Kannada Rajyotsava award 2025: ಪ್ರಕಾಶ್ ರಾಜ್ ಸೇರಿ 70 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ; ಪ್ರಶಸ್ತಿಗೆ ಆಯ್ಕೆ ಸಮಿತಿ ತೀರ್ಮಾನವೇ ಅಂತಿಮ ಎಂದ ಸಿಎಂ
Karnataka Rajyotsava 2025: ನಟ ಪ್ರಕಾಶ್ ರಾಜ್, ನಟಿ ವಿಜಯಲಕ್ಷ್ಮಿ ಸಿಂಗ್, ಲೇಖಕ ರಹಮತ್ ತರೀಕೆರೆ, ಸಮಾಜ ಸೇವಕಿ ಸೂಲಗಿತ್ತಿ ಈರಮ್ಮ ಸೇರಿ 70 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ-2025 ಪ್ರದಾನ ಮಾಡಲಾಗಿದೆ. ಯಾರೆಲ್ಲಾ ಸಾಧಕರು ಪ್ರಶಸ್ತಿ ಪಡೆದಿದ್ದಾರೆ ಎಂಬ ಕುರಿತ ಮಾಹಿತಿ ಇಲ್ಲಿದೆ.
-
Prabhakara R
Nov 1, 2025 9:08 PM
ಬೆಂಗಳೂರು, ನ.1: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ನಟ ಪ್ರಕಾಶ್ ರಾಜ್, ನಟಿ ವಿಜಯಲಕ್ಷ್ಮಿ ಸಿಂಗ್, ಲೇಖಕ ರಹಮತ್ ತರೀಕೆರೆ, ಸಮಾಜ ಸೇವಕಿ ಸೂಲಗಿತ್ತಿ ಈರಮ್ಮ ಸೇರಿ 70 ಸಾಧಕರಿಗೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯೋತ್ಸವ ಪ್ರಶಸ್ತಿ-2025 (Kannada Rajyotsava award 2025) ನೀಡಿ, ಗೌರವಿಸಿದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ ಯಾರ ಹೆಸರನ್ನೂ ನಾನು ಪ್ರಶಸ್ತಿಗೆ ಶಿಫಾರಸು ಮಾಡಿಲ್ಲ. ಆಯ್ಕೆ ಸಮಿತಿ ತೀರ್ಮಾನವೇ ಅಂತಿಮವಾಗಿ ಆಯ್ಕೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಕರ್ನಾಟಕ ಉದಯವಾಗಿ 70 ವರ್ಷಗಳಾಗಿರುವುದನ್ನು ಪರಿಗಣಿಸಿ 70 ಮಂದಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅರ್ಜಿ ಹಾಕಿದವರನ್ನು ಪರಿಗಣಿಸದೇ ಆಯಾ ಕ್ಷೇತ್ರದ ಪರಿಣಿತರನ್ನೇ ಗುರುತಿಸಿ ಆಯ್ಕೆ ಮಾಡಬೇಕು ಎನ್ನುವುದು ನಮ್ಮ ತೀರ್ಮಾನವಾಗಿತ್ತು. ಪುರಸ್ಕೃತರೆಲ್ಲರೂ ಶತಾಯುಶಿಗಳಾಗಿ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ನಿಮ್ಮದೆಲ್ಲಾ ಸಾರ್ಥಕ ಬದುಕು ಆಗಲಿ ಎಂದು ಹಾರೈಸಿದರು.
ಈ ಸುದ್ದಿಯನ್ನೂ ಓದಿ | Karnataka Rajyotsava 2025: ಮಾತೃಭಾಷೆಯಲ್ಲಿ ಶಿಕ್ಷಣ ಬೇಕಿದೆ, ಮದರಸಾಗಳಲ್ಲಿ ಕನ್ನಡ ಕಲಿಸಲು ಆದ್ಯತೆ: ಸಿಎಂ ಘೋಷಣೆ

ಒಂದೇ ವಿಭಾಗದಲ್ಲಿ ಒಬ್ಬರಿಗಿಂತ ಹೆಚ್ಚು ಸಾಧಕರ ಹೆಸರು ಇದ್ದ ಸಂದರ್ಭದಲ್ಲಿ ಮಾತ್ರ ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯದ ಕಾರಣಕ್ಕಾಗಿ ಆ ಅರ್ಹರಲ್ಲೇ ಒಬ್ಬರ ಹೆಸರನ್ನು ಅಂತಿಮಗೊಳಿಸಲಾಗಿದೆ. ಮಾಧ್ಯಮಗಳು ಯಾರ ಆಯ್ಕೆ ಬಗ್ಗೆಯೂ ತಕರಾರು ಮಾಡಿಲ್ಲ. ಆದ್ದರಿಂದ ಅರ್ಹರಿಗೇ ಪ್ರಶಸ್ತಿ ಸಿಕ್ಕಿದೆ ಎಂದು ಭಾವಿಸುತ್ತೇನೆ ಎಂದು ಮೆಚ್ಚುಗೆ ಸೂಚಿಸಿದರು.

