ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bengaluru Kidnap Case: ಸಾಲ ವಸೂಲಿಗಾಗಿ ತಂಗಿ-ಮೈದುನನನ್ನೇ ಕಿಡ್ನ್ಯಾಪ್ ಮಾಡಿದ ಅಕ್ಕ-ಭಾವ!

ದೂರುದಾರ ಮಹಿಳೆಯು ತನ್ನ ಅಕ್ಕನ ಬಳಿ 9.50 ಲಕ್ಷ ಸಾಲ ಪಡೆದುಕೊಂಡಿದ್ದು, 5 ಲಕ್ಷ ಸಾಲ ಹಿಂತಿರುಗಿಸಿದ್ದರು. ಬಾಕಿ ಹಣವನ್ನು ಪಡೆಯಲು ಕಾಲಾವಕಾಶ ಪಡೆದುಕೊಂಡಿದ್ದರು. ಆದರೆ ಈ ನಡುವೆ ತಂಗಿ ಮತ್ತು ಆಕೆಯ ಗಂಡನನ್ನು ಅಕ್ಕ ಮತ್ತು ಬಾವ ಕಿಡ್ನ್ಯಾಪ್‌ ಮಾಡಿ, ಹಲ್ಲೆ ನಡೆಸಿದ್ದಾರೆ.

ಸಾಲ ವಸೂಲಿಗಾಗಿ ತಂಗಿ-ಮೈದುನನನ್ನೇ ಕಿಡ್ನ್ಯಾಪ್ ಮಾಡಿದ ಅಕ್ಕ-ಭಾವ!

ಪ್ರಫುಲ್ಲಾ ಮತ್ತು ಸಲೀಮ್‌ ಶೇಖ್‌. -

Prabhakara R
Prabhakara R Apr 17, 2026 11:20 PM

ಬೆಂಗಳೂರು: ಸಾಲದ ಹಣ ವಾಪಸ್ ನೀಡದ್ದಕ್ಕೆ ತಂಗಿ ಮತ್ತು ಮೈದುನನನ್ನೇ ಕಿಡ್ನ್ಯಾಪ್‌ ಮಾಡಿ, ಹಲ್ಲೆ ನಡೆಸಿರುವ ಆರೋಪದಲ್ಲಿ ಅಕ್ಕ ಮತ್ತು ಭಾವ ಸೇರಿ ಮೂವರು ಆರೋಪಿಗಳನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಪೃಥ್ವಿ ಎಂಬಾಕೆ ನೀಡಿದ ದೂರಿನ ಮೇರೆಗೆ ಸಹೋದರಿ ಪ್ರಫುಲ್ಲಾ, ಭಾವ ಸಲೀಂ ಶೇಕ್, ಈತನ ಸಹಚರ ಬೀರೇಶ್ ಎಂಬುವರನ್ನು ಪೊಲೀಸರು ಬಂಧಿಸಿ, ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ಹೆಬ್ಬಗೋಡಿಯ ಅನಂತನಗರದಲ್ಲಿ ವಾಸವಾಗಿರುವ ದೂರುದಾರ ಮಹಿಳೆ ಹಾಗೂ ಪತಿ ಅಭಿಜಿತ್ ಅವರ ಮನೆಗೆ ಏ.14ರ ರಾತ್ರಿ ಆರೋಪಿಗಳು ಬಂದು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಹಣಕಾಸಿನ ವ್ಯವಹಾರ ಸಂಬಂಧ ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ಹೇಳಿ ಕಾರಿನಲ್ಲಿ ಕೂರಿಸಿ ಅಪಹರಿಸಿದ್ದರು. ಮಾರ್ಗ ಮಧ್ಯೆ ಕಾರಿನಿಂದ ಇಳಿದು ಪರಾರಿಗೆ ಯತ್ನಿಸಿದರೂ ಹಲ್ಲೆ ಮಾಡಿ ನಾಗರಬಾವಿಯಲ್ಲಿ ಮನೆಗೆ ಕರೆದೊಯ್ದು ಗೃಹಬಂಧನದಲ್ಲಿ ಇರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸಾಲ ವಸೂಲಿಗಾಗಿ ಕಿಡ್ನ್ಯಾಪ್

