ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟಿ20 ಕ್ರಿಕೆಟ್‌ನಲ್ಲಿ 650 ವಿಕೆಟ್‌ಗಳನ್ನು ಕಿತ್ತು ವಿಶ್ವ ದಾಖಲೆ ಬರೆದ ರಶೀದ್‌ ಖಾನ್‌!

ಅಫಘಾನಿಸ್ತಾನ ತಂಡದ ಹಿರಿಯ ಸ್ಪಿನ್ನರ್‌ ರಶೀದ್‌ ಖಾನ್‌ ಅವರು ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ರಶೀದ್‌ ಖಾನ್‌ ಅವರು 650 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ಮೊದಲ ಬೌಲರ್‌ ಎಂಬ ದಾಖಲೆಯನ್ನು ರಶೀದ್‌ ಖಾನ್‌ ಬರೆದಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ 650 ವಿಕೆಟ್‌ಗಳನ್ನು ಕಿತ್ತ ರಶೀದ್‌ ಖಾನ್‌!

650 ಟಿ20 ವಿಕೆಟ್‌ಗಳನ್ನು ಕಬಳಿಸಿದ ರಶೀದ್‌ ಖಾನ್‌.

Profile Ramesh Kote Aug 6, 2025 9:38 PM

ನವದೆಹಲಿ: ಅಫಘಾನಿಸ್ತಾನ (Afghanistan) ತಂಡದ ಹಿರಿಯ ಸ್ಪಿನ್ನರ್‌ ರಶೀದ್‌ ಖಾನ್‌ (Rashid Khan) ಅವರು ಟಿ20 ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಅವರು ಟಿ20 ಕ್ರಿಕೆಟ್‌ನಲ್ಲಿ 650 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಈ ದಾಖಲೆ ಬರೆದ ಮೊದಲ ಬೌಲರ್‌ ಎಂಬ ಸಾಧನೆಗೆ ರಶೀದ್‌ ಖಾನ್‌ ಭಾಜನರಾಗಿದ್ದಾರೆ. ಆಗಸ್ಟ್‌ 5 ರಂದು ಲಂಡನ್‌ನ ಲಾರ್ಡ್ಸ್‌ ಅಂಗಣದಲ್ಲಿ ನಡೆದಿದ್ದ ದಿ ಹಂಡ್ರೆಡ್‌ (The Hundred) ಪಂದ್ಯದಲ್ಲಿ ರಶೀದ್‌ ಖಾನ್‌ ಈ ಐತಿಹಾಸಿಕ ದಾಖಲೆ ಬರೆದಿದ್ದಾರೆ.

ರಶೀದ್‌ ಖಾನ್‌ ಅವರ ಸ್ಪಿನ್‌ ಮೋಡಿಯ ಓವಲ್ ಇನ್ವಿನ್ಸಿಬಲ್ಸ್ ಪರ ಮೂರು ವಿಕೆಟ್ ಕಬಳಿಸಿದ ಸ್ಪಿನ್ನರ್ ಲಂಡನ್ ಸ್ಪಿರಿಟ್ ತಂಡವನ್ನು 94 ಎಸೆತಗಳಲ್ಲಿ 80 ರನ್‌ಗೆ ಕಟ್ಟಿ ಹಾಕಿದರು. ಅವರು ವೇಯ್ನ್‌ ಮ್ಯಾಡ್ಸನ್‌, ಲಿಯಾಮ್‌ ಡಾಸನ್‌ ಹಾಗೂ ರಯಾನ್‌ ಹಿಗಿನ್ಸ್‌ ಅವರನ್ನು ಔಟ್‌ ಮಾಡಿದ್ದರು. ಅವರು 20 ಎಸೆತಗಳಲ್ಲಿ 11 ರನ್‌ ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ತಮ್ಮ ಈ ಸ್ಪೆಲ್‌ನಲ್ಲಿ 650 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

IND vs ENG: ಟೀಕೆಗಳಿಗೆ ಗುರಿಯಾಗಿರುವ ಜಸ್‌ಪ್ರೀತ್‌ ಬುಮ್ರಾಗೆ ಸಚಿನ್‌ ತೆಂಡೂಲ್ಕರ್‌ ವಿಶೇಷ ಸಂದೇಶ!

