ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಂಡರ್ಲಾದಲ್ಲಿ ಜನವರಿ 4 ರವರೆಗೆ 16 ದಿನಗಳ ಅತ್ಯಂತ ವಿಶೇಷ ಸಂಭ್ರಮಾಚರಣೆ

ವಂಡರ್ಲಾದ ಎಲ್ಲ ಸ್ಥಳಗಳಲ್ಲಿ ವಿಶೇಷ ಕ್ರಿಸ್‌ಮಸ್ ಟ್ರೀ ಲೈಟಿಂಗ್ ಸಹಿತವಾದ ಉತ್ಸವಗಳು ಪ್ರಾರಂಭ ವಾಗಿವೆ. ಬೆಂಗಳೂರಿನ ವಂಡರ್ಲಾದ ವೇವ್ ಪೂಲ್‌ನಲ್ಲಿ ಅತಿಥಿಗಳು ಡಿಜೆ ನೈಟ್ಸ್, ಹೈ-ಎನರ್ಜಿ ಬ್ಯಾಂಡ್ ಶೋಗಳು ಮತ್ತು ಆಕರ್ಷಕ ಜುಂಬಾ ಸೇರಿದಂತೆ ವೈವಿಧ್ಯಮಯ ಮನರಂಜನೆಯನ್ನು ಹೊಂದಬಹುದು.

ವಂಡರ್ಲಾದಲ್ಲಿ ಜನವರಿ 4 ರವರೆಗೆ 16 ದಿನಗಳ ಅತ್ಯಂತ ವಿಶೇಷ ಸಂಭ್ರಮಾಚರಣೆ

-

Ashok Nayak
Ashok Nayak Dec 23, 2025 10:01 PM

ಬೆಂಗಳೂರಿನ ವಂಡರ್ಲಾ: ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಲುವಾಗಿ ನಗರದ ತನ್ನ ಪಾರ್ಕ್ ಮತ್ತು ರೆಸಾರ್ಟ್‌ಗಳಲ್ಲಿ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಡಿಸೆಂಬರ್ 20 ರಿಂದ ಜನವರಿ 4 ರವರೆಗಿನ ಗ್ರ್ಯಾಂಡ್ ಉತ್ಸವಗಳು - ಲೈವ್ ಮನರಂಜನೆ, ಡಿಜೆ ನೈಟ್ಸ್, ಪಟಾಕಿಗಳ ಪ್ರದರ್ಶನಗಳು.

ಬೆಂಗಳೂರು: ವಂಡರ್ಲಾ ಬೆಂಗಳೂರು, ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಆಚರಣೆಗೆ ಇನ್ನಷ್ಟು ಮೆರುಗನ್ನು ನೀಡಲಿದೆ. ವಂಡರ್ಲಾ, ಡಿ.20 ರಿಂದ ಜನವರಿ 4 ರವರೆಗೆ 16 ದಿನಗಳ ಅತ್ಯಂತ ವಿಶೇಷ ಸಂಭ್ರಮಾಚರಣೆಗಳನ್ನು ಪ್ರಕಟಿಸಿದೆ. ಈ ಉತ್ಸವಗಳಲ್ಲಿ ಸಂಗೀತ, ನೃತ್ಯ, ಸಾಂಸ್ಕೃತಿಕ ಪ್ರದರ್ಶನ ಗಳು ಮತ್ತು ಉದ್ಯಾನವನದ ಸಿಗ್ನೇಚರ್ ರೈಡ್ ಗಳು ಮತ್ತು ಆಕರ್ಷಣೆಗಳ ಜೊತೆಗೆ ವಿಶೇಷ ಹಬ್ಬದ ಕೊಡುಗೆಗಳು ಇರಲಿವೆ.

ವಂಡರ್ಲಾದ ಎಲ್ಲ ಸ್ಥಳಗಳಲ್ಲಿ ವಿಶೇಷ ಕ್ರಿಸ್‌ಮಸ್ ಟ್ರೀ ಲೈಟಿಂಗ್ ಸಹಿತವಾದ ಉತ್ಸವಗಳು ಪ್ರಾರಂಭವಾಗಿವೆ. ಬೆಂಗಳೂರಿನ ವಂಡರ್ಲಾದ ವೇವ್ ಪೂಲ್‌ನಲ್ಲಿ ಅತಿಥಿಗಳು ಡಿಜೆ ನೈಟ್ಸ್, ಹೈ-ಎನರ್ಜಿ ಬ್ಯಾಂಡ್ ಶೋಗಳು ಮತ್ತು ಆಕರ್ಷಕ ಜುಂಬಾ ಸೇರಿದಂತೆ ವೈವಿಧ್ಯಮಯ ಮನರಂಜನೆ ಯನ್ನು ಹೊಂದಬಹುದು.

ಡಿ.20 ರಿಂದ ಜನವರಿ 4 ರವರೆಗೆ ನಿತ್ಯವೂ ಪಾರ್ಕಿನಲ್ಲಿ ಬ್ಯಾಂಡ್ ಮೆರವಣಿಗೆ ಇರುತ್ತದೆ. ಸ್ಟಿಲ್ಟ್ ವಾಕರ್ಸ್ ಮತ್ತು ಚೈನೀಸ್ ಲಯನ್ ಡ್ಯಾನ್ಸ್ ಪ್ರದರ್ಶನಗಳು ಡಿ.25 ಮತ್ತು ಡಿ.27 & 28 ವರೆಗೆ ಅದ್ಭುತ ದೃಶ್ಯ ವೈಭವವನ್ನು ನೀಡುತ್ತವೆ. ಡಿ.26 ರಿಂದ ಜನವರಿ 1, 2026 ರವರೆಗೆ ಇರಲಿರುವ ಪ್ರಮುಖ ಮನರಂಜನೆಗಳೆಂದರೆ ಜಗ್ಲಿಂಗ್ ಪ್ರದರ್ಶನಗಳು, ಮ್ಯಾಜಿಕ್ ಪ್ರದರ್ಶನಗಳು ಮತ್ತು ಯುನಿ ಸೈಕಲ್ ಪ್ರದರ್ಶನಗಳು.

ಇದನ್ನೂ ಓದಿ: Bangalore News: ಜನವರಿ 3 ರಿಂದ 9 ರವರೆಗೆ ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ

ಹಬ್ಬದ ವಾತಾವರಣಕ್ಕೆ ಇನ್ನಷ್ಟು ಉತ್ಸಾಹವನ್ನು ಬೆರೆಸಲು ಉದ್ಯಾನವನದಲ್ಲಿ ಆಕರ್ಷಕ ಕ್ರಿಸ್‌ಮಸ್ ಅಲಂಕಾರ, ಬೆಳಕು ಮತ್ತು ವಿಶೇಷ ಸಾಂಟಾ ಸ್ಟ್ರೀಟ್‌ ಪ್ರದರ್ಶನಗಳು ಇರಲಿವೆ. ಡಿ.31 ರಂದು ಹೊಸ ವರ್ಷದ ಮುನ್ನಾದಿನ, ಪಟಾಕಿ ಪ್ರದರ್ಶನಗಳೊಂದಿಗೆ ಉತ್ಸವಗಳು ಕೊನೆಗೊಳ್ಳು ತ್ತವೆ. ಈ ಸಲದ ಬೆಂಗಳೂರಿನ ಚಳಿಯಲ್ಲಿ ಅತಿಥಿಗಳು ಬೆಚ್ಚಗಿನ ತಾಪಮಾನ-ನಿಯಂತ್ರಿತ ಪೂಲ್‌ ಗಳಲ್ಲಿ ಆನಂದಿಸಬಹುದು. ಉತ್ಸವಗಳು ನಡೆಯುವಷ್ಟೂ ದಿನಗಳು ನೀರಿನಲ್ಲಿ ಮೋಜು ಮಾಡ ಬಹುದು ಮತ್ತು ವಿಶ್ರಾಂತಿಯನ್ನು ಪಡೆಯಬಹುದು.

ಈ ಉತ್ಸವಾಚರಣೆಗಳನ್ನು ಇನ್ನಷ್ಟು ವಿಶೇಷವಾಗಿಸಲು ವಂಡರ್ಲಾ, ಡಿ.8 ರಿಂದ ಜನವರಿ 4, 2026 ರವರೆಗೆ ಆನ್‌ಲೈನ್‌ನಲ್ಲಿ ವಿಶೇಷವಾದ, ಸೀಮಿತ ಅವಧಿಯ ಕ್ರಿಸ್‌ಮಸ್ ಪಾಸ್ ಗಳನ್ನು ಕೊಡುಗೆ ಯಾಗಿ ನೀಡುತ್ತಿದೆ. ಈ ಪಾಸ್ ಗಳು ಡಿ.20 ರಿಂದ ಜನವರಿ 4 ರವರೆಗೆ ಮಾನ್ಯವಾಗಿರುತ್ತವೆ.

ಫೆಸ್ಟ್ ಅವಧಿಯಲ್ಲಿ ಬೆಲೆಗಳು ಈ ಕೆಳಗಿನಂತಿರುತ್ತವೆ: ● ಬೆಂಗಳೂರು ಪಾರ್ಕ್ - ಕ್ರಿಸ್‌ಮಸ್ ಪಾಸ್ ಆಫರ್ ○ ಪಾರ್ಕ್ ಟಿಕೆಟ್ (8 ಗಂಟೆಗಳು): ₹1,199 ○ ಪಾರ್ಕ್ ಟಿಕೆಟ್ (11 ಗಂಟೆಗಳು): ₹1,369 ○ ಟಿಕೆಟ್ + ಬಫೆ ಕಾಂಬೊ (8 ಗಂಟೆಗಳು): ₹1,769 ○ ಟಿಕೆಟ್ + ಬಫೆ ಕಾಂಬೊ (11 ಗಂಟೆಗಳು): ₹1,939 ಈ ವೈಭವಪೂರ್ಣ ಉತ್ಸವಗಳ ಕುರಿತು ಪ್ರತಿಕ್ರಿಯಿಸಿದ ವಂಡರ್ಲಾ ಹಾಲಿಡೇಸ್ ಲಿಮಿಟೆ ಡ್‌ನ ಚೀಫ್ ಆಪರೇಟಿಂಗ್ ಆಫೀಸರ್ ಧೀರನ್ ಚೌಧರಿ: “ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನ ವಂಡರ್ಲಾದಲ್ಲಿ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆಗಳು ಬಹಳ ವಿಶೇಷ ವಾಗುತ್ತಿವೆ. ನಮ್ಮ ಅದ್ಭುತವಾದ ಸಂಭ್ರಮಾಚರಣೆಗಳ ಬಗ್ಗೆ ನಮಗೇ ಹೆಮ್ಮೆಯೆನಿಸುತ್ತದೆ. ಡಿಜೆ ರಾತ್ರಿಗಳಿಂದ ಹಿಡಿದು ಆಪ್ತವಾದ ಕ್ರಿಸ್‌ಮಸ್ ಮುನ್ನಾದಿನದ ವೈಭವದ ಡಿನ್ನರ್‌ಗಳವರೆಗೆ 16 ದಿನಗಳ ಕಾಲ ವಿಶ್ವ ದರ್ಜೆಯ ಆತಿಥ್ಯ; ಕ್ರಿಸ್‌ಮಸ್ ಉತ್ಸಾಹವನ್ನು ಹೆಚ್ಚಿಸುವ ಸಾಂಸ್ಕೃತಿಕ, ಸಂಗೀತದ ಮತ್ತು ಮನರಂಜನಾ ಕಾರ್ಯಕ್ರಮಗಳು ಇರುತ್ತವೆ.

ಅತಿಥಿಗಳು ಆನಂದಿಸಲು ಬಹಳಷ್ಟು ಆಯ್ಕೆಗಳಿರಲಿವೆ - ರೋಮಾಂಚಕಾರಿ ಹಗಲಿನ ರೈಡ್ ಗಳು, ಸಾಂಟಾ ಸ್ಟ್ರೀಟ್‌ನ ಮ್ಯಾಜಿಕ್, ಅಥವಾ ರಾತ್ರಿಯ ಸೊಗಸಾದ ರೆಸಾರ್ಟ್ ಸಂಭ್ರಮಾಚರಣೆಗಳು ಇತ್ಯಾದಿ. ಈ ಉತ್ಸವದ ಉದ್ದೇಶವೇ ಕುಟುಂಬಗಳು, ಸ್ನೇಹಿತರು ಮತ್ತು ಸಮುದಾಯಗಳನ್ನು ಒಟ್ಟುಗೂಡಿಸುವುದು, ಮರೆಯಲಾಗದ ನೆನಪುಗಳನ್ನು ನೀಡುವುದು. ಬನ್ನಿ, ಎಲ್ಲರೂ ಸೇರಿ 2025 ಕ್ಕೆ ಭಾವುಕ ವಿದಾಯ ಹೇಳುತ್ತ 2026 ನ್ನು ಸಂಭ್ರಮದಿಂದ ಸ್ವಾಗತಿಸೋಣ.”

ವಂಡರ್ಲಾದ ಉತ್ಸವಗಳಲ್ಲಿ ಭಾಗವಹಿಸಿ ಜೀವನದಲ್ಲಿ ಮರೆಯಲಾಗದ ಅನುಭವಗಳನ್ನು ನಿಮ್ಮ ದಾಗಿಸಿಕೊಳ್ಳಿ! ವಂಡರ್ಲಾದ ಆನ್‌ಲೈನ್ ಬುಕಿಂಗ್ ಪೋರ್ಟಲ್ ಬಳಸಿ ನಮ್ಮ ಯಾವುದೇ ಪಾರ್ಕಿನ ವಿಶೇಷ ಕೊಡುಗೆಗಳನ್ನು ಪಡೆಯಿರಿ.