ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shankara Bidari: ಕಿತ್ತೂರು ಚೆನ್ನಮ್ಮನ ಹಾಗೂ ಬೆಳವಡಿ ಮಲ್ಲಮ್ಮ ಆದರ್ಶ ಬೆಳೆಸಿಕೊಳ್ಳಿ : ಶಂಕರ ಬಿದರಿ

ಲಗ್ಗೆರೆಯಲ್ಲಿ ನೀಲೆ ಫೌಂಡೇಷನ್ ನಲ್ಲಿ ಭಾರತಿ ದರ್ಶ್ ಫೌಂಡೇಶನ್ ನಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಅಂಗವಾಗಿ ಬೆಳವಡಿ ಮಲ್ಲಮ್ಮ ಹಾಗೂ ಕಿತ್ತೂರು ಚೆನ್ನಮ್ಮ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ನಾಡಿನ ಕೆಚ್ಚೆದೆಯ ಹೋರಾಟಗಾರ್ತಿಯರ ಬದುಕು, ಹೋರಾಟವನ್ನು ಅಧ್ಯಯನ ಮಾಡಬೇಕು.

ಕಿತ್ತೂರು ಚೆನ್ನಮ್ಮನ  ಹಾಗೂ ಬೆಳವಡಿ ಮಲ್ಲಮ್ಮ ಆದರ್ಶ ಬೆಳೆಸಿಕೊಳ್ಳಿ

-

Ashok Nayak Ashok Nayak Oct 26, 2025 6:01 PM

ಬೆಂಗಳೂರು: ಬೆಳವಡಿ ಮಲ್ಲಮ್ಮ ಹಾಗೂ ಕಿತ್ತೂರು ಚೆನ್ನಮ್ಮ ಈ ನಾಡಿನ ಸರ್ವಶ್ರೇಷ್ಠ ಹೋರಾಟಗಾರ್ತಿಯಾಗಿದ್ದು, ಅವರ ಬದುಕು, ಜೀವನ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ( Retired DGP Shankar Bidari) ಕರೆ ನೀಡಿದ್ದಾರೆ.

ಇದನ್ನೂ ಓದಿ: Bangalore News: ಇಂಡಿಯಾ ರೈಜಿಂಗ್ ಫೌಂಡೇಶನ್ ₹1000 ಕೋಟಿ ಮೊತ್ತದ ಲಾಭರಹಿತ R&D ಗ್ರಾಂಟ್ ನಿಧಿ ಘೋಷಣೆ

ಲಗ್ಗೆರೆಯಲ್ಲಿ ನೀಲೆ ಫೌಂಡೇಷನ್ ನಲ್ಲಿ ಭಾರತಿ ದರ್ಶ್ ಫೌಂಡೇಶನ್ ನಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಅಂಗವಾಗಿ ಬೆಳವಡಿ ಮಲ್ಲಮ್ಮ ಹಾಗೂ ಕಿತ್ತೂರು ಚೆನ್ನಮ್ಮ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ನಾಡಿನ ಕೆಚ್ಚೆದೆಯ ಹೋರಾಟಗಾರ್ತಿಯರ ಬದುಕು, ಹೋರಾಟವನ್ನು ಅಧ್ಯಯನ ಮಾಡಬೇಕು. ಅವರ ಆದರ್ಶ ಬೆಳೆಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ನಮ್ಮ ನಾಡಿನ ಭ್ಯ ಪರಂಪರೆಯನ್ನು ತಲುಪಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಎಲ್.ಬಿ.ಎಸ್ ಆಟೋಮೇಷನ್ ಸಿಸ್ಟಮ್ ಮಾಲೀಕ ಬಸವರಾಜು ಎನ್.ಕೆ. ಅವರು ಭಾರತಿ ದರ್ಶ್ ಫೌಂಡೇಶನ್ ಗೆ ಆಂಬುಲೆನ್ಸ್ ಅನ್ನು ಕೊಡುಗೆ ನೀಡಿದರು.

ಈ ಸಂದರ್ಭದಲ್ಲಿ ಪ್ರತಿಷ್ಠಾನದ ಶೈಲೇಂದ್ರ ಪಾಟೀಲ್, ಪ್ರಮೋದ್ ಪಾಟೀಲ್, ಉಮೇಶ್ ಬಣಕಾ‌ರ್, ಡಾ||ರಾಜಶ್ರೀ ಪಾಟೀಲ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.