ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Clean-up drive: ಬೆಂಗಳೂರು: ಸ್ವಚ್ಛತಾ ಅಭಿಯಾನದಲ್ಲಿ ಗೆದ್ದವರಿಗೆ ಸಿಗಲಿದೆ 1 ಲಕ್ಷ ರೂ. ಬಹುಮಾನ

Clean Bengaluru: ಉತ್ತಮ ಸ್ವಚ್ಛತೆಯ ಚಿತ್ರಣವನ್ನು ನೀಡುವ ಸಂಸ್ಥೆಗಳಿಗೆ ನಗದು ಬಹುಮಾನಗಳನ್ನು ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. ಮೊದಲ ಬಹುಮಾನ ವಿಜೇತರು ರೂ. 1,00,000, ಎರಡನೇ ಮತ್ತು ಮೂರನೇ ಬಹುಮಾನಗಳ ವಿಜೇತರು ಕ್ರಮವಾಗಿ ರೂ. 50,000 ಮತ್ತು ರೂ. 25,000 ನಗದು ಬಹುಮಾನಗಳನ್ನು ಪಡೆಯಲಿದ್ದಾರೆ. ಕ್ಷೇತ್ರ ಮಟ್ಟದಲ್ಲಿಯೂ ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ. ನಾಗರಿಕರು ಸ್ವಚ್ಛತಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಆಶಿಸಿದ್ದಾರೆ. ಇನ್ನೊಂದೆಡೆ, ಜಿಬಿಎಯವರು ಬೀದಿಯಲ್ಲಿ ಕಸ ಸುರಿದು ಬಂದವರ ಮನೆ ಮುಂದೆಯೇ ಕಸ ಸುರಿದು ದಂಡ ವಸೂಲಿ ಮಾಡಿದ್ದಾರೆ.

ಬೆಂಗಳೂರು: ಸ್ವಚ್ಛತಾ ಅಭಿಯಾನ ವಿಜೇತರಿಗೆ ಸಿಗಲಿದೆ 1 ಲಕ್ಷ ರೂ. ಬಹುಮಾನ

-

ಹರೀಶ್‌ ಕೇರ ಹರೀಶ್‌ ಕೇರ Nov 4, 2025 3:15 PM

ಬೆಂಗಳೂರು: ರಾಜಧಾನಿಯಲ್ಲಿ ಸ್ವಚ್ಛತಾ ಅಭಿಯಾನದ ತೀವ್ರತೆ ಪಡೆದುಕೊಳ್ಳುತ್ತಿದೆ. ಬೆಂಗಳೂರು ಉತ್ತರ ನಗರ ಕಾರ್ಪೊರೇಶನ್‌ ನವೆಂಬರ್ 8ರಂದು ತನ್ನ ವ್ಯಾಪ್ತಿಯಲ್ಲಿ ದಿನವಿಡೀ ತೀವ್ರ ಸ್ವಚ್ಛತಾ (Bengaluru Clean-up drive) ಅಭಿಯಾನವನ್ನು ನಡೆಸಲಿದೆ. ಅತಿ ಹೆಚ್ಚಿನ ಸ್ವಚ್ಛತೆ (Clean Bengaluru) ಪ್ರದರ್ಶಿಸಿದ ಸಂಸ್ಥೆಗಳು, ವಿಭಾಗಗಳಿಗೆ 1 ಲಕ್ಷ ರೂ ಇನಾಮು ಸಲ್ಲಲಿದೆ ಎಂದು ಘೋಷಿಸಲಾಗಿದೆ. ಇದಲ್ಲದೆ ಇತರ ಬಹುಮಾನಗಳು (prize) ಕೂಡ ಇವೆ. ಇನ್ನೊಂದೆಡೆ, ಜಿಬಿಎಯವರು ಬೀದಿಯಲ್ಲಿ ಕಸ ಸುರಿದು ಬಂದವರ ಮನೆ ಮುಂದೆಯೇ ಕಸ ಸುರಿದು ದಂಡ ವಸೂಲಿ ಮಾಡಿದ್ದಾರೆ.

