Police Firing: ಆನೇಕಲ್‌ನಲ್ಲಿ ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರ ಫೈರಿಂಗ್
Bengaluru Crime News: ಕಿಡ್ನಾಪ್ ಮತ್ತು ಇಬ್ಬರ ಕೊಲೆ ಪ್ರಕರಣದ ಆರೋಪಿಯಾಗಿರುವ ಆಂಧ್ರ ಮೂಲದ ರವಿ ಪ್ರಸಾದ್ ರೆಡ್ಡಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಉದ್ಯಮಿ ಬಾಲಪ್ಪ ರೆಡ್ಡಿ, ಮಾದೇಶ್ ಎಂಬವರ ಕೊಲೆ ಪ್ರಕರಣದ ಸಂಬಂಧ ಆರೋಪಿ ರವಿ ಪ್ರಸಾದ್ ರೆಡ್ಡಿಯನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದರು. ಕೇಸ್ ಸಂಬಂಧ ಸ್ಥಳ ಮಹಜರಿಗೆ ಪೊಲೀಸರು ಕರೆದೊಯ್ದಿದ್ದ ವೇಳೆ ಆರೋಪಿ, ಹೆಡ್ ಕಾನ್ಸ್ಟೇಬಲ್ ಅಶೋಕ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ.
ಆನೆಕಲ್‌ನಲ್ಲಿ ಕೊಲೆ ಆರೋಪಿಗೆ ಪೊಲೀಸ್ ಫೈರಿಂಗ್ -
ಬೆಂಗಳೂರು : ಬೆಂಗಳೂರು (Bengaluru) ಹೊರವಲಯದಲ್ಲಿ ಕೊಲೆ ಪ್ರಕರಣದ (Murder case) ಸ್ಥಳ ಮಹಜರಿಗೆ ಕರೆದೊಯ್ದಿದ್ದ ವೇಳೆ ಪೊಲೀಸರ ಮೇಲೆ ದಾಳಿ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ ಕೊಲೆ ಆರೋಪಿ ಮೇಲೆ ಪೊಲೀಸರು ಫೈರಿಂಗ್ (Police Firing) ನಡೆಸಿರುವ ಘಟನೆ ನಡೆದಿದೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ (Anekal) ತಾಲೂಕಿನ ಬೊಮ್ಮಸಂದ್ರ ಸ್ಮಶಾನದ ಬಳಿ ನಿನ್ನೆ (ನ.8) ರಾತ್ರಿ 10.30ರ ಸುಮಾರಿಗೆ ಘಟನೆ ನಡೆದಿದೆ. ಆರೋಪಿಯ ಹೆಸರು ರವಿ ಪ್ರಸಾದ್ ರೆಡ್ಡಿ.
ಕಿಡ್ನಾಪ್ ಮತ್ತು ಇಬ್ಬರ ಕೊಲೆ ಪ್ರಕರಣದ ಆರೋಪಿಯಾಗಿರುವ ಆಂಧ್ರ ಮೂಲದ ರವಿ ಪ್ರಸಾದ್ ರೆಡ್ಡಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಉದ್ಯಮಿ ಬಾಲಪ್ಪ ರೆಡ್ಡಿ, ಮಾದೇಶ್ ಎಂಬವರ ಕೊಲೆ ಪ್ರಕರಣದ ಸಂಬಂಧ ಆರೋಪಿ ರವಿ ಪ್ರಸಾದ್ ರೆಡ್ಡಿಯನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದರು. ಕೇಸ್ ಸಂಬಂಧ ಸ್ಥಳ ಮಹಜರಿಗೆ ಪೊಲೀಸರು ಕರೆದೊಯ್ದಿದ್ದ ವೇಳೆ ಆರೋಪಿ, ಹೆಡ್ ಕಾನ್ಸ್ಟೇಬಲ್ ಅಶೋಕ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ.