ಪೂರ್ವಸಂಚಿನಂತೆ ಏ.14ರಂದು ದಂಪತಿಯನ್ನು ಅಪಹರಿಸಿದ್ದ ಆರೋಪಿಗಳು ಮಾರ್ಗ ಮಧ್ಯೆ ಚಲಿಸುತ್ತಿರುವ ಕಾರಿನಿಂದ ಇಳಿಯಲು ಯತ್ನಿಸಿದ ಅಭಿಜಿತ್ ಎದೆಭಾಗಕ್ಕೆ ಕಾರಿನ ಕೀ ನಿಂದ ಚುಚ್ಚಿ ಗಾಯಪಡಿಸಿದ್ದರು. ನಾಗರಭಾವಿಯಲ್ಲಿರುವ ಮನೆಗೆ ಕರೆದೊಯ್ದು ದಂಪತಿಯ ಮೊಬೈಲ್ ಕಸಿದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿದರೆ ಜೀವ ಸಮೇತ ಬಿಡುವುದಿಲ್ಲ, ನಮ್ಮ ಹುಡುಗರಿಗೆ 500 ರೂಪಾಯಿ ಕೊಟ್ಟರೆ ಅವರು ನಿಮ್ಮನ್ನ ಸಾಯಿಸುತ್ತಾರೆ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದರು ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

ಅಭಿಜಿತ್ ಮೊಬೈಲ್ ಸ್ವಿಚ್ಛ್ ಆಫ್ ಬಂದ ಹಿನ್ನೆಲೆಯಲ್ಲಿ ಮನೆಗೆ ಹೋದಾಗ ಕಾಣದಿರುವುದನ್ನು ಕಂಡು ಸಹೋದರಿ ಕೂಡಲೇ ಹೆಬ್ಬಗೋಡಿ ಪೊಲೀಸರಿಗೆ ದೂರು ನೀಡಿದ್ದರು. ಅಭಿಜಿತ್ ಮೊಬೈಲ್ ಟ್ರ್ಯಾಕ್ ಮಾಡಿದಾಗ ನಾಗರಭಾವಿ ಮನೆಯೊಂದರಲ್ಲಿ ಇರುವುದನ್ನು ಪತ್ತೆ ಹಚ್ಚಿದ ಪೊಲೀಸರು, ಸ್ಥಳಕ್ಕೆ ತೆರಳಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಝೀರೋ ಎಫ್ಐಆರ್ ದಾಖಲಿಸಿ ಬಳಿಕ ಪ್ರಕರಣವನ್ನು ಹೆಬ್ಬಗೋಡಿ ಠಾಣೆಗೆ ವರ್ಗಾಯಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

MLA Vinay Kulkarni: ಜೈಲುಪಾಲಾದ ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು; ಮುಂದಿರುವ ಆಯ್ಕೆಗಳೇನು?

ದೂರುದಾರ ಮಹಿಳೆಯು ಅಕ್ಕ ಪ್ರಪುಲ್ಲಾ ಬಳಿ 9.50 ಲಕ್ಷ ಸಾಲ ಪಡೆದುಕೊಂಡಿದ್ದು, 5 ಲಕ್ಷ ಸಾಲ ಹಿಂತಿರುಗಿಸಲಾಗಿತ್ತು. ಬಾಕಿ ಹಣವನ್ನು ಪಡೆಯಲು ಕಾಲಾವಕಾಶ ಪಡೆದುಕೊಂಡಿದ್ದರು. ಹಣದ ವಿಚಾರಕ್ಕಾಗಿ ಕಳೆದ ವರ್ಷ ಇವರ ಬಾವ ಮನೆ ಬಳಿ ಬಂದು ಗಲಾಟೆ ಮಾಡಿದ್ದರು. ಈ ಬಗ್ಗೆ ತನ್ನ ಪತಿ ಹೆಬ್ಬಗೋಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮುಂದಿನ ಜೂನ್ ವರೆಗೂ ಕಾಲಾವಕಾಶ ಪಡೆದಿದ್ದರೂ ಏಕಾಏಕಿ ತಮ್ಮ ಮನೆಗೆ ಬಂದು ಹಲ್ಲೆ ಮಾಡಿ ಅಪಹರಿಸಿದ್ದಾರೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ಧಾರೆ.