ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಂಗಳೂರು, ಮೈಸೂರು ಸೇರಿ 100 ನಗರಗಳಲ್ಲಿ 'ಅಮೆಜಾನ್ ನೌ ಕ್ವಿಕ್‌ ಕಾಮರ್ಸ್‌ ಆರಂಭ'; ಕಂಪನಿಯಿಂದ ₹2,800 ಕೋಟಿ ಹೂಡಿಕೆ

ತನ್ನ ಕಾರ್ಯಾಚರಣಾ ಜಾಲವನ್ನು ಬಲಪಡಿಸಲು ಅಮೆಜಾನ್ ಬರೋಬ್ಬರಿ 2,800 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಈ ಬೃಹತ್ ಮೊತ್ತವನ್ನು ಕೇವಲ ವ್ಯಾಪಾರ ವಿಸ್ತರಣೆಗೆ ಮಾತ್ರವಲ್ಲದೆ, ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸುರಕ್ಷತೆ, ಆರೋಗ್ಯ ಮತ್ತು ಆರ್ಥಿಕ ಯೋಗಕ್ಷೇಮಕ್ಕೂ ವಿನಿಯೋಗಿಸಲು ಅಮೆಜಾನ್ ನಿರ್ಧರಿಸಿದೆ.

100 ನಗರಗಳಲ್ಲಿ 'ಅಮೆಜಾನ್ ನೌ ಕ್ವಿಕ್‌ಕಾಮರ್ಸ್‌ ಆರಂಭ'

-

Profile
Ashok Nayak Apr 27, 2026 6:23 PM

ಬೆಂಗಳೂರು: ಭಾರತದ 'ಕ್ವಿಕ್ ಕಾಮರ್ಸ್'ಗೆ ಲಗ್ಗೆ ಇಟ್ಟಿರುವ ಇ-ಕಾಮರ್ಸ್ ದೈತ್ಯ 'ಅಮೆಜಾನ್' ಕೆಲವೇ ನಿಮಿಷಗಳಲ್ಲಿ ಅಗತ್ಯ ವಸ್ತುಗಳನ್ನು ತಲುಪಿಸುವ ತನ್ನ ಮಹತ್ವಾ ಕಾಂಕ್ಷೆಯ 'ಅಮೆಜಾನ್ ನೌ' ಸೇವೆಯನ್ನು ದೇಶದ 100 ನಗರಗಳಿಗೆ ವಿಸ್ತರಿಸುವುದಾಗಿ ಘೋಷಿಸಿದೆ.

2,800 ಕೋಟಿ ರೂ. ಹೂಡಿಕೆ

ತನ್ನ ಕಾರ್ಯಾಚರಣಾ ಜಾಲವನ್ನು ಬಲಪಡಿಸಲು ಅಮೆಜಾನ್ ಬರೋಬ್ಬರಿ 2,800 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಈ ಬೃಹತ್ ಮೊತ್ತವನ್ನು ಕೇವಲ ವ್ಯಾಪಾರ ವಿಸ್ತರ ಣೆಗೆ ಮಾತ್ರವಲ್ಲದೆ, ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸುರಕ್ಷತೆ, ಆರೋಗ್ಯ ಮತ್ತು ಆರ್ಥಿಕ ಯೋಗಕ್ಷೇಮಕ್ಕೂ ವಿನಿಯೋಗಿಸಲು ಅಮೆಜಾನ್ ನಿರ್ಧರಿಸಿದೆ. ಈ ಮೂಲಕ ಭಾರತದ ಅತ್ಯಂತ ಸುರಕ್ಷಿತ, ವೇಗದ ಮತ್ತು ವಿಶ್ವಾಸಾರ್ಹ ಕಾರ್ಯಾಚರಣಾ ಜಾಲವಾಗಿ ಹೊರಹೊಮ್ಮುವ ಗುರಿಯನ್ನು ಕಂಪನಿ ಹಾಕಿಕೊಂಡಿದೆ.