ಈ ವೇಳೆ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ವಾರ್ನಿಂಗ್ ನೀಡಿದರೂ ದಾಳಿ ನಿಲ್ಲಿಸದಿದ್ದಾಗ ಆರೋಪಿ ಮೇಲೆ ಹೆಬ್ಬಗೋಡಿ ಇನ್ಸ್ಪೆಕ್ಟರ್ ಸೋಮಶೇಖರ್ ಫೈರಿಂಗ್ ಮಾಡಿದ್ದಾರೆ. ರವಿ ಪ್ರಸಾದ್ ರೆಡ್ಡಿ ಕಾಲಿಗೆ ಎರಡು ಸುತ್ತು ಗುಂಡು ಹೊಡೆದು ಬಂಧಿಸಿದ್ದಾರೆ. ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ DCP ನಾರಾಯಣ್ ಭೇಟಿ ನೀಡಿದ್ದು, ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Police Firing: ಗೋಪೂಜೆ ದಿನವೇ ಅಕ್ರಮ ಗೋ ಸಾಗಾಟಗಾರನ ಕಾಲಿಗೆ ಗುಂಡು
ಯುವತಿಯೊಂದಿಗೆ ಬೈಕ್ ಟ್ಯಾಕ್ಸಿ ಚಾಲಕ ದುರ್ವರ್ತನೆ
ಬೆಂಗಳೂರು: ಯುವತಿಯೊಂದಿಗೆ ಬೈಕ್ ಟ್ಯಾಕ್ಸಿ ಚಾಲಕನೊಬ್ಬ (Bike taxi driver) ಅಸಭ್ಯವಾಗಿ ವರ್ತಿಸಿರುವ ಘಟನೆ (Bengaluru News) ನಗರದಲ್ಲಿ ನಡೆದಿದೆ. ರೈಡ್ ಉದ್ದಕ್ಕೂ ಯುವತಿಯ ಕಾಲು, ತೊಡೆ ಸವರಿ ಚಾಲಕ ದುರ್ವರ್ತನೆ ತೋರಿದ್ದು, ಈ ಬಗ್ಗೆ ಯುವತಿ ವಿಡಿಯೊ ಹಂಚಿಕೊಂಡು ಅಳಲು ತೋಡಿಕೊಂಡಿದ್ದಾರೆ. ಇದರಿಂದ ಹೆಣ್ಮಕ್ಕಳಿಗೆ ಬೈಕ್ ಟ್ಯಾಕ್ಸಿ ಸೇಫ್ ಅಲ್ವಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಭವಿಸಿದೆ.
ನವೆಂಬರ್ 6ರಂದು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಯುವತಿ ಕಾಲಿನ ಮೇಲೆ ಚಾಲಕ ಕೈ ಇಡುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಘಟನೆಯ ವಿಡಿಯೊವನ್ನು ಯುವತಿ ಹಂಚಿಕೊಂಡು, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. KA55 EA4344 ಬೈಕ್ ರೈಡ್ ಮಾಡುತ್ತಿದ್ದ ಚಾಲಕ ಲೋಕೇಶ್ ದುರ್ವರ್ತನೆ ತೋರಿದ್ದಲ್ಲದೇ, ಪ್ರಶ್ನಿಸಿದ ಯುವತಿಯ ಮೈ ಮುಟ್ಟಿ ಕಿರುಕುಳ ನೀಡಿದ್ದಾನೆ.
ಯುವತಿ ಸ್ಥಳಕ್ಕೆ ತಲುಪಿದ ಬಳಿಕ ಅಲ್ಲಿದ್ದ ವ್ಯಕ್ತಿಯೊಬ್ಬರು, ಚಾಲಕನನ್ನು ತರಾಟೆ ತೆಗೆದುಕೊಂಡಿದ್ದು, ಚಾಲಕ ತಪ್ಪಾಯ್ತು ಎಂದು ಒಪ್ಪಿಕೊಂಡಿದ್ದಾನೆ. ಬೈಕ್ ಟ್ಯಾಕ್ಸಿ ಚಾಲಕನ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: Wall Collapse: ಸಿಮೆಂಟ್ ಮಿಕ್ಸರ್ ಲಾರಿಯಿಂದಾಗಿ ಗೋಡೆ ಕುಸಿತ; ಮನೆಯಲ್ಲಿ ಆಟವಾಡುತ್ತಿದ್ದ 1 ವರ್ಷದ ಮಗು ಸಾವು