ಪ್ರಶಸ್ತಿ ಪುರಸ್ಕೃತರಾದ ಕೋಣಂದೂರು ಲಿಂಗಪ್ಪ ಅವರನ್ನು ಉಲ್ಲೇಖಿಸಿ ಸಮಾಜವಾದಿ ಹೋರಾಟದ ದಿನಗಳನ್ನು ಸಿಎಂ ಸ್ಮರಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಜಾನಪದ
- ಬಸಪ್ಪ ಭರಮಪ್ಪ ಚೌಡ್ಕಿ-ಕೊಪ್ಪಳ
- ಬಿ. ಟಾಕಪ್ಪ ಕಣ್ಣೂರು-ಶಿವಮೊಗ್ಗ
- ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ-ಬೆಳಗಾವಿ
- ಹನುಮಂತಪ್ಪ, ಮಾರಪ್ಪ, ಚೀಳಂಗಿ-ಚಿತ್ರದುರ್ಗ
- ಎಂ. ತೋಪಣ್ಣ-ಕೋಲಾರ
- ಸೋಮಣ್ಣ ದುಂಡಪ್ಪ ಧನಗೊಂಡ-ವಿಜಯಪುರ
- ಸಿಂಧು ಗುಜರನ್-ದಕ್ಷಿಣ ಕನ್ನಡ
- ಎಲ್. ಮಹದೇವಪ್ಪ ಉಡಿಗಾಲ-ಮೈಸೂರು
ಸಾಹಿತ್ಯ
- ಪ್ರೊ. ರಾಜೇಂದ್ರ ಚೆನ್ನಿ-ಶಿವಮೊಗ್ಗ
- ತುಂಬಾಡಿ ರಾಮಯ್ಯ-ತುಮಕೂರು
- ಪ್ರೊ.ಅರ್. ಸುನಂದಮ್ಮ-ಚಿಕ್ಕಬಳ್ಳಾಪುರ
- ಡಾ.ಎಚ್.ಎಲ್. ಪುಷ್ಪ-ತುಮಕೂರು
- ರಹಮತ್ ತರೀಕೆರೆ-ಚಿಕ್ಕಮಗಳೂರು
- ಹ.ಮ. ಪೂಜಾರ-ವಿಜಯಪುರ
ಚಲನಚಿತ್ರ /ಕಿರುತೆರೆ
- ಪ್ರಕಾಶ್ ರಾಜ್-ದಕ್ಷಿಣ ಕನ್ನಡ
- ವಿಜಯಲಕ್ಷ್ಮೀ ಸಿಂಗ್- ಕೊಡಗು
ಆಡಳಿತ
- ಎಚ್. ಸಿದ್ದಯ್ಯ ಭಾ.ಆ.ಸೇ. (ನಿ) ಬೆಂಗಳೂರು ದಕ್ಷಿಣ (ರಾಮನಗರ)
ವೈದ್ಯಕೀಯ
- ಆಲಮ್ಮ ಮಾರಣ್ಣ-ತುಮಕೂರು
- ಡಾ. ಜಯರಂಗನಾಥ್-ಬೆಂಗಳೂರು ಗ್ರಾಮಾಂತರ
ಸಮಾಜ ಸೇವೆ
- ಮತಿ ಸೂಲಗಿತ್ತಿ ಈರಮ್ಮ-ವಿಜಯನಗರ
- ಫಕ್ಕೀರಿ-ಬೆಂಗಳೂರು ಗ್ರಾಮಾಂತರ
- ಕೋರಿನ್ ಆಂಟೊನಿಯಟ್ ರಸ್ಕೀನಾ-ದಕ್ಷಿಣ ಕನ್ನಡ
- ಡಾ. ಎನ್. ಸೀತಾರಾಮ ಶೆಟ್ಟಿ-ಉಡುಪಿ
- ಕೋಣಂದೂರು ಲಿಂಗಪ್ಪ-ಶಿವಮೊಗ್ಗ
ಸಂಕೀರ್ಣ
- ಉಮೇಶ ಪಂಬದ-ದಕ್ಷಿಣ ಕನ್ನಡ
- ಡಾ. ರವೀಂದ್ರ ಕೋರಿಶೆಟ್ಟಿರ್-ಧಾರವಾಡ
- ಕೆ. ದಿನೇಶ್- ಬೆಂಗಳೂರು
- ಶಾಂತರಾಜು -ತುಮಕೂರು
- ಜಾಫರ್ ಮೊಹಿಯುದ್ದೀನ್- ರಾಯಚೂರು
- ಪೆನ್ನ ಓಬಳಯ್ಯ- ಬೆಂಗಳೂರು ಗ್ರಾಮಾಂತರ
- ಬಾಯಿ ಬಳ್ಳಾರಿ
- ಪುಂಡಲೀಕ ಶಾಸ್ತ್ರಿ (ಬುಡಬುಡಕೆ)-ಬೆಳಗಾವಿ
