ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

SIR: ಎಸ್‌ʼಐಆರ್‌ ಕಾವಲಿಗೆ ಹೊರ ರಾಜ್ಯದ ವೀಕ್ಷಕರ ನೇಮಕ ?

ಮಸೀದಿ, ಕಲ್ಯಾಣ ಮಂಟಪಗಳಲ್ಲಿ ಎಣಿಕೆ ನಮೂನೆಗಳನ್ನು ಭರ್ತಿ ಮಾಡುವ ವಿಡಿಯೊಗಳು ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಚುನಾವಣಾ ಆಯೋಗ ಮನೆಮನೆಗೆ ತೆರಳಿಯೇ ಅರ್ಜಿ ಗಳನ್ನು ನೀಡಬೇಕು ಎನ್ನುವ ಸ್ಪಷ್ಟ ಆದೇಶವನ್ನು ನೀಡಿತ್ತು. ಆದರೆ ಶನಿವಾರವೂ ಸಾಮೂಹಿಕ ವಾಗಿ ಅರ್ಜಿ ವಿತರಣೆ, ಭರ್ತಿ ನಡೆಯುತ್ತಿರುವ ವಿಡಿಯೊಗಳು ಕಾಣಿಸಿಕೊಂಡಿರುವುದು ತೀವ್ರ ವಿವಾದಕ್ಕೆ ಕಾರಣ ವಾಗಿದೆ. ಇದರ ಬೆನ್ನಲ್ಲೇ, ಹೊರರಾಜ್ಯಗಳಿಂದ ಅಧಿಕಾರಿಗಳನ್ನು ನೇಮಿಸುವ ಬಗ್ಗೆ ಚುನಾವಣಾ ಆಯೋಗ ಆಲೋಚನೆ ನಡೆಸಿದೆ ಎನ್ನಲಾಗುತ್ತಿದೆ.

SIR: ಎಸ್‌ʼಐಆರ್‌ ಕಾವಲಿಗೆ ಹೊರ ರಾಜ್ಯದ ವೀಕ್ಷಕರ ನೇಮಕ ?

-

Profile
Ashok Nayak Jul 5, 2026 8:36 AM

ನಿಲ್ಲದ ಸಾಮೂಹಿಕ ಅರ್ಜಿ ಭರ್ತಿ: ಬಿಜೆಪಿ-ಜೆಡಿಎಸ್‌ನಿಂದ ದೂರು

ಪ.ಬಂಗಾಳ ಮಾದರಿ ವಿಶೇಷ ವೀಕ್ಷಕರ ನೇಮಕಕ್ಕೆ ಆಯೋಗ ಚಿಂತನೆ

ಬೆಂಗಳೂರು: ರಾಜ್ಯದಲ್ಲಿ ಎಸ್‌ಐಆರ್ ಆರಂಭಗೊಂಡ ದಿನದಿಂದ ಶುರುವಾಗಿ ಗೊಂದಲ ಮುಂದುವರಿ ದಿದ್ದು, ಸಾಮೂಹಿಕವಾಗಿ ಅರ್ಜಿ ಭರ್ತಿ ಮಾಡುವಂತಿಲ್ಲ ಎನ್ನುವ ಸ್ಪಷ್ಟ ಸೂಚನೆಯ ಹೊರತಾಗಿಯೂ ರಾಜ್ಯದ ಹಲವು ಭಾಗದಲ್ಲಿ ಬಿಎಲ್ ಒಗಳು ಸಾಮೂಹಿಕ ಭರ್ತಿಯನ್ನೇ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದರ ಬೆನ್ನಲ್ಲೇ, ಕೇಂದ್ರ ಚುನಾವಣೆ ಆಯೋಗ ಹೊರ ರಾಜ್ಯದ ಅಧಿಕಾರಿಗಳನ್ನು ಉಸ್ತುವಾರಿಗಳನ್ನಾಗಿ ನೇಮಿಸುವ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಮಸೀದಿ, ಕಲ್ಯಾಣ ಮಂಟಪಗಳಲ್ಲಿ ಎಣಿಕೆ ನಮೂನೆಗಳನ್ನು ಭರ್ತಿ ಮಾಡುವ ವಿಡಿಯೊಗಳು ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಚುನಾವಣಾ ಆಯೋಗ ಮನೆಮನೆಗೆ ತೆರಳಿಯೇ ಅರ್ಜಿ ಗಳನ್ನು ನೀಡಬೇಕು ಎನ್ನುವ ಸ್ಪಷ್ಟ ಆದೇಶವನ್ನು ನೀಡಿತ್ತು. ಆದರೆ ಶನಿವಾರವೂ ಸಾಮೂಹಿಕ ವಾಗಿ ಅರ್ಜಿ ವಿತರಣೆ, ಭರ್ತಿ ನಡೆಯುತ್ತಿರುವ ವಿಡಿಯೊಗಳು ಕಾಣಿಸಿಕೊಂಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ, ಹೊರರಾಜ್ಯಗಳಿಂದ ಅಧಿಕಾರಿಗಳನ್ನು ನೇಮಿಸುವ ಬಗ್ಗೆ ಚುನಾವಣಾ ಆಯೋಗ ಆಲೋಚನೆ ನಡೆಸಿದೆ ಎನ್ನಲಾಗುತ್ತಿದೆ.

