ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Book Release: ʼʼಯುವ ತಲೆಮಾರಿನಲ್ಲಿ ಓದುವ ಹವ್ಯಾಸ ಬೆಳೆಯಲಿʼʼ; ವಿಶ್ವವಾಣಿ ಪುಸ್ತಕ ಪ್ರಕಾಶನದ 9 ಕೃತಿ ಬಿಡುಗಡೆಗೊಳಿಸಿ ನಟ ಅನಂತನಾಗ್‌ ಆಶಯ

Vishwavani Pustaka: ಭಾನುವಾರ ಬೆಂಗಳೂರಿನಲ್ಲಿ ವಿಶ್ವವಾಣಿ ಪುಸ್ತಕ, ವಾಗ್ದೇವಿ ವಿದ್ಯಾ ವರ್ಧಕ ಟ್ರಸ್ಟ್ ಹಾಗೂ ವಾಗ್ದೇವಿ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ 9 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಹಿರಿಯ ನಟ ಅನಂತನಾಗ್‌ ಕೃತಿ ಬಿಡುಗಡೆಗೊಳಿಸಿದರು. ʼವಿಶ್ವವಾಣಿʼ ಮತ್ತು ʼಪ್ರವಾಸಿ ಪ್ರಪಂಚʼ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ವಿಶ್ವವಾಣಿ ಪುಸ್ತಕ ಪ್ರಕಾಶನದ 9 ಕೃತಿ ಬಿಡುಗಡೆ

ಬೆಂಗಳೂರಿನಲ್ಲಿ ವಿಶ್ವವಾಣಿ ಪುಸ್ತಕ, ವಾಗ್ದೇವಿ ವಿದ್ಯಾ ವರ್ಧಕ ಟ್ರಸ್ಟ್ ಹಾಗೂ ವಾಗ್ದೇವಿ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. -

Ramesh Ballamoole
Ramesh Ballamoole Aug 2, 2026 3:26 PM

ಬೆಂಗಳೂರು, ಆ. 2: ವಿಶ್ವವಾಣಿ ಪುಸ್ತಕ ಪ್ರಕಾಶನದ ವತಿಯಿಂದ ಭಾನುವಾರ (ಆಗಸ್ಟ್‌ 2) 9 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು (Vishwavani Book Release). ವಿಶ್ವವಾಣಿ ಪುಸ್ತಕ, ವಾಗ್ದೇವಿ ವಿದ್ಯಾ ವರ್ಧಕ ಟ್ರಸ್ಟ್ ಹಾಗೂ ವಾಗ್ದೇವಿ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಬೆಂಗಳೂರಿನ ಎಫ್‌‌ಕೆಸಿಸಿಐ ಸಭಾಂಗಣದಲ್ಲಿ ಸಮಾರಂಭ ನೆರವೇರಿತು. ಪದ್ಮಭೂಷಣ, ಹಿರಿಯ ನಟ ಅನಂತನಾಗ್ (Anant Nag) ಮುಖ್ಯ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಪುಸ್ತಕ ಇಂದಿನ ತಲೆಮಾರಿನಲ್ಲಿ ಓದುವ ಹವ್ಯಾಸ ಬೆಳೆಯಲಿ ಎಂದು ಹಾರೈಸಿದರು.

ರಾಷ್ಟ್ರವಾದಿ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ʼವಿಶ್ವವಾಣಿʼ ಮತ್ತು ʼಪ್ರವಾಸಿ ಪ್ರಪಂಚʼ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ರಾಜಕಾರಣದಲ್ಲಿ ಮೋದಿಗಿಂತ ಅನುಭವಿ ಯಾರಾದ್ರೂ ಇದ್ದಾರಾ?

ನಟ ಅನಂತನಾಗ್‌ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡರು. ʼʼಈ ದೇಶದಲ್ಲಿ ಆಡಳಿತ ಎಂದರೆ ಏನು? ಗವರ್ನೆನ್ಸ್ ಎಂದರೆ ಏನು? ಎಂಬ ಬಗ್ಗೆ ಪ್ರಧಾನಿ ಮೋದಿಗಿಂತ ಹೆಚ್ಚು ಗೊತ್ತಿದ್ದವರು ಯಾರಾದರೂ ಇದ್ದಾರಾ? 14 ವರ್ಷ ಸಿಎಂ ಆಗಿ, 12 ವರ್ಷ ಪಿಎಂ ಆಗಿದ್ದಾರೆ. ಇಂತಹವನ್ನು ಯಾರದರೂ ಇದ್ದರೆ ಇನ್ನೊಬ್ಬರನ್ನು ತೋರಿಸಿ, ಇನ್ನೊಬ್ಬ ಹುಟ್ಟೋದಿಲ್ಲ. ಅದಕ್ಕೆ ಅವರಿಗೆ ಆ ಭಗವಂತ ದೀರ್ಘಾಯುಷ್ಯ ಕೊಡಲಿʼʼ ಎಂದು ಹಾರೈಸಿದರು.

ಖ್ಯಾತ ವಿದ್ವಾಂಸ ಹಾಗೂ ವಿಮರ್ಶಕ ಗ.ನಾ. ಭಟ್ಟ ಬಿಡುಗಡೆಯಾದ 9 ಕೃತಿಗಳನ್ನು ಪರಿಚಯಿಸಿದರು. ಸಮಾರಂಭದಲ್ಲಿ ಅಂಕಣಕಾರರಾದ ಕಿರಣ್ ಉಪಾಧ್ಯಾಯ, ರಾಜು ಅಡಕಳ್ಳಿ, ರೂಪಾ ಗುರುರಾಜ, ಮೋಹನ್ ವಿಶ್ವ ಹಾಗೂ ಶಿಶಿರ ಹೆಗಡೆ, ʼವಿಶ್ವವಾಣಿʼ ಸಮೂಹ ಸಂಸ್ಥೆಯ ಸಿಇಒ ಚಿದಾನಂದ ಕಡಲಾಸ್ಕರ ಹಾಗೂ ವಿಶ್ವವಾಣಿ ಪುಸ್ತಕ ಸಂಸ್ಥೆಯ ಮುಖ್ಯಸ್ಥರಾದ ಸುಷ್ಮಾ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಮೆರುಗು ಹೆಚ್ಚಿಸಿದ ಸಂಗೀತ ಸೌರಭ

ವಿಶೇಷ ಎಂದರೆ ಸಾಹಿತ್ಯ ಸಮಾರಂಭದೊಂದಿಗೆ ಜತೆಗೆ ಸಂಗೀತ ಸೌರಭ ಕಾರ್ಯಕ್ರಮವೂ ಗಮನ ಸೆಳೆಯಿತು. ಪುಸ್ತಕ ಬಿಡುಗಡೆ ಸಮಾರಂಭಕ್ಕಿಂತ ಒಂದು ಗಂಟೆ ಮೊದಲು ಸಿತಾರ್ ಮತ್ತು ತಬಲಾ ವಾದನದ ಜುಗಲ್‌ಬಂಧಿ ಸಂಗೀತ ಸುಧೆ ಕಾರ್ಯಕ್ರಮ ನಡೆಯಿತು. ಹಿರಿಯ ಸಿತಾರ್ ಕಲಾವಿದೆ ಚಂದ್ರಕಲಾ ಹೆಗಡೆ ಮತ್ತು ಹಿರಿಯ ತಬಲಾ ವಾದಕ ಗೋಪಾಲಕೃಷ್ಣ ಹೆಗಡೆ ಕಲಭಾಗ್ ಈ ಕಾರ್ಯಕ್ರಮ ನಡೆಸಿಕೊಟ್ಟರು.

ವಿಶ್ವೇಶ್ವರ ಭಟ್‌ ಅವರ 103ನೇ ಪುಸ್ತಕ 'ಬದುಕುಳಿದವರು ಕಂಡಂತೆʼ ಬಿಡುಗಡೆ; ಫೋಟೊಗಳು ಇಲ್ಲಿವೆ

ಬಿಡುಗಡೆಗೊಂಡ ಕೃತಿಗಳು

ʼವಿಶ್ವವಾಣಿʼ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ʼಅಂತರಂಗದ ಬ್ಲೂಟಿಕ್ʼ, ʼಸಂಪಾದಕರ ಸದ್ಯಶೋಧನೆʼ ಭಾಗ 8, 9, ʼಆಸ್ಕ್ ದಿ ಎಡಿಟರ್ʼ 4, ಅಂಕಣಕಾರ ಕಿರಣ್ ಉಪಾಧ್ಯಾಯ ಅವರ ʼಬಹುದೇಶವಾಸಿʼ, ರೂಪ ಗುರುರಾಜ್ ಅವರ ʼಒಂದೊಳ್ಳೆ ಮಾತುʼ ಭಾಗ 5, ರಾಜು ಅಡಕಳ್ಳಿ ಅವರ ʼಸಕ್ಸಸ್ ಸೂತ್ರಧಾರರುʼ, ಶಿಶಿರ ಹೆಗಡೆ ಅವರ ʼಹ್ಯಾಷ್‌ಟ್ಯಾಗ್‌ ಶಿಶಿರ ಕಾಲʼ ಹಾಗೂ ಮೋಹನ್ ವಿಶ್ವ ಅವರ ʼಕಾಲದ ಕನ್ನಡಿʼ ಪುಸ್ತಕ ಬಿಡುಗಡೆಗೊಂಡಿತು.