ಹೊರನಾಡು/ಹೊರ ದೇಶ
- ಜಕರಿಯ ಬಜಪೆ (ಸೌದಿ)-ಹೊರನಾಡು/ಹೊರ ದೇಶ
- ಪಿ.ವಿ. ಶೆಟ್ಟಿ (ಮುಂಬೈ)-ಹೊರನಾಡು/ಹೊರ ದೇಶ
ಪರಿಸರ
- ರಾಮೇಗೌಡ-ಚಾಮರಾಜನಗರ
- ಮಲ್ಲಿಕಾರ್ಜುನ ನಿಂಗಪ್ಪ-ಯಾದಗಿರಿ
ಕೃಷಿ
- ಡಾ. ಎಸ್.ವಿ. ಹಿತ್ತಲಮನಿ-ಹಾವೇರಿ
- ಎಂ.ಸಿ. ರಂಗಸ್ವಾಮಿ-ಹಾಸನ
ಮಾಧ್ಯಮ
- ಕೆ. ಸುಬ್ರಹ್ಮಣ್ಯ-ಬೆಂಗಳೂರು
- ಅಂಶಿ ಪ್ರಸನ್ನ ಕುಮಾರ್-ಮೈಸೂರು
- ಬಿ.ಎಂ. ಹನೀಫ್-ದಕ್ಷಿಣ ಕನ್ನಡ
- ಎಂ. ಸಿದ್ದರಾಜು-ಮಂಡ್ಯ
ವಿಜ್ಞಾನ/ತಂತ್ರಜ್ಞಾನ
- ರಾಮಯ್ಯ-ಚಿಕ್ಕಬಳ್ಳಾಪುರ
- ಏರ್ ಮಾರ್ಷಲ್ ಫಿಲಿಫ್ ರಾಜಕುಮಾರ್-ದಾವಣೆರೆ
- ಡಾ. ಆರ್.ವಿ. ನಾಡಗೌಡ-ಗದಗ
ಸಹಕಾರ
- ಶೇಖರ ಗೌಡ ವಿ. ಮಾಲಿಪಾಟೀಲ್-ಕೊಪ್ಪಳ
ಯಕ್ಷಗಾನ
- ಕೋಟ ಸುರೇಶ ಬಂಗೇರ-ಉಡುಪಿ
- ಐರಬೈಲ್ ಆನಂದ ಶೆಟ್ಟಿ-ಉಡುಪಿ
- ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ. ಹೆಗಡೆ)-ಉತ್ತರ ಕನ್ನಡ
ಬಯಲಾಟ
- ಗುಂಡೂರಾಜ್-ಹಾಸನ
ರಂಗಭೂಮಿ
- ಎಸ್.ಎಂ. ಪರಮಶಿವಯ್ಯ-ಬೆಂಗಳೂರು ದಕ್ಷಿಣ (ರಾಮನಗರ)
- ಎಲ್.ಬಿ. ಶೇಖ್ (ಮಾಸ್ತರ್)-ವಿಜಯಪುರ
- ಬಂಗಾರಪ್ಪ ಖುದಾನ್‌ಪುರ-ಬೆಂಗಳೂರು
- ಮೈಮ್ ರಮೇಶ್-ದಕ್ಷಿಣ ಕನ್ನಡ
- ಡಿ. ರತ್ನಮ್ಮ ದೇಸಾಯಿ-ರಾಯಚೂರು
ಶಿಕ್ಷಣ
- ಡಾ.ಎಂ.ಆರ್. ಜಯರಾಮ್-ಬೆಂಗಳೂರು
- ಡಾ.ಎನ್.ಎಸ್. ರಾಮೇಗೌಡ-ಮೈಸೂರು
- ಎಸ್.ಬಿ. ಹೊಸಮನಿ-ಕಲಬುರಗಿ
- ರಾಜ್‌ಶ್ರೀ ನಾಗರಾಜು-ಬೆಳಗಾವಿ
ಕ್ರೀಡೆ
- ಆಶೀಶ್ ಕುಮಾರ್ ಬಲ್ಲಾಳ್-ಬೆಂಗಳೂರು
- ಎಂ. ಯೋಗೇಂದ್ರ-ಮೈಸೂರು
- ಡಾ. ಜಬೀನಾ ಎನ್.ಎಂ.-ಕೊಡಗು
ನ್ಯಾಯಾಂಗ
- ನ್ಯಾ. ವಿ.ಬಿ. ಭಜಂತ್ರಿ-ಬಾಗಲಕೋಟೆ
ಶಿಲ್ಪಕಲೆ
- ಬಸಣ್ಣ ಮೋನಪ್ಪ ಬಡಿಗೇರ-ಯಾದಗಿರಿ
- ನಾಗಲಿಂಗಪ್ಪ ಜಿ. ಗಂಗೂರ-ಬಾಗಲಕೋಟೆ
ಚಿತ್ರಕಲೆ
- ಮಾರುತಿ-ವಿಜಯನಗರ
ಕರಕುಶಲ
- ಎಲ್. ಹೇಮಾ ಶೇಖರ್-ಮೈಸೂರು