ಈ ಅಭಿಯಾನ ಹೆಬ್ಬಾಳ, ಪುಲಕೇಶಿನಗರ, ಸರ್ವಜ್ಞನಗರ, ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ ಮತ್ತು ರಾಜರಾಜೇಶ್ವರಿ ನಗರದ ಕೆಲವು ಭಾಗಗಳ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಘನತ್ಯಾಜ್ಯ ನಿರ್ವಹಣೆ, ಎಂಜಿನಿಯರಿಂಗ್ ಮತ್ತು ಆರೋಗ್ಯ ಸೇರಿದಂತೆ ಬಹು ಇಲಾಖೆಗಳ ತನ್ನ ಸಿಬ್ಬಂದಿಯನ್ನು ನಿಗಮವು ನಿಯೋಜಿಸಲಿದೆ. ನಾಗರಿಕ ಗುಂಪುಗಳು ಮತ್ತು ಸರ್ಕಾರೇತರ ಸಂಸ್ಥೆಗಳನ್ನು ಸಹ ಈ ಕಾರ್ಯಕ್ರಮದಲ್ಲಿ ಸೇರಲು ನಿಗಮ ಆಹ್ವಾನಿಸಿದೆ.

ಉತ್ತಮ ಸ್ವಚ್ಛತೆಯ ಚಿತ್ರಣವನ್ನು ನೀಡುವ ಸಂಸ್ಥೆಗಳಿಗೆ ನಗದು ಬಹುಮಾನಗಳನ್ನು ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. ಮೊದಲ ಬಹುಮಾನ ವಿಜೇತರು ರೂ. 1,00,000, ಎರಡನೇ ಮತ್ತು ಮೂರನೇ ಬಹುಮಾನಗಳ ವಿಜೇತರು ಕ್ರಮವಾಗಿ ರೂ. 50,000 ಮತ್ತು ರೂ. 25,000 ನಗದು ಬಹುಮಾನಗಳನ್ನು ಪಡೆಯಲಿದ್ದಾರೆ. ಕ್ಷೇತ್ರ ಮಟ್ಟದಲ್ಲಿಯೂ ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ. ನಾಗರಿಕರು ಸ್ವಚ್ಛತಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಆಶಿಸಿದ್ದಾರೆ.

ಇದನ್ನೂ ಓದಿ: Ramanand Sharma Column: ಕಸ ಸುರಿಯುವ ಹಬ್ಬ: ಇದು ಅತಿರೇಕದ ಕ್ರಮವೇ ?

