದರದ ಆಕರಣೆ ಸಾಲವನ್ನು 25 ಲಕ್ಷ ರು.ಗಳವರೆಗೆ ವಿಸ್ತರಿಸಿದ್ದಲ್ಲಿ, ನೇಕಾರಿಕೆ ಉತ್ತೇಜನ ವಸ್ತು ಖರೀದಿಸಲು ಸಾಧ್ಯವಾಗು ವದು.

ಸಂಪೂರ್ಣ ಸಾಲ ಮನ್ನಾ ನಿರೀಕ್ಷೆಯಲ್ಲಿ: ಅಲ್ಪ ಪ್ರಮಾಣದಲ್ಲಿರುವ ನೇಕಾರರ ಸಾಲ ವನ್ನು ಸಂಪೂರ್ಣ ಮನ್ನಾ ಮಾಡಬೇ ಕೆಂಬ ಕೂಗು ನೇಕಾರರದ್ದಾಗಿದೆ. ಅತ್ಯಂತ ದಯನೀಯ ಸ್ಥಿತಿಯಲ್ಲಿರುವ ೇಕಾರ ವರ್ಗಕ್ಕೆ ಸಾಲಮನ್ನಾ ಅನಿವಾರ್ಯವಾಗಿದೆ.

ಸಹಾಯ ಬಡ್ಡಿಯಿಲ್ಲ: 2017-18 ರಲ್ಲಿ ಇದೇ ಘಟನೆ ಮರುಕಳಿಸಿದ ಸಂದರ್ಭ ಸರಕಾರದ ಜನಪ್ರತಿನಿಧಿಗಳ ಮಧ್ಯಸ್ಥಿಕೆಯಿಂದ ಸರಳೀಕರಣಗೊಳಿಸಿ ಸಹಾಯ ಬಡ್ಡಿ ಬಿಡುಗಡೆ ಮಾಡಿತ್ತು. ಇದೇ ಪ್ರಸಂಗ ಮತ್ತೇ ಬಂದಿದ್ದು, ಕಳೆದ 2018-19ರಿಂದ 2022-23 ವರೆಗೆ 5 ವರ್ಷಗಳಿಂದ 250 ಕೋಟಿ ರು.ಗಳಷ್ಟು ಸಹಾಯ ಬಡ್ಡಿ ದೊರಕದ ಕಾರಣ ನೇಕಾರರು ಸಂಪೂರ್ಣ ಬಡ್ಡಿಯನ್ನು ಸಾಲ ಪಡೆದಿರುವ ಸಹಕಾರಿ ಸಂಘ ಹಾಗು ಬ್ಯಾಂಕ್‌ಗಳಿಗೆ ಭರಣಾ ಮಾಡಿದ್ದಾರೆ. ಇಲ್ಲಿಯವರೆಗೂ ಬಾರದ ಕಾರಣ ಹೆಚ್ಚಿನ ಬಡ್ಡಿ ತುಂಬಿರುವ ನೇಕಾರರಿಗೆ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗುವಲ್ಲಿ ಕಾರಣವಾಗಿದೆ.

ಜವಳಿ ಕ್ರಾಂತಿಗೆ ಅನುಕೂಲವಾಗುವಂತೆ ಕಮಿಟಿ ಸದಸ್ಯರನ್ನು ಅನುಭವಿಗಳಿಂದ ನೇಮಕ ಮಾಡುವ ಮೂಲಕ ಕಟ್ಟಕಡೆಯ ನೇಕಾರನ ಅಭಿಪ್ರಾಯಗಳನ್ನು ಸ್ವೀಕರಿಸಿ ಯೋಜನೆ ಗಳನ್ನು ರೂಪಿಸುವಲ್ಲಿ ಕಾರಣವಾಗಬೇಕಿದೆ.



ಕೆಎಚ್‌ಡಿಸಿ ಪುನಶ್ಚೇತನ

ಹುಬ್ಬಳ್ಳಿ ನಂತರದ ಪ್ರಧಾನ ಕಚೇರಿ ಹೊಂದಿರುವ ಕೈಮಗ್ಗ ಅಭಿವೃದ್ಧಿ ನಿಗಮದಡಿ ನೇಯ್ಗೆ ಮಾಡುತ್ತಿರುವ ನೇಕಾರರಿಗೆ ಶಾಶ್ವತ ಉದ್ಯೋಗ ದೊರಕಿಸುವ ಕಾರ್ಯ ಸರಕಾರದ ಹೆಗಲ ಮೇಲಿದೆ. ಕಳೆದೆರಡು ದಶಕಗಳಿಂದ ಇಳಿವಯಸ್ಸಿನಲ್ಲಿರುವ ಕೈಮಗ್ಗ ನೇಕಾರರ ಜೀವನಮಟ್ಟ ಸುಧಾರಣೆಗೆ ಹೊಸ ಯೋಜನೆಗಳನ್ನು ಒದಗಿಸುವ ಮೂಲಕ ಮುಖ್ಯ ವಾಹಿನಿಗೆ ಕರೆತರುವ ಜವಾಬ್ದಾರಿಯಾಗಿದೆ.

ಸಾಮಗ್ರಿ ಖರೀದಿಗೆ ಸಬ್ಸಿಡಿ

ಹೊಸ ಹೊಸ ತಂತ್ರಜ್ಞಾನದಲ್ಲಿರುವ ಜವಳಿ ಇಲಾಖೆಯಲ್ಲಿ ಉಚಿತವಾಗಿ ನೇಕಾರರಿಗೆ ತರಬೇತಿ ಒದಗಿಸುವ ಅವಶ್ಯಕತೆಯಿದೆ. ಸಾಮಗ್ರಿ ಖರೀದಿಯಲ್ಲಿ ಸಬ್ಸಿಡಿಯನ್ನಾಗಿಸಿದ್ದಲ್ಲಿ ಜವಳಿ ಉನ್ನತೀಕರಣಕ್ಕೆ ಹೊಸ ಆಯಾಮ ಸೃಷ್ಟಿಯಾಗುವದು. ಜನಪ್ರತಿನಿಧಿಗಳು ಇವೆಲ್ಲವನ್ನೂ ಜಾರಿಗೆ ತಂದರೂ ಅಧಿಕಾರಿಗಳು ಮಾತ್ರ ತಾರತಮ್ಯ ವೆಸಗುತ್ತ ಷರತ್ತು ಗಳನ್ನು ಅನ್ವಯಿಸುವದಲ್ಲದೆ ನೇಕಾರರು ಅಭಿವೃದ್ಧಿ ಹೊಂದದಿರುವಂತೆ ಯೋಜನೆ ರೂಪಿಸುವಲ್ಲಿ ಕಾರಣವಾಗಿದೆ.