ಯಾವುದೇ ಮತದಾರರನ್ನು ಪಟ್ಟಿಯಿಂದ ತೆಗೆಯುವುದು ಹಾಗೂ ಸೇರ್ಪಡೆ ಮಾಡಬೇಕಾದರೆ ಬಿಎಲ್‌ʼಒಗಳು ಕಡ್ಡಾಯವಾಗಿ ವೀಕ್ಷಕರ ಅನುಮತಿ ಪಡೆಯಬೇಕು. ಇದರೊಂದಿಗೆ ಅಧಿಕಾರಿಗಳು ಕಡ್ಡಾಯವಾಗಿ ಮನೆ ಮನೆಗೆ ತೆರಳಿ ಗಣತಿ ನಮೂನೆಯನ್ನು ನೀಡಬೇಕು. ಜತೆಗೆ ಆಯೋಗ ನಿಗದಿಪಡಿಸಿದ ಸ್ಥಳದಲ್ಲಿಯೇ ಎಸ್‌ಐಆರ್ ಪ್ರಕ್ರಿಯೆಯನ್ನು ನಡೆಸಬೇಕು.

ಇದನ್ನೂ ಓದಿ: SIR in Karnataka: ಹುಬ್ಬಳ್ಳಿಯ ತಮ್ಮ ನಿವಾಸದಲ್ಲೇ SIRನಲ್ಲಿ ಭಾಗಿಯಾಗಿ ಪ್ರೇರಣೆಯಾದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಆದರೆ ಹಲವು ಭಾಗಗಳಲ್ಲಿ ಈ ರೀತಿ ನಡೆಯದೇ ಇರುವುದರಿಂದ ಆಯೋಗ ಎಸ್‌ಐಆರ್ ಪ್ರಕಿಯೆ ಯನ್ನು ವೀಕ್ಷಕರ ಸಮ್ಮುಖದಲ್ಲಿ ನಡೆಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ, ಜೆಡಿಎಸ್‌ನಿಂದ ದೂರು: ಎಸ್‌ಐಆರ್ ಗೊಂದಲಕ್ಕೆ ಸಂಬಂಧಿಸಿ ಈಗಾಗಲೇ ಬಿಜೆಪಿಮತ್ತು ಜೆಡಿಎಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿzರೆ. ಮತದಾರರ ಪಟ್ಟಿಯ ಪಾವಿತ್ಯತೆಯನ್ನು ಕಾಪಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇದು ಪಕ್ಷಪಾತದ ನಡೆ ಎಂದು ಆರೋಪಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗ, ಪಶ್ಚಿಮ ಬಂಗಾಳದ ಮಾದರಿಯಲ್ಲಿ ಕರ್ನಾಟಕಕ್ಕೂ ವಿಶೇಷ ವೀಕ್ಷಕರನ್ನು ನೇಮಕ ಮಾಡಲು ಚಿಂತನೆ ನಡೆಸಿದೆ. ಹೊರ ರಾಜ್ಯದ ವೀಕ್ಷಕರನ್ನು ನೇಮಕ ಮಾಡುವ ಕ್ರಮವನ್ನು ಸುಪ್ರಿಂಕೋರ್ಟ್ ಈಗಾಗಲೇ ಎತ್ತಿ ಹಿಡಿದಿದೆ.