ಮಂಗಳೂರು, ಮೈಸೂರಿನತ್ತ ಅಮೆಜಾನ್ ಚಿತ್ತ! 1,000 'ಎಂಎಫ್‌ಸಿ'ಗಳ ಸ್ಥಾಪನೆ

ಈಗಾಗಲೇ ರಾಜಧಾನಿ ಬೆಂಗಳೂರು, ಮುಂಬೈ ಮತ್ತು ದೆಹಲಿ-ಎನ್‌ಸಿಆರ್‌ನಂತಹ ಮಹಾನಗರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ 'ಅಮೆಜಾನ್ ನೌ', ಇದೀಗ ಕರ್ನಾಟಕದ ಪ್ರಮುಖ ವಾಣಿಜ್ಯ ನಗರ ಮಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರಿಗೂ ಲಗ್ಗೆ ಇಡುತ್ತಿದೆ.

ಇದನ್ನೂ ಓದಿ: AI ಚಾಲಿತ Amazon.in ನ 'ಹೋಳಿ ಸ್ಟೋರ್' ಈಗ ಲೈವ್...

ಈ ವಿಸ್ತರಣೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಅಮೆಜಾನ್ ದೇಶಾದ್ಯಂತ 1,000ಕ್ಕೂ ಹೆಚ್ಚು ವಿಶೇಷ 'ಮೈಕ್ರೋ-ಫುಲ್‌ಫಿಲ್‌ಮೆಂಟ್ ಕೇಂದ್ರ'ಗಳನ್ನು (ಎಂಎಫ್‌ಸಿ) ಸ್ಥಾಪಿಸುತ್ತಿದೆ. ಕರ್ನಾಟಕದ ನಗರಗಳಲ್ಲದೆ ಪುಣೆ, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಜೈಪುರ, ಲಕ್ನೋ, ಕಾನ್ಪುರ, ಚಂಡೀಗಢ, ಅಹಮದಾಬಾದ್, ಮೀರತ್, ಪಾಣಿಪತ್, ಕೊಚ್ಚಿ, ಅಮೃತಸರ ಮತ್ತು ವೈಜಾಗ್ ಸೇರಿದಂತೆ ಒಟ್ಟು 100 ಎರಡನೇ ಹಾಗೂ ಮೂರನೇ ಸ್ಥರದ ನಗರಗಳಿಗೆ ಈ ಸೇವೆಯನ್ನು ವಿಸ್ತರಿಸುತ್ತಿದೆ.

16,000 ರೈತರಿಗೆ ಲಾಭ, ಮನೆ ಬಾಗಿಲಿಗೆ ಬರಲಿದೆ ತಾಜಾ ಹಣ್ಣು-ತರಕಾರಿ

'ಅಮೆಜಾನ್ ನೌ' ಅಡಿಯಲ್ಲಿ ಗ್ರಾಹಕರಿಗೆ ಮಾತ್ರವಲ್ಲ 16,000ಕ್ಕೂ ಹೆಚ್ಚು ರೈತರಿಗೂ ಲಾಭವಾಗಲಿದ್ದು, ಅಮೆಜಾನ್‌ನ ತಂತ್ರಜ್ಞಾನ ಮತ್ತು ಕಾರ್ಯಾಚರಣೆಯ ಲಾಭವನ್ನು ಇವರು ಪಡೆಯಲಿದ್ದಾರೆ. ಇವರು ಬೆಳೆದ ತಾಜಾ ಕೃಷಿ ಉತ್ಪನ್ನಗಳು ಮಾರಾಟಗಾರರ ಮೂಲಕ ನೇರವಾಗಿ ಮತ್ತು ಅತಿ ವೇಗವಾಗಿ ಗ್ರಾಹಕರ ಕೈಸೇರಲಿವೆ.

ಅಮೆಜಾನ್ ಇದಕ್ಕಾಗಿ ಬೃಹತ್‌ ಜಾಲವನ್ನು ನಿರ್ಮಿಸಿದ್ದು ಸಾವಿರಾರು ದಿನಬಳಕೆ ವಸ್ತುಗಳು ನಿಮಿಷಗಳಲ್ಲಿ ಡೆಲಿವರಿಯಾಗಲಿದ್ದರೆ, 10 ಲಕ್ಷಕ್ಕೂ ಹೆಚ್ಚು ವಸ್ತುಗಳು ಬುಕ್ ಮಾಡಿದ ಅದೇ ದಿನ ಹಾಗೂ 40 ಲಕ್ಷಕ್ಕೂ ಹೆಚ್ಚು ವಸ್ತುಗಳು ಮರುದಿನ ಗ್ರಾಹಕರ ಕೈ ಸೇರಲಿವೆ