ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗಾರ್ಡನ್ ಸಿಟಿ ಬೆಂಗಳೂರಿಗೆ ಇನ್ನಷ್ಟು ಕಳೆ: ತಲೆ ಎತ್ತಲಿವೆ ಲಾಲ್ ಬಾಗ್ ಮಾದರಿಯ ಇನ್ನೂ 3 ಉದ್ಯಾನವನಗಳು

ಉತ್ತರ ಬೆಂಗಳೂರಿನ ಪ್ರಸ್ತಾವಿತ ಸುರಂಗ ಯೋಜನೆಯ ಪರಿಣಾಮ ಸುಮಾರು 900 ಮರಗಳು ನಾಶವಾಗುತ್ತವೆ ಎನ್ನುವ ಕಳವಳ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಲಾಲ್‌ಬಾಗ್ ಮಾದರಿಯ 3 ಉದ್ಯಾನ ಯೋಜನೆಗಳನ್ನು ಅನಾವರಣಗೊಳಿಸಿದರು. ಇದರಲ್ಲಿ ಒಂದು ರಕ್ಷಣಾ ಭೂಮಿಯಲ್ಲಿ ಹಾಗೂ ಮತ್ತೆರಡು ನಗರದೊಳಗಿನ ಅರಣ್ಯ ಭೂಮಿಯಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಲಾಲ್‌ಬಾಗ್ ಮಾದರಿಯ 3 ಉದ್ಯಾನ ಯೋಜನೆ ಅನಾವರಣ

ಸಂಗ್ರಹ ಚಿತ್ರ -

ಬೆಂಗಳೂರು: ಲಾಲ್‌ಬಾಗ್ (Lalbagh) ಮಾದರಿಯ 3 ಉದ್ಯಾನ ಯೋಜನೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (chief minister DK Shivakumar) ಅನಾವರಣಗೊಳಿಸಿದರು. 220ನೇ ಲಾಲ್‌ಬಾಗ್ ಪುಷ್ಪ ಪ್ರದರ್ಶನದ (Lalbagh Flower Show) ಉದ್ಘಾಟನೆಯ ಸಂದರ್ಭದಲ್ಲಿ ಅವರು ಈ ಕುರಿತು ಘೋಷಣೆಯನ್ನು ಮಾಡಿದ್ದು, ಈ ಯೋಜನೆಗಳಿಗೆ ಭೂಮಿಯನ್ನು ಪಡೆಯಲು ರಾಜ್ಯ ಸರ್ಕಾರ ಈಗಾಗಲೇ ರಕ್ಷಣಾ ಸಚಿವಾಲಯ (Defence land) ಮತ್ತು ಅರಣ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತಿದೆ. ಶೀಘ್ರದಲ್ಲೇ ಕೇಂದ್ರ ರಕ್ಷಣಾ ಸಚಿವರನ್ನು (defence ministry) ಕೂಡ ಭೇಟಿ ಮಾಡುವುದಾಗಿ ಅವರು ತಿಳಿಸಿದರು.

ಉತ್ತರ ಬೆಂಗಳೂರಿನ ಪ್ರಸ್ತಾವಿತ ಸುರಂಗ ಯೋಜನೆಯ ಪರಿಣಾಮ ಸುಮಾರು 900 ಮರಗಳು ನಾಶವಾಗುತ್ತವೆ ಎನ್ನುವ ಕಳವಳ ಹೆಚ್ಚಾಗುತ್ತಿದ್ದು, ಈ ನಡುವೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಲಾಲ್‌ಬಾಗ್ ಮಾದರಿಯ ಮೂರು ದೊಡ್ಡ ಸಾರ್ವಜನಿಕ ಉದ್ಯಾನಗಳನ್ನು ರಚಿಸುವ ಯೋಜನೆಗಳ ಬಗ್ಗೆ ಘೋಷಣೆ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿದ ಬೆಂಜಮಿನ್ ನೆತನ್ಯಾಹು; ಭಾರತ–ಇಸ್ರೇಲ್ ಬಾಂಧವ್ಯ ಮತ್ತಷ್ಟು ಬಲಪಡಿಸಲು ಮಾತುಕತೆ