ಇದೇ ಅಸವನ್ನು ಈಗ ಕರ್ನಾಟಕದಲ್ಲಿ ಬಳಸಲು ಆಯೋಗ ಮುಂದಾಗಿದೆ. ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ನಡೆಸುವ ವೇಳೆ ಸಾಕಷ್ಟು ಲೋಪಗಳು ಕಂಡುಬಂದಿದ್ದವು. ಕೊನೆಗೆ ಪಶ್ಚಿಮ ಬಂಗಾಳ ಚುನಾವಣಾ ಆಯೋಗದ ಮನವಿ ಮೇರೆಗೆ ಭಾರತೀಯ ಚುನಾವಣಾ ಆಯೋಗ ಎಸ್‌ಐಆರ್ ಪ್ರಕ್ರಿಯೆ ನಡೆಸಲು ಹೊರ ರಾಜ್ಯದ ಹಿರಿಯ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಕ ಮಾಡಿದ್ದರು. ಇದೀಗ ಇದೇ ನಡೆಯನ್ನು ಕರ್ನಾಟಕದಲ್ಲಿಯೂ ಅನುಸರಿಸುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.

ಶೇ.50ರಷ್ಟು ಅರ್ಜಿ ನಮೂನೆ ವಿತರಣೆ

ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ ಅಭಿಯಾನದಲ್ಲಿ ಎಣಿಕೆ ನಮೂನೆ ಗಳ ವಿತರಣೆ ಶೇ.50ರ ಗಡಿ ದಾಟಿದೆ. ಜುಲೈ 4ರ ಸಂಜೆ ಆರು ಗಂಟೆಯ ವೇಳೆಗೆ ರಾಜ್ಯ ದಲ್ಲಿರುವ ಒಟ್ಟು 5,54,32,314 ಮತದಾರರಲ್ಲಿ 2,78,21,970 ಎಣಿಕೆ ನಮೂನೆಗಳು ವಿತರಣೆ ಗೊಂಡಿದೆ. ರಾಜ್ಯದ 59,050 ಮತಗಟ್ಟೆ ಗಳಲ್ಲಿ, 6352 ಮತಗಟ್ಟೆಗಳಲ್ಲಿ ಶೇ.100ರಷ್ಟು ನಮೂನೆಗಳ ವಿತರಣೆ ಪೂರ್ಣ ಗೊಂಡಿದೆ. ಇನ್ನೂ 5538 ಮತಗಟ್ಟೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ವಿತರಣೆ ನಡೆದಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಶೇ.3.23 ಡಿಜಿಟಲೀಕರಣ

ಎಸ್‌ಐಆರ್ ಅಭಿಯಾನದಲ್ಲಿ ಎಣಿಕೆ ನಮೂನೆಗಳ ವಿತರಣೆ ಭರದಿಂದ ಸಾಗಿದ್ದರೂ ಇದುವರೆಗೆ 17,88,330 ನಮೂನೆಗಳು (ಶೇ.3.23) ಮಾತ್ರ ಡಿಜಿಟಲೀಕರಣಗೊಂಡಿವೆ. ಕೇವಲ 2 ಮತಗಟ್ಟೆಗಳಲ್ಲಿ ಶೇ.100 ಡಿಜಿಟಲೀಕರಣ ಪೂರ್ಣಗೊಂಡಿದ್ದು, 7 ಮತಗಟ್ಟೆಗಳಲ್ಲಿ ಶೇ.9ಕ್ಕಿಂತ ಹೆಚ್ಚು ಡಿಜಿಟಲೀ ಕರಣ ದಾಖಲಾಗಿದೆ. ಈ ನಡುವೆ 77,624 ಮತದಾರರು ಆನ್‌ಲೈನ್ ಮೂಲಕ ಎಣಿಕೆ ನಮೂನೆ ಗಳನ್ನು ಸಲ್ಲಿಸಿದ್ದಾರೆ. ಪರಿಷ್ಕರಣೆ ವೇಳೆ 13859 ಮೃತ ಮತದಾರರು, 11,697 ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು, 2461 ಈಗಾಗಲೇ ಬೇರೆಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರು, 433 ಪತ್ತೆಯಾಗದ ಅಥವಾ ಗೈರುಹಾಜರಿದ್ದವರು ಹಾಗೂ 161 ಇತರೆ ಪ್ರಕರಣ ಗಳು ಗುರುತಿಸಲ್ಪಟ್ಟಿದ್ದು, ಒಟ್ಟು 28611 ಪ್ರಕರಣಗಳು ವಿವಿಧ ವರ್ಗಗಳಲ್ಲಿ ದಾಖಲಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

