ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Sting Operation: ಸ್ಟಿಂಗ್‌ʼಗೆ ದಿಲ್ಲಿ ನಂಟು

ಸ್ಟಿಂಗ್ ಆಪರೇಷನ್ ಪ್ರಕರಣದ ಸಂಬಂಧ ಶನಿವಾರ ಬೆಳಗ್ಗೆ ಸಿಸಿಬಿ ಪೊಲೀಸರು ದೆಹಲಿ ಮೂಲದ ರಿತೇಶ್ ಪಾಂಡೆ ಎಂಬಾತನನ್ನ ಬಂಧಿಸಿದ್ದರು. ಆರೋಪಿಯನ್ನು ದೆಹಲಿ ಯಿಂದ ಬೆಂಗಳೂರಿಗೆ ಕರೆತಂದು ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು. ದೆಹಲಿಯ ಗಾಜಿಯಾಬಾದ್‌ನಲ್ಲಿ ಮನೆ ಮಾಡಿಕೊಂಡಿದ್ದ ಆರೋಪಿ ರಿತೇಶ್ ಪಾಂಡೆ, 15 ಸಾವಿರಕ್ಕೆ ಮೊಬೈಲ್ ಖರೀದಿ ಮಾಡಿದ್ದ. ದೆಹಲಿಯ ಕರೋಲ್ ಬಾಗ್ ಮಾರ್ಕೆಟ್ ನಲ್ಲಿ ಸಿಮ್ ಕಾರ್ಡ್ ವರ್ಕ್ ಆಗದ ಮೊಬೈಲ್ ಬೇಕು ಎಂದು ಖರೀದಿಸಿದ್ದನಂತೆ.

Sting Operation: ಸ್ಟಿಂಗ್‌ʼಗೆ ದಿಲ್ಲಿ ನಂಟು

-

Profile
Ashok Nayak Oct 25, 2026 8:45 AM

ಬೆಂಗಳೂರು: ಸ್ಟಿಂಗ್ ಆಪರೇಷನ್ ರಾದ್ಧಾಂತದಲ್ಲಿ ಬಂಧಿಸಲಾಗಿದ್ದ ದೆಹಲಿ ಮೂಲದ ರಿತೇಶ್ ಪಾಂಡೆ ಎಂಬಾತನನ್ನು ನ್ಯಾಯಾಲಯದ ಆದೇಶದಂತೆ ಬಿಡುಗಡೆ ಮಾಡಲಾಗಿದ್ದು, ಜೆಡಿಎಸ್ ನ ಇಬ್ಬರು ಕಾರ್ಯಕರ್ತರಿಗೆ ನೋಟಿಸ್ ನೀಡಲಾಗಿದೆ. ಈ ಮದ್ಯೆ ಪ್ರಕರಣ ತಮ್ಮ ತಲೆಗೆ ಕಟ್ಟಲು ರಾಜ್ಯ ಸರಕಾರ ಬಯಸಿದೆ ಎಂದು ಕೇಂದ್ರ ಸಚಿವರು ಆರೋಪಿಸಿದ್ದರೆ, ಪ್ರಕರಣ ನಡೆಸಿದ್ದು ಕೇಂದ್ರ ಸಚಿವರ ಎಡ ಹಾಗೂ ಬಲಗೈ ಬಂಟರೇ ಆಗಿದ್ದಾರೆ ಎಂದು ಗೃಹ ಸಚಿವರು ಹೇಳಿರುವುದು ವಿಡಿಯೋ ರಹಸ್ಯ ರೋಚಕ ಘಟ್ಟ ತಲುಪಿದೆ.

