ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bengaluru girl dies: ಬೆಂಗಳೂರಿನಲ್ಲಿ 2 ವರ್ಷದ ಮಗು ಅನುಮಾನಾಸ್ಪದ ಸಾವು; ಲಿವ್ ಇನ್‌ನಲ್ಲಿದ್ದ ಪೋಷಕರ ಮೇಲೆ ಶಂಕೆ

ಬೆಂಗಳೂರು ನಗರದ ಬಾಣಸವಾಡಿಯಲ್ಲಿ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ ಮಗುವಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಹೋಗುವಷ್ಟರಲ್ಲಿ ಸಾವನ್ನಪ್ಪಿರುವುದಾಗಿ ಪೋಷಕರು ತಿಳಿಸಿದ್ದಾರೆ. ಪೊಲೀಸರು ಕೇಸ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಲಿವ್ ಇನ್‌ನಲ್ಲಿದ್ದ ಪೋಷಕರ ಮೇಲೆ ಶಂಕೆ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ 2 ವರ್ಷದ ಮಗು ಅನುಮಾನಾಸ್ಪದ ಸಾವು

-

Prabhakara R
Prabhakara R Jul 17, 2026 4:42 PM

ಬೆಂಗಳೂರು: ನಗರದ ಬಾಣಸವಾಡಿಯ ಇಂದಿರಾ ಸ್ಟ್ರೀಟ್‌ನಲ್ಲಿ 2 ವರ್ಷದ ಮಗು ಅನುಮಾನಾಸ್ಪದ ಮೃತಪಟ್ಟಿದ್ದು, ಲಿವ್ ಇನ್‌ನಲ್ಲಿದ್ದ ಪೋಷಕರ ಮೇಲೆ ಶಂಕೆ ವ್ಯಕ್ತವಾಗಿದೆ. ಜೇಸನ್ ಆಂಥೋನಿ ಮತ್ತು ರೋಸ್ಲಿನ್‌ ಎಂಬುವರ 2 ವರ್ಷದ ಕಾರ್ಲೆಟ್ ಡೈಸಿ ಮೃತ ಮಗು. ಮೊನ್ನೆ ಇದ್ದಕ್ಕಿದ್ದಂತೆ ಮಗುವಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಹೋಗುವಷ್ಟರಲ್ಲಿ ಸಾವನ್ನಪ್ಪಿರುವುದಾಗಿ ಪೋಷಕರು ತಿಳಿಸಿದ್ದಾರೆ.

ಈ ಸಂಬಂಧ ಮಗುವಿನ ತಾಯಿಯ ಸ್ನೇಹಿತೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗುವಿಗೆ ತಾಯಿ ಹೊಡೆಯುತ್ತಿದ್ದರು, ಅದನ್ನು ನಾನು ನೋಡಿದ್ದೆ. ಮಗುವಿನ ಮೈಮೇಲೆ ಕೆಲವೆಡೆ ಗಾಯದ ಗುರುತುಗಳು ಪತ್ತೆಯಾಗಿದೆ. ಹೀಗಾಗಿ ಮಗು ಸಾವಿನ ಬಗ್ಗೆ ಅನುಮಾನ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಗುವಿನ ತಂದೆ ಜೇಸನ್ ಆಂಥೋನಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮಗುವಿಗೆ ಹುಟ್ಟಿದಾಗಿನಿಂದ ಉಸಿರಾಟದ ಸಮಸ್ಯೆ ಇತ್ತು. ನನಗೂ ಉಸಿರಾಟದ ಸಮಸ್ಯೆ ಇದ್ದು, ಅದು ಮಗುವಿಗೆ ಕ್ಯಾರಿ ಆಗಿದೆ. ಊಟ ಮಾಡಿಸುವಾಗ ಉಸಿರಾಟದ ಪೈಪ್ ಒಳಗೆ ಫುಡ್ ಹೋಗಿ ಮಗುವಿಗೆ ಸಮಸ್ಯೆ ಆಗಿ ಸತ್ತಿದೆ. ಆಗ ನಾನು ಮನೆಯಲ್ಲಿ ಇರಲಿಲ್ಲ ಅಂದಿದ್ದಾರೆ. ಇನ್ನು ಮಗುವಿನ ಕೈ ಹಾಗೂ ಮೈ ಮೇಲಿರುವ ಗಾಯ ತಾಯಿ ಹೊಡೆದಿದ್ದು ಎಂದು ಹೇಳಿದ್ದಾರೆ.

ಇನ್ನು ಮಗುವಿನ ಸಾವಿನ ಬಗ್ಗೆ ತಾಯಿ ರೋಸ್ಲಿನ್ ವಿಭಿನ್ನ ಹೇಳಿಕೆ ನೀಡಿದ್ದಾರೆ. ದೂರುದಾರೆ ಸಮೃದ್ಧಿ ನನ್ನ ಜತೆ ಜಗಳ ಆಡಿದ್ದರು. ಮಗುವಿಗೆ ಮೆಡಿಸನ್ ನೀಡಿದಾಗ ಮಗು ಗಾಬರಿಯಾಯ್ತು.‌ ಮಗುವಿಗೆ ಪ್ಯಾನಿಕ್ ಅಟ್ಯಾಕ್ ಆಯ್ತು. ಮೊದಲಿಂದಲೇ ಉಸಿರಾಟ ಸಮಸ್ಯೆ ಇದ್ದಿದ್ದರಿಂದ ಈ ರೀತಿಯಾಯ್ತು ಎಂದು ಹೇಳಿದ್ದಾರೆ. ಸದ್ಯ ದೂರಿನನ್ವಯ ಬಿಎನ್‌ಎಸ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ನಂತರ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ.

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಕೊಂದಿದ್ದ ಚೇತನ್‌ ಅರೆಸ್ಟ್‌; ಇಲಿಪಾಷಾಣ ಸೇವಿಸಿದ್ದರಿಂದ ಆಸ್ಪತ್ರೆಗೆ ದಾಖಲು

ಕಾರು ಹರಿದು ಮನೆ ಮುಂದೆ ಆಡುತ್ತಿದ್ದ ಮಗು ಸಾವು

ತುಮಕೂರು: ಕಾರು ಹರಿದು ಮನೆ ಮುಂದೆ ಆಡುತ್ತಿದ್ದ ಎರಡು ವರ್ಷದ ಮಗು ಮೃತಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಶಿರಾ ತಾಲೂಕಿನ ಬುಕ್ಕಾಪಟ್ಟಣದ ಸಂತೆದೀಪದ ಬಳಿ ಘಟನೆ ನಡೆದಿದ್ದು, ಹುಸೇಫಾ (2) ಮೃತಪಟ್ಟ ಮಗು.

ಅಜ್ಜ ಸಿಕಂದರ್ ಮನೆಗೆ ಬಂದಿದ್ದ ವೇಳೆ ಮನೆ ಮುಂದೆ ಆಟವಾಡುತ್ತಿದ್ದಾಗ ಕಾರು ಬಾಲಕನ ಮೇಲೆ ಚಲಿಸಿದೆ. ಶಿರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯ ಎಸಗಿ ಪರಾರಿಯಾದ ಕಾರಿನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.