image

ರಾಜ್ಯ ಸರಕಾರ ಅಧಿಕಾರಿಗಳನ್ನು ದುರ್ಬಳಕೆ ಮಾಡುತ್ತಿದೆ. ಎಸ್ ಐಆರ್‌ನಲ್ಲಿ ಅಧಿಕಾರಿಗಳು ಮನೆಮನೆಗೆ ಹೋಗಿ ಅರ್ಜಿ ನೀಡಬೇಕು. ಆದರೆ ಕಲ್ಯಾಣ ಮಂಟಪ, ಮಸೀದಿಗಳಲ್ಲಿ ಕುಳಿತು ನಮೂನೆಗಳನ್ನು ಹಂಚುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳ ಮೇಲೆ ಶಾಸಕರು ಒತ್ತಡ ಹೇರುತ್ತಿದ್ದಾರೆ. ಇದನ್ನೆಲ್ಲ ಆಯುಕ್ತರ ಗಮನಕ್ಕೆ ತಂದಿದ್ದೇವೆ. ಎಲ್ಲಿ ಈ ರೀತಿ ಎಡವಟ್ಟಾಗಿದೆಯೋ ಅಲ್ಲಿ ಹೊಸದಾಗಿ ಎಸ್‌ಐಆರ್ ಆರಂಭಿಸಬೇಕು.

- ಬಿ.ಎಸ್.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
image

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಇಷ್ಟೇ ಅಕ್ರಮ,ಅನ್ಯಾಯಗಳು ನಡೆಯುತ್ತಿದ್ದರೂ ರಾಜ್ಯ ಸರಕಾರ ಈ ದಿನದವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಣ್ಣ ವಿಷಯಕ್ಕೂ ದೊಡ್ಡ ದನಿಯಲ್ಲಿ ಮಾತನಾಡುವ ಕೆಪಿಸಿಸಿ ಅಧ್ಯಕ್ಷರು, ಸಣ್ಣ ವಿಷಯಕ್ಕೂ ಕುಟುಕುವ ಗೃಹ ಸಚಿವರು ಏಕೆ ಮೌನವಾಗಿzರೆ? ಊರಿಗೆಲ್ಲ ಬೋಧನೆ ಮಾಡುವವರು ಇದರ ಬಗ್ಗೆಯೂ ಚರ್ಚೆ ಮಾಡಬೇಕಲ್ಲವೇ?

ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
image

ಚುನಾವಣಾ ಆಯೋಗಕ್ಕೆ ಪಾರದರ್ಶಕ ಚುನಾವಣೆ ನಡೆಸುವುದು, ಶುದ್ಧ ಮತದಾರರ ಪಟ್ಟಿ ಸಿದ್ಧಪಡಿಸುವುದನ್ನು ಬಿಟ್ಟರೆ ಬೇರೆ ಯಾವ ಕೆಲಸವಿದೆ? ಅದನ್ನು ಸರಿಯಾಗಿ ಮಾಡದೇ ಇದ್ದ ಮೇಲೆ ಇನ್ನೆನು ಮಾಡುತ್ತಾರೆ? ಕೇಂದ್ರ ಸಚಿವರೆಲ್ಲ ಮಾತನಾಡುತ್ತಿದ್ದಾರೆ. ಆದರೆ ಕೇಂದ್ರದಲ್ಲಿ ಅವರೇ ಅಧಿಕಾರದಲ್ಲಿರುವುದನ್ನು ಮರೆತಂತಿದೆ. ಎಲ್ಲವೂ ಅವರ ಕೈಯಲ್ಲಿದೆ. ಸರಿಯಾಗಿ ನಿಭಾಯಿಸಬೇಕಲ್ಲವೇ?

ಪ್ರಿಯಾಂಕ್ ಖರ್ಗೆ, ಗೃಹ ಸಚಿವ