ಕಸ ಎಸೆದವರಿಗೆ ಭಾರಿ ಶಾಕ್‌, ಒಂದೇ ದಿನ 2.80 ಲಕ್ಷ ರೂ. ದಂಡ ವಸೂಲಿ

ರಸ್ತೆ ಬದಿಯಲ್ಲಿ ಕಸ ಎಸೆಯುವವರ ಮೇಲೆ ಹದ್ದಿನ ಕಣ್ಣಿಟ್ಟು ಕಠಿಣ ಕ್ರಮಕ್ಕೆ ಮುಂದಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮಾರ್ಷಲ್​ಗಳು ಗುರುವಾರ ಭರ್ಜರಿ ಕಾರ್ಯಾಚರಣೆಯನ್ನೇ ನಡೆಸಿದ್ದಾರೆ. ಒಂದೇ ದಿನ 218 ಮನೆಗಳ ಮುಂದೆ ಕಸ ಸುರಿದಿದ್ದು, 2.80 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ಬೆಂಗಳೂರಿನ ಗಾಂಧಿನಗರ ವಾರ್ಡ್‌ ನಂಬರ್‌ 94ರಲ್ಲಿ ವಾಸವಾಗಿರುವ ಮನೆಯವರು ರಸ್ತೆ ಬದಿ ಕಸ ಎಸೆದು ಬಂದಿದ್ದರು. ಇದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ ಪಾಲಿಕೆ ಮಾರ್ಷೆಲ್‌ಗಳು, ಗುರುವಾರ ಕಸವನ್ನು ಅವರ ಮನೆ ಮುಂದೆಯೇ ಸುರಿದಿದ್ದಾರೆ. ಹೀಗೆ ಇದೇ ಏರಿಯಾದಲ್ಲಿ ಹತ್ತಾರು ಮನೆಗಳ ಮುಂದೆ ಕಸ ಸುರಿದು, ಜತೆಗೆ ತಲಾ 1 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ಮಲ್ಲೇಶ್ವರದ ದತ್ತಾತ್ರೇಯ ಟೆಂಪಲ್ ವಾರ್ಡ್‌ನಲ್ಲಿ ಗುಜರಿ ವ್ಯಾಪಾರ ಮಾಡುತ್ತಿರುವ ವ್ಯಕ್ತಿಯೊಬ್ಬ ಕೂಡಾ ರಸ್ತೆ ಬದಿ ಕಸ ಸುರಿದು ಬಂದಿದ್ದ. ಆತನಿಗೂ ಜಿಪಿಎ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಹೊಸಕೆರೆಹಳ್ಳಿ, ಬನಶಂಕರಿ, ಮಹದೇವಪುರ ಸೇರಿದಂತೆ ಹಲವೆಡೆ ಕಸ ಎಸೆಯುವವರನ್ನು ಮಾರ್ಷಲ್‌ಗಳ ಮೂಲಕ ಪತ್ತೆಹಚ್ಚಿದ್ದ ಜಿಬಿಎ, ಎಲ್ಲೆಂದರಲ್ಲಿ ಕಸ ಎಸೆದ 218 ಜನರ ಮನೆಗಳ ಮುಂದೆ ಕಸ ಸುರಿದು ಜಾಗೃತಿ ಮೂಡಿಸಿದೆ. ಅಲ್ಲದೇ ಕಸ ಎಸೆದವರ ಬಳಿ ತಲಾ ಸಾವಿರ ರೂಪಾಯಿ ದಂಡ ವಸೂಲಿ ಮಾಡಿದೆ.

ಇದನ್ನೂ ಓದಿ: Kasa Suriyuva Habba: ಎಲ್ಲೆಂದರಲ್ಲಿ ಕಸ ಎಸೆಯುವವರ ವಿಡಿಯೊ ಕಳುಹಿಸಿ 250 ರೂ. ಗಳಿಸಿ; BSWMLನಿಂದ ಹೊಸ ಯೋಜನೆ

ಆರಂಭದಲ್ಲಿ ಒಂದು ಸಾವಿರ ದಂಡ ವಿಧಿಸುತ್ತಿರುವ ಜಿಬಿಎ, ಮತ್ತೆ ಕಸ ಹಾಕಿದರೆ, ಮತ್ತೊಂದು ಶಾಕ್‌ ಕೊಡಲು ಮುಂದಾಗಿದೆ. ಎರಡನೇ ಬಾರಿ ಮನೆ ಮುಂದೆ ಕಸ ಸುರಿದು, ತಮಟೆ ಬಾರಿಸಿ ಜಾಗೃತಿ ಮೂಡಿಸಲಿದ್ದಾರೆ. ಮತ್ತೆ ಅದೇ ಮನೆಯವರು ಕಸ ಸುರಿದರೆ ಬಿಗ್ ಶಾಕ್‌ ನೀಡಲಿದ್ದು, 5000 ರೂ. ದಂಡ ಬೀಳಲಿದೆ. ಮನೆಯೊಳಗೇ ಜಿಬಿಎ ಅಧಿಕಾರಿಗಳು ಕಸ ಸುರಿಯಲೂಬಹುದು.