ಅಫಘಾನಿಸ್ತಾನ ಸ್ಪಿನ್ನರ್‌ ತಮ್ಮ ಟಿ20 ವೃತ್ತಿ ಜೀವನದಲ್ಲಿ 478 ಇನಿಂಗ್ಸ್‌ಗಳಿಂದ 18.54ರ ಸರಾಸರಿಯಲ್ಲಿ 651 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಅವರು ನಾಲ್ಕು ಬಾರಿ ಐದು ವಿಕೆಟ್‌ ಸಾಧನೆ ಮಾಡಿದ್ದಾರೆ. ರಶೀದ್‌ ಖಾನ್‌ ಅವರ ಸ್ಪಿನ್‌ ಬೌಲಿಂಗ್‌ ನೆರವಿನಿಂದ ಓವಲ್ ಇನ್ವಿನ್ಸಿಬಲ್ಸ್ ತಂಡ 6 ವಿಕೆಟ್‌ಗಳ ಗೆಲುವು ಪಡೆಯಿತು. ಓವಲ್ ಇನ್ವಿನ್ಸಿಬಲ್ಸ್ ಪರ ವಿಲ್‌ ಜ್ಯಾಕ್ಸ್‌ 24 ರನ್‌, ತವಂಡಾ ಮುಯೆಯಿ 18 ನ್‌ ಹಾಗೂ ಸ್ಯಾಮ್‌ ಕರನ್‌ 14 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಓವಲ್ ಇನ್ವಿನ್ಸಿಬಲ್ಸ್ ತಂಡ ಕೇವಲ 69 ಎಸೆತಗಳಲ್ಲಿ ಚೇಸ್‌ ಮಾಡಿ ಪಂದ್ಯವನ್ನು ಗೆದ್ದುಕೊಂಡಿತು.

IND vs ENG: ಶುಭಮನ್‌ ಗಿಲ್‌ ಇನ್ನೂ ಕಲಿಯಬೇಕೆಂದಿದ್ದ ಕಪಿಲ್‌ ದೇವ್‌ಗೆ ಯೋಗರಾಜ್‌ ಸಿಂಗ್‌ ತಿರುಗೇಟು!

ರಶೀದ್‌ ಖಾನ್‌ಗೆ ಹೀರೋ ಆಫ್‌ ಮ್ಯಾಚ್‌

ಮೂರು ವಿಕೆಟ್‌ಗಳನ್ನು ಕಬಳಿಸಿದ ರಶೀದ್‌ ಖಾನ್‌ ಈ ಪಂದ್ಯದಲ್ಲಿ ಹೀರೋ ಆಫ್‌ ದಿ ಮ್ಯಾಚ್‌ ಪಡೆದರು. ಇದಕ್ಕೂ ಮುನ್ನ ಸ್ಪೀನ್‌ ಘರ್‌ ಟೈಗರ್ಸ್‌ ಪರ 19 ರನ್‌ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಟೂರ್ನಿಯಲ್ಲಿ ಅವರು ಐದು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಕಳೆದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡಿದ್ದ 15 ಪಂದ್ಯಗಳಿಂದ ಕೇವಲ 9 ವಿಕೆಟ್‌ಗಳನ್ನು ಕಬಳಿಸಿದ್ದರು. 25 ರನ್‌ಗಳಿಗೆ 2 ವಿಕೆಟ್‌ ಕಿತ್ತಿದ್ದು ಇವರ ಅತ್ಯುತ್ತಮ ಸ್ಪೆಲ್‌ ಆಗಿದೆ. ಆದರೆ, ದಿ ಹಂಡ್ರೆಡ್‌ ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.