ಸ್ಟಿಂಗ್ ಆಪರೇಷನ್ ಪ್ರಕರಣದ ಸಂಬಂಧ ಶನಿವಾರ ಬೆಳಗ್ಗೆ ಸಿಸಿಬಿ ಪೊಲೀಸರು ದೆಹಲಿ ಮೂಲದ ರಿತೇಶ್ ಪಾಂಡೆ ಎಂಬಾತನನ್ನ ಬಂಧಿಸಿದ್ದರು. ಆರೋಪಿಯನ್ನು ದೆಹಲಿ ಯಿಂದ ಬೆಂಗಳೂರಿಗೆ ಕರೆತಂದು ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು. ದೆಹಲಿಯ ಗಾಜಿಯಾಬಾದ್‌ನಲ್ಲಿ ಮನೆ ಮಾಡಿಕೊಂಡಿದ್ದ ಆರೋಪಿ ರಿತೇಶ್ ಪಾಂಡೆ, 15 ಸಾವಿರಕ್ಕೆ ಮೊಬೈಲ್ ಖರೀದಿ ಮಾಡಿದ್ದ. ದೆಹಲಿಯ ಕರೋಲ್ ಬಾಗ್ ಮಾರ್ಕೆಟ್ ನಲ್ಲಿ ಸಿಮ್ ಕಾರ್ಡ್ ವರ್ಕ್ ಆಗದ ಮೊಬೈಲ್ ಬೇಕು ಎಂದು ಖರೀದಿಸಿದ್ದನಂತೆ. ನಂತರ ಒಟಿಜಿ ಕೇಬಲ್ ಬಳಸಿ ಪೆನ್‌ಡ್ರೈವ್ ಮೂಲಕ ಮೊಬೈಲಗೆ ವಿಡಿಯೋ ರವಾನಿಸಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ. ಆದರೆ, ವಿಡಿಯೋ ಅಪ್‌ಲೋಡ್ ಮಾಡು ವಂತೆ ರಿತೇಶ್‌ಗೆ ಸೂಚನೆ ನೀಡಿದವರು ಯಾರು?, ಪೆನ್‌ಡ್ರೈವ್ ಅನ್ನು ಆತನಿಗೆ ತಲುಪಿಸಿದವರು ಯಾರು, ಈ ಕೆಲಸಕ್ಕಾಗಿ ಹಣ ನೀಡಿದವರು ಯಾರು ಎಂಬ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ವಿಡಿಯೋ ಅಪ್‌ಲೋಡ್ ಮಾಡಲು 50 ಸಾವಿರ ರೂಪಾಯಿ ನೀಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಅದೂ ಸಹ ತನಿಖೆಯ ಪ್ರಮುಖ ಅಂಶವಾಗಿದೆ. ಈ ಹಣದ ವ್ಯವಹಾರದ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ.

ಇದನ್ನೂ ಓದಿ: Sting operation: ಸ್ಟಿಂಗ್‌ ಆಪರೇಷನ್‌ ಬಗ್ಗೆ ಮೌನ ಮುರಿದ ಮಾಜಿ ಸಿಎಂ ಸಿದ್ದರಾಮಯ್ಯ; ನ್ಯಾಯಯುತ ತನಿಖೆಗೆ ಒತ್ತಾಯ

ಷರತ್ತುಬದ್ಧ ಜಾಮೀನು ನೀಡಿದ ನ್ಯಾಯಾಲಯ: ಬಂಧನದ ಬಳಿಕ ಸಿಸಿಬಿ ಪೊಲೀಸರು ರಿತೇಶ್ ಪಾಂಡೆಯನ್ನು 66ನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಪ್ರಕರಣದಲ್ಲಿ ಅನ್ವಯವಾಗಿರುವ ಸೆಕ್ಷನ್‌ಗಳಡಿ ಏಳು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ವಿಧಿಸಲು ಅವಕಾಶ ವಿದೆ. ಇದೇ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಗೆ ನಿರೀಕ್ಷಣಾ ಜಾಮೀನು ದೊರೆತಿದೆ ಎಂಬ ಅಂಶಗಳನ್ನು ಮುಂದಿ ಟ್ಟುಕೊಂಡು ರಿತೇಶ್ ಪರ ವಕೀಲರು ಜಾಮೀನು ಕೋರಿ ಮನವಿ ಸಲ್ಲಿಸಿದ್ದರು. ವಾದ ಆಲಿಸಿದ ನ್ಯಾಯಾಲಯವು ರಿತೇಶ್ ಪಾಂಡೆಗೆ ಷರತ್ತುಬದ್ಧ ಜಾಮೀನು ನೀಡಿದೆ. ಸಿಸಿಬಿ ಪೊಲೀಸರ ತನಿಖೆಗೆ ಸಹಕರಿಸಬೇಕು, ನಗರ ಬಿಟ್ಟು ತೆರಳು ವಾಗ ಪೊಲೀಸರಿಗೆ ಮಾಹಿತಿ ನೀಡಬೇಕು ಹಾಗೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದಾಗ ಹಾಜರಾ ಗಬೇಕು ಎಂಬ ಷರತ್ತು ವಿಧಿಸಿದೆ.

ಮಹಿಳೆಯ ಹೇಳಿಕೆ ದಾಖಲು: ಇನ್ನೊಂದೆಡೆ, ಸ್ಟಿಂಗ್ ವಿಡಿಯೋದಲ್ಲಿರುವ ಮಹಿಳೆಯನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿ ಆಕೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ವಿಡಿಯೋವನ್ನು ರೆಕಾರ್ಡ್ ಮಾಡಿದವರು ಯಾರು ಎಂಬ ಪ್ರಶ್ನೆಯ ಜೊತೆಗೆ, ಅದನ್ನು ಅಪ್‌ಲೋಡ್ ಮಾಡಿಸಿದ ವರು ಯಾರು?, ಇದರ ಹಿಂದೆ ಹಣಕಾಸಿನ ವ್ಯವಹಾರ ನಡೆದಿದೆಯೇ ಮತ್ತು ಈ ಕಾರ್ಯಾಚರಣೆಯ ಹಿಂದಿ ರುವವರು ಯಾರು ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ.