ಈ ವರ್ಷದ ಫಲಪುಷ್ಪ ಪ್ರದರ್ಶನವು ಗಂಗಾ ರಾಜವಂಶದ ಇತಿಹಾಸ, ಕೃಷಿ ಮತ್ತು ನೀರಿನ ಸಂರಕ್ಷಣೆಯಲ್ಲಿ ಅದರ ಪಾತ್ರದ ಕುರಿತು ವರ್ಣಿಸುತ್ತದೆ. ಲಾಲ್‌ಬಾಗ್ ಕೇವಲ ಉದ್ಯಾನವನವಲ್ಲ. ಇದೊಂದು ದೊಡ್ಡ ಇತಿಹಾಸ. ಇದನ್ನು ಗಂಗಾ ರಾಜವಂಶದ ಅವಧಿಯಲ್ಲಿ ವಿನ್ಯಾಸಗೊಳಿಸಲಾಗಿತ್ತು. ಅವರು ನಿರ್ಮಿಸಿದ ಸರೋವರಗಳು ಇಂದಿಗೂ ಇಲ್ಲಿದೆ. ಆಗಿನ ಕಾಲದ ರೈತರ ಜೀವನ ಮತ್ತು ಹೋರಾಟವನ್ನು ಇದು ಪ್ರತಿನಿಧಿಸುತ್ತದೆ ಎಂದರು.

ಮುಂದಿನ ಸ್ವಾತಂತ್ರ್ಯ ದಿನಾಚರಣೆಯಂದು ರಾಜ್ಯ ಸರ್ಕಾರವು ರೈತರು ಮತ್ತು ಸರ್ಕಾರದ ಪಾಲುದಾರಿಕೆಯ ಬಗ್ಗೆ ಯೋಜನೆಯನ್ನು ಅನಾವಣರಗೊಳಿಸಲಿದೆ. ಇದು ರಾಜ್ಯದಲ್ಲಿ ಹಸಿರನ್ನು ಹೆಚ್ಚಿಸುವುದು ಮತ್ತು ರೈತರ ಜೀವನೋಪಾಯವನ್ನು ಬೆಂಬಲಿಸವ ರೀತಿಯಲ್ಲಿದೆ. ಇದನ್ನು ಆಗಸ್ಟ್ 15ರಂದು ಔಪಚಾರಿಕವಾಗಿ ಘೋಷಿಸಲಾಗುವುದು ಎಂದ ಅವರು ರೈತರ ಸಬಲೀಕರಣಕ್ಕಾಗಿ 100 ದಿನಗಳ ಸರ್ಕಾರಿ ಕಾರ್ಯಕ್ರಮವನ್ನು ಯೋಜಿಸಲಾಗಿದೆ ಎಂದು ತಿಳಿಸಿದರು.



ಉದ್ಯಾನ ನಿರ್ಮಾಣದ ಯೋಜನೆಯ ಕುರಿತು ಮಾತನಾಡಿದ ಅವರು, ಲಾಲ್‌ಬಾಗ್ ಶೈಲಿಯ ಮೂರು ಉದ್ಯಾನಗಳನ್ನು ಬೆಂಗಳೂರಿನಲ್ಲಿ ನಿರ್ಮಿಸಲು ಸರ್ಕಾರ ಯೋಜನೆ ಮಾಡಿಕೊಂಡಿದೆ. ಇದರಲ್ಲಿ ಒಂದನ್ನು ಬೆಂಗಳೂರಿನ ರಕ್ಷಣಾ ಭೂಮಿಯಲ್ಲಿ ನಿರ್ಮಿಸಲಾಗುವುದು. ಆ ಭೂಮಿ ರಕ್ಷಣಾ ಸಚಿವಾಲಯದ ಮಾಲೀಕತ್ವದಲ್ಲಿ ಇರುವುದರಿಂದ ಅಲ್ಲಿ ಉದ್ಯಾನಗಳನ್ನು ನಿರ್ಮಿಸಲು ಕೇಂದ್ರ ರಕ್ಷಣಾ ಸಚಿವಾಲಯದ ಅನುಮತಿ ಬೇಕಾಗುತ್ತದೆ. ಹೀಗಾಗಿ ಅವರಿಗೆ ಪತ್ರ ಬರೆದಿದ್ದೇನೆ. ಶೀಘ್ರದಲ್ಲೇ ಕೇಂದ್ರ ರಕ್ಷಣಾ ಸಚಿವರನ್ನು ಈ ಹಿನ್ನೆಲೆಯಲ್ಲಿ ಭೇಟಿ ಮಾಡಲಿದ್ದೇನೆ ಎಂದು ತಿಳಿಸಿದರು.

ಈ ಹಿಂದೆ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ಭೂಮಿಯಲ್ಲಿ ಉದ್ಯಾನವನ್ನು ನಿರ್ಮಿಸಲು ಅನುಮತಿ ನೀಡಿದ್ದಾರೆ. ಅಂತೆಯೇ ಈಗ ಬೆಂಗಳೂರು ನಗರದೊಳಗಿನ ರಕ್ಷಣಾ ಭೂಮಿಯಲ್ಲಿ ಉದ್ಯಾನ ನಿರ್ಮಿಸಲಾಗುವುದು. ಅಂತೆಯೇ ಬೆಂಗಳೂರು ನಗರದ ಒಳಗಿನ ಎರಡು ಅರಣ್ಯ ಭೂಮಿಯಲ್ಲಿ ಉದ್ಯಾನಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವುದಾಗಿ ಅವರು ಹೇಳಿದರು.

ಪ್ರಸ್ತಾವಿತ ಉದ್ಯಾನಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ ಏಜೆನ್ಸಿಗಳ ಮೂಲಕ ಅಭಿವೃದ್ಧಿಪಡಿಸಲಾಗುವುದು. ನಮ್ಮ ಅಧಿಕಾರಾವಧಿಯಲ್ಲಿ ನಗರದ ಹಸಿರನ್ನು ರಕ್ಷಿಸಲು ಮತ್ತು ಸಾರ್ವಜನಿಕ ಜೀವನವನ್ನು ಸುಧಾರಿಸಲು ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

Handloom Day: ನೇಕಾರರನ್ನು ಬೆಂಬಲಿಸಿ, ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ: ಪ್ರಧಾನಿ ನರೇಂದ್ರ ಮೋದಿ ಕರೆ

ಉತ್ತರ ಬೆಂಗಳೂರಿನ ಎಸ್ಟೀಮ್ ಮಾಲ್ ಮತ್ತು ಪಶುವೈದ್ಯಕೀಯ ಕಾಲೇಜು ನಡುವೇ ಸುಮಾರು 2.2 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮುಂದಾಗಿದೆ. ಈ ಯೋಜನೆಯು ಬೆಂಗಳೂರಿನ ಅತಿದೊಡ್ಡ ಹಸಿರು ಕಾರಿಡಾರ್‌ಗಳಲ್ಲಿ ಒಂದಾದ ಪಶುವೈದ್ಯಕೀಯ ಕಾಲೇಜು ಕ್ಯಾಂಪಸ್, ಹೆಬ್ಬಾಳ ಟ್ರೀ ಪಾರ್ಕ್, ಹೆಬ್ಬಾಳ ಸರೋವರದ ಬಫರ್ ಮತ್ತು ನೆರೆಯ ಸಾಂಸ್ಥಿಕ ಕ್ಯಾಂಪಸ್‌ ವ್ಯಾಪ್ತಿಯ ಸುಮಾರು 893 ಮರಗಳ ಮೇಲೆ ಪರಿಣಾಮ ಬೀರಲಿದೆ. ಈ ಮರಗಳನ್ನು ಕಡಿಯುವ ಬದಲು ಕಸಿ ಮಾಡಲು ಬಿಡಿಎ ಪ್ರಸ್ತಾಪಿಸಿದ್ದು, ಇದಕ್ಕಾಗಿ ಅರಣ್ಯ ಇಲಾಖೆಯಿಂದ ಅನುಮೋದನೆಗಾಗಿ ಕಾಯುತ್ತಿದೆ. ಈವರೆಗೆ ಯಾವುದೇ ಮರಗಳನ್ನು ಕಡಿದಿಲ್ಲ. ಮಣ್ಣಿನ ತನಿಖೆ ಸೇರಿದಂತೆ ಪ್ರಾಥಮಿಕ ಕೆಲಸಗಳು ಪ್ರಾರಂಭವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.