ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಡಾ. ಕೃಷ್ಣ ರೆಡ್ಡಿ ವಿನೂತನ ಸಲಹೆ
Dr Krishna Reddy: ನಾವು ನಿನ್ನೆಯ ಬೆಂಗಳೂರಿನ ಬಗ್ಗೆ ಅಲ್ಲ, 2050ರ ಬೆಂಗಳೂರಿನ ಬಗ್ಗೆ ಯೋಜನೆ ರೂಪಿಸಬೇಕು. ಬೆಂಗಳೂರಿನ ದಟ್ಟಣೆಯನ್ನು ಮ್ಯಾಜಿಕ್ ನಂತೆ ಸರಿಪಡಿಸುವ ಯಾವುದೇ ಅದ್ಭುತ ಯೋಜನೆಯಿಲ್ಲ. ಆದರೆ ಒಂದು ಪರಿಹಾರವಿದೆ -ಸಮಗ್ರ ಯೋಜನೆ, ದೊಡ್ಡ ಪ್ರಮಾಣದ ಮೂಲಭೂತ ಸೌಕರ್ಯ ಮತ್ತು ಅದನ್ನು ಕಾರ್ಯಗತಗೊಳಿಸುವ ರಾಜಕೀಯ ಇಚ್ಛಾಶಕ್ತಿ. ನಾವು ಇಂದಿನ ನಿರ್ಧಾರಗಳನ್ನು ಮುಂದೂಡಿದರೆ, ಮುಂದಿನ ಪೀಳಿಗೆಗೆ ನಾವು ದೊಡ್ಡ ಬಿಕ್ಕಟ್ಟನ್ನು ಬಿಟ್ಟುಹೋದಂತೆ ಆಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಮಾಜಿ ಕಾರ್ಯದರ್ಶಿ ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಮಾಜಿ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎಸ್.ಕೃಷ್ಣ ರೆಡ್ಡಿ ತಿಳಿಸಿದ್ದಾರೆ.