ಜೆಡಿಎಸ್ ಕಾರ್ಯಕರ್ತರಿಗೆ ನೋಟಿಸ್: ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ, ಜೆಡಿಎಸ್ ಕಾರ್ಯಕರ್ತರಿಗೆ ನೋಟಿಸ್ ನೀಡಲಾಗಿದೆ. ಮೋಹನ್ ಗೌಡ ಹಾಗೂ ಚಂದನ್ ಎಂಬ ಇಬ್ಬರಿಗೆ ನೋಟಿಸ್ ನೀಡಲಾಗಿದೆ.

ಜೆಡಿಎಸ್ ಮೇಲೆ ಆಪಾದನೆ ಹೊರಿಸಲು ಕುತಂತ್ರ: ಎಚ್‌ಡಿಕೆ ಸ್ಟಿಂಗ್ ವಿಚಾರವಾಗಿ ಹಾಸನದಲ್ಲಿ ಮಾತನಾಡಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ಸ್ಟಿಂಗ್ ಪ್ರಕರಣವನ್ನು ನನ್ನ ತಲೆಗೆ ಕಟ್ಟಲು ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಪ್ರಿಯಾಂಕ್ ಖರ್ಗೆ ಸಂಚು ಹೂಡಿದ್ದಾರೆ ಎಂದು ಆರೋಪಿಸಿ ದ್ದಾರೆ. ಕೆಪಿಎಸ್‌ಸಿ ಹಗರಣದ ದಿಕ್ಕು ತಪ್ಪಿಸಲು ಪ್ರಿಯಾಂಕ್ ಖರ್ಗೆ ಒದ್ದಾಡುತ್ತಿದ್ದಾರೆ. ನಾನೇ ಸ್ಟಿಂಗ್ ಮಾಡಿದ್ದು ಎಂದು ಚಾನೆಲ್ ಮುಖ್ಯಸ್ಥರೊಬ್ಬರು ಹೇಳಿದ ಮೇಲೆಯೂ ನಮ್ಮ ಸಾಮಾಜಿಕ ಜಾಲತಾಣದ ಹುಡುಗರನ್ನು ಹೆದರಿಸುತ್ತಿದ್ದಾರೆ. ಸ್ಟಿಂಗ್ ವಿಚಾರವಾಗಿ ತನಿಖೆ ಆಗಲಿ ಅಂತ ಸಿದ್ದರಾಮಯ್ಯನವರು ಹೇಳಿದ್ದಾರೆ. ಸ್ಟಿಂಗ್ ವಿಚಾರ ಹೊರಗೆ ಬಂದಾಗಿನಿಂದ ಗೃಹಸಚಿವರು ನಮ್ಮ ಪಕ್ಷದ ಕಾರ್ಯಕರ್ತರ ಸುತ್ತಲೇ ಸುತ್ತುತ್ತಿದ್ದಾರೆ. ಕುಮಾರಸ್ವಾಮಿಯ ಬಗ್ಗೆ ಅನುಮಾನ ಬರುವ ರೀತಿಯಲ್ಲಿ ವ್ಯವಸ್ಥಿತವಾಗಿ ತನಿಖೆ ನಡೆಯುತ್ತಿದೆ.

2023ರಲ್ಲಿ ಯಾವ ಕಾರಣಕ್ಕೆ ಸ್ಟಿಂಗ್ ಮಾಡಿದ್ದರು? ಅದರ ಬಗ್ಗೆ ತನಿಖೆ ಆಗುತ್ತಿಲ್ಲ. ಆದರೆ ನಮ್ಮ ಪಕ್ಷದ ಕಾರ್ಯಕರ್ತರಿಗೆ ಸರ್ಚ್ ವಾರಂಟ್ ಕೊಟ್ಟು ಬೆದರಿಕೆ ಹಾಕಲಾಗುತ್ತಿದೆ. ಈ ಹಗರಣ ನಮ್ಮ ಪಕ್ಷದವರೇ ಮಾಡಿದ್ದಾರೆಂದು ಬಿಂಬಿಸಲಾಗ್ತಿದೆ. ಇದನ್ನೆ ನಮ್ಮ ಪಕ್ಷದ ಕಾರ್ಯಕರ್ತರು ಎದುರಿಸಲು ಸಿದ್ಧರಿದ್ದೇವೆ ಎಂದಿದ್ದಾರೆ.

ಬಟಾಬಯಲಾಗಲಿದೆ: ಗೃಹ ಸಚಿವ ಪ್ರಿಯಾಂಕ್

ಪ್ರಕರಣ ಸಂಬಂಧ ನಾಪತ್ತೆಯಾಗಿರುವವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಎಡಗೈ-ಬಲಗೈ ಬಂಟರೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಸ್ಟಿಂಗ್ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿ ಇರುವುದು ಸ್ಪಷ್ಟ. ಸತ್ಯ ಹೊರಬರಲಿ ಅಂತಾನೆ ದೂರು ಕೊಟ್ಟಿದ್ದಾರೆ. ನಾವು ತನಿಖೆ ಕೈಗೊಂಡಿದ್ದೇವೆ. ನಮ್ಮ ಅಧಿಕಾರಿಗಳು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ.

ಇಂದಲ್ಲ, ನಾಳೆ ಸತ್ಯ ಆಚೆ ಬರಲಿದೆ. ಇದರಲ್ಲಿ ಗೊಂದಲ, ಅನುಮಾನ ಪಡುವಂತದ್ದು ಏನೂ ಇಲ್ಲ. ಸ್ವಲ್ಪ ಸಮಯ ಬೇಕು. ಸ್ಟಿಂಗ್ ಯಾರು ಮಾಡಿದ್ದು, ಯಾಕೆ ಮಾಡಿದ್ದು, ಅವರ ಹಿಂದೆ ಯಾರಿದ್ದಾರೆ, ಇಷ್ಟು ವರ್ಷ ಆದ ಮೇಲೆ ಯಾರ ಕೈಗೆ ಸಿಕ್ತು, ಇದ್ದಕ್ಕಿದ್ದಂತೆ ಯಾಕೆ ಅಪ್ ಲೋಡ್ ಆಯ್ತು? ಈ ಎಲ್ಲವೂ ಶೀಘ್ರದ ಬಯಲಾಗಲಿದೆ. ಅದರ ಮೂಲದಿಂದ ಹಿಡಿದು ಇಲ್ಲಿ ತನಕ ಏನೇನಾಗಿದೆ ಎಲ್ಲವನ್ನು ಬಟಾಬಯಲು ಮಾಡುತ್ತೇವೆ ಎಂದರು.

image

ಮತ್ತವರ ಸಹಚರರು ಸ್ಟಿಂಗ್ ನಡೆಸಿದ್ದಾರೆ ಎಂಬುದು ಎಲ್ಲರೂ ಬಲ್ಲ ಸಂಗತಿ. ಇವರಿಬ್ಬರ ಹೆಸರನ್ನು ಸ್ವತಃ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಸಹ ಹೇಳಿದ್ದಾರೆ. ಹೀಗಿದ್ದರೂ ಮುಖ್ಯಮಂತ್ರಿ, ಗೃಹ ಮಂತ್ರಿ ಇಬ್ಬರೂ ಸೇರಿ ಇಡೀ ವಿಷಯ ನಮ್ಮತ್ತ ತಿರುಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ನಾವು ಹೆದರುವುದಿಲ್ಲ, ಎದುರಿಸುವ ಶಕ್ತಿ ನಮ್ಮ ಪಕ್ಷಕ್ಕಿದೆ.

-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
image

ತನಿಖೆ ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಮಾಡ್ತೀವಿ. ಯಾವುದೇ ರಾಜಕೀಯ ಒತ್ತಡ ಇಲ್ಲದೆ ತನಿಖೆ ಆಗುತ್ತದೆ. ಯಾರ್ಯಾರ ಹೆಸರು ಉಲ್ಲೇಖಿಸಿದ್ದಾರೋ, ಅವರನ್ನೆಲ್ಲ ತನಿಖೆಗೆ ಒಳಪಡಿಸಿ ದ್ದೇವೆ. ಸ್ಟೇಟ್ಮೆಂಟ್ ರೆಕಾರ್ಡ್ ಮಾಡಿದ್ದೇವೆ. ಇಂಟರಾಗೇಶನ್ ರೆಕಾರ್ಡ್ ಆಗಿದೆ. ಸಮಯ ಬಂದಾಗ ನಿಮ್ಮ ಮುಂದೆ ಇಡುತ್ತೇವೆ. ಇದರಲ್ಲಿ ತಪ್ಪಿಸಿಕೊಳ್ಳುವುದು ಇಲ್ಲ. ಚಾರ್ಜ್ ಶೀಟ್ ಆಗಲೇಬೇಕು, ಕೋರ್ಟ್‌ಗೆ ಸಲ್ಲಿಸಲೇಬೇಕು. ಆರ್‌ಟಿಐ ನಲ್ಲಿ ಬರಲೇಬೇಕು.

- ಪ್ರಿಯಾಂಕ್ ಖರ್ಗೆ, ಗೃಹ